(೧೧೮) ಅಕ್ಷರಗಣಗಳೆಂದರೆ ಮೂರು ಮೂರು ಅಕ್ಷರಗಳ ಗುಂಪುಗಳನ್ನು ಒಂದೊಂದು ಗಣವೆಂದು ತಿಳಿಯುವ ಗಣಗಳುಮೂರು ಮೂರು ಅಕ್ಷರಗಳ ಗುಂಪಿನಲ್ಲಿ ಮಾತ್ರೆಗಳು ಮೂರೆ ಇರಬಹುದು, ನಾಲ್ಕು, ಐದು, ಆರು ಮಾತ್ರೆಗಳೂ ಇರಬಹುದುಅದು ಮುಖ್ಯವಲ್ಲಇಲ್ಲಿ ಮೂರು ಮೂರು ಅಕ್ಷರಗಳು ಮುಖ್ಯಹೀಗೆ ಮೂರು ಮೂರು ಅಕ್ಷರಗಳ ಲೆಕ್ಕದಿಂದ ಗಣಗಳನ್ನು ವಿಂಗಡಿಸುವುದು ವೃತ್ತಜಾತಿಯ ಛಂದಸ್ಸುಗಳಲ್ಲಿ ಮಾತ್ರವೃತ್ತಗಳು ಹಲವಾರು ವಿಧಗಳುಂಟುಅವುಗಳೊಡನೆ ಕನ್ನಡದಲ್ಲಿ ಮುಖ್ಯವಾಗಿ ಬರುವ ಉತ್ಪಲಮಾಲವೃತ್ತ, ಚಂಪಕಮಾಲಾವೃತ್ತ, ಶಾರ್ದೂಲವಿಕ್ರೀಡಿತವೃತ್ತ, ಮತ್ತೇಭವಿಕ್ರೀಡಿತವೃತ್ತ, ಸ್ರಗ್ಧರಾವೃತ್ತ, ಮಹಾಸ್ರಗ್ಧರಾವೃತ್ತ ಗಳೆಂಬ ಆರು ಜಾತಿಯ ವೃತ್ತಗಳ ಪರಿಚಯವನ್ನು ಪ್ರೌಢಶಾಲೆಯ ಮಕ್ಕಳು ತಿಳಿದರೆ ಸಾಕುಆದ್ದರಿಂದ ಮೊದಲು ಅಕ್ಷರಗಣಗಳ ಪರಿಚಯವನ್ನು ಮಾಡಿಕೊಂಡು ವೃತ್ತಗಳಲ್ಲಿ ಅವು ಹೇಗೆ ಬಳಸಲ್ಪಡುತ್ತವೆಂಬುದನ್ನು ತಿಳಿಯಿರಿ.

ಅಕ್ಷರಗಣಗಳು ಒಟ್ಟು ೮ ವಿಧ.  ಅವುಗಳ ವಿನ್ಯಾಸವು ಈ ಕೆಳಗಿನಂತೆ ಇದೆ-

ಮೇಲೆ ವಿವರಿಸಿದಂತೆ ಮೂರು ಗುರುಗಳು ಬರುವ ಮೂರು ಅಕ್ಷರದ ಗಣ ಮಗಣ.  ಮೂರು ಲಘು ಬರುವ ಮೂರಕ್ಷರದ ಗಣ ನಗಣ.  ಗುರು ಮೊದಲು ಬಂದು ಎರಡು ಲಘು ಬರುವ ಗಣವೇ ಭಗಣ.  ಲಘು ಮೊದಲು ಬಂದು ಎರಡು ಗುರುಗಳು ಬರುವ ಗಣವೇ ಯಗಣ.  ಗುರು ನಡುವೆ ಬರುವುದು ಜಗಣ.  ಲಘು ನಡುವೆ ಬರುವುದು ರಗಣ.  ಗುರು ಕೊನೆಯಲ್ಲಿ ಬರುವ ಗಣ ಸಗಣ.  ಲಘು ಕೊನೆಯಲ್ಲಿ ಬರುವ ಗಣ ತಗಣ.  ಹೀಗೆ ಎಂಟು ಪ್ರಕಾರದಲ್ಲಿ ಈ ಅಕ್ಷರ ಗಣದ ವಿನ್ಯಾಸಗಳಿವೆ.  ಈ ಎಂಟೂ ಗಣಗಳ ವಿನ್ಯಾಸವನ್ನು ಸುಲಭವಾಗಿ ತಿಳಿಯಲು ಈ ಕೆಳಗಣ ಪದ್ಯವನ್ನು ಕಂಠಪಾಠ ಮಾಡಿದರೆ ಅನುಕೂಲವಾಗುವುದು:-

ಗುರು-ಲಘು ಮೂರಿರೆ ಮ-ನಗಣ |
ಗುರು-ಲಘು ಮೊದಲಲ್ಲಿ ಬರಲು ಧ-ಯಗಣಮೆಂಬರ್ |
ಗುರು-ಲಘು ನಡುವಿರೆ ಜ-ರಗಣ |
ಗುರು-ಲಘು ಕೊನೆಯಲ್ಲಿ ಬರಲು ಸ-ತಗಣಮಕ್ಕುಂ ||

ಗುರು ಮೂರಿರೆ ಮಗಣ; ಲಘು ಮೂರಿರೆ ನಗಣ; ಗುರು ಮೊದಲಲ್ಲಿ ಬರಲು ಭಗಣ; ಲಘು ಮೊದಲಲ್ಲಿ ಬರಲು ಯಗಣ; ಗುರು ನಡುವಿರೆ ಜಗಣ; ಲಘು ನಡುವಿರೆ ರಗಣ; ಗುರು ಕೊನೆಯಲ್ಲಿ ಬರಲು ಸಗಣ; ಲಘು ಕೊನೆಯಲ್ಲಿ ಬರಲು ತಗಣ-ಎಂದು ಈ ಪದ್ಯದ ಅರ್ಥ.  ಅಥವಾ ಈ ಎಂಟೂ ಗಣಗಳ ತಿಳಿವಳಿಕೆಗೆ ಇನ್ನೂ ಒಂದು ರೀತಿಯ ವಿಧಾನವುಂಟು.  ಕೆಳಗಣ ಈ ಸೂತ್ರ ನೋಡಿರಿ:-

 

“ಯಮಾತಾರಾಜಭಾನಸಲಗಂ”

ಈ ಸೂತ್ರದಿಂದ ಗಣಗಳ ಗುರು ಲಘು ವಿನ್ಯಾಸವನ್ನು ಹೇಗೆ ತಿಳಿಯಬೇಕೆಂದರೆ – ‘ಯ, ಮ, ತ, ರ, ಜ, ಭ, ನ, ಸ’ ಎಂಟು ಗಣಗಳಲ್ಲಿ ನಮಗೆ ಯಾವ ಗಣದ ವಿನ್ಯಾಸ ಬೇಕಾದಾಗಲೂ ಯಮಾತಾರಾಜಭಾನಸಲಗಂ ಈ ಸೂತ್ರದಲ್ಲಿ ಆಯಾ ಅಕ್ಷರದಿಂದ ಮೊದಲ್ಗೊಂಡು ಮೂರು ಅಕ್ಷರಗಳಿಗೆ ಪ್ರಸ್ತಾರ ಹಾಕಿಕೊಂಡರೆ ಆ ಗಣದ ವಿನ್ಯಾಸ ಬರುತ್ತದೆ.  ಉದಾಹರಣೆಗೆ ಯಗಣಕ್ಕೆ ಸೂತ್ರದಲ್ಲಿಯ ಯಕಾರದಿಂದ ಮೂರಕ್ಷರ ತೆಗೆದುಕೊಳ್ಳಬೇಕು.

ಲ ಎಂದರೆ ಲಘು (U); ಗು ಎಂದರೆ ಗುರು (_) ಎಂದು ತಿಳಿಯಬೇಕು.

 

ಇದುವರೆಗೆ ಎಂಟು ವಿಧವಾದ ಅಕ್ಷರ ಗಣಗಳ ವಿನ್ಯಾಸ ಕ್ರಮವನ್ನು ತಿಳಿದಿರಿ. ಇನ್ನು ಈ ಎಂಟೂಗಣಗಳ ನಿಯಮದಿಂದ ರಚಿಸಲ್ಪಟ್ಟ ವೃತ್ತ ಜಾತಿಯ ಛಂದಸ್ಸಿನ ಲಕ್ಷಣ ತಿಳಿಯೋಣ.

 

() ವೃತ್ತಜಾತಿಯ ಛಂದಸ್ಸಿನ ಲಕ್ಷಣಗಳು

 

() ಉತ್ಪಲಮಾಲಾವೃತ್ತದ ಲಕ್ಷಣ


(೧೧೯) ನಾಲ್ಕು ಸಮಾನ ಸಾಲುಗಳುಳ್ಳ ಪದ್ಯಪ್ರತಿಸಾಲಿನಲ್ಲೂ ೨೦ ಅಕ್ಷರಗಳಿವೆ.  (ವ್ಯಂಜನವರ್ಣಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಕೂಡದು.)  ಪ್ರತಿ ಸಾಲಿನಲ್ಲೂ , , , , , ಗಣಗಳೂ, ಮೇಲೆ ಒಂದು ಲಘು ಮತ್ತು ಒಂದು ಗುರು ಹೀಗೆ ಬರುವ ವೃತ್ತವೇ ಉತ್ಪಲಮಾಲಾವೃತ್ತವೆನಿಸುವುದು.

ಲಕ್ಷಣವನ್ನು ಸುಲಭವಾಗಿ ನೆನಪಿನಲ್ಲಿಡಲು ಕೆಳಗಿನ ಸೂತ್ರವನ್ನು ಹೇಳಬಹುದು.

 

ಸೂತ್ರ

[1]:- ಉತ್ಪಲಮಾಲೆಯಪ್ಪುದು ಭರಂ ನಭಭಂ ರಲಗಂ ನೆಗಳ್ದಿರಲ್

 

() ಚಂಪಕಮಾಲಾವೃತ್ತದ ಲಕ್ಷಣ

(೧೨೦) ನಾಲ್ಕು ಸಮಾನಪಾದಗಳುಳ್ಳ ಪದ್ಯಪ್ರತಿಯೊಂದು ಪಾದದಲ್ಲೂ ೨೧ ಅಕ್ಷರಗಳಿವೆಪ್ರತಿ ಪಾದದಲ್ಲಿಯೂ , , , , , , ಎಂಬ ಏಳು ಗಣಗಳಿರುತ್ತವೆಇಂಥ ವೃತ್ತಗಳೆಲ್ಲ ಚಂಪಕಮಾಲಾವೃತ್ತಗಳೆನಿಸುವುವು.

ಚಂಪಕಮಾಲಾವೃತ್ತದ ಕೆಳಗಣ ಸೂತ್ರವನ್ನು ಕಂಠಪಾಠಮಾಡಿರಿ.

ಸೂತ್ರ[2]:- ನಜಭಜಜಂಜರಂ ಬಗೆಗೊಳುತ್ತಿರೆ ಚಂಪಕಮಾಲೆಯೆಂದಪರ್

() ಶಾರ್ದೂಲವಿಕ್ರೀಡಿತವೃತ್ತದ ಲಕ್ಷಣ

 

(೧೨೧) ನಾಲ್ಕು ಸಮಾನಪಾದಗಳುಳ್ಳ ಪದ್ಯಪ್ರತಿ ಪಾದವೂ ೧೯ ಅಕ್ಷರಗಳಿಂದ ಕೂಡಿದೆಪ್ರತಿ ಪಾದದಲ್ಲೂ , , , , , ಎಂಬ ಆರು ಗಣಗಳೂ ಮೇಲೆ ಒಂದು ಗುರುವೂ ಇರುತ್ತವೆಇಂಥ ವೃತ್ತಗಳಿಗೆಲ್ಲ ಶಾರ್ದೂಲವಿಕ್ರೀಡಿತವೃತ್ತಗಳೆನ್ನು ವರುಇದರ ಸೂತ್ರವನ್ನು ಕೆಳಗೆ ಕೊಟ್ಟಿದೆಕಂಠಪಾಠ ಮಾಡಿರಿ.

ಸೂತ್ರ[3]:- ಕಣ್ಗೊಪ್ಪಲ್ ಮಸಜಂಸತತಂಗಮುಮಾ ಶಾರ್ದೂಲವಿಕ್ರೀಡಿತಂ

 

() ಮತ್ತೇಭವಿಕ್ರೀಡಿತವೃತ್ತದ ಲಕ್ಷಣ

(೧೨೨) ನಾಲ್ಕು ಸಮಾನ ಪಾದಗಳುಳ್ಳ ಪದ್ಯಪ್ರತಿ ಪಾದದಲ್ಲೂ ಇಪ್ಪತ್ತು ಅಕ್ಷರಗಳಿವೆಪ್ರತಿಪಾದವೂ , , , , , ಗಣಗಳಿಂದಲೂ ಮೇಲೊಂದು ಲಘು ಮತ್ತು ಒಂದುಗುರುವಿನಿಂದಲೂ ಕೂಡಿದ ಪದ್ಯಜಾತಿಯು ಮತ್ತೇಭವಿಕ್ರೀಡಿತವೃತ್ತ ವೆನಿಸುವುದು ವೃತ್ತ ಲಕ್ಷಣವನ್ನು ತಿಳಿಸುವ ಸೂತ್ರವನ್ನು ಕಂಠಪಾಠ ಮಾಡಿರಿ.

ಸೂತ್ರ[4]:- ಸಭರಂನಂದುಯಲಂಗಮುಂ ಬಗೆಗೊಳಲ್ ಮತ್ತೇಭವಿಕ್ರೀಡಿತಂ

 

() ಸ್ರಗ್ಧರಾವೃತ್ತ ಲಕ್ಷಣ

(೧೨೩) ನಾಲ್ಕು ಸಮಾನ ಪಾದಗಳುಳ್ಳ ಪದ್ಯಪ್ರತಿಪಾದದಲ್ಲಿಯೂ ಇಪ್ಪತ್ತೊಂದು ಅಕ್ಷರಗಳಿರುತ್ತವೆಪ್ರತಿಯೊಂದು ಪಾದದಲ್ಲೂ , , , , , , ಗಣಗಳಿರುತ್ತವೆ ರೀತಿಯ ವೃತ್ತ ಜಾತಿಗೆಸ್ರಗ್ಧರಾವೃತ್ತ’ವೆನ್ನುವರುಇದರ ಸೂತ್ರವನ್ನು ಕೆಳಗಿನಂತೆ ಹೇಳಬಹುದು.

 

ಸೂತ್ರ[5]:-ತೋರಲ್ ಮಂರಂಭನಂಮೂಯಗಣಮುಮದೆ ತಾಂ ಸ್ರಗ್ಧರಾವೃತ್ತಮಕ್ಕುಂ.

 

() ಮಹಾಸ್ರಗ್ಧರಾವೃತ್ತ ಲಕ್ಷಣ

(೧೨೪) ನಾಲ್ಕು ಸಮಾನ ಪಾದಗಳುಳ್ಳ ಪದ್ಯಪ್ರತಿ ಸಾಲಿನಲ್ಲೂ ೨೨ ಅಕ್ಷರಗಳಿವೆಪ್ರತಿ ಸಾಲೂ , , , , , , ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿರುತ್ತದೆಇದರ ಸೂತ್ರವು ಕೆಳಗೆ ಇದೆಅದನ್ನು ಕಂಠಪಾಠ ಮಾಡಿರಿ.

ಸೂತ್ರ[6]:- ಸತತಂ ನಂ ಸಂ ರರಂಗಂ ನೆರೆದೆಸೆಯೆ ಮಹಾಸ್ರಗ್ಧರಾವೃತ್ತಮಕ್ಕುಂ

ಮುಖ್ಯವಾಗಿ ಕನ್ನಡದಲ್ಲಿ ಬರುವ ಆರು ವೃತ್ತಗಳಾದ ಉತ್ಪಲಮಾಲಾ, ಚಂಪಕಮಾಲಾ, ಶಾರ್ದೂಲವಿಕ್ರೀಡಿತ, ಮತ್ತೇಭವಿಕ್ರೀಡಿತ, ಸ್ರಗ್ಧರಾ, ಮಹಾಸ್ರಗ್ಧರಾವೃತ್ತಗಳ ಲಕ್ಷಣವನ್ನು ಇದುವರೆಗೆ ತಿಳಿದಿದ್ದೀರಿ.  ಉತ್ಪಲಮಾಲೆಯು ೨೦ ಅಕ್ಷರಗಳಿಂದಲೂ ಚಂಪಕಮಾಲೆಯು ೨೧ ಅಕ್ಷರಗಳಿಂದಲೂ ಶಾರ್ದೂಲವಿಕ್ರೀಡಿತವು ೧೯ ಅಕ್ಷರಗಳಿಂದಲೂ ಮತ್ತೇಭವಿಕ್ರೀಡಿತವು ೨೦ ಅಕ್ಷರಗಳಿಂದಲೂ ಸ್ರಗ್ಧರೆಯು ೨೧ ಅಕ್ಷರಗಳಿಂದಲೂ ಮಹಾಸ್ರಗ್ಧರೆಯು ೨೨ ಅಕ್ಷರಗಳಿಂದಲೂ (ಪ್ರತಿಸಾಲಿನಲ್ಲಿ) ಕೂಡಿರುತ್ತವೆ.  ಈ ಆರೂ ವೃತ್ತಗಳನ್ನು ಸುಲಭವಾಗಿ ಸ್ಥೂಲವಾಗಿ ಗುರುತಿಸುವುದಕ್ಕೆ ಒಂದು ಪದ್ಯವಿದೆ.  ಅದನ್ನು ತಿಳಿದರೆ ಸ್ಥೂಲವಾಗಿ ಈ ಆರೂ ವೃತ್ತಗಳನ್ನು ಗುರುತಿಸಬಹುದು.  ಆದರೆ ಇದು ಅಷ್ಟೊಂದು ನಿಖರಸಾಧನವಲ್ಲ.  ಸ್ಥೂಲಸಾಧನವೆಂಬುದನ್ನು ನೆನಪಿನಲ್ಲಿಡಬೇಕು.

ಗುರುವೊಂದಾದಿಯೊಳುತ್ಪಲಂ ಗುರುಮೊದಲ್ ಮೂರಾಗೆಶಾರ್ದೂಲಮಾ |

ಗುರುನಾಲ್ಕಾಗಿರಲಂತು ಸ್ರಗ್ಧರೆ ಲಘುದ್ವಂದ್ವಂ ಗುರುದ್ವಂದ್ವಮಾ |

ಗಿರೆ ಮತ್ತೇಭ ಲಘುದ್ವಯ ತ್ರಿಗುರುವಿಂದಕ್ಕುಂ ಮಹಾಸ್ರಗ್ಧರಾ |

ಪರಿಣಾಕ್ಷೀ, ಲಘು ನಾಲ್ಕು ಚಂಪಕಮಿವಾರುಂ[7] ಖ್ಯಾತಕರ್ನಾಟಕಂ ||

 

ಅರ್ಥ:- ಆದಿಯಲ್ಲಿ ಒಂದು ಗುರು ಬಂದುದೇ ಉತ್ಪಲಮಾಲಾ; ಆದಿಯಲ್ಲಿ ಮೂರು ಗುರುಗಳು ಬಂದುದು ಶಾರ್ದೂಲ ವಿಕ್ರೀಡಿತ; ಆದಿಯಲ್ಲಿ ಕ್ರಮವಾಗಿ ನಾಲ್ಕು ಗುರುಗಳು ಬಂದರೆ ಸ್ರಗ್ಧರೆ; ಆದಿಯಲ್ಲಿ ಎರಡು ಲಘು ಬಂದು ಅನಂತರ ಎರಡು ಗುರು ಬಂದರೆ ಮತ್ತೇಭವಿಕ್ರೀಡಿತ; ಆದಿಯಲ್ಲಿ ಮೊದಲು ಎರಡು ಲಘು ಬಂದು ಮುಂದೆ ಮೂರು ಗುರುಗಳು ಬಂದರೆ ಮಹಾಸ್ರಗ್ಧರಾವೃತ್ತ; ನಾಲ್ಕು ಲಘುಗಳು ಕ್ರಮವಾಗಿ ಬಂದರೆ ಚಂಪಕಮಾಲಾವೃತ್ತ.  ಹೀಗೆ ಆರೂ ವೃತ್ತಗಳ ಸ್ಥೂಲ ಪರಿಚಯವು ಈ ಪದ್ಯದಿಂದಾಗುವುದು.

ಇದುವರೆಗೆ ವರ್ಣಗಳ ವಿಚಾರವಾಗಿ ತಿಳಿದು, ಅವುಗಳ ನಿಯಮದಿಂದ ಪದ್ಯ ರಚಿಸುವ ಆರು ಮುಖ್ಯವಾದ ವೃತ್ತಗಳ ವಿಚಾರ ತಿಳಿದಿದ್ದೀರಿ.  ವರ್ಣಗಣ ಮತ್ತು ಮಾತ್ರಾಗಣಗಳಿಗಿಂತ ಭಿನ್ನವಾದ ಇನ್ನೊಂದು ರೀತಿಯ ಗಣಗಳ ಲೆಕ್ಕದಿಂದ ಪದ್ಯ ರಚನೆ ಮಾಡುವುದುಂಟು.  ಅವೇ ಅಂಶಗಣ ಎಂಬ ಹೆಸರಿನ ಗಣಗಳು.


[1]

 

[2]

 

[3]

 

[4]

 

[5]

 

[6]

 

[7] ಇಲ್ಲಿಯ ರಕಾರವು ಶಕಟರೇಪವೇ ಆಗಿದೆ.  ಇದುವರೆಗೆ ಛಂದಸ್ಸಿನಲ್ಲಿ ಉದಾಹರಿಸಿದ ಪದ್ಯಗಳಲ್ಲಿ ಬರುವ ಶಕಟರೇಫಗಳ ಸ್ಥಾನದಲ್ಲಿ ರಕಾರವನ್ನೂ, ರಳಾಕ್ಷರಗಳ ಸ್ಥಾನದಲ್ಲೆಲ್ಲ ಳಕಾರವನ್ನೂ ಬಳಸಿದೆ.  ವಿದ್ಯಾರ್ಥಿಗಳಿಗೆ ತೊಡಕಾಗಬಾರದೆಂಬುದೇ ಇದರ ಉದ್ಧೇಶ.