ಅರವ ಅರೀs ಮರವ ಮರೀs
ಜ್ಞಾನಿಗಳು ಇರಬೇಕೋ ನಮ್ಮನೆರೀss ||ಅರವ . . . . ||

ಮಾಳಪ್ಪ ಇದ್ದಾನೋ ಜ್ಞಾನದ ಜರೀs
ಗುರುವಿನ ಹಂತೇಲಿ ದುಡಿದೋ ನಾನಾ ಪರೀs
ಹಿಂಡ ಸಿದ್ಧರ್ನ ಬಿಡಿಸ್ಯಾನೋ ಸೆರೀs
ಭವದಾಗ ಬಂದು ಕಾಯ್ದಾನ ತಾ ಕುರೀs
ದಿನಂ ಪ್ರತಿ ಉಣಸ್ಯಾನ ಉಡಕ ಮರೀs
ಸಿಡಿಯಾಣ ಮಠಕs
ಬಂದಾನೋ ನೊಡೋ ದೊರೀs ||ಅರವ . . . . ||

ಯಜ್ಞ ಹೂಡಿದೋ ಮಾಳಪ್ಪ ಬಾಳ ಬಾರೀs
ಋಷಿ ಮುನಿಗಳ ಕೂಡ್ಯಾರ ಒಳ್ಳೇ ಸರೀs
ದೇವ್ರ ಹೈಪಾದ್ರ ಭಕ್ತಿದ್ದ ನೋಡಿ ಜರೀs ||ಅರವ . . . . ||

ಶಿವಾ ಪಾರ್ವತಿ ರೂಪ ಅವರ ಬೆರೀs
ರೂಪ ಬದಲಾಸಿ ಬಂದಾರೋ ಸರೀs
ಗುರುತ ಹಿಡಕೊಂಡ ಮಾಳಣ್ಣ ದೊರೀs ||ಅರವ . . . . ||

ವರ ಪಡಕೊಂಡ ಆದ ಅವ್ರ ಸರೀs
ಭವದಾಗ ಭಕ್ತಿ ಬೀರಣ್ಣ ಬಾಲ ಬಾರೀs
ಕವಿ ಅಡವೆಪ್ನ ನುಡಿಗಳ ಸರೀs ||ಅರವ . . . . ||

* * *