ಇದುವರೆಗೆ ವ್ಯಾಕರಣವನ್ನು ಓದುವವರು ತಿಳಿಯಬೇಕಾದ ಕೆಲವು ಸಂಜ್ಞೆಗಳನ್ನು ವಿವರಿಸಲಾಯಿತು. ಇದರಲ್ಲಿ ಸ್ವರ, ವ್ಯಂಜನ, ಯೋಗವಾಹ ಎಂಬ ಐವತ್ತು ಅಕ್ಷರಗಳ ಬಗೆಗೂ, ಸ್ವರಗಳಲ್ಲಿ ಹ್ರಸ್ವ, ದೀರ್ಘ, ಪ್ಲುತಗಳ ಬಗೆಗೂ, ವ್ಯಂಜನಗಳಲ್ಲಿ ವರ್ಗೀಯ, ಅವರ್ಗೀಯ ವ್ಯಂಜನಗಳೆಂದರೇನು? ವರ್ಗೀಯ ವ್ಯಂಜನಗಳಲ್ಲಿ ಅಲ್ಪಪ್ರಾಣ, ಮಹಾಪ್ರಾಣ, ಅನುನಾಸಿಕಗಳೆಂದರಾವುವು? ಗುಣಿತಾಕ್ಷರ, ಸಜಾತೀಯ ವಿಜಾತೀಯ ಸಂಯುಕ್ತಾಕ್ಷರಗಳೆಂದರೇನು? ಯಾವ ಯಾವ ಅಕ್ಷರಗಳು ಎಲ್ಲೆಲ್ಲಿ ಹುಟ್ಟುತ್ತವೆ? ಇತ್ಯಾದಿ ಅಂಶಗಳ ಬಗೆಗೂ ವಿವರವಾಗಿ ಹೇಳಲಾಯಿತು. ಈ ಎಲ್ಲಾ ಅಂಶಗಳನ್ನೂ ಮುಂದಿನ ಪುಟದಲ್ಲಿ ಸೂಚಿಸಿರುವ ಗೆರೆಗಳ ಸಹಾಯದಿಂದ ಸಂಕ್ಷೇಪವಾಗಿ ತಿಳಿಯ ಬಹುದು.

ಕನ್ನಡ ವರ್ಣಮಾಲೆ
೫೦ ಅಕ್ಷರ

ಸ್ವರಗಳು೧೪

ವ್ಯಂಜನಗಳು೩೪ ಯೋಗವಾಹ
ಹ್ರಸ್ವಸ್ವರ
(1 ಮಾತ್ರಾ ಕಾಲ)
ದೀರ್ಘಸ್ವರ
(2 ಮಾತ್ರಾ ಕಾಲ)
ಪ್ಲುತ ಸ್ವರ
(3 ಮಾತ್ರಾ ಕಾಲ)
  ಅನುಸ್ವಾರ (ಂ) ವಿಸರ್ಗ (ಃ)

ವ್ಯಂಜನಗಳು೩೪

ವರ್ಗೀಯ ವ್ಯಂಜನ-೨೫   ಅವರ್ಗೀಯ ವ್ಯಂಜನ-೯
(ಕ ಕಾರದಿಂದ ಮ ಕಾರದವರೆಗೆ) (ಯ ಕಾರದಿಂದ ಳ ಕಾರದವರೆಗೆ)
ಅಲ್ಪಪ್ರಾಣ ಮಹಾಪ್ರಾಣ ಅನುನಾಸಿಕ

 

(ಒಟ್ಟುಸ್ವರ, ವ್ಯಂಜನ, ಯೋಗವಾಹಗಳು ಸೇರಿ ೫೦ ಅಕ್ಷರಗಳು)

* * *