ವ್ಯಂಜನಾಕ್ಷರಗಳನ್ನು ದ್‌ ವ್‌ ರ್ ಹೀಗೆ ಬರೆದು ಅರ್ಥವತ್ತಾದ ಶಬ್ದಗಳನ್ನು ಮಾಡಲಾಗುವುದೇ ಇಲ್ಲ.  ಅವುಗಳಿಗೆಲ್ಲ ಸ್ವರಗಳು ಸೇರಲೇ ಬೇಕು.  ದ್+=ದೇ, ವ್+=, ರ್+=ರು – ಹೀಗೆ ಸ್ವರಗಳನ್ನು ಸೇರಿಸಿದ ಮೇಲೆಯೇ ದೇವರು ಎಂದು ಉಚ್ಚಾರ ಮಾಡಲು ಬರುತ್ತವೆ.  ಅಥವಾ ಹಿಂದೆ ಸ್ವರವಿದ್ದರೆ ಅದ್, ಅರ್ ಎನ್ನಬಹುದು.  ಈ ವಿಷಯವನ್ನು ಹಿಂದೆ ತಿಳಿಸಿದೆ.  ದೇವರು ಎಂದಾಗ ಅದರಲ್ಲಿರುವ ದ್ ಏ ವ್ ಅ ರ್ ಉ ವ್ಯಂಜನ ಸ್ವರಗಳನ್ನು ಬಿಡಿಬಿಡಿಯಾಗಿ ಬರೆಯುವುದಿಲ್ಲ.  ವ್ಯಂಜನದಲ್ಲಿ ಸ್ವರವನ್ನು ಸೇರಿಸಿ ಒಂದು ಹೊಸ ಆಕಾರದ ಅಕ್ಷರವನ್ನು ಮಾಡಿ ಬರೆಯುತ್ತೇವೆ.  ಕೆಳಗೆ ಕೊಟ್ಟಿರುವ ಪಟ್ಟಿಯನ್ನು ನೋಡಿರಿ:-

ವ್ಯಂಜನ ಸ್ವರ ಗುಣಿತಾಕ್ಷರ
ಕ್ + =
ಕ್ + = ಕಾ
ಚ್ + = ಚಿ
ಚ್ + = ಚೀ
ತ್ + = ತು
ತ್ + = ತೂ
ಟ್ + = ಟೆ
ಟ್ + = ಟೇ
ಪ್ + = ಪೈ
ಪ್ + = ಪೊ
ಬ್ + = ಬೋ
ಬ್ + = ಬೌ
ಕ್ + = ಕೃ
ಬ್ + = ಬೄ

ಇದರಂತೆ ಎಲ್ಲಾ ಸ್ವರಗಳನ್ನೂ (೧೪ ಸ್ವರಗಳನ್ನೂ) ೩೪ ವ್ಯಂಜನಗಳಲ್ಲಿಯೂ ಸೇರಿಸಿ ಹೊಸ ಆಕಾರದ ಅಕ್ಷರಗಳನ್ನು ಮಾಡಿಕೊಳ್ಳುತ್ತೇವೆ. ಇವೇ ಗುಣಿತಾಕ್ಷರಗಳೆಂದು ಕರೆಯಿಸಿಕೊಳ್ಳುತ್ತವೆ.

(೧೨) ವ್ಯಂಜನಗಳಿಗೆ ಸ್ವರಗಳು ಸೇರಿ ಗುಣಿತಾಕ್ಷರಗಳೆನಿಸುವುವು.

[1]


[1] ರೂಢಿಯಲ್ಲಿ ಕಾಗುಣಿತ ಎನ್ನುವುದುಂಟು.  ಕಾಗುಣಿತ ಎಂದರೆ ಕ್+ಅ=ಕ, ಕ್+ಆ=ಕಾ, ಕ್+ಇ=ಕಿ, ಹೀಗೆ ಕಕಾರದಲ್ಲಿ ಹದಿನಾಲ್ಕು ಸ್ವರಗಳೂ ಸೇರಿದ ಮೇಲೆ ಆಗುವ ಕ ಕಾ ಕಿ ಕೀ ಎಂಬ ಹದಿನಾಲ್ಕು ಗುಣಿತಾಕ್ಷರಗಳೇ ಕಾಗುಣಿತಗಳು.  ಇವಕ್ಕೆ ಬಳ್ಳಿ ಎಂದೂ ಕರೆಯುವರು.