ಮೊದಲೀಗಿ ಮಾಳಿಂಗರಾಯಗ ಶರಣೋss
ಅವನ ಗುರುವ ಬೀರಸಿದ್ಧಗ ಶರಣೋss
ಕಾಯಪಾ ಬಾರೋss
ಮಾನ ಕಾಯೋ ಪ್ರಭುs
ಗಣಪತಿಗೆ ಶರಣೋss
ಹಾಲಮತದ ಮೂಲ ಹಿರಿಯಗ ಶರಣೋss
ಮೊದಲ ಹುಟ್ಟಿದss
ಮುದಗೊಂಡಗ ಶರಣೋss
ಅವನಿಂದ ಉತ್ಪತ್ತಿss
ಹಾಲಮತ ಬೆಳದೈತೀss
ಸತ್ಯ ಧರಮರಿಗಿ ಶರಣೋss
ಭಕ್ತಿಯಿಂದ ಬಸವಣ್ಣಗ ಶರಣೋss
ಅಷ್ಟ ಮಾಹಾಸಿದ್ಧಿ ಪಡಿಕೊಂಡು
ಬುದ್ಧ ನವನಾಥಗ ಶರಣೋss
ಆದಿಗುರು ಆದಿನಾಥಗ ಶರಣೋss
ನವನಾಥರ ಗುರುss
ದತ್ತಾತ್ರಿಗಿ ಶರಣೋss
ಮಾಡ್ತೇವ ಧ್ಯಾನಾss
ಕೊಡುವಪ್ಪಾ ಮಾನಾss
ಮಾಳಿಂಗಗ ಶರಣೋss
ಸಿದ್ಧ ಸಾಧು ಸಂತs
ಜನರಿಗೆ ಶರಣೋss
ಜಗ ಜನಾರ್ಧನ ಪಂಡಿತಗ ಶರಣೋss
ಸಂತ ಮಂಡಳಿಗೆs
ಜ್ಞಾನ ತೋರಿದs
ಪಾಂಡುರಂಗಗ ಶರಣೋss
ಪುಂಡಲೀಕ ವರದ ಹರಿss

ವಿಠ್ಠಲಗೆ ಶರಣೋss
ಜಯ ನಮ ಪಾರ್ವತೀss
ಪರಮಾತ್ಮಗ ಶರಣೋss
ಏಕಲಾಕ ಐಸಿ ಹಜಾರs
ಪೀರ ಪೈಗಂಬರ ಶರಣೋss
ಆಧಿ ಶಕ್ತಿ ಮಾಯಿಗಿ ಶರಣೋss
ಅಕ್ಕವ್ವ ಮಾಯವ್ವಗss
ಶಿರಬಾಗೀ ಶರಣೋss
ಚಂಡಿ ಚಾಮುಂಡೀss
ಕಾಲಿ ಕರಾಲೀ ದುರಗೀss
ಚಾಮುಂಡಿಗೆ ಶರಣೋss
ನಾಡಾನ ಸಿದ್ಧರಗೀss
ಶಿರಬಾಗಿ ಶರಣೋss
ಅಷ್ಟು ದೇವರಿಗೀss
ಭಕ್ತಿಲಿಂದs ಶರಣೋss
ಬವ ಬಾದೇ ಹರಿಸೋss
ಮುಕ್ತಿಯ ಕೊಡಸಿ
ಉಳಿಸಿದ ಗುರುವಿಗಿ ಶರಣೋss
ವರಣ ಮಾಡಿ ಹೇಳುವ
ಗುರುವಿಗಿ ಶರಣೋss
ಹುಲಜಂತಿ ಮಾರಾಯಾss
ಅಡಿವೆಪ್ಪಗ ಶರಣೋss
ಸೃಷ್ಟಿಯೊಳಗ ನಮ್ಮ
ಶಿಸ್ತಾಗಿ ಇರುವss
ಮಾಳಿಂಗಗ ಶರಣೋss