ಮನುಷ್ಯನ ಪರಿಪೂರ್ಣ ಬದುಕಿಗೆ ಸಾಹಿತ್ಯ ಮತ್ತು ವಿಜ್ಞಾನಗಳೆರಡರ ಸಂಗ ಅತ್ಯಗತ್ಯ. ಹೃದಯ ಸಂಸ್ಕಾರಕ್ಕೆ ಸಾಹಿತ್ಯ ಬೇಕು; ವಿವೇಚನೆಯ ವೃದ್ಧಿಗೆ ವಿಜ್ಞಾಲನ ಬೇಕು. ಹೃದಯ ಸಂಸ್ಕಾರ ಮತ್ತು ವಿವೇಚನೆಗಳೆರಡೂ ಸಂಪೂರ್ಣ ಸ್ವಸ್ಥಸಮಾಜವನ್ನು ಕಟ್ಟಲು ತೀರ ಅಗತ್ಯ ಎಲ್ಲಾ ಜನರಿಗೂ ಸಾಹಿತ್ಯ ಎಲ್ಲೆಡೆಯೂ ಸುಲಭವಾಗಿ ಮತ್ತು ಸಮೃದ್ಧವಾಗಿ ಲಭ್ಯವಿದೆ. ಆದರೆ ವಿಜ್ಞಾನ ಹಾಗಲ್ಲ. ಅದರ ಲಭ್ಯತೆ ಮತ್ತು ಸಮೃದ್ಧಿಯನ್ನು ಉದ್ದೇಶಪೂರ್ವಕವಾಗಿ ಮತ್ತು ಯೋಜನಾಬದ್ಧವಾಗಿ ಹೆಚ್ಚಿಸಡಬೇಕಾಗಿದೆ. ಈ ದೃಷ್ಟಿಯಿಂದ ಕನ್ನಡ ಪುಸ್ತಕ ಪ್ರಾಧಿಕಾರ ಸ್ತುತ್ಯ ಕಾರ್ಯವನ್ನು ಮಾಡುತ್ತಿದೆ.

ಮತ್ತೊಂದು ದೃಷ್ಟಿಯಿಂದಲೂ ‘ಎಲ್ಲ ಜನರೂ ಓದಬಲ್ಲ’ ವಿಜ್ಞಾನ ಪುಸ್ತಕಗಳ ಪ್ರಕಟಣೆ ಮಹತ್ವವನ್ನು ಗಳಿಸುತ್ತದೆ. ಈಚಿನ ದಿನಗಳಲ್ಲಿ ಪಠ್ಯ ಬೋಧನೆಗೆ ಸಂಬಂಧಿಸಿದಂತೆ ಮಾಧ್ಯಮದ ವಿಷಯ ತುಂಬಾ ಚರ್ಚೆಗೆ ಒಳಗಾಗುತ್ತಿದೆ. ಬಹುಮಂದಿ ಪೋಷಕರು ತಮ್ಮ ಮಕ್ಕಳು ಇಂಗ್ಲೀಷ್‌ ಮಾಧ್ಯಮದಲ್ಲೆ ಓದಲಿ ಎಂದು ಅಪೇಕ್ಷಿಸುತ್ತಾರೆ. ಇದಕ್ಕೆ ಹಲವು ಕಾರಣಗಳಿರಬಹುದು. ಅದರಲ್ಲಿ ವಿಜ್ಞಾನವನ್ನು ಓದಲು ಇಂಗ್ಲೀಷ್‌ ಮಾಧ್ಯಮವೇ ಸೂಕ್ತ ಕನ್ನಡದಲ್ಲಿ ಕಷ್ಟ ಎಂಬ ಅಭಿಪ್ರಾಯ ನಮ್ಮ ಪೋಷಕರಲ್ಲಿ ಇರುವುದೂ ಒಂದು ಪ್ರಬಲ ಕಾರಣ. ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಓದುವಂತೆ ಮಾಡಲು ವಿಜ್ಞಾನವನ್ನೂ ಕೂಡ ಯಾವ ತೊಡಕೂ ಇಲ್ಲದೆ ಕನ್ನಡದಲ್ಲಿ ಓದಬಹುದು ಎಂಬ ವಿಶ್ವಾಸವನ್ನು ಪೋಷಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಮೂಡಿಸಬೇಕಾಗಿದೆ. ಅದಕ್ಕಾಗಿ ಎಲ್ಲ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳು ಕನ್ನಡದಲ್ಲಿ ದೊರೆಯುವಂತೆ ಮಾಡುವುದು ಮೊದಲ ಕೆಲಸ. ಆ ಪ್ರಯತ್ನದ ಫಲ ಈ ಮಾಲಿಕೆಯ ಪುಸ್ತಕಗಳು ಎಂದು ನಾನು ಭಾವಿಸುತ್ತೇನೆ.

ಅದ್ಭುತ ದ್ರವ – ನೀರು ಎಂಬ ಈ ಪುಸ್ತಕವನ್ನು ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರಿಬ್ಬರಿಗೂ ರುಚಿಸುವಂತೆ ರಚಿಸಲಾಗಿದೆ. ವಿದ್ಯಾರ್ಥಿಗಳ ಪಠ್ಯದಲ್ಲಿ ಕಾಣಿಸದ ವಿಜ್ಞಾನಕ್ಕೆ ಸಂಬಂಧಿಸಿದ ಹೆಚ್ಚುವರಿ ಮಾಹಿತಿ ಇಲ್ಲಿದೆ. ಇದು ಅವರು ಈ ವಿಷಯ ಕುರಿತು ಮತ್ತೂ ಹೆಚ್ಚಿನ ವಿಷಯವನ್ನು ತಿಳಿದುಕೊಳ್ಳುವ ಕುತೂಹಲವನ್ನು ಅವರಲ್ಲಿ ಹುಟ್ಟುಹಾಕುತ್ತದೆ ಎಂದು ಆಶಿಸಲಾಗಿದೆ. ಜೊತೆಗೆ, ಜನಸಾಮಾನ್ಯರೂ ತಿಳಿದಿರಲೇಬೇಕಾದ ವಿಜ್ಞಾನದ ಮೂಲಾಂಶಗಳನ್ನು ಸಾಹಿತ್ಯದ ಸೌಮ್ಯತೆಯೊಂದಿಗೆ ಪರಿಚಯಿಸಲಾಗಿದೆ. ಹೀಗಾಗಿ, ಇಬ್ಬರೂ ತಮತಮಗೆ ಬೇಕಾದ ಅಂಶಗಳನ್ನು ಹೆಕ್ಕಿಕೊಂಡು ಜೀರ್ಣಿಸಿಕೊಳ್ಳಬಹುದು.

ಈ ಪುಸ್ತಕದ ಪ್ರಕಟಣೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌ ಅವರು ತೋರಿದ ಆಸಕ್ತಿಗಾಗಿ ನನ್ನ ನಮನಗಳನ್ನು ಸಲ್ಲಿಸುತ್ತೇನೆ. ಪುಸ್ತಕಕ್ಕೆ ವಿಷಯವನ್ನು ಸೂಚಿಸಿ ನನ್ನಿಂದ ಈ ಪುಸ್ತಕವನ್ನು ಬರೆಸಿದ ಈ ಮಾಲಿಕೆಯ ನಂಪಾದಕರಾದ ಪ್ರೊ. ಜಿ.ಆರ್. ಬಳೂರಿಗಿ ಅವರಿಗೆ, ಈ ಪುಸ್ತಕಗವನ್ನು ಸಿದ್ಧಪಡಿಸುವಲ್ಲಿ ನೆರವಾದ ನನ್ನೆಲ್ಲ ಗೆಳೆಯರಿಗೆ, ಅಂದವಾಗಿ ಮುದ್ರಿಸಿದ ಕೆ .ಎಸ್‌. ಸುನಿಲ್‌ ಅವರಿಗೆ ನನ್ನ ಧನ್ಯವಾದಗಳು.

.. ಅವಲಮೂರ್ತಿ