ಅಂಡಜಾ – ಅಂಡದಿಂದ ಹುಟ್ಟಿದ
ಅಕ್ಕರ್ತಿ – ಪ್ರೀತಿ
ಅಟ್ಟೂರು – ಎಲ್ಲರು
ಅರಬಿ – ಬಟ್ಟೆ
ಆರ್ಯಾಣ – ಕಾಡು
ಈರಗಾಲ – ಮಣಕಾಲನ್ನು ನೆಲಕ್ಕೆ ಹಚ್ಚುವುದು
ಉಡುಗು – ಕುಗ್ಗು
ಓಣ್ಯಾಂದ – ಓಣಿ, ಗಲ್ಲಿ, ಬೀದಿ
ಕಂತಿ – ಜೀವಂತ ಸಮಾಧಿ
ಕಮಾಯಿ ಬಿಂಡಿ – ತಿಂಡಿ ಗಂಟು
ಕರತೋ – ಕರ್ತೃ
ಕಳ್ಳರ ಕವುಟಿ – ಕಳ್ಳರ ವಾಸಸ್ತಾನ
ಕಿಲ್ಲಾರ – ಹಸುಗಳ ಹಟ್ಟಿ
ಕುರು – ಗುರುತು, ಚಿನ್ಹೆ
ಕೂನ – ಗುರುತು
ಗರ್ದಿಲಿ – ಭರ್ಜರಿ, ಚೆನ್ನಾಗಿ
ಗುಡ್ಡಗವ್ವರ – ಗುಡ್ಡದ ಕಂದಕಗಳು
ಗುದುಮರಗಿ – ಗುದ್ದಾಟ
ಗೋಳು – ಕಷ್ಟ
ಚೆಂಜಿ – ಸಾಯಂಕಾಲ
ಚಾಂಗಬಲ – ಒಳ್ಳೆಯದಾಗಲಿ
ಚಣದಾಗ – ಕ್ಷಣದಾಗ
ಚಮೂಲಿರಂಗ – ಮೋಡಿಆಟಕ್ಕೆ ರಂಗ ಹಾಕುವುದು
ಚಿತ್ತಿಟ್ಟು – ಲಕ್ಷವಿಟ್ಟು
ಚೊಕ್ಕ – ಸ್ಪಷ್ಟ
ಜಬರ್ – ಅಂಜಿಸು
ಜರ್ ಕಡತಾ – ಒಂದು ವೇಳೆ
ಜಲ್ಮ – ಜನ್ಮ
ಜ್ಚಾಕಿ – ಎಚ್ಚರ
ಜಿರಿ ಪಿಕ್ಕಿದ್ದ ನೀರು – ಜರಿ ನೀರು
ಟೊಳ್ಯಾಗ – ಸುಣ್ಣಕಲಸುವ ಹರವಿ
ಠಿಕಾಣಾ – ಸ್ಥಳ
ಡಿಗ್ಯಾಗ – ತಗ್ಗು
ತ್ಯವರಿಗಿ – ದಡಕ್ಕೆ
ತೋಡಿಗಿ ತೋಡಿ – ರಾಗಬದ್ಧವಾಗಿ
ದಂದೆ – ಕೆಲಸ
ದುಂಡುರ್ಕಿ – ಸಾಷ್ಟಾಂಗ ನಮಸ್ಕಾರ
ದಮ್ಮು – (ತಾಕತ್ತು) ನಿಧಾನ
ದವಣಿ – ಸಾಲಾಗಿ ಕಟ್ಟುವ ಹಗ್ಗ
ದಿಮ್ಮಿಟ್ಟ – ಸ್ಪರ್ಧೆ
ದೌಡ – ಬೇಗನೆ
ನಾಡವೈದ್ಯ – ಜನಪದ ವೈದ್ಯ
ನ್ಯಾರ್ – ನಶೆ
ನೆಲ್ದ ಬೈಯಾರ – ಸುರಂಗ
ಪಂಚೇರ್ – ಐದಣೆ ತೂಕ
ಪಜೀತಿ – ಪೇಚಾಟ
ಪರಂತು – ಆದರೆ
ಪರಗಂದಿ – ಪರದೇಶಿ
ಪರಪರತೋ – ಬೇರೆ ಬೇರೆ
ಬಂದು ಬಸ್ತ – ಕಟ್ಟು ನಿಟ್ಟು
ಬಿಂಡಿ – ಗಂಟು
ಬಕ್ಷಣ – ತಿನ್ನು
ಬಗಟ – ತೋಡು, ಕೆದರು
ಬಡ್ಡಿ ಮಾತು – ಮೂಲಮಾತು
ಬೋರ್ಯಡಿ – ಜೋರಾಗಿ ಗೋಳಾಡುತ್ತ
ಬಲ್ಲಿ – ಬಳಿ
ಬಲ್ಯಕ – ಗುರುತು – ಹಂತೇಕ
ಬ್ಯಾನಿ – ರೋಗ
ಬಾನ – ಅನ್ನ
ಬಿನ್ನೆತ್ತೆ – ಒಂದನೇ ತರಗತಿಗಿಂತ ಮೊದಲು ಕಲಿಯುವ ತರಗತಿ
ಬೆಚ್ಚರ್ – ಗಾಭರಿ
ಮಜಕೂರ – ವಿಷಯ
ಮಜ್ಜಣ್ಣ – ತೊಳೆದುಕೊಳ್ಳುವುದು, ಸ್ನಾನ
ಮಟ್ನ – ತಕ್ಷಣ
ಮಡಾ – ಆಳ
ಮರತ್ಯಾಕ – ಮೃತ್ಯಲೋಕ
ಮಾಫಿ – ಕ್ಷಮೆ
ಮಾನೇದ ಹೊಲ – ದಾನದ ಜಮೀನು
ಮಾರಿ – ಮುಖ
ಮುರಿ – ತಿರುವು
ಮೂರುತ್ಯಾಗು – ಕುಳಿತುಕೊಳ್ಳು, ಸ್ಥಾಪನೆ
ಮೆಟ್ಟ – ಸ್ಥಳ (ವಾಸಸ್ಥಳ) ಗುರುತು
ಮೌಲಿ – ತಲೆ, ಜುಟ್ಟು
ಯಾಳಿ – ವೇಳೆ, ಸಮಯ
ರಕ್ಷೇನ – ರಕ್ಷಣ
ರಗತಾ – ರಕ್ತ
ರಿಕ್ಕಾಗಿ – ಬಿಗಿಯಾಗಿ
ರೋಜನ – ಆಲಾಪ
ಲಾಗಬೇಗ – ಲಗುಬೇಗ
ವಕವಾದ – ವಾಗ್ವಾದ
ವಾಯೇಣ – ಜನಪ್ರಿಯತೆ
ಸಣಕುಲ – ಚಿಕ್ಕ ಜಾತಿ
ಸೀತಾಳ – ಪವಿತ್ರ ನೀರು
ಹಂಗ್ಲಿಲ್ಲ – ಹೋಗಲಿಲ್ಲ
ಹೆಂಡಿ – ಸಗಣಿ
ಹಚ್ಚಿ ಬರುವುದು – ಕಳಸಿ ಬರುವುದು
ಹಾನ – ಅದಾನ, ಐತಿ
ಹಾವಿನ ಲಡ್ಡ – ಹಾವಿನ ಬಾರಕೋಲ
ಹುರ್ಯಾಳ – ಕೂಗಾಡಿ
ಹೆಡಗಿ – ಬುತ್ತಿ ಬುಟ್ಟಿ
ಹೆಡಗೂಡಿ – ಹೆಡಮುರಗಿ, ಕೈಕಾಲು ಕಟ್ಟುವುದು
ಹೈರಾಣ – ಸುಸ್ತು
ಹೊತಿಗಿ – ಹೊದಿಕಿ, ಬಟ್ಟೆ
ಹೊಯ್ಕಾ – ಭವಿಷ್ಯ ತತ್ವ
ಹೌಳ – ಹವಳ
* * *