ಮಾಳಿಂಗರಾಯನ ವಂಶ
ಆಡುವವರ ತಂತೋss
ಕೇಳರಿ ಸಿದ್ಧಾಂತೋss
ಕಳ್ಳಿಗಿ ಕಳ್ಳಾs
ತೊಡಕ ಬಿದ್ದಿತೋss
ಬೆಳಿಯುತ ಬಂದಿತೋss
ಹಾಲಮತೋss

ಮುದ್ದಗೊಂಡನ ಬೆಳೆ
ಬೆಳೆಯುತ ನಡಿತೋs
ಭವದಾಗs
ಕೇಳರಿ ವಿಪರೀತೋss

ಜಾಗ್ರತಪುರ ಇವರ ಪಟ್ಟಣವಿತ್ತೋss
ಜಗತ್ಯಕೆ ಎಲ್ಲಾ ಜಾಹೀರಾತೋss
ಪದುಮಗೊಂಡನ ಕತಿ
ಕೇಳ್ರೆಪ್ಪಾ ಕುಂತೋss

ಐದು ಮಂದಿ ಸತಿಯರs
ಯಾರಿದ್ರೋ ಅವಾಗೋss
ಮಹಾನ ಪತಿಯ ಹೊರತೋss
ಸತಿ-ಪತಿ ಸದ್ಗತಿ ಸಂಪತ್ತೋss
ಪ್ರೀತಿ ಲೋಭದಿಂದs
ಕಾಲ ಕಳಿಯುತ್ತೋss

ಮಕ್ಕಳ ಹಡದಾರ ರೂಪವಂತೋss
ಸಿದ್ಧ ಮಾಳಪ್ನ ವಂಶ ಹಬ್ಬಿತೋss
ಇದೇ ಬಡ್ಡಿ ಮಾತೋss

ದೇವರಾಜ ಎಂಬುವ
ಹುಟ್ಟಿ ಬಂದ ಕರತೋss
ಅವನಿಂದ ದೂಪಕ ದೀಪಕ ಅಂತೋss
ವಂಶ ಬೆಳಿಯುತ ಮುಂದ ಬಂತೋss
ದೂಪಕ ರಾಯನಿಂದೋss
ಆಣಕ ಜಾಣಕ ರಾಯಾರು ಹುಟ್ಯಾರಂತೋss

ಆಣಕನ ವಿಸ್ತಾರಾ
ಕೇಳರೀ ಇವತ್ತೋss
ಜಾಣಕನ ಮನೆತನಾ ನಷ್ಟವಾದಿತೋss
ಅಣ್ಣ ತಮ್ಮ ಇದ್ರು ಸತ್ಯವಂತ್ರೋss

ಆಣಕನ ಹೊಟ್ಟಿಲೇ ಸೇರಿ ಬಿಂಪ್ರಾಯಾs
ಹುಟ್ಟಿ ಬಂದನೋ ಕರತೋss
ಆನಿಗೊಂದಿಗಿ ಇವನ ರಾಜಕಿತ್ತೋss
ಆಲಕ ಪಾಲಕ ಎಂಬುವರಂತೋss
ಹುಟ್ಟಿ ಬಂದ್ರೋs
ಇದು ಬಡ್ಡಿ ಮಾತೋss

ಆಲಕನಿಂದ ಕರಿಗೌಡ ಕೆಂಚಗೌಡs
ಪಟ್ಟದ ಒಡಿಯರ ಮಾತೋss
ಕರಿಗೌಡರ ಕೇಳರೀ ಮಾತೋss
ಆನಿಗೊಂದಿ ಬಿಟ್ಟು
ಬಂದಾರ ಆ ಹೊತ್ತೋss

ಗುರುವಿನ ಕಿಲ್ಲಾರ್ಕ ಆ ಹೊತ್ತೋss
ಗುರುವಿನ ಗೋವುಗಳ ಕಾಯುತ್ತೋss
ಗುರುವಿನ ಕಿಲ್ಲಾರ ಕಾವುತ್ತೋss
ತುಕ್ಕಪ್ಪರಾಯ್ಗ ಸೋಮರಾಯ್ಗs
ಜನುಮ ಕೊಟ್ಟರೋs
ಚಲುವ ಚಂದ್ರ ಜೋತೋss

ಸಿದ್ಧ ಮಾಳಪ್ಪನ ವಂಶದ ಮಾತೋss
ಪದುಮಗೊಂಡನಿಂದ ಬೆಳದೀತೋss
ಮಾಳಪ್ನ ಕತಿ ಮುಂದ ಉಳದೀತೋss
ಸಿದ್ಧ ಮಾಳಿಂಗರಾಯಾs
ಹುಟ್ಟುವ ಕತಿ ಭಾಗಾs
ಕೇಳರಿ ಇವತ್ತೋss

* * *

ನರರಿಗೆ ಗತಿ ಇಲ್ಲs
ಗುರುವಿನ ಹೊರತೋss
ಮೂಲ ಬಡ್ಡಿ ಮಾತೋss
ಸಿದ್ಧ ಮಾಳಪ್ಪನs
ಹುಟ್ಟಿದ ಕತಿ ಭಾಗಾs
ಕೇಳಿ ಆಗರಿ ಶಾಂತೋss || ಸಿದ್ಧ ಮಾಳಪ್ಪನs ….. . . . ||

ಅರಸ ತುಕ್ಕಪ್ಪರಾಯಾs
ತಮ್ಮ ಸೋಮರಾಯಾs
ಪಟ್ಟದ ಒಡಿಯಾರ ಮಾತೋss
ಮಕ್ಕಳಿಲ್ಲದಕ ಮನಸs ಮರಗತಿತ್ತೋs
ದಿನಕೆರಡು ಹೊತ್ತೋss

ಇತ್ತ ಕಾರ್ಬಾರಾss
ತಮ್ಮಗ ನೇಮಿಸೀss
ತುಕ್ಕಪ್ಪ ಹೊಂಟ ನಿಂತೋss
ಬಿಲ್ಲಾಳ ಗುಡದಾಗs
ಬಂದು ತುಕ್ಕಪ್ಪಗೌಡs
ಜಪಾ ಮಾಡುತ ಕುಂತೋss || ಬಿಲ್ಲಾಳ ಗುಡದಾಗs ….. . . .  ||

ಮಹಾನ ಪತಿವ್ರತೀs
ಮೌಲಿ ಸುಂದರೀss
ಅಮೃತಬಾಯಿ ಮಾತೋss
ಪತಿಯ ಸಂಗಾಟ
ಹೊಂಟ ನಡದಾಳೋss
ಆರ್ಯಾಣಕ ಆ ಹೊತ್ತೋss
ಹೆಂತಾ ಹಣೆಬರಾss
ಬ್ರಹ್ಮ ಬರದಾನೋss
ಜೋಡಿ ಸತಿಯ ಪತ್ಯೋss
ಕೆಟ್ಟ ಕಾಂತರಾss
ಗುಡ್ಡ ಗವ್ವರದಾಗss
ಒಳಗೆ ಹೋಗಿ ಕುಂತೋss || ಕೆಟ್ಟ ಕಾಂತರಾ  ….. . . . ||

ಗುಡ್ಡದನಿಯಲೀss
ನಿಂತ್ರೋ ಕೊನೆಯಲೀss
ತಪ ಮಾಡುತ ಕುಂತೋss
ಸಿಂಹ ಶಾರ್ದೂಲಾss
ಮಿಕ್ಕ ಜಾತಿ ಬಳಗಾss
ಅವರಿಗಿ ದೊರಿಯಿತೋss
ಹನ್ನೆರಡು ವರುಷಾss
ಹಗಲು ಇರಳುs
ತಪಾ ಜೋರ ನಡಿತೋss
ಗುಡದಾಗs
ತಪಾ ಜೋರ ನಡಿತೋss
ದೇವಲೋಕದಾಗs
ಇಂದ್ರ ದೇವರಿಗೀss
ನಡಗ ಹತ್ತಿತೊss || ದೇವಲೋಕದಾಗ  ….. . . . ||

ಎನ್ನ ಪದವಿ ಹೊಗ್ತದಂತs
ಇಂದ್ರಾದೋ ಗಾಬರೀss
ರಂಭಾ ದೇವಿನ್ನ ಕರದೋss
ಹೇಳ್ತಾನೋ ಮಾತೋss
ಮಾತ ಕೇಳಿ ರಂಭಾ ನಡದಾಳೋss
ಆಶ್ರಮ ಮುಂದು ನಿಂತೋss
ನಿತ್ತ ಚಣದಾಗ ಬೆಳಕ ಬಿದ್ದಿತೋss
ಚಲುವ ಚಂದರ ಜೋತೋss || ನಿತ್ತ ಚಣದಾಗ  ….. . . .  ||

ಇಪ್ಪತ್ತ ಮೂರು ದಿವಸಾs
ಮಳಿಯ ನಡದಿತ್ತೋss
ಸಿಡಿಲ ಕಡಲ ಬಿತ್ತೋss
ತಪದ ಬಲದಿಂದs
ಬಿದ್ದಿರೊ ಸಿಡಿಲಾs
ಮಟ್ಟನೇ ಮಾಯಾತೋss
ಹನ್ನೆರಡು ವರುಷಾss
ತಪಗೈದ ಮ್ಯಾಲss
ದೇವರಿಗೆ ಅರುವಾಯ್ತೋss
ಕೈಲಾಸದಾಗs
ಶಂಕರಗ ಅರುವಾಯ್ತೋss
ಅವರ ಭಕ್ತಿಗೀs
ಮೆಚ್ಚಿ ಶಂಕರಾss
ಬಂದಿದ್ದ ಭಗವಂತೋss || ಅವರ ಭಕ್ತಿಗಿ ….. . . . ||

ಜಪಮಣಿ ಮಾಣಿಕ ಮಣೀss
ಎರಡು ಹಾರಗಳ
ಕೊಟ್ಟಿದ ಭಗವಂತೋss
ಇದರಾನ ಸೇವಾs
ಮಾಡುತ ನಡಿರೋss
ಬಂಜೀತನ ಹಿಂಗೀತೋss
ಇಷ್ಟಮಾತ ಅವರಿಗೀs
ಕೊಟ್ಟು ಪರಮೇಶೂರs
ಹೋಗಿದ ಭಗವಂತೋss
ಬಾರಾಮತಿ ಪಟ್ಟಣದಾಗs
ಬಂದು ತುಕ್ಕಪ್ಪಗೌಡಾs
ಜಪಾ ಮಾಡುತ ಕುಂತೋss || ಬಾರಾಮತಿ ….. . . . ||

ಜಪಮಣಿಯಿಂದ
ಜಗನ್ನಾತನವತಾರs
ಜಕ್ಕಪ್ಪರಾಯಂದು ಆಯ್ತೋss
ಮಾಣಿಕ ಮಣಿಯಿಂದs
ಬಸವನ ಅವತಾರs
ಮಾಳಪ್ಪಂದು ಆಯ್ತೋss
ಮೃತ್ಯ ಲೋಕದಾಗs
ಹುಟ್ಟಿ ಬಂದಾರೇನೋss
ಜಗ ಉದ್ಧಾರವಾಯ್ತೋss
ಹಾಲಮತಕ ಮೇಲs
ಗದ್ದಗಿ ಹುಲಜಂತೀs
ಅಡಿವೆಪ್ಪ ಹೇಳಿದ ಮಾತೋss || ಹಾಲಮತಕ ….. . . . ||

* * *

ಜಕ್ಕಪ್ಪ ಮಾಳಪ್ಪ ಜೋಡೀss
ಜನಸಿ ಬಂದಾರೋs
ಬಾರಾಮತಿ ನೋಡೀss
ಜಕ್ಕಪ್ಪ ಮಾಳಪ್ಪ ಜೋಡೀss
ಜನಿಸಿ ಬಂದಾರೋss
ಹಾಲಮತಾ ನೋಡೀss
ಅಕ್ಕರ್ತಿಯಿಂದss
ಅಕ್ಕನ ಮಕ್ಕಳಿಗೀs
ತಾಯಿ ಕಣ್ಣಬಾಯಿs
ಜ್ವಾಕೀ ಮಾಡಿ ಮಾಡೀss || ಜಕ್ಕಪ್ಪ ಮಾಳಪ್ಪ ….. . . . ||

ಸತ್ಯ ಧರಮರ
ಸಮ ಜೋಡೀs
ಬಾರಾಮತಿಯಾಗ
ಇರತಾರ ಕೂಡೀss
ನಿತ್ಯ ಲಿಂಗ
ಪೂಜಾ ಮಾಡೀss
ಆಟ ಆಡ್ತಾರ
ಇಬ್ಬರು ಕೂಡೀs
ಅಕ್ಕರ್ತಿಯಿಂದs
ಆಟಾ ಆಡ್ಯಾರಲ್ಲೀss
ಹುಡುಗರ ಸಂಗಟಾ
ಕೂಡಿ ಕೂಡೀss || ಜಕ್ಕಪ್ಪ ಮಾಳಪ್ಪ ….. . . . ||

09_83_ABHMK-KUH

ಸಂಗ್ಯಾ ನಿಂಗ್ಯಾ
ಇದ್ದರಪ್ಪ ಜೋಡೀss
ಊರಹೊರಗ
ಅವರು ಆಟಾ ಹೂಡೀs
ನಿತ್ಯ ಚಿನಕೋಲ
ಆಟಾ ಆಡೀs
ಸರ್ಪ ಬಂತಪ್ಪ
ಬಂದು ಬೋರ್ರ್ಯಾಡೀss
ಸರಪೀನ ಸಪಳಾss
ಆರಬಾಟ ಕೇಳಿ
ಹುಡಗರು ಹೋದಾರು
ಓಡಿ ಓಡೀ  || ಜಕ್ಕಪ್ಪ ಮಾಳಪ್ಪ ….. . . . ||

ಎಡವಿ ಸಂಗ್ಯಾ ಬಿದ್ದs
ಹಾದಿ ಕೂಡೀss
ಹಾವು ಕಚ್ಚಿತವ್ಗ ನೋಡಿss
ದಿಟ್ಟಾಗಿ ಮಾಳಪ್ಪ ನೋಡೀs
ಹೋಗಿ ಹಿಡಿದಾನ
ಹಾವಿನ ಹೆಡೀss
ದಿಟ್ಟಾಗಿ ನಿಂತಾss
ದೀರುಳ್ಳ ಮಾಳಿಂಗರಾಯ್ನs
ಜಿಗಿದಾವು ಕಣ್ಣಾನ
ಕಿಡಿ ಕಿಡೀss  || ಜಕ್ಕಪ್ಪ ಮಾಳಪ್ಪ ….. . . . ||

ಗಾಬ್ರ್ಯಾಗಿ ಜನರೆಲ್ಲ ನೋಡೀss
ಧನ್ಯ ಧನ್ಯ ಜಯ ಘೋಷ
ಅವರು ಮಾಡೀss
ಸರಪಿಗಿ ಸಿದ್ಧ ಮಾತಾಡೀss
ನಾಗಬೆತ್ತಾಗಿ ಇರುವಂಗ ನೋಡೀss
ಸತ್ತ ಸಂಗ್ಯಾನss
ಎಬಸಿದಾಗ ಸಂಗ್ಯಾ
ಪಾದ ಹಿಡದನೊ
ನೋಡಿ ನೋಡೀss  || ಜಕ್ಕಪ್ಪ ಮಾಳಪ್ಪ ….. . . . ||

ಧನ್ಯ ಧನ್ಯ ಜಯ ಘೋಷ
ಅವರು ಮಾಡೀss
ಕೂಗ ಹೊಡಿತಾರ
ದೇವ್ರಂತ ನೋಡೀss
ಮಾಳಪ್ಪನ ಪಾದ ಹಿಡೀss
ಕವಿ ಅಡಿವೆಪ್ಪ ಪದಗಳ ಮಾಡೀss
ಬಂಗಾರ್ದ ಬಾರಾಮತಿ
ಶೃಂಗಾರ್ದ ತೇರಾಮತಿ
ಹೋಗಿ ಬಾರಪ್ಪ ನೀs
ನೋಡಿ ನೋಡೀss  || ಜಕ್ಕಪ್ಪ ಮಾಳಪ್ಪ ….. . . . ||

* * *

ಕರುಣದಿಂದ ಕೈಯ ಹಿಡದ
ಕಾಪಾಡೊ ಗುರವೇss
ಶರಣ ಹೊಂದುವೆ ಪಾದಕs
ವರಕೊಟ್ಟ ಗುರು
ಇರಬೇಕ ಕದೀತನಕs
ಗುಪ್ತದಿಂದ ಗುರು ನುಡಿಯs
ಪಡಿಯೊ ಮತ್ತು ದುಡಿಯೋss
ಜನ್ಮ ಆಗೂದು ಸಾರ್ಥಕs

ಆರ್ಗುಣ ಅಳಿದುs
ಮೂರ್ಗುಣ ತಿಳಿದುs
ಮಾಳಪ್ಪ ಬಂದ ಮರತ್ಯಾಕೋss
ಹುಟ್ಟಿ ಬಂದs
ಬಾರಾಮತಿ ಸ್ಥಳಕೋss

ಹುಟ್ಟಿ ಮೂರs
ವರುಷಕ ಮಾಳಿಂಗರಾಯಾs
ಮಹಿಮಾ ತೋರಿದ
ಅದೇ ಸ್ಥಳಕೋss
ಮೇನಗಾರ ನಾಯಿ
ನಿನ್ನಮೆ ಕಣ್ಣಮೆs
ನಿನ್ನ ಬ್ಯಾಟೀss
ನಿತ್ಯ ಆಡ್ತಿದ್ದ
ಅದೇ ಸ್ಥಳಕs
ಎರಡ ಮೀನ ಹಿಡ್ದs
ತಂದೀತ ಮೆಲ್ಲಕs
ಮೇನಿನ ಹೊಟ್ಟಿ ಹರದು
ಕಳ್ಳ ಕರಚ ತಗದು
ಮೇನ ತೊಳಿತಿದ್ದೋss
ಕಡಿಯಾಕಾs

ಆಟ ಆಡೂದು ಬಿಟ್ಟುs
ನೋಡುತ ಮಾಳಿಂಗರಾಯಾs
ಬಂದ ನಿಂತೊ ಬಲ್ಯಾಕs
ಗಾಬ್ರ್ಯಾಗಿ ಮೇನ್ಗಾರ
ಬಿದ್ದೋ ಪಾದಕs

ಸತ್ತ ಮೀನ
ನೀನು ಏನ ಮಾಡತೀs
ಎಂದು ಮಾಳಪ್ಪ
ಕೇಳ್ಯಾನ ಆ ಕ್ಷಣಕs
ಹೊಟ್ಟಿ ಬಟ್ಟಿಗಾಗೀs
ಮೇನಿನ ಮಾರಾಟ ಮಾಡೀs
ಕಾಲ್ಕಳಿತೇವೆ ಈ ಭವಕs

ಏನ ಕಿಮ್ಮತ ಐತಿ
ಮೇನ ಕೊಡವುದಕs
ಒಂದ ದುಡ್ಡ ಇದರ ಬೆಲೆ
ಆಗೊದು ಗುರವೇs
ಏನ ಬೇಕ ನಿನಗ್ಯಾತಕs
ಮಾಯಿದಿಂದ ದುಡ್ಡs
ತಗದು ಕೊಟ್ಟಾನೋs
ಮೇನ ನೀರಾಗ ಬಿಡುವಂದs
ಹೊಳಿಯಾಕs
ಗಾಬ್ರ್ಯಾಗಿ ಮೇನಗಾರs
ಎದ್ದು ಮುಂದಕs
ಸತ್ತ ಮೀನ ಹೊತ್ತು ಒಯ್ದು
ಒಗದಾನ ಅವನು
ನಿಂತ ನೋಡುದಕs

ಸತ್ತ ಮೀನ ಪ್ರಾಣಾs
ಬಂದು ಆಡುತಾವೋs
ಜನ ನಿಂತು ನೋಡುದಕs
ಧನ್ಯ ಧನ್ಯ ಮಾಳಪ್ಪ
ಹೆಚ್ಚ ಮರತ್ಯಕs

ಪರಶಿವ ಮಾಳಿಂಗರಾಯs
ಪರಬ್ರಹ್ಮ ಇವನೇs
ಮಾನವನಾಗಿ ಬಂದs
ನಮ್ಮ ಸ್ಥಳಕs
ಜಯಸೀರಿ ಮಾಳಿಂಗರಾಯಾs
ಜಯಘೋಷ ಮಾಡುತs
ಜನ ಹತ್ಯಾರೋ ಕೂಗುದಕs

ಮಹಿಮಾ ಪುರುಷ ಮಾಳಪ್ಪs
ಹೆಚ್ಚಿನವ ಮರತ್ಯಕs
ಮೆರವುಣಗಿ ಮಾಡುತs
ಮನಿಗಿ ಹೋದಾರೋ ಜನಾs
ಶರಣ ಹೊಂದ್ಯಾರೋ ಪಾದಕs

ಅವತಾರ ಪುರುಷ ಮೂರ
ವರುಷದ ಮಾಳಪ್ಪs
ಮಹಿಮಾ ತೋರಿದೋs
ಹುಟ್ಟಿದ ಸ್ಥಳಕs

ಉದ್ಧಾರ ಮಾಡ್ಯಾನ ಕೇಳರೀs
ಎಲ್ಲಾ ಜನಕs
ನಾನಾ ತರದ ಲೀಲಾs
ಮಾಡ್ಯಾನೊ ಮಾಳಪ್ಪಾs
ಅಡಿವೆಪ್ಪ ಹೇಳ್ಯಾನೋs
ಎಲ್ಲಾ ಜನಕs

* * *