(೧೦೩) ಮಾತ್ರೆ

[1]:- ಎಂಬ ಅಕ್ಷರವನ್ನು ನಾವು ಎಳೆಯದಂತೆ, ಮೊಟಕುಗೊಳಿಸದಂತೆ ಉಚ್ಚಾರ ಮಾಡುವುದಕ್ಕೆ ಬೇಕಾಗುವ ಕಾಲವೇ ಒಂದು ಮಾತ್ರಾ ಕಾಲಒಂದು ಮಾತ್ರಾಕಾಲದಲ್ಲಿ ಉಚ್ಚಾರ ಮಾಡಲಾಗುವ ಅಕ್ಷರಗಳೆಲ್ಲ ಲಘುಗಳೆನಿಸುವುವುಲಘುವನ್ನು ‘U‘ ಹೀಗೆ ಗುರುತಿಸುವುದು ವಾಡಿಕೆ.

ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳು:-

(೧೦೪) ಹ್ರಸ್ವಸ್ವರಗಳು ಮತ್ತು ಹ್ರಸ್ವಸ್ವರಗಳಿಂದ ಕೂಡಿದ ಗುಣಿತಾಕ್ಷರಗಳೆಲ್ಲ ಲಘುಗಳೆನಿಸುವುವು. ಲಘುಗಳಾಗಿರುವ ಅಕ್ಷರಗಳ ಮೇಲೆ ‘[2]U‘ ಹೀಗೆ ಛಂದಸ್ಸಿನಲ್ಲಿ ಗುರುತಿಸುವುದು ವಾಡಿಕೆ.

ಉದಾಹರಣೆಗೆ:-

U U U U U U
U U U U U U
ಕಿ ಕು
U U U U U U
ಕೆ ಕೊ ಸು ಸೊ ಸೃ ಕೃ

ಮೇಲೆ ಹ್ರಸ್ವಸ್ವರ ಮತ್ತು ಹ್ರಸ್ವಸ್ವರಗಳಿಂದ ಕೂಡಿದ ಗುಣಿತಾಕ್ಷರಗಳೆಲ್ಲ ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಾದುದರಿಂದ ಅವುಗಳ ಮೇಲೆ    ಹೀಗೆ ಗುರುತು ಮಾಡಿದೆ.

 

(೧೦೫) ಗುರುಗಳು:- ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳೆಲ್ಲ ಗುರುಗಳೆನಿಸುವುವುಗುರುಗಳಾಗಿರುವ ಅಕ್ಷರಗಳ ಮೇಲೆ ಹೀಗೆ ಗುರುತಿಸುವುದು ವಾಡಿಕೆ.

 

(೧೦೬) ಗುರುಗಳಾಗುವ ಅಕ್ಷರಗಳು:- ದೀರ್ಘಸ್ವರ, ದೀರ್ಘಸ್ವರದಿಂದ ಕೂಡಿದ ಗುಣಿತಾಕ್ಷರಗಳು ಅನುಸ್ವಾರ ವಿಸರ್ಗಗಳಿಂದ ಕೂಡಿದ ಅಕ್ಷರಗಳು, ಒತ್ತಕ್ಷರದ ಹಿಂದಿನ ಅಕ್ಷರ, ವ್ಯಂಜನಾಕ್ಷರದ ಹಿಂದಿನ ಅಕ್ಷರ ಷಟ್ಪದಿ ಪದ್ಯಗಳಲ್ಲಿ ಬರುವ ೩ನೆಯ ೬ನೆಯ ಸಾಲಿನ ಕೊನೆಯಲ್ಲಿರುವ ಅಕ್ಷರ (ಲಘುವಾಗಿದ್ದರೂ) ಗುರುಗಳೆನಿಸುವುವು.

 

ಉದಾಹರಣೆಗೆ:

(i) ದೀರ್ಘಸ್ವರಾಕ್ಷರಗಳು ಗುರುಗಳಾಗುವುದಕ್ಕೆ

 

(ii) ದೀರ್ಘಸ್ವರದಿಂದ ಕೂಡಿದ ಗುಣಿತಾಕ್ಷರಗಳು

 

ಕಾ ಕೀ ಚೇ ಚೈ ಸೈ ಖಾ ನೋ

(iii) ಅನುಸ್ವಾರ ವಿಸರ್ಗಗಳಿಂದ ಕೂಡಿದ ಅಕ್ಷರಗಳು

ಅಂ ಅಃ ತಂ ತಃ ಸಂ ಸಃ ಕಂ

 

 

(iv) ಒತ್ತಕ್ಷರದ ಹಿಂದಿನ ಅಕ್ಷರ ಗುರುವಾಗುವುದಕ್ಕೆ

—U —U —U —U
ಕಲ್ಲು ಮಣ್ಣು ನಿಲ್ಲು ಮೆತ್ತಗೆ

 

 

(ಇಲ್ಲಿ ಒತ್ತಕ್ಷರದ ಹಿಂದಿನ ಅಕ್ಷರಗಳು ಗುರುಗಳಾಗಿದ್ದು, ಉಳಿದವು ಲಘುವಾಗಿದ್ದರೆ ಲಘು ಚಿಹ್ನೆಯನ್ನೂ ಗುರುವಾಗಿದ್ದರೆ ಗುರು ಚಿಹ್ನೆಯನ್ನೂ ಹಾಕಬೇಕು)

 

(v) ವ್ಯಂಜನಾಕ್ಷರದ ಹಿಂದಿನ ಅಕ್ಷರ ಗುರುವಾಗುವುದಕ್ಕೆ

ಕಲ್ ನಿಲ್ ಪಣ್ ತಿನ್ ಮೇಣ್ ಕಾಲ್ ಮೇಲ್ ತಾಯ್

ಮೇಲೆ ವ್ಯಂಜನಾಕ್ಷರದ ಹಿಂದಿನ ಅಕ್ಷರ ಗುರುಗಳಾಗಿರುವುದನ್ನು ಗಮನಿಸಿರಿ.  ‘ಮೇಣ್‘ ಎಂಬಲ್ಲಿ ‘ಮೇ‘ ಎಂಬುದೂ, ‘ಕಾಲ್‘ ಎಂಬಲ್ಲಿ ‘ಕಾ‘ ಎಂಬುದೂ, ‘ಮೇಲ್‘ ಎಂಬಲ್ಲಿ ‘ಮೇ‘ ಎಂಬುದೂ, ‘ತಾಯ್‘ ಎಂಬಲ್ಲಿ ‘ತಾ‘ ಎಂಬುದೂ ದೀರ್ಘಾಕ್ಷರಗಳಾಗಿದ್ದರಿಂದ ಸಹಜವಾಗಿ ಅವು ಗುರುಗಳೇ ಆಗಿದ್ದರೂ, ವ್ಯಂಜನಾಕ್ಷರಗಳು ಹಿಂದಿರುಗುವುದರಿಂದಲೂ ಅವು ಗುರುಗಳು.  ಹೀಗೆ ಅವು ಗುರುಗಳಾಗುವುದಕ್ಕೆ ಎರಡು ಕಾರಣಗಳಿದ್ದರೂ ಒಂದೇ ಗುರು.  ಮೇಲಿನ ಉದಾಹರಣೆಗಳಲ್ಲಿ ವ್ಯಂಜನಾಕ್ಷರಗಳಾದ ಲ್, ಣ್, ಯ್ ಮೊದಲಾದವು ಲಘುಗಳೂ ಅಲ್ಲ, ಗುರುಗಳೂ ಅಲ್ಲ.  ಅವಕ್ಕೆ ಯಾವ ಚಿಹ್ನೆಯನ್ನು ಹಾಕಬಾರದು.  ಒಂದು ಅಕ್ಷರ ಗುರುವಾಗಲು ಎರಡು ಮೂರು ಕಾರಣಗಳಿದ್ದರೂ ಒಂದೇ ಗುರುವೆಂದು ಭಾವಿಸಬೇಕು.

ಉದಾಹರಣೆಗೆ:-

—U —U
ಶಾಸ್ತ್ರ ಕಾಂಕ್ಷೆ

ಮೇಲಿನ ಉದಾಹರಣೆಗಳಲ್ಲಿ ‘ಶಾ’ ಅಕ್ಷರ ಗುರುವಾಗುವುದಕ್ಕೆ ಎರಡು ಕಾರಣಗಳಿವೆ.  ಅದು ದೀರ್ಘವಾದ್ದರಿಂದ ಗುರು, ಒತ್ತಕ್ಷರದ ಹಿಂದಿನ ಅಕ್ಷರವಾದ್ದರಿಂದ ಗುರು.  ಕಾ ಎಂಬುದು ಮೂರು ಕಾರಣ ಹೊಂದಿದೆ.  ದೀರ್ಘವಾಗಿರುವುದರಿಂದ ಗುರು; ಅನುಸ್ವಾರವಿರುವುದರಿಂದ ಗುರು; ಒತ್ತಕ್ಷರದ ಹಿಂದಿನ ಅಕ್ಷರವಾದ್ದರಿಂದಲೂ ಗುರು.

(vi) ಶರ, ಕುಸುಮ, ಭೋಗ, ಭಾಮಿನೀ, ಪರಿವರ್ಧಿನೀ, ವಾರ್ಧಕಇತ್ಯಾದಿ ಆರು ಜಾತಿಯ ಷಟ್ಪದಿ ಪದ್ಯಗಳಲ್ಲಿ ಬರುವ ಮೂರನೆಯ, ಆರನೆಯ ಸಾಲಿನ ಕೊನೆಯ ಅಕ್ಷರ ಲಘುವಾಗಿದ್ದರೆ ಗುರು ಅಕ್ಷರವೆಂದು ಭಾವಿಸಬೇಕು.


[1] (i) ಗುಬ್ಬಿಯ ಚಿಕ್ ಎನ್ನುವ ಕಾಲವನ್ನು ೧ ಮಾತ್ರಾಕಾಲವೆಂದೂ ಕಾಗೆಯು ಕಾ ಕಾ – ಎಂದು ಕೂಗುವ ಕಾಲವನ್ನು ೨ ಮಾತ್ರಾಕಾಲವೆಂದೂ, ನವಿಲು ಒಂದು ಸಲ ಕೂಗುವ ಕಾಲವನ್ನು ೩ ಮಾತ್ರಾಕಾಲವೆಂದು ಮುಂಗುಲಿಯು ಧ್ವನಿಮಾಡುವ ಕಾಲವನ್ನು ಳಿ ಮಾತ್ರಾಕಾಲವೆಂದೂ ಸ್ಥೂಲವಾಗಿ ತಿಳಿಯುತ್ತಾರೆ ಅಥವಾ ಕೋಳಿಯು ಪ್ರಾತಃಕಾಲದಲ್ಲಿ ಕೂಗುವ-

(ii) ಕೂ ಕೂ ಕೂ –ಎಂಬಲ್ಲಿ ಮೊದಲನೆಯ ಕೂಗು ಏಕಮಾತ್ರಾಕಾಲ, ಎರಡನೆಯದು ದ್ವಿಮಾತ್ರಾಕಾಲ, ಮೂರನೆಯದು ತ್ರಿಮಾತ್ರಾಕಾಲ (ಪ್ಲುತ) ಎಂದು ಸಾಮಾನ್ಯವಾಗಿ ಗ್ರಹಿಸುತ್ತಾರೆ.

[2] ಲಘುವಿನ ಚಿಹ್ನೆಯನ್ನು “” ಹೀಗೂ, ಗುರುವಿನ ಚಿಹ್ನೆಯನ್ನು “” ಹೀಗೂ ಪ್ರಾಚೀನಕಾಲದಿಂದಲೂ ಗುರುತಿಸುವ ಪದ್ಧತಿಯಿತ್ತು.  ಇತ್ತೀಚೆಗೆ ಅದು ಸ್ವಲ್ಪ ವ್ಯತ್ಯಾಸವಾಗಿ ಗುರುವನ್ನು “” ಹೀಗೂ ಲಘುವನ್ನು “” ಹೀಗೂ ಗುರುತಿಸುವುದು ವಾಡಿಕೆಯಲ್ಲಿ ಬಂದಿದೆ.