ಮಾತ್ರಾಗಣಗಳು ಎಂದರೆ ಮೂರು, ನಾಲ್ಕು, ಐದು ಮಾತ್ರೆಗಳು ಗುಂಪುಗಳ ಲೆಕ್ಕವಿಟ್ಟುಕೊಂಡು ವಿಭಾಗಿಸುವ ಗಣಗಳು ಮಾತ್ರಾಗಣಗಳೆನಿಸುವುದೆಂದು ಈ ಹಿಂದೆ ವಿವರಿಸಿದೆ.

ಪದ್ಯದಲ್ಲಿನ ಸಾಲುಗಳನ್ನು ಗುರುಲಘುಗಳಿಂದ ಗುರುತಿಸಿದ ಮೇಲೆ ಗುರುವಿಗೆ ಎರಡು ಮಾತ್ರೆ, ಮತ್ತು ಲಘುವಿಗೆ ಒಂದು ಮಾತ್ರೆಯ ಲೆಕ್ಕಹಾಕಿ ಮೂರು, ನಾಲ್ಕು, ಐದು ಮಾತ್ರೆಗಳ ಗುಂಪುಗಳನ್ನು ಒಂದೊಂದು ಗಣವಾಗಿ ವಿಂಗಡಿಸುವ ಗಣಗಳೆಲ್ಲ ಮಾತ್ರಾಗಣಗಳೆನಿಸುವುವು.  ಪದ್ಯಗಳ ಸಾಲುಗಳ ಅಕ್ಷರಗಳಿಗೆ ಗುರುಲಘುಗಳ ಗುರುತುಮಾಡುವುದಕ್ಕೆ ಪ್ರಸ್ತಾರ ಎಂದು ಹೆಸರು.

ಮಾತ್ರಾಗಣಗಳಿಂದ ಕೂಡಿದ ಪದ್ಯಜಾತಿಗಳೆಂದರೆ-ಕಂದ, ಷಟ್ಪದಿಗಳು

[1], ರಗಳೆ[2] ಮೊದಲಾದವುಗಳು.  ಈಗ ಒಂದೊಂದಾಗಿ ಮಾತ್ರಾಗಣದ ಪದ್ಯಗಳ ಲಕ್ಷಣವನ್ನು ತಿಳಿಯಿರಿ.

 

() ಕಂದ ಪದ್ಯದ ಲಕ್ಷಣ

ಕಂದ ||

ಮೇಲಿನ ಈ ಕಂದ ಪದ್ಯಕ್ಕೆ ಪ್ರಸ್ತಾರ ಹಾಕಿ ಗಣಗಳನ್ನು (ಮಾತ್ರಾಗಣಗಳನ್ನು) ವಿಂಗಡಿಸಿದೆ.  ಈ ಪದ್ಯದಲ್ಲಿ ಮೂರು ಮಾತ್ರೆಯ ಅಥವಾ ಐದು ಮಾತ್ರೆಯಗಣಗಳನ್ನು ವಿಂಗಡಿಸಲು ಬರುವಂತಿಲ್ಲ.  ಇದರಲ್ಲಿ ನಾಲ್ಕು ನಾಲ್ಕು ಮಾತ್ರೆಯ ಗಣಗಳನ್ನೇ ವಿಂಗಡಿಸಬೇಕು.

 

(೧೦೭) ಲಕ್ಷಣ:- ನಾಲ್ಕು ಸಾಲುಗಳಿಂದ ಕೂಡಿದ ಪದ್ಯ; ಒಂದನೆಯ ಮೂರನೆಯ ಸಾಲುಗಳು ಸಮಾನವಾಗಿದ್ದು ನಾಲ್ಕು ಮಾತ್ರೆಯ ಮೂರು ಗಣಗಳಿಂದ ಕೂಡಿವೆಎರಡನೆಯ, ನಾಲ್ಕನೆಯ ಸಾಲುಗಳು ಸಮನಾಗಿದ್ದು ನಾಲ್ಕು ಮಾತ್ರೆಯ ಐದು ಗಣಗಳಿಂದ ಕೂಡಿವೆ.

ಪೂರ್ವಾರ್ಧದಲ್ಲಿ ಎಂಟು ಗಣಗಳೂ, ಉತ್ತರಾರ್ಧದಲ್ಲಿ ಎಂಟು ಗಣಗಳೂ ಇವೆ. ಪೂರ್ವಾರ್ಧ ಉತ್ತರಾರ್ಧಗಳ ವಿಷಮ ಸ್ಥಾನಗಳಲ್ಲಿ ಎಂದರೆ ೧, , , ೭ನೆಯ ಗಣಗಳ ಸ್ಥಾನದಲ್ಲಿ “U _ U” ಈ ರೀತಿಯ ಮಧ್ಯ ಗುರುವುಳ್ಳ ಗಣವು ಬರಕೂಡದು. ಪೂರ್ವಾರ್ಧ ಉತ್ತರಾರ್ಧಗಳ ೬ನೆಯ ಗಣವು ಮಾತ್ರ ನಾಲ್ಕು ಮಾತ್ರೆಗಳ UUUU ಹೀಗಿರುವ ಗಣವಾಗಲಿ, ಮಧ್ಯ ಗುರುವುಳ್ಳ U _ U ಹೀಗಿರುವ ಗಣವಾಗಲಿ ಬರಬೇಕು. ಪೂರ್ವಾರ್ಧ ಉತ್ತರಾರ್ಧಗಳಲ್ಲಿ ಕೊನೆಗೆ ಗುರು ಬರುವ “_ _” ಇಂಥ ಗಣವಾಗಲಿ, ” U _ U ” ಇಂಥ ಗಣವಾಗಲಿ ಬರಬೇಕು.

ಮೇಲಿನ ಕಂದ ಪದ್ಯದಲ್ಲಿ ಮೇಲೆ ಹೇಳಿರುವ ಲಕ್ಷಣಗಳೆಲ್ಲ ಬಂದಿರುವುದನ್ನು ಗಮನಿಸಿರಿ.

ಇನ್ನು ಆರು ಜಾತಿಯ ಷಟ್ಪದಿಗಳ ಲಕ್ಷಣಗಳನ್ನು ಕ್ರಮವಾಗಿ ತಿಳಿಯೋಣ.  (ಷಟ್=ಆರು, ಪದಿ=ಪಾದಗಳುಳ್ಳದ್ದು ಎಂದು ಅರ್ಥ).

 

() ಷಟ್ಪದಿಗಳ ಲಕ್ಷಣಗಳು

() ಶರಷಟ್ಪದಿ

(೧೦೮) ಮೇಲಿನ ಪದ್ಯವು ಆರು ಸಾಲುಗಳಿಂದ ಕೂಡಿದೆ, , , ನೆಯ ಸಾಲುಗಳು ಒಂದು ಸಮನಾಗಿದ್ದು ಮಾತ್ರೆಯ ಗಣಗಳಿಂದ ಕೂಡಿವೆ ಮತ್ತು ನೆಯ ಸಾಲುಗಳು ಒಂದು ಸಮನಾಗಿದ್ದು ಮಾತ್ರೆಯ ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿವೆಮೂರು ಮತ್ತು ಆರನೆಯ ಸಾಲುಗಳ ಕೊನೆಯಕ್ಷರ ಲಘುವಾಗಿದ್ದರೂ ಗುರುವೆಂದೇ ತಿಳಿಯಬೇಕು ಜಾತಿಯ ಪದ್ಯದಲ್ಲಿ ಮಧ್ಯಗುರುವುಳ್ಳ “U _ U” ರೀತಿಯ ಗಣವು ಎಲ್ಲಿಯೂ ಬರಕೂಡದುಇಂಥ ಲಕ್ಷಣದಿಂದ ಕೂಡಿದ ಪದ್ಯಗಳು ಶರಷಟ್ಪದಿಗಳೆಂದು ತಿಳಿಯಬೇಕು.

 

() ಕುಸುಮಷಟ್ಪದಿ

(೧೦೯) ಆರು ಪಾದಗಳುಳ್ಳ ಪದ್ಯ, , , ನೆಯ ಸಾಲುಗಳು ಒಂದು ಸಮನಾಗಿದ್ದು ಐದೈದು ಮಾತ್ರೆಗಳ ಎರಡು ಗಣಗಳಿಂದ ಕೂಡಿವೆಮೂರು ಮತ್ತು ಆರನೆಯ ಸಾಲುಗಳು ಒಂದು ಸಮನಾಗಿದ್ದು ಐದೈದು ಮಾತ್ರೆಗಳ ಮೂರು ಗಣಗಳಿಂದಲೂ ಮೇಲೆ ಒಂದು ಗುರುವಿನಿಂದಲೂ ಕೂಡಿವೆ ಮತ್ತು ನೆಯ ಸಾಲಿನ ಕೊನೆಯ ಅಕ್ಷರ ಲಘುವಾಗಿದ್ದರೂ ಗುರುವೆಂದು ಭಾವಿಸಬೇಕು ಜಾತಿಯ ಪದ್ಯದಲ್ಲಿ “U_UU ” ಹೀಗಿರುವ ಮತ್ತು ” U_ _” ಹೀಗಿರುವ ಗಣವು ಬರಕೂಡದು ಲಕ್ಷಣಗಳಿಂದ ಕೂಡಿದ ಪದ್ಯಗಳೇ ಕುಸುಮ ಷಟ್ಪದಿಗಳೆನಿಸುವುವು.

 

() ಭೋಗಷಟ್ಪದಿ

(೧೧೦) ಆರು ಸಾಲುಗಳಿಂದ ಕೂಡಿದ ಪದ್ಯ, , , ನೆಯ ಸಾಲುಗಳು ಒಂದು ಸಮನಾಗಿದ್ದು ಮೂರು ಮೂರು ಮಾತ್ರೆಯ ನಾಲ್ಕು ಗಣಗಳಿಂದ ಕೂಡಿವೆಮೂರು ಮತ್ತು ಆರನೆಯ ಸಾಲುಗಳು ಒಂದು ಸಮನಾಗಿದ್ದು ಮೂರು ಮಾತ್ರೆಗಳ ಆರಾರು ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆಮೂರು ಮತ್ತು ಆರನೆಯ ಸಾಲಿನ ಕೊನೆಯ ಅಕ್ಷರ ಲಘುವಾಗಿದ್ದರೂ ಗುರುವಾಗುವುದು ಜಾತಿಯ ಛಂದಸ್ಸಿನ ಪದ್ಯದಲ್ಲಿ ” U_ ” ಹೀಗೆ ಇರುವ ಮಾತ್ರಾಗಣ ಬರಕೂಡದುಇಂಥ ಲಕ್ಷಣಗಳಿಂದ ಕೂಡಿದ ಪದ್ಯವೇಭೋಗಷಟ್ಪದಿಎನಿಸುವುದು.

 

() ಭಾಮಿನೀ ಷಟ್ಪದಿ

(೧೧೧) ಆರು ಪಾದಗಳುಳ್ಳ ಪದ್ಯ, , , ನೆಯ ಸಾಲುಗಳು ಒಂದು ಸಮನಾಗಿದ್ದು ಮೂರು ಮತ್ತು ನಾಲ್ಕು ಮಾತ್ರೆಗಳ ನಾಲ್ಕು ಗಣಗಳಿರುತ್ತವೆ.  (ಮೊದಲು ಮೂರು ಮಾತ್ರೆಯ ಗಣ ಅನಂತರ ಮಾತ್ರೆಯ ಗಣ ಕ್ರಮದಲ್ಲಿ ಒಟ್ಟು ನಾಲ್ಕು ಗಣಗಳಿರುತ್ತವೆ.)  ೩ನೆಯ ೬ನೆಯ ಸಾಲುಗಳು ಒಂದು ಸಮನಾಗಿದ್ದು, ಮೂರು ಮತ್ತು ನಾಲ್ಕು ಮಾತ್ರೆಗಳ ಆರುಗಣಗಳಿಂದಲೂ ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆಮೂರು ಮತ್ತು ಆರನೆಯ ಸಾಲುಗಳ ಕೊನೆಯ ಅಕ್ಷರ ಲಘುವಾಗಿದ್ದರೂ ಗುರುವಾಗುತ್ತದೆ ಜಾತಿಯ ಪದ್ಯದಲ್ಲಿ “U _ U” ರೀತಿಯ ಮಧ್ಯ ಗುರುವುಳ್ಳ ಗಣವು ಎಲ್ಲಿಯೂ ಬರಕೂಡದುಇಂಥ ಲಕ್ಷಣವುಳ್ಳವು ಭಾಮಿನೀ ಷಟ್ಪದಿಗಳೆನಿಸುವುವು.

 

() ಪರಿವರ್ಧಿನೀಷಟ್ಪದಿ

(೧೧೨) ಆರು ಪಾದಗಳುಳ್ಳ ಪದ್ಯ, , , ನೆಯ ಸಾಲುಗಳು ಒಂದು ಸಮನಾಗಿದ್ದು, ನಾಲ್ಕು ಮಾತ್ರೆಯ ನಾಲ್ಕು ಗಣಗಳಿಂದ ಕೂಡಿವೆ ಮತ್ತು ೬ನೆಯ ಸಾಲುಗಳು ಒಂದು ಸಮನಾಗಿದ್ದು ನಾಲ್ಕು ಮಾತ್ರೆಯ ಆರು ಗಣಗಳಿಂದಲೂ ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆ ಪದ್ಯದಲ್ಲಿ ” U _ U ” ರೀತಿಯಿರುವ ಗಣವು ಎಲ್ಲಿಯೂ ಬರಕೂಡದುಮೂರು ಮತ್ತು ಆರನೆಯ ಸಾಲಿನ ಕೊನೆಯ ಅಕ್ಷರ ಲಘುವಾಗಿದ್ದರೂ ಗುರುವೆನಿಸುವುದು ಲಕ್ಷಣದಿಂದ ಕೂಡಿದ ಪದ್ಯವು ಪರಿವರ್ಧಿನೀಷಟ್ಪದಿಯೆನಿಸುವುದು.

 

() ವಾರ್ಧಕಷಟ್ಪದಿ

 

(೧೧೩) ಆರುಪಾದಗಳುಳ್ಳ ಪದ್ಯ, , , ನೆಯ ಪಾದಗಳು ಒಂದು ಸಮನಾಗಿದ್ದು ಮಾತ್ರೆಯ ಗಣಗಳಿಂದ ಕೂಡಿದೆಮೂರು ಮತ್ತು ಆರನೆಯ ಸಾಲುಗಳು ಒಂದು ಸಮನಾಗಿದ್ದು ಮಾತ್ರೆಯ ಆರುಗಣ ಮತ್ತು ಮೇಲೊಂದು ಗುರುವಿನಿಂದ ಕೂಡಿರುತ್ತವೆ, ನೆಯ ಸಾಲುಗಳ ಕೊನೆಯ ಅಕ್ಷರ ಲಘುವಾಗಿದ್ದರೂ ಗುರುವಾಗುತ್ತದೆಇಂಥ ಲಕ್ಷಣಗಳುಳ್ಳ ಪದ್ಯಗಳೇ ವಾರ್ಧಕಷಟ್ಪದಿಗಳೆನಿಸುವುವು.

ಇದುವರೆಗೆ ಕಂದಪದ್ಯ, ಶರ, ಕುಸುಮ, ಭೋಗ, ಭಾಮಿನೀ, ಪರಿವರ್ಧಿನೀ, ವಾರ್ಧಕಗಳೆಂಬ ಮಾತ್ರಾಗಣಗಳ ಛಂದಸ್ಸಿನ ಪದ್ಯಗಳ ಲಕ್ಷಣಗಳನ್ನು ತಿಳಿದಿರಿ.  ಇವೆಲ್ಲ ಸಾಮಾನ್ಯವಾಗಿ, ಮೂರು, ನಾಲ್ಕು, ಐದು, ಮಾತ್ರೆಗಳ ಲೆಕ್ಕದಿಂದ ವಿಭಾಗಿಸಿಕೊಂಡ ಗಣಗಳನ್ನು ಬಳಸಿ ರಚಿಸಲ್ಪಟ್ಟ ಪದ್ಯಗಳು.  ಈಗ ಮಾತ್ರೆಗಳ ಗಣದ ಲೆಕ್ಕದಿಂದಲೇ ರಚಿಸಲ್ಪಟ್ಟಿರುವ ಇನ್ನೊಂದು ಬಗೆಯ ಪದ್ಯಗಳ ಲಕ್ಷಣ ತಿಳಿಯೋಣ.

 

() ರಗಳೆ ಜಾತಿಯ ಪದ್ಯಲಕ್ಷಣಗಳು

ರಗಳೆ’ ಎಂಬುದು ‘ರಘಟಾ’ ಎಂಬ ಸಂಸ್ಕೃತ ಶಬ್ದದ ತದ್ಭವ ಪದ.  ಕನ್ನಡದಲ್ಲಿ ಸಾಮಾನ್ಯವಾಗಿ ಉತ್ಸಾಹರಗಳೆ, ಮಂದಾನಿಲರಗಳೆ, ಲಲಿತರಗಳೆ ಎಂದು ಮೂರು ವಿಧವಾದ ರಗಳೆಗಳು ಪ್ರಸಿದ್ಧವಾಗಿವೆ.  ರಗಳೆಯ ಪದ್ಯಗಳಲ್ಲಿ ಇದುವರೆಗೆ ಹೇಳಿದ ನಾಲ್ಕು ಅಥವಾ ಆರು ಸಾಲುಗಳ ಪದ್ಯಗಳಂತೆ, ಇಷ್ಟೇ ಸಾಲುಗಳಿರಬೇಕೆಂಬ ನಿಯಮವೇ ಇಲ್ಲ.  ಎಷ್ಟು ಬೇಕಾದರೂ ಸಾಲುಗಳು ಹಾಗೆಯೇ ಬೆಳೆಯುತ್ತ ಹೋಗಬಹುದು.  ಆದರೆ ಎಲ್ಲ ಸಾಲುಗಳೂ ಸಮಾನವಾದ ಮಾತ್ರಾಗಣಗಳಿಂದ ಕೂಡಿರುತ್ತವೆ.  ಮತ್ತು ಎರಡೆರಡು ಸಾಲುಗಳಲ್ಲಿ ಪ್ರಾಸದ ನಿಯಮವಿರು ತ್ತದೆ.  ಅಂತ್ಯಪ್ರಾಸವೂ ಇರುವುದುಂಟು.

 

() ಉತ್ಸಾಹರಗಳೆಯ ಲಕ್ಷಣ

(i)

ನಾಲ್ಕುಸಾಲುಗಳುಳ್ಳ ಈ ಉತ್ಸಾಹರಗಳೆಯಲ್ಲಿ ಪ್ರತಿಯೊಂದು ಸಾಲಿನಲ್ಲೂ ಮೂರು ಮಾತ್ರೆಯ ನಾಲ್ಕು ಗಣಗಳುಂಟು. ಮೊದಲಿನ ಎರಡು ಸಾಲುಗಳಲ್ಲಿ ಆದಿಪ್ರಾಸವೂ ಇದೆ, ಅಂತ್ಯಪ್ರಾಸವೂ ಇದೆ. ಇನ್ನೆರಡು ಸಾಲುಗಳಲ್ಲಿ ಆದಿಪ್ರಾಸವಿಲ್ಲ, ಅಂತ್ಯಪ್ರಾಸವಿದೆ. ಕೆಲವು ಕಡೆ ಹೀಗೂ ಇರುವುದುಂಟು. ಆದರೆ ಆದಿಪ್ರಾಸವಿರುವುದೇ ಹೆಚ್ಚು. ಹೀಗೆ

 

(೧೧೪) ಎರಡೆರಡು ಸಾಲುಗಳಲ್ಲಿ ಪ್ರಾಸನಿಯಮವಿಟ್ಟುಕೊಂಡು ಮೂರು ಮಾತ್ರೆಯ ನಾಲ್ಕು ಗಣಗಳ ಗಣನಿಯಮದಿಂದ ಸಾಲುಗಳ ನಿಯಮವಿಲ್ಲದೆ ಇರುವ ಪದ್ಯ ಜಾತಿಯೇ ಉತ್ಸಾಹರಗಳೆಯೆನಿಸುವುದು.

 

(ii) ಈ ಉತ್ಸಾಹರಗಳೆಯಲ್ಲಿ ಇನ್ನೂ ಒಂದು ವಿಧವುಂಟು.  ಕೆಳಗಿನ ಪದ್ಯವನ್ನು ನೋಡಿರಿ:-

ಮೇಲಿನ ಎರಡನೆಯ ರೀತಿಯ ಉತ್ಸಾಹರಗಳೆಯಲ್ಲಿ ಎಲ್ಲ ಸಾಲುಗಳೂ ಮೂರು ಮಾತ್ರೆಯ ಮೂರುಗಣಗಳಿಂದಲೂ ಮೇಲೊಂದು ಗುರುವಿನಿಂದಲೂ ಕೂಡಿವೆ.  ಮೊದಲೆರಡು ಸಾಲುಗಳಲ್ಲಿ ಆದಿಪ್ರಾಸ ಅಂತ್ಯಪ್ರಾಸಗಳೆರಡೂ ಇವೆ.  ಕೊನೆಯ ಎರಡು ಸಾಲುಗಳಲ್ಲಿ ಅಂತ್ಯಪ್ರಾಸ ಮಾತ್ರ ಇದೆ.

ಹೀಗೆ ಮೂರು ಮಾತ್ರೆಯ ಮೂರುಗಣ ಮೇಲೊಂದು ಗುರುವಿನಿಂದ ಕೂಡಿದ ವ್ಯವಸ್ಥೆಯಿಂದಲೂ ಉತ್ಸಾಹರಗಳೆಯ ಛಂದಸ್ಸಿನ ಪದ್ಯಗಳಿರುತ್ತವೆಂದು ತಿಳಿಯಬೇಕು.

 

() ಮಂದಾನಿಲರಗಳೆಯ ಲಕ್ಷಣ

ಮೇಲಿನ ಮಂದಾನಿಲರಗಳೆಯ ಪದ್ಯದಲ್ಲಿ ಪ್ರತಿಯೊಂದು ಪಾದದಲ್ಲೂ ನಾಲ್ಕು ಮಾತ್ರೆಯ ನಾಲ್ಕು ಗಣಗಳಿವೆ.  ಮೊದಲೆರಡು ಸಾಲುಗಳಲ್ಲಿ ‘ಡ್’ ಪ್ರಾಸಾಕ್ಷರವೂ, ಉಳಿದೆರಡು ಸಾಲುಗಳಲ್ಲಿ ‘ಖ್’ ಪ್ರಾಸಾಕ್ಷರವೂ ಇದೆ.  ಅಂತ್ಯ ಪ್ರಾಸವೂ ಎರಡೆರಡು ಸಾಲುಗಳಲ್ಲಿ ಬೇರೆ ಬೇರೆ ಇದೆ.  ಹೀಗೆ-

 

(೧೧೫) ನಾಲ್ಕು ಮಾತ್ರೆಯ ನಾಲ್ಕು ಗಣ ಪ್ರತಿಪಾದದಲ್ಲೂ ಬಂದು ಎರಡೆರಡು ಸಾಲುಗಳಿಗೆ ಪ್ರಾಸನಿಯಮವಿರುವ ಪದ್ಯಜಾತಿಗೆ ಮಂದಾನಿಲರಗಳೆಯೆನ್ನುವರುಅಂತ್ಯಪ್ರಾಸವೂ ಕೆಲವು ಕಡೆ ಇರುವುದುಂಟು.

 

(ii) ಈ ಮಂದಾನಿಲರಗಳೆಯಲ್ಲಿ ಇನ್ನೂ ಒಂದು ವಿಧವುಂಟು.  ಈ ಕೆಳಗಣ ಪದ್ಯ ನೋಡಿರಿ.

ಮೇಲೆ ವಿವರಿಸಿದಂತೆ ಪ್ರತಿಯೊಂದು ಪಾದದಲ್ಲೂ ಮೂರು ಮತ್ತು ಐದು ಮಾತ್ರೆಯ ನಾಲ್ಕು ಗಣ (ಒಟ್ಟು ೧೬ ಮಾತ್ರೆಗಳು) ಗಳ ಲೆಕ್ಕದಿಂದಲೂ ಮಂದಾನಿಲರಗಳೆಯ ಪದ್ಯಗಳಿರುವುದೂ ಉಂಟು.  ಮೊದಲೆರಡು ಸಾಲುಗಳಲ್ಲಿ ಆದಿಪ್ರಾಸ ನಿಯಮವಿಲ್ಲ.  ಆದರೆ ಬಿರಯಿಯಿಂ ಸುರಯಿಯಿಂ ಎಂದು ಅಂತ್ಯಪ್ರಾಸವಿದೆ.  ಕೊನೆಯೆರಡು ಸಾಲುಗಳಲ್ಲಿ ಆದಿಪ್ರಾಸವೂ ಅಂತ್ಯಪ್ರಾಸವೂ ಇದೆ.  ಹೀಗೆ-

 

(೧೧೬) ಮೂರಾದ ಮೇಲೆ ಐದು ಮಾತ್ರೆಯಗಣದಿಂದ ಕೂಡಿದ, ಒಟ್ಟು ನಾಲ್ಕು ಮಾತ್ರಾಗಣದಿಂದ ಕೂಡಿ ಎರಡೆರಡು ಸಾಲಿನಲ್ಲಿ ಆದಿಪ್ರಾಸವಾಗಲಿ ಅಂತ್ಯ ಪ್ರಾಸವಾಗಲಿ, ಅಥವಾ ಎರಡು ಕಡೆಗೂ ಪ್ರಾಸ ನಿಯಮವಿರುವ ಪದ್ಯ ಜಾತಿಯೂ ಮಂದಾನಿಲರಗಳೆಯಲ್ಲಿ ಎರಡನೆಯ ವಿಧವಾಗಿದೆ.

 

() ಲಲಿತರಗಳೆಯ ಲಕ್ಷಣ

ಮೇಲಿನ ಈ ಲಲಿತರಗಳೆಯ ಪದ್ಯದ ಪ್ರತಿಯೊಂದು ಸಾಲಿನಲ್ಲಿಯೂ ಐದು ಮಾತ್ರೆಯ ನಾಲ್ಕು ಗಣಗಳಿವೆ.  ಎರಡೆರಡು ಸಾಲುಗಳಲ್ಲಿ ಆದಿಪ್ರಾಸನಿಯಮವಿದೆ.  ಅಂತ್ಯಪ್ರಾಸವೂ ಎರಡೆರಡು ಸಾಲುಗಳಿಗೆ ಬೇರೆ ಬೇರೆಯಾಗಿಯೇ ಇದೆ.

(೧೧೭) ರೀತಿಯಲ್ಲಿ ಪಾದ (ಸಾಲು)ಗಳು ಇಂತಿಷ್ಟೇ ಇರಬೇಕೆಂಬ ನಿಯಮವಿಲ್ಲದೆ, ಪ್ರತಿಯೊಂದು ಪಾದದಲ್ಲೂ ಐದೈದು ಮಾತ್ರೆಯ ನಾಲ್ಕು ಗಣಗಳನ್ನಿಟ್ಟು ಎರಡೆರಡು ಸಾಲುಗಳಲ್ಲಿ ಪ್ರಾಸನಿಯಮವನ್ನು ಮುಖ್ಯವಾಗಿ ಆದಿಯಲ್ಲಿ ಪಾಲಿಸಿಕೊಂಡು ಬರೆಯಲ್ಪಟ್ಟ ಪದ್ಯಗಳುಲಲಿತರಗಳೆ’ಗಳೆನಿಸುವುವುಅಂತ್ಯ ಪ್ರಾಸದ ನಿಯಮವೂ ಎರಡೆರಡು ಸಾಲುಗಳಿಗೆ ಇರಬಹುದುಕೆಲವು ಕಡೆ ಆದಿಪ್ರಾಸವಿಲ್ಲದೆ ಕೇವಲ ಅಂತ್ಯ ಪ್ರಾಸವೂ ಇರಬಹುದುಇಂಥ ಉದಾಹರಣೆಗಳು ತೀರ ಕಡಿಮೆ.

ಇದುವರೆಗೆ ಮಾತ್ರಾಗಣದ ಲೆಕ್ಕದಿಂದ ರಚಿಸಲ್ಪಟ್ಟ ಅನೇಕ ವಿಧ ಛಂದಸ್ಸಿನ ಲಕ್ಷಣಗಳನ್ನು ವಿವರವಾಗಿ ಅರಿತಿದ್ದೀರಿ.  ಮೇಲೆ ಹೇಳಿದ ಎಲ್ಲ ಛಂದೋಜಾತಿಗಳಲ್ಲಿ ಮೂರು, ನಾಲ್ಕು, ಐದು ಮಾತ್ರೆಗಳ ಗುಂಪುಗಳನ್ನು (ಗಣಗಳನ್ನು) ವಿಂಗಡಿಸುವ ರೀತಿನೀತಿಗಳ ಬಗೆಗೆ ಅರಿತಿದ್ದೀರಿ.  ಈಗ ಇನ್ನೊಂದು ರೀತಿಯ ಗಣ ವಿಂಗಡಣೆಯಿಂದ ಕೂಡಿದ ಪದ್ಯ ಜಾತಿಗಳನ್ನು ನೋಡೋಣ.


[1] ಷಟ್ಪದಿಗಳು ಎಂದರೆ-ಶರ, ಕುಸುಮ, ಭೋಗ, ಭಾಮಿನಿ, ಪರಿವರ್ಧಿನಿ, ವಾರ್ಧಕಗಳೆಂಬ ಆರು ಜಾತಿಯ ಷಟ್ಪದಿಗಳೆಂದು ತಿಳಿಯಬೇಕು.

[2] ರಗಳೆಗಳೆಂದರೆ-ಮಂದಾನಿಲರಗಳೆ, ಉತ್ಸಾಹರಗಳೆ, ಲಲಿತರಗಳೆಗಳೆಂದು ತಿಳಿಯಬೇಕು.