‘ಬುಡಕಟ್ಟು ಮಹಾಕಾವ್ಯಗಳ ಮೂಲಕ ಕನ್ನಡ ಸಂಸ್ಕೃತಿಯನ್ನು ಹುಡುಕುವ ಕಾರ್ಯ ನಡೆಯಬೇಕು’ ಎಂದು ಕುಲಪತಿಗಳಾಗಿದ್ದ ಡಾ. ಚಂದ್ರಶೇಖರ ಕಂಬಾರ ಅವರು ಪದೇ ಪದೇ ಹೇಳುತ್ತಿದ್ದರು. ಅಲ್ಲದೆ ಈ ಉದ್ದೇಶಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆರ್ಥಿಕ ನೆರವು ಪಡೆದು ಬುಡಕಟ್ಟು ಮಹಾಕಾವ್ಯಗಳ ಸಂಗ್ರಹ ಮತ್ತು ಸಂಪಾದನೆಗೆ ಹುರುದುಂಬಿಸಿ ನಮ್ಮನ್ನೆಲ್ಲ ಕ್ರಿಯಾಶೀಲರನ್ನಾಗಿಸಿದ ಅವರಿಗೆ.

೧೯೯೮-೯೯ರ ವಿಭಾಗದ ಸಾಂಸ್ಥಿಕ ಯೋಜನೆಯಲ್ಲಿಯೂ ಬುಡಕಟ್ಟು ಮಹಾಕಾವ್ಯಗಳ ಸಂಪಾದನೆ ಮತ್ತು ಪ್ರಕಟಣೆಯನ್ನು ಪ್ರೋತ್ಸಾಹಿಸಿದ ಗುರುಗಳು ಮತ್ತು ಕುಲಪತಿಗಳೂ ಆದ ಡಾ. ಎಂ. ಎಂ. ಕಲಬುರ್ಗಿ ಅವರಿಗೆ

ಅನಾರೋಗ್ಯದಿಂದ ಬಳಲುತ್ತಿದ್ದರೂ ಮಾಳಿಂಗರಾಯನ ಕಾವ್ಯ ಹಾಡಿ ಅನೇಕ ವಿಷಯಗಳನ್ನು ನನ್ನ ಗಮನಕ್ಕೆ ತಂದು ಅದು ಗ್ರಂಥರೂಪದಲ್ಲಿ ಬರಲು ಕಾರಣರಾದ ಅಡಿವೆಪ್ಪ ಒಡೆಯರ ಮತ್ತು ಅವರೊಂದಿಗೆ ಸಹಕರಿಸಿದ ಸಹಕಲಾವಿದ ದೇವಪ್ಪ ಹೂವಪ್ಪ ಪೇಟರಗಿ (ಪೂಜೇರ) ಅವರಿಗೆ, ಮಾಳಿಂಗರಾಯನ ಜಾತ್ರೆ, ಆಚರಣೆಗಳಿಗೆ ಸಂಬಂಧಿಸಿದ ಅನೇಕ ವಿಚಾರಗಳನ್ನು ತಿಳಿಸಿದ ಅಡಿವೆಪ್ಪನವರ ಪುತ್ರ ಪದುಮಣ್ಣನಿಗೆ, ಅವರ ಮನೆಯವರಿಗೆ ಹುಲಜಂತಿಯ ಹಿರಿಯರಿಗೆ, ಸೊನ್ಯಾಳದ ಕಲಾವಿದರಾದ ಹನುಮಂತಗೌಡ, ಧರೆಪ್ಪ, ಪ್ರಕಾಶ, ವಿಠ್ಠಲ, ತುಕಾರಾಮ, ರಮೇಶ, ಲಕ್ಷ್ಮಣ, ಶ್ರೀಶೈಲ, ಮಲಿಕ್‌ಹುಸೇನ್‌, ಚಿದಾನಂದ ಅವರಿಗೆ

ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಕ್ಷೇತ್ರಕಾರ್ಯ ಕೈಗೊಂಡಾಗ ನನ್ನೊಂದಿಗೆ ಇದ್ದು ತಮ್ಮ ವಿಚಾರಗಳನ್ನು ತಿಳಿಸಿದ ಹಿರಿಯರಾದ ಯಲ್ಲಪ್ಪ ಮರುಕುಂಬಿ, ದೇವೇಂದ್ರಾಚಾರ್ಯ ವಿಶ್ವಜ್ಞ, ಮಿತ್ರರಾದ ವಿ. ಎಲ್‌. ಪಾಟೀಲ್‌, ಬಸವರಾಜ ಹುಗ್ಗಿ, ಶಶಿಧರ ಮರುಕುಂಬಿ, ವಾಸುದೇವ ವಿಶ್ವಜ್ಞ, ಸಹೋದರರಾದ ನಾಗಲಿಂಗ ಮತ್ತು ಸುರೇಶ ಅವರಿಗೆ

ಈ ಕಾವ್ಯದ ಸಂಗ್ರಹಣೆಯಿಂದ ಪ್ರಸ್ತಾವನೆ ಸಿದ್ಧಪಡಿಸುವವರೆಗೆ ಅನೇಕ ವಿಚಾರಗಳನ್ನು ನನ್ನ ಗಮನಕ್ಕೆ ತಂದ ವಿಭಾಗದ ಮುಖ್ಯಸ್ಥರಾದ ಪ್ರೊ. ಹಿ. ಚಿ. ಬೋರಲಿಂಗಯ್ಯ ಅವರಿಗೆ, ಕಾವ್ಯ ಸಂಪಾದನೆಯಲ್ಲಿ ನನ್ನೊಂದಿಗೆ ಸಹಕರಿಸಿದ ಸಹೋದ್ಯೋಗಿ ಮಿತ್ರರಾದ ಡಾ. ಕೇಶವನ್‌ ಪ್ರಸಾದ್‌, ಕೆ. ಮರಟ್ಟಿ, ಡಾ. ಕೆ. ಎಂ. ಮೈತ್ರಿ, ಚಲುವರಾಜು, ಎ. ಎಸ್‌. ಪ್ರಭಾಕರ, ವಿದ್ಯಾರ್ಥಿ ಮಿತ್ರರಾದ ವಿ. ಸೀ. ಮಾರುತಿ, ಎಚ್‌. ನಿಂಗಪ್ಪ, ನಾಗಭೂಷಣ ಗೌಡ ಪಾಟೀಲ ಅವರಿಗೆ

ಕಾವ್ಯದಲ್ಲಿರುವ ಮರಾಠಿ ಶಬ್ದಗಳಿಗೆ ಅರ್ಥ – ವಿವರಣೆ, ದೇವಸ್ಥಾನದ ವಾಸ್ತುಶಿಲ್ಪದ ಬಗೆಗೆ ಅನೇಕ ಮಾಹಿತಿ ನೀಡಿದ ಮಿತ್ರ ವಾಸುದೇವ ಬಡಿಗೇರ, ಅತ್ತಿಗೆ ಶ್ರೀಮತಿ ಸುನಂದ, ಕಲವೀರ ಮನ್ವಾಚಾರ, ಡಾ. ವಿಠ್ಠಲ್‌ರಾವ್‌ ಗಾಯಕ್ವಾಡ್‌ ಅವರಿಗೆ

ಈ ಕಾವ್ಯ ಬೇಗ ಪ್ರಕಟವಾಗಬೇಕು ಎಂದು ಒತ್ತಾಯಿಸುತ್ತಿದ್ದ ಹುಚ್ಚಪ್ಪ ಮಾಸ್ತರ್, ಡಾ. ಕೆ. ಎಂ. ಸುರೇಶ, ಡಾ ಬಸವರಾಜ ಮಲಶೆಟ್ಟಿ, ಭಾಸ್ಕರ್ ಅವರಿಗೆ

ಪ್ರಕಟಣೆಗೆ ಕಾಳಜಿ ವಹಿಸಿದ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಎ. ವಿ. ನಾವಡ ಅವರಿಗೆ, ಪುಟವಿನ್ಯಾಸಗೊಳಿಸಿದ ಸುಜ್ಞಾನಮೂರ್ತಿ, ರೇಖಾಚಿತ್ರಗಳನ್ನು ಮತ್ತು ಮುಖಪುಟ ವಿನ್ಯಾಸ ರೂಪಿಸಿದ ಕೆ. ಕೆ. ಮಕಾಳಿ ಅವರಿಗೆ, ಪ್ರಸಾರಾಂಗದ ಸಿಬ್ಬಂದಿಗೆ, ವಿಭಾಗದ ಮಿತ್ರರಾದ ಗಣೇಶ, ಹನುಮಂತ, ಮಾರಪ್ಪ ಅವರಿಗೆ

ಕಾವ್ಯದ ಧ್ವನಿಸುರುಳಿಯನ್ನು ಬರಹಕ್ಕೆ ಇಳಿಸುವಾಗ ನನ್ನೊಂದಿಗೆ ಸಹಕರಿಸಿದ ಮಿತ್ರರಾದ ಚಂದ್ರಶೇಖರ, ಶ್ರೀಮತಿ ಶಕುಂತಲ, ಬಂಗಾರಪ್ಪ, ಶ್ರೀಮತಿ, ಎಚ್‌. ಬಿ. ರವೀಂದ್ರ, ಜಿ. ಶಿವಕುಮಾರ, ಭರಲಿಂಗಪ್ಪ, ಗ್ಯಾನಪ್ಪ ಮತ್ತು ಎಲ್ಲಾ ರೀತಿಯಲ್ಲೂ ಸಹಕರಿಸಿದ ನನ್ನ ತಾಯಿ, ಪತ್ನಿ ಶ್ರೀಮತಿ ಸರೋಜ, ಪುಟ್ಟಿ ಭಾಗೀರಥಿ ಅವರಿಗೆ

ಅಚ್ಚುಕಟ್ಟಾಗಿ ಅಕ್ಷರ ಸಂಯೋಜನೆ ಮಾಡಿದ ಶ್ರೀ ಸಾವಳಗಿ ಶಿವಲಿಂಗೇಶ್ವರ ಗ್ರಾಫಿಕ್ಸ್‌, ಕಮಲಾಪುರ ಅವರಿಗೆ

ಕನ್ನಡ ವಿಶ್ವವಿದ್ಯಾಲಯದ ಎಲ್ಲಾ ಸಹೋದ್ಯೋಗಿ ಮಿತ್ರರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಗಂಗಾಧರ ದೈವಜ್ಞ