ಮೇಲೆ ಹೇಳಿದ ೩೪ ವ್ಯಂಜನಗಳಲ್ಲಿ ಮೊದಲಿನ ೨೫ ವ್ಯಂಜನಗಳನ್ನು ಎಂದರೆ: ಕಕಾರದಿಂದ ಮಕಾರದವರೆಗಿನ ವ್ಯಂಜನಗಳನ್ನು ಐದೈದರ ವರ್ಗಗಳನ್ನಾಗಿ ಬರೆಯುತ್ತೇವೆ.  ಆದ್ದರಿಂದ ಇವನ್ನು ವರ್ಗೀಯ ವ್ಯಂಜನಗಳು ಎಂದು ಕರೆಯುತ್ತೇವೆ.  ಈ ವರ್ಗೀಯ ವ್ಯಂಜನಗಳಲ್ಲಿ ಅಲ್ಪಪ್ರಾಣ

[1], ಮಹಾಪ್ರಾಣ ಮತ್ತು ಅನುನಾಸಿಕ ಎಂಬ ಮೂರು ರೀತಿಯ ಅಕ್ಷರಗಳಿವೆ.  ಅವುಗಳನ್ನು ಕೆಳಗೆ ನೋಡಿರಿ:-

ವರ್ಗ ಅಲ್ಪಪ್ರಾಣ ಮಹಾಪ್ರಾಣ ಅಲ್ಪಪ್ರಾಣ ಮಹಾಪ್ರಾಣ ಅನುನಾಸಿಕ ಒಟ್ಟು ಅಕ್ಷರಗಳು
ಕವರ್ಗ ಕ್ ಖ್ ಗ್ ಘ್
ಚವರ್ಗ ಚ್ ಛ್ ಜ್ ಝ್
ಟವರ್ಗ ಟ್ ಠ್ ಡ್ ಢ್ ಣ್
ತವರ್ಗ ತ್ ಥ್ ದ್ ಧ್ ನ್
ಪವರ್ಗ ಪ್ ಫ್ ಬ್ ಭ್ ಮ್
೨೫

 

() ಅಲ್ಪಪ್ರಾಣ:- ಪ್ರತಿಯೊಂದು ವರ್ಗದ ೧ನೆಯ, ೩ನೆಯ ವ್ಯಂಜನಗಳು ಅಲ್ಪಪ್ರಾಣಗಳು

() ಮಹಾಪ್ರಾಣ:- ಪ್ರತಿಯೊಂದು ವರ್ಗದ ೨ನೆಯ, ೪ನೆಯ ವ್ಯಂಜನಗಳು ಮಹಾಪ್ರಾಣಗಳು

(೧೦) ಅನುನಾಸಿಕ:- ಪ್ರತಿಯೊಂದು ವರ್ಗದ ೫ನೆಯ ವ್ಯಂಜನವು ಅನುನಾಸಿಕವೆನಿ ಸುವುದು. ಇವುಗಳ ಉಚ್ಚಾರಣೆಗೆ ಮೂಗಿನ ಸಹಾಯವು ಬೇಕಾಗುವುದರಿಂದ ಇವನ್ನು ಅನುನಾಸಿಕವೆನ್ನುವರು.

ಮೇಲಿನ ಈ ೨೫ ಅಕ್ಷರಗಳನ್ನು ಕವರ್ಗ, ಚವರ್ಗ, ಟವರ್ಗ, ತವರ್ಗಗಳೆಂದು ವಿಭಾಗಿಸಿ ವರ್ಗಾಕ್ಷರಗಳೆಂದು ಹೆಸರಿಟ್ಟರೆ, ಯ್ ರ್ ಲ್ ವ್ ಶ್ ಷ್ ಸ್ ಹ್ ಳ್ ಈ ಒಂಬತ್ತು ಅಕ್ಷರಗಳನ್ನು ಯಾವ ವರ್ಗವೂ ಇಲ್ಲದೆ ಹೇಳುತ್ತೇವೆ.  ವರ್ಗದ ವ್ಯವಸ್ಥೆ ಇವಕ್ಕೆ ಇಲ್ಲದುದ ರಿಂದ ಇವು ಅವರ್ಗೀಯ ವ್ಯಂಜನಗಳೆನಿಸುವುವು.

(೧೧) ಯಕಾರದಿಂದ ಳ ಕಾರದವರೆಗಿರುವ ೯ ವ್ಯಂಜನಗಳು ಅವರ್ಗೀಯವ್ಯಂಜನಗಳೆ ನಿಸುವುವು.


[1] ಅಲ್ಪಪ್ರಾಣ ಎಂದರೆ ಕಡಿಮೆ ಉಸಿರಿನಿಂದ ಉಚ್ಚರಿಸುವ ವ್ಯಂಜನಾಕ್ಷರ; ಮಹಾಪ್ರಾಣ ವೆಂದರೆ ಹೆಚ್ಚು ಉಸಿರಿನಿಂದ ಉಚ್ಚರಿಸುವ ವ್ಯಂಜನಾಕ್ಷರ; ಅನುನಾಸಿಕ ವೆಂದರೆ ಮೂಗಿನ ಸಹಾಯದಿಂದ ಉಚ್ಚರಿಸುವ ವ್ಯಂಜನಾಕ್ಷರ.  (ನಾಸಿಕ=ಮೂಗು) (ಪ್ರಾಣ=ಉಸಿರು) (ಅಲ್ಪ=ಸ್ವಲ್ಪ) (ಮಹಾ=ಹೆಚ್ಚು).  ನಾಸಿಕವನ್ನು ಅನುಸರಿಸಿ ಉಚ್ಚರಿಸುವ ಅಕ್ಷರವೇ ಅನುನಾಸಿಕ.