ಮೇಲೆ ಹೇಳಿದ ೧೪ ಸ್ವರಗಳಲ್ಲಿ , , , , , ಈ ಆರು ಸ್ವರಗಳನ್ನು ಒಂದು ಮಾತ್ರೆಯ ಕಾಲದಲ್ಲಿ[1] ಉಚ್ಚರಿಸುತ್ತೇವೆ.

() ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸುವ ಸ್ವರಗಳಿಗೆ ಹ್ರಸ್ವಸ್ವರಗಳೆನ್ನುವರು.

() ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವ ಆ, , , , , , , ಔ  ಈ ಎಂಟು ಸ್ವರಗಳನ್ನು ದೀರ್ಘಸ್ವರಗಳೆನ್ನುವರು.

ಮೇಲೆ ಹೇಳಿದ ಸ್ವರಗಳನ್ನೇ ಎರಡು ಮಾತ್ರೆಗಳ ಕಾಲಕ್ಕಿಂತಲೂ ಹೆಚ್ಚುಕಾಲ ಎಳೆದು ಹೇಳುವುದೂ ಉಂಟು.

ಅಣ್ಣಾ ಓಡಿ ಬಾ.
ದೇವರೇ ಕಾಪಾಡು

ಈ ಮಾತುಗಳಲ್ಲಿ ಣ್ ಕಾರದ ಮುಂದಿರುವ ಕಾರವನ್ನು, ದೇವರೇ ಎಂಬಲ್ಲಿ ರ್ ಕಾರದ ಮುಂದಿರುವ ಕಾರವನ್ನೂ ಎರಡು ಮಾತ್ರೆಗಳ ಕಾಲಕ್ಕಿಂತಲೂ ಹೆಚ್ಚು ಕಾಲ ಅಂದರೆ ಮೂರು ಮಾತ್ರೆಗಳ ಕಾಲದವರೆಗೆ ಎಳೆದು ಉಚ್ಚರಿಸುತ್ತೇವೆ.  ಸಂಬೋಧನೆಯಲ್ಲಿ[2] (ಕರೆಯುವಾಗ) ಕೊನೆಯ ಸ್ವರವನ್ನು ಹೀಗೆ ಮೂರು ಮಾತ್ರೆಗಳ ಕಾಲ ತೆಗೆದುಕೊಂಡು ಉಚ್ಚರಿಸುತ್ತೇವೆ.  ಇದೇ ಪ್ಲುತಸ್ವರವೆನಿಸುವುದು.

() ಮೂರು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವ ಸ್ವರಗಳೆಲ್ಲ ಪ್ಲುತ ಸ್ವರಗಳೆನಿಸುವುವು[3]

ಉದಾಹರಣೆಗೆ:-

ಅಕ್ಕಾ ಇಲ್ಲಿ ನೋಡು.

ಅಮ್ಮಾ ನನಗೆ ಹಾಲು.

ದೇವರೇ ರಕ್ಷಿಸು.

ಗುರುಗಳೇ ತಮಗೆ ನಮಸ್ಕಾರ.

ಮಕ್ಕಳಿರಾ ಬನ್ನಿರಿ.

ಮರಗಳೇ ನೀವು ಫಲಗಳನ್ನು ಕೊಡಿ.

(ಇಲ್ಲಿ () ಎಂದು ಗುರುತುಮಾಡಿರುವ ಸ್ವರಗಳೇ ಪ್ಲುತಗಳು)

ಹೀಗೆ ಮೇಲೆ ವಿವರಿಸಿದಂತೆ ಸ್ವರಗಳಲ್ಲಿ ಹ್ರಸ್ವ, ದೀರ್ಘ, ಪ್ಲುತಗಳೆಂದು ಮೂರು ರೀತಿ.


[1] ಒಂದು ಮಾತ್ರಾ ಕಾಲವೆಂದರೆ ಅ ಎಂಬ ಅಕ್ಷರವನ್ನು ಉಚ್ಚರಿಸಲು ಎಷ್ಟು ಕಾಲವು ಹಿಡಿಯುವುದೋ ಅಷ್ಟು ಕಾಲ.  ಅಂದರೆ ಎಳೆದು ಹೇಳದಂತೆ, ಮೊಟಕಾಗಿಯೂ ಹೇಳದಂತೆ ಉಚ್ಚರಿಸಬೇಕು.  ಅದು ಎನ್ನುವಾಗ ಅ ಕಾರವನ್ನು ಎಷ್ಟು ಕಾಲದಲ್ಲಿ ಉಚ್ಚರಿಸುವೆವೋ ಅಷ್ಟು ಕಾಲಕ್ಕೆ ಒಂದು ಮಾತ್ರಾ ಕಾಲವೆನ್ನಬಹುದು.  ಹೀಗೆ ಮೊಟಕಾಗಿ ೧ ಮಾತ್ರಾ ಕಾಲದಲ್ಲಿ ಉಚ್ಚರಿಸುವ ಸ್ವರವೇ ಹ್ರಸ್ವಸ್ವರವೆನಿಸುವುದು.  ಇದೇ ಅಕಾರವನ್ನು ಸ್ವಲ್ಪ ಹೆಚ್ಚು ಎಳೆದರೆ ಆ ಎಂದು ಎರಡು ಮಾತ್ರೆಗಳ ಕಾಲ ತೆಗೆದುಕೊಳ್ಳುವುದು.  ಮೂರು ಮಾತ್ರೆಗಳ ಕಾಲದವರೆಗೂ ಎಳೆದು ಹೇಳಬಹುದು.

[2] ಸಂಬೋಧನೆಯೆಂದರೆ ಕರೆಯುವಿಕೆ (ಅಭಿಮುಖೀಕರಣ).  ಅಣ್ಣಾ  ಎಂದು ಕರೆಯುವಾಗ ಣ ಕಾರದ ಮುಂದಿರುವ ಆ ಕಾರವೇ ಸಂಬೋಧನೆಯ ಸ್ವರ, ಅಣ್ಣ ಬಂದ ಅಣ್ಣಾ ಬಾ ಎಂಬಲ್ಲಿ, ಮೊದಲನೆಯ ಅಣ್ಣ ಎಂಬಲ್ಲಿಯ ಣ ಕಾರದ ಮುಂದಿರುವ ಅಕಾರ ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಿದ ಹ್ರಸ್ವವಾದರೆ, ಅಣ್ಣಾ ಎಂಬಲ್ಲಿಯ ಣಕಾರದ ಮುಂದಿರುವ ಆಕಾರ ಮೂರುಮಾತ್ರೆಯ ಸ್ವರ.  ಆ ಸ್ವರಗಳ ಕೆಳಗಡೆ (೩) ಎಂದು ಬರೆದಿರುವುದು ಪ್ಲುತಸ್ವರವೆಂಬ ಗುರುತಿಗಾಗಿ ಮಾತ್ರ.

[3] ಹ್ರಸ್ವ ದೀರ್ಘ ಪ್ಲುತಗಳಿಗೆ ಒಂದು ಸೊಗಸಾದ ಉದಾಹರಣೆ ಕೊಡಬಹುದು.  ಕು೧ ಕೂ೨ ಕೂ೩…… ಎಂದು ಕೋಳಿ ಕೂಗಿದುದನ್ನು ನಾವು ಹೀಗೆ ಕೂಗಿತೆನ್ನುತ್ತೇವೆ.  ೧ನೆಯ ಕಕಾರದ ಮುಂದಿರುವ ಉ ಕಾರ ಹ್ರಸ್ವವಾದರೆ, ಎರಡನೆಯ ಕಕಾರದ ಮುಂದಿರುವ ಉಕಾರವೇ ದೀರ್ಘ, ಮೂರನೆಯ ಕಕಾರದ ಮುಂದಿರುವ ಉ ಕಾರವೇ ಪ್ಲುತ.  ಇವು ಕ್ರಮವಾಗಿ ಒಂದು ಮಾತ್ರೆ, ಎರಡು ಮಾತ್ರೆ, ಮೂರು ಮಾತ್ರೆಗಳ ಕಾಲದಲ್ಲಿ ಉಚ್ಚರಿಸುವ ಸ್ವರಗಳು.