ನಾವು ಮಾತನಾಡುವ ಮಾತುಗಳೆಲ್ಲ ವಾಕ್ಯವಾಕ್ಯಗಳಾಗಿರುತ್ತವೆ. ವಾಕ್ಯಗಳು ಪದಗಳಿಂದ ಕೂಡಿರುತ್ತವೆ.  ಪದಗಳು ಅಕ್ಷರಗಳಿಂದ ಕೂಡಿರುತ್ತವೆ.

“ನಾನು ಪಾಠಶಾಲೆಗೆ ಹೋಗಿ ಬಂದೆನು.”  ಈ ವಾಕ್ಯದಲ್ಲಿ ‘ನಾನು’, ‘ಪಾಠಶಾಲೆಗೆ, `ಹೋಗಿ, ‘ಬಂದೆನು – ಹೀಗೆ ನಾಲ್ಕು ಪದಗಳಿವೆ.  ಒಂದೊಂದು ಪದದಲ್ಲೂ ಅನೇಕ ಅಕ್ಷರಗಳಿವೆ.  ‘ನಾನು ಎಂಬಲ್ಲಿ ನ್ ಆ ನ್ ಉ ಎಂಬ ಬೇರೆ ಬೇರೆ ಅಕ್ಷರಗಳಿವೆ.  ನಾವು ಕನ್ನಡ ಭಾಷೆಯನ್ನು ಮಾತಾಡುವಾಗ ಇಂಥ ೫೦ ಅಕ್ಷರಗಳನ್ನು ಬಳಸುತ್ತೇವೆ.  ಕನ್ನಡದ ಈ ೫೦ ಅಕ್ಷರಗಳ ಮಾಲೆಗೇ ವರ್ಣಮಾಲೆ ಅಥವಾ ‘ಅಕ್ಷರಮಾಲೆ’ ಎನ್ನುತ್ತೇವೆ.

ಪಾಠಶಾಲೆ ಎಂಬ ಪದದಲ್ಲಿ ಎಷ್ಟು ಅಕ್ಷರಗಳಿವೆ ಎಂಬುದನ್ನು ಈಗ ನೋಡೋಣ.  ಪ್‌ಆ, ಠ್‌ಅ, ಶ್‌ಆ, ಲ್‌ಎ_ ಹೀಗೆ ಎಂಟು ಅಕ್ಷರಗಳು ಈ ಪದದಲ್ಲಿ ಇದ್ದ ಹಾಗಾಯಿತು.  ಪ್, ಠ್, ಶ್, ಲ್_ ಹೀಗೆ ಈ ನಾಲ್ಕು ಅಕ್ಷರಗಳನ್ನು ಅವುಗಳ ಮುಂದೆ ಇರುವ , , , ಎಂಬ ಈ ನಾಲ್ಕು ಅಕ್ಷರಗಳನ್ನು ಉಚ್ಚಾರ ಮಾಡಿದಂತೆ ಸುಲಭವಾಗಿ ಉಚ್ಚಾರ ಮಾಡಲಾಗುವುದಿಲ್ಲ.  ಇವುಗಳನ್ನು ಉಚ್ಚಾರ ಮಾಡಲು ಮುಂದೆ ಆ ಇ ಏ_ ಇತ್ಯಾದಿ ಸ್ವರಗಳು ಬೇಕೇ ಬೇಕು.  ಅಥವಾ ಹಿಂದಾದರೂ ಸ್ವರವಿರಬೇಕು.  ಹೇಗೆಂದರೆ ಪ್ ಇದರ ಹಿಂದೆ ಸ್ವರವಿದ್ದರೆ ಆಪ್ ಎನ್ನಬಹುದು.  ಮುಂದೆ ಇದ್ದರೆ ಎನ್ನಬಹುದು, ಅದಿಲ್ಲದೆ ಪ್ ಠ್ ಶ್ ಲ್ ಹೀಗೆ ಬರೆದರೆ ಶಬ್ದವೂ ಆಗುವುದಿಲ್ಲ,  ಉಚ್ಚಾರ ಮಾಡಲೂ ಆಗುವುದಿಲ್ಲ.  , , , – ಇಂಥ ಅಕ್ಷರಗಳನ್ನಾದರೋ ಸ್ವತಂತ್ರವಾಗಿ ಉಚ್ಚಾರ ಮಾಡಬಹುದು.  ಆದ್ದರಿಂದ_

() ಸ್ವತಂತ್ರವಾಗಿ ಉಚ್ಚಾರಮಾಡಲಾಗುವ ಅಕ್ಷರಗಳನ್ನು ಸ್ವರಗಳೆಂದು ಕರೆಯುತ್ತೇವೆ.

() ಸ್ವರಗಳ ಸಹಾಯದಿಂದ ಮಾತ್ರ ಉಚ್ಚಾರಮಾಡಲಾಗುವ ಅಕ್ಷರಗಳನ್ನು ವ್ಯಂಜನಗಳೆಂದು ಕರೆಯುತ್ತೇವೆ.

ಈ ಸ್ವರ ವ್ಯಂಜನಗಳಲ್ಲದೆ ಇನ್ನೊಂದು ಬಗೆಯ ಅಕ್ಷರಗಳಿವೆ.  ಅವುಗಳನ್ನು ನೋಡಿರಿ-

ರಂಗ ಎಂಬಲ್ಲಿ ರ್ ಅ ೦ ಗ್ ಅ – ಇಷ್ಟು ಅಕ್ಷರಗಳಿವೆ.  ಇಲ್ಲಿ ಅಕಾರದ ಮುಂದೆ ಸೊನ್ನೆಯೊಂದಿದೆ. ಆದರೆ ಅದು ಗಣಿತಪಾಠದಲ್ಲಿ ಬರುವ ಸೊನ್ನೆಯಲ್ಲ.  ಅದಕ್ಕೆ ಭಾಷೆಯಲ್ಲಿ ಅನುಸ್ವಾರ ಎನ್ನುತ್ತೇವೆ, ಇದರ ಹಾಗೆಯೇ ದುಃಖ ಎಂಬ ಶಬ್ದದಲ್ಲಿ ದ್ ಉ ಃ ಖ್ ಅ ಎಂಬ ಅಕ್ಷರಗಳಿವೆಯಷ್ಟೆ.  ಉಕಾರದ ಮುಂದೆ ಒಂದರ ಮೇಲೊಂದು ಸೊನ್ನೆಗಳನ್ನು  ಃ   ಹೀಗೆ ಬರೆದಿರುವ ಅಕ್ಷರವೇ ವಿಸರ್ಗ ಎಂಬ ಹೆಸರಿನದು. ಂ ಹೀಗೆ ಬರೆದಿರುವ ಅನುಸ್ವಾರವನ್ನೂ ಃ ಹೀಗೆ ಬರೆದಿರುವ ವಿಸರ್ಗವನ್ನೂ ಯೋಗವಾಹಗಳೆಂದು ಕರೆಯುತ್ತೇವೆ.

ಯೋಗವಾಹ (ಂ, ಃ) ಗಳನ್ನು ಪ್ರತ್ಯೇಕವಾಗಿ (ಸ್ವತಃ) ಉಚ್ಚಾರ ಮಾಡಲಾಗುವುದಿಲ್ಲ.  ಇನ್ನೊಂದು ಅಕ್ಷರದ ಸಂಬಂಧವನ್ನು ಇವು ಹೊಂದಿದಾಗಲೇ ಉಚ್ಚಾರ ಮಾಡಲು ಬರುತ್ತವೆ.  ಯೋಗ ಎಂದರೆ ಸಂಬಂಧವನ್ನು, ವಾಹ ಎಂದರೆ ಹೊಂದಿದ, ಎಂದು ಅರ್ಥ.  ಆದ್ದರಿಂದ ಒಂದು ಅಕ್ಷರದ ಸಂಬಂಧವನ್ನು ಹೊಂದಿದ ಮೇಲೆಯೇ ಉಚ್ಚಾರ ಮಾಡಲು ಬರುವ ಇವಕ್ಕೆ ಯೋಗವಾಹಗಳೆಂಬ ಹೆಸರು ಬಂದಿದೆ.

ಮುಖ್ಯವಾಗಿ ಇವು ಸ್ವರದ ಸಂಬಂಧ ಪಡೆದ ಮೇಲೆ ಎಂದರೆ ಸ್ವರಾಕ್ಷರಗಳ ಮುಂದೆ ಬಂದಾಗ ಉಚ್ಚಾರವಾಗುತ್ತವೆ.  ಅಂ, ಇಂ, ಎಂ, ಒಂ, ಓಂ, ಅಃ, ಇಃ, ಉಃ,__ ಹೀಗೆ ಇವನ್ನು ಸ್ವರದ ಸಂಬಂಧದಿಂದಲೇ ಉಚ್ಚರಿಸಬಹುದಲ್ಲದೆ, ಅದಿಲ್ಲದೆಯೇ ಂ   ಃ   ಹೀಗೆ ಯಾವ ಅಕ್ಷರ ಸಂಬಂಧವಿಲ್ಲದೆ ಬರೆದರೆ, ಉಚ್ಚಾರಮಾಡಲು ಬರುವುದೇ ಇಲ್ಲ.

[1] ಆದ್ದರಿಂದ

() ಸ್ವರಗಳ ಮುಂದೆ ಬರೆದು ಉಚ್ಚರಿಸಲಾಗುವ ಅನುಸ್ವಾರ (), ವಿಸರ್ಗ () ಗಳಿಗೆ ಯೋಗವಾಹಗಳು ಎಂದು ಹೆಸರು.

ಮೇಲೆ ವಿವರಿಸಿದಂತೆ ಅಕ್ಷರಗಳನ್ನು () ಸ್ವರಗಳು, () ವ್ಯಂಜನಗಳು, () ಯೋಗವಾಹಗಳು_ಎಂದು ಮೂರು ಭಾಗ ಮಾಡಬಹುದು.  ಹಾಗಾದರೆ ಅವು ಯಾವುವು? ಎಂಬುದನ್ನು ಕ್ರಮವಾಗಿ ತಿಳಿಯೋಣ.

() ಸ್ವರಗಳು

ಅ ಆ ಇ ಈ ಉ ಊ ಋ ೠ[2] ಎ ಏ ಐ ಒ ಓ ಔ

ಎಂದು ಒಟ್ಟು ಸ್ವರಗಳು ಹದಿನಾಲ್ಕು (೧೪)

() ವ್ಯಂಜನಗಳು

ಕ್

ಚ್

ಟ್

ತ್

ಪ್

ಖ್

ಛ್

ಠ್

ಥ್

ಫ್

ಗ್

ಜ್

ಡ್

ದ್

ಬ್

ಘ್

ಝ್

ಢ್

ಧ್

ಭ್

ಣ್

ನ್

ಮ್

ಕವರ್ಗ  – ೫

ಚವರ್ಗ  – ೫

ಟವರ್ಗ  – ೫

ತವರ್ಗ  – ೫

ಪವರ್ಗ  – ೫

ಯ್   ರ್   ಲ್   ವ್    ಶ್   ಷ್   ಸ್   ಹ್   ಳ್ – ೯

() ಯೋಗವಾಹಗಳು*

ಅನುಸ್ವಾರ (ಂ) ವಿಸರ್ಗ (ಃ) – ೨

(೪) ೧೪ ಸ್ವರಗಳು, ೩೪ ವ್ಯಂಜನಗಳು, ೨ ಯೋಗವಾಹಗಳು; ಒಟ್ಟು ೫೦ ಅಕ್ಷರಗಳು ಕನ್ನಡ ಭಾಷೆಯಲ್ಲಿವೆ.  ಇವಕ್ಕೆ ಕನ್ನಡ ವರ್ಣಮಾಲೆ ಎನ್ನುವರು.


[1] ಅನುಸ್ವಾರ, ವಿಸರ್ಗಗಳನ್ನು ವ್ಯಂಜನಾಕ್ಷರಗಳ ಮುಂದೆಯೂ ಗ್ಂ, ರ್ಂ ಹೀಗೆಯೂ ಬರೆದು ಉಚ್ಚರಿಸಬಹುದು.  ಇಂಥ ಉಚ್ಚಾರ ರೂಢಿಯಲ್ಲಿಲ್ಲ.  ವೇದ, ಉಪನಿಷತ್ತುಗಳಲ್ಲಿ ಮಾತ್ರ ಉಂಟು.

[2] ೠ ಎಂಬ ಸ್ವರದಿಂದ ಕೂಡಿದ ಶಬ್ದಗಳು ಕನ್ನಡದ ಮಾತುಗಳಲ್ಲಿ ಬರುವುದೇ ಇಲ್ಲವಾದ್ದರಿಂದ ಇದನ್ನು ಕೈಬಿಟ್ಟರೂ ಹಾನಿಯಿಲ್ಲ.  ಆಗ ಒಟ್ಟು ಅಕ್ಷರಗಳ ಸಂಖ್ಯೆ ೫೦ ಕ್ಕೆ ಪ್ರತಿಯಾಗಿ ೪೯ ಆಗುವುವು.  ಆದರೆ ೫೦ ಅಕ್ಷರಗಳೆಂದು ೠಕಾರವನ್ನು ವರ್ಣಮಾಲೆಯಲ್ಲಿ ಸೇರಿಸಿ ಹೇಳುವುದು ವಾಡಿಕೆ.

* ಯೋಗ ಎಂಬುದು ಯುಜ್ ಅಂದರೆ ಕೂಡು ಎಂದೂ, ವಾಹ ಇದು ವಹ್ ಎಂಬ ಧಾತುವಿನಿಂದ ಹುಟ್ಟಿ ಕೂಡಿಹೋಗು ಎಂಬ ಅರ್ಥವನ್ನೂ ಕೊಡುತ್ತವೆ.  ಆದ್ದರಿಂದ ಯೋಗವಾಹವೆಂದರೆ, ಯಾವುದಾದರೊಂದು ಅಕ್ಷರ ಸಂಬಂಧವಿಲ್ಲದೆ ಉಚ್ಚರಿಸಲಾಗದ ಅಕ್ಷರವೆಂದು ತಿಳಿಯಬೇಕು.