ಆರುತಿ ಬೆಳಗುನು ಬಾs
ಗುರುವಿಗೆ ಆರುತಿ ಬೆಳಗುನು ಬಾs
ಮಾಳಪ್ಗ ಆರುತಿ ಬೆಳಗುನು ಬಾs
ಆರುತಿ ಬೆಳಗುನು ಮೂರುತಿ ರೂಪಗೇs
ಮೂರ ಕಣ್ಣಿನ ಶಿವ ಮುಕ್ಕಣ್ಣ ಹರನಿಗೆs ||ಅರವ . . . . ||

ದೀಡ ಭಕ್ತಿ ಹುಟ್ಟೀs
ಒಳಗಿನ ದುಷ್ಟ ಗುಣಾ ಸುಟ್ಟೀs ||ದೀಡ . . . . ||

ದೀಡ ಕೊಟ್ಟ ಗುರು ಹರ ನಿಮ ಪಾದಕs
ಒಡಿಯಾಗಾರುತಿ ಸಡಗರದಿಂದs ||ಆರುತಿ . . . . ||

ಮೂರು ಮಾಯ ಹುಟ್ಟೀs
ಒಳಗಿನ ದುಷ್ಟ ಗುಣಾ ಹುಟ್ಟೀs
ದೀಡ ಕೊಟ್ಟ ಗುರು ಹರ ನಿಮ್ಮ ಪಾದಕs
ಒಡಿಯಾಗ ಆರುತಿ ಸಡಗರದಿಂದs ||ಆರುತಿ . . . . ||

ದೇಶದೊಳಗ ನಮ್ಮs
ವಾಸುಳ್ಳ ಹುಲಜಂತಿ ಪಾಳಪ್ಗs
ಭಾವ ಭಕ್ತಿಯಿಂದ ಕರ್ಪೂರದಾರುತಿ
ನಿತ್ಯ ಕಾಲದಲ್ಲಿ ಎತ್ತಿ ಬೆಳಗುನುs ||ಆರುತಿ . . . . ||

* * *

ಜಯದೇವs ಜಯದೇವs
ಜಯ ಮಾಳಿಂಗರಾಯs

ಪಂಚಾರತಿ ಬೆಳಾಗುವೆವೊs
ಒಡಸಿ ಕಾಯಾs
ಜಯದೇವs ಜಯದೇವs
ಕೈಲಾಸ ಗಿರಿಗಳ ಬಿಟ್ಟು ಬಂದಿದ್ದಾs
ಏಳು ಅವತಾರಗಳs
ತಾನೇ ತೊಟ್ಟಿದ್ದಾs
ಬಾರಾಮತಿ ಪಟ್ಟಣಕ
ಹುಟ್ಟಿ ಬಂದಿದ್ಡಾs ||ಜಯದೇವs . . . . ||

ತುಕ್ಕಪ್ಪರಾಯನ ಹೊಟ್ಟಿಲೇ ಹುಟ್ಟಿದ್ದಾs
ಅಮೃತಬಾಯಿ ಮಲಿಹಾಲ ಕುಡದಿದ್ದಾs
ನಿರಹಂಕಾರ ನಿರ್ಮಂತ ತಾನು ತಿಳದಿದ್ದಾs
ತಾಯಿ ಕಣ್ಣವ್ವನ ಚರಣದಲ್ಲಿ ಬೆಳದಾs  ||ಜಯದೇವs . . . . ||

ಅಣ್ಣ ಜಕ್ಕಪ್ಪ ತಾನೇ ಗೊಂದಿದ್ದಾs
ಬಾಲ ಲೀಲೆಗಳ ಅಲ್ಲಿ ಮಾಡಿದ್ದಾs
ಬಾರಾಮತಿ ಪಟ್ಟಣ ಬಿಟ್ಟಿದ್ದಾs
ಸುತ್ತ ಜಗವೆಲ್ಲ ಸಂಚಾರ ಮಾಡಿದ್ದಾs ||ಜಯದೇವs . . . . ||

ಚಪ್ಪನ ದೇಶಾ ತಿರುಗಿ ಬಂದಿದ್ಡಾs
ಹರಣಪುರ ಎಂಬ ಪಟ್ಟಣ ಕಟ್ಟಿದ್ದಾs
ಕಮ್ಟಾಳ ಎಂಬ ಕೆರಿಯ ಒಡಸಿದ್ದಾs
ಬಡವರ ರಕ್ಷಣ ಅಲ್ಲೇ ಮಾಡಿದ್ದಾs ||ಜಯದೇವs . . . . ||

ಅಲ್ಲಿಂದ ಮುಂದ ಸಾಗಿ ಬಂದಿದ್ದಾs
ಉಂಬ್ಳೆ ಠಾಣೆಕ ತಾನು ಮೆಟ್ಟ ಬಗದಿದ್ದಾs
ಏಳ್ನೂರು ಬ್ಯಾಡರ್ದ ಚಂಡಾ ಕಡದದ್ದಾs
ಚಂಡಿನ ತೆಲಿ ಮ್ಯಾಲ ಕಟ್ಟಿ ಕಟ್ಟಿದ್ದಾs ||ಜಯದೇವs . . . . ||

ನಾರ್ಯಾಣಪುರಕ ಸಾಗಿ ಬಂದಿದ್ದಾs
ನಾರ್ಯಾನ ಸಂಗಡ ಯುದ್ಧ ಆಡಿದ್ದಾs
ಯುದ್ಧದಲ್ಲಿ ಹೆಚ್ಚ ತಾನೇ ಆಗಿದ್ದಾs
ಹುಲಿ ಹಿಡದು ಹುಲಿಗಿಣ್ಣಾ ಹೋಗಿ ತಂದಿದ್ದಾs ||ಜಯದೇವs . . . . ||

ಹುನ್ನೂರು ಸಿದ್ಧಗ ಹುಲಿಗಿಣ್ಣ ಉಣಸಿದ್ಧs
ಹುಲಜಂತಿ ಎಂಬ ನಾಮ ತಾನೇ ಧರಿಸಿದ್ದs
ಹುಲಿ ಜಯಂತಿ ತಾನೇ ಮಾಡ್ಸಿದ್ದಾs
ಜಗದಲ್ಲಿ ನಾನು ಮಾಡ್ಸಿದ್ದ ಪ್ರಸಿದ್ದಾs ||ಜಯದೇವs . . . . ||

ಬೀಜಗುಂತಿಯ ಮೇಲೆ ತಾನೇ ಇರತಿದ್ದಾs
ಬನ್ನೀಗಿ ಸಾವಿರ ಬಾಗಿ ಕಾಯ್ದಿದ್ದಾs
ಅಂಗದಲ್ಲಿ ಲಿಂಗ ತಾನೇ ತಿಳದಿದ್ದಾs
ಇಷ್ಟ ಲಿಂಗದ ಸೇವಾ ಮಾಳಪ್ಪ ಮಾಡಿದ್ದಾs
ಜಗವೆಲ್ಲ ಪವಾಡ ತಾನೇ ಮಾಡಿದ್ದಾs
ಸಿಡಿಯಾಣ ಮಠದಾಗ ಭಕ್ತಿ ಮಾಡಿದ್ದಾs
ಭಕ್ತಿಯಿಂದ ಕೈಲಾಸ ಶಿವನ ಇಳಿಸಿದ್ದಾs
ಬೇಕಾದ್ದ ವರಗಳ ಅಲ್ಲೇ ಪಡದಿದ್ದಾs ||ಜಯದೇವs . . . . ||

ಜಗವೆಲ್ಲಾ ಪವಾಡ ತಾನೇ ಮಾಡಿದ್ದಾs
ಮಕ್ಕಳ ಹಡದು ಮನಿ ಮಾರ ಕಟ್ಟಿದ್ದಾs
ಹುಲಜಂತಿ ಮಠದಲ್ಲಿ ತಾನೇ ನೆಲದಿದ್ದಾs
ಬಂದ ಭಕ್ತಗಲ್ಲೀ ಭಾಗ್ಯ ಕೊಟ್ಟಿದ್ದಾs ||ಜಯದೇವs . . . . ||

ಭಕ್ತಗೆ ಭಾಗ್ಯಾ ತಾನೇ ಕೊಟ್ಟಿದ್ಯಾs
ಬಂಜೀಗಿ ಮಕ್ಕಳ ತೊಟ್ಟಿಲ ಹೊರಸಿದ್ದಾs
ಬೇಡಿದವರಿಗಿ ಬೇಕಾದ್ದ ಕೊಟ್ಟಿದ್ದಾs
ಬಂದ ಭಕ್ತಗಲ್ಲಿ ಪ್ರಸನ್ನಾಗಿದ್ದಾs ||ಜಯದೇವs . . . . ||

ಹುಲಜಂತಿ ಗಿರಿಯಲ್ಲಿ ತಾನೇ ನೆಲದಿದ್ದಾs
ಅಡಿವೆಪ್ಪ ಮರಾಯ್ಗ ವರಗಳ ಕೊಟ್ಟಿದ್ದಾs
ಕಡೇತನಕ ಅವನಿಗೆ ತಾನೇ ಕಾಯಿದ್ದಾs
ಸತ್ಯುಳ್ಳ ಶರಣ ಮರತ್ಯಕ ಮಿಗಿಲಾದ ||ಜಯದೇವs . . . . ||

* * *

ಬಾ ಬಾ ಅಣ್ಣಾs
ನೀ ಮಾಳಣ್ಣಾs
ಭಕ್ತರ ಮೇಲೆ ಕರುಣಾs ||ಬಾ ಬಾ . . . . ||

ನಿಜ ವಸ್ತು ನೀರ ಮಾಳಾs
ನಿಜ ರೂಪದವನಾs
ಶಾಂತಿ ಸಮಾಧಾನಾs

ಬಂದಾ ದಯಾಘನಾs
ಭಕ್ತರ ಸಲುವಾಗಿ ನೀನಾs
ರೂಪ ತೋರಿ ಸಹನಾs ||ಬಾ ಬಾ . . . . ||

ಪಂಚ ತತ್ವ ಕೂಡಿದs
ಶರೀರ ಧಾರಾಣಾs
ಮಾನವರಲ್ಲಿ ಬಂದಿದೆ ಅಣ್ಣಾs
ಅನಿಸಿದಿ ಮಾಳಣ್ಣಾs
ಕಂಬಳಿ ಭೂಷಣಾs
ಮಾಡಿದ ಧಾರಣಾs ||ಬಾ ಬಾ . . . . ||

ಸತ್ಯ ಧರಮರ ಕೂನಾs
ಕೋರಿ ಮೀಸೆ ಏನಾs
ಮಾನವರಲ್ಲಿ ಮೆರಿಸಿದಿ ಅಣ್ಣಾs
ಭವದಾಗ ನೀನಾs
ಬೇಡಿದವರಿಗಿ ಬೇಕಾದ್ದ ನೀನಾs
ಕೊಟ್ಟ ಕಳುಹಿದಿ ಅಣ್ಣಾs ||ಬಾ ಬಾ . . . . ||

ತೆಂಕನಾಡ ಗೌಡಗ ನೀನುs
ದಯಗೊಂಡ ಗೌಡಗ ನೀನುs
ಕೊಟ್ಟ ದವುಳ ತಾನs
ಮಾಡೊಳ್ಳಿ ಮೆಲ್ಲಗ ನೀನುs
ಮಾಡಿದೆ ಹೈರಣಾs
ಇಟಗಿಯ ಗೌಡಗ ನೀನುs
ಕೊಟ್ಟದಿ ಸಂತಾನಾs ||ಬಾ ಬಾ . . . . ||

ಹುಲಜಂತಿ ಗ್ರಾಮಕ ಬಂದು
ಮಾಡಿದಿ ಠಿಕಾಣಾs
ಹಳ್ಳಿ ನೆಳ್ಳ ಆರಂಭ ನೋಡೀs
ಆಗಿದಿ ಸ್ಥಾಪನಾs
ಕವಿ ಅಡಿವೆಪ್ಪನ ರಚನಾs
ಜಗವೆಲ್ಲ ಸಾಕಿದ ಅಣ್ಣಾs ||ಬಾ ಬಾ . . . . ||

* * *