(೧) ’ಅಕ್ಕ’ ಎಂಬ ಶಬ್ದದಲ್ಲಿ ಯಾವ ಯಾವ ಅಕ್ಷರಗಳಿವೆ ಎಂಬುದನ್ನು ನೋಡಿರಿ.  ಅ + ಕ್ + ಕ್ + ಅ – ಹೀಗೆ ನಾಲ್ಕು ಅಕ್ಷರಗಳು ಕೂಡಿ ’ಅಕ್ಕ’ ಶಬ್ದವಾಗಿದೆಯಲ್ಲವೆ? ಇದರ ಹಾಗೆಯೇ ಅಣ್ಣ ಎಂಬಲ್ಲಿ, ಅ + ಣ್ + ಣ್ + ಅ ಎಂಬ ನಾಲ್ಕಕ್ಷರಗಳು ಸೇರಿ ಅಣ್ಣ ಶಬ್ದವಾಗಿದೆ.  ಕ್ಕ ಎಂದರೆ = ಕ್ + ಕ್ + ಅ; ಣ್ಣ ಎಂದರೆ = ಣ್ + ಣ್ + ಅ.  ಇಲ್ಲಿ ಎರಡೆರಡು ವ್ಯಂಜನ ಸೇರಿಕೊಂಡು ಒಂದಕ್ಷರವಾಗಿದೆ.  ಈ ಎರಡೂ ವ್ಯಂಜನಗಳು ಒಂದೇ ಜಾತಿಯವು ಎಂದರೆ ಸಜಾತೀಯ ವ್ಯಂಜನಗಳು.

(೧೩) ಒಂದೇ ಜಾತಿಯ (ಸಜಾತೀಯ) ಎರಡು ವ್ಯಂಜನಗಳು ಸೇರಿ ಆಗುವ ಅಕ್ಷರವು ಸಜಾತೀಯ ಸಂಯುಕ್ತಾಕ್ಷರವೆನಿಸುವುದು

[1]. ಇದಕ್ಕೆ ದ್ವಿತ್ವವೆಂದೂ ಹೆಸರು[2].

ಉದಾಹರಣೆಗೆ:-

ಅಕ್ಕ    (ಕ್ + ಕ್)

ಅಣ್ಣ   (ಣ್ + ಣ್)

ಅಜ್ಜ   (ಜ್ + ಜ್)

ಕೆಟ್ಟು   (ಟ್ + ಟ್)

ಹುತ್ತ   (ತ್ + ತ್)

(೨) ’ಭಕ್ತ’ ಎಂಬ ಶಬ್ದದಲ್ಲಿ ಭ್++ಕ್+ತ್+ಎಂಬ ಐದು ಅಕ್ಷರಗಳಿವೆ.  ’ಅಷ್ಟು’ ಎಂಬ ಶಬ್ದದಲ್ಲಿ +ಷ್+ಟ್+ಎಂಬ ನಾಲ್ಕು ಅಕ್ಷರಗಳಿವೆ.  ’ಸ್ತ್ರೀ’ ಎಂಬ ಶಬ್ದದಲ್ಲಿ ’ಸ್+ತ್+ರ್+ ಎಂಬ ನಾಲ್ಕು ಅಕ್ಷರಗಳಿವೆ.  ಮೇಲಿನ ಈ ಉದಾಹರಣೆಗಳಲ್ಲಿ ಎರಡೆರಡು ಮೂರುಮೂರು ವ್ಯಂಜನಗಳು ಸೇರಿ ಒಂದೊಂದು ಅಕ್ಷರಗಳಾಗಿವೆ.  ಆದರೆ ಹೀಗೆ ಇಲ್ಲಿ ಸೇರಿರುವ ವ್ಯಂಜನಗಳು ಬೇರೆಬೇರೆ ಜಾತಿಯವು, ಎಂದರೆ ವಿಜಾತೀಯ ವ್ಯಂಜನಗಳು.

’ಷ್ಟು’ ಎಂಬುದು ಷ್+ಟ್ ಎಂಬ ವ್ಯಂಜನಗಳಿಂದಲೂ, ’ಕ್ತ’ ಎಂಬುದು ಕ್+ತ್ ಎಂಬ ವ್ಯಂಜನಗಳಿಂದಲೂ, ’ಸ್ತ್ರೀ’ ಎಂಬುದು ಸ್+ತ್+ರ್ ಎಂಬ ವ್ಯಂಜನಗಳಿಂದಲೂ ಸೇರಿ ಆಗಿರುವ ಸಂಯುಕ್ತಾಕ್ಷರ (ಒತ್ತಕ್ಷರ)ವಾಗಿದೆ.

(೧೪) ಬೇರೆಬೇರೆ ಜಾತಿಯ ಎರಡು ಅಥವಾ ಹೆಚ್ಚು ವ್ಯಂಜನಗಳು ಸೇರಿ ಆಗುವ ಅಕ್ಷರಕ್ಕೆ ವಿಜಾತೀಯ ಸಂಯುಕ್ತಾಕ್ಷರ ಎನ್ನುತ್ತಾರೆ.

ಉದಾಹರಣೆಗೆ:-

ವಸ್ತ್ರ (ಸ್ + ತ್ + ರ್)
ಅಕ್ಷರ (ಕ್ + ಷ್)
ಜ್ಞಾನ (ಜ್ + ಞ)
ಸ್ವಾರ್ಥ (ಸ್ + ವ್; ರ್ + ಥ್)
ಶಕ್ತಿ (ಕ್ + ತ್)

[1] ಸಂಯುಕ್ತ ಎಂದರೆ ಚೆನ್ನಾಗಿ ಸೇರಿಸಿದ ಎಂದು ಅರ್ಥ.  ಎರಡು ವ್ಯಂಜನಗಳು ಮಧ್ಯದಲ್ಲಿ ಯಾವ ಕಾಲ ವಿಳಂಬವೂ ಇಲ್ಲದೆ ಸೇರುವುದೇ ಸಂಯುಕ್ತಾಕ್ಷರವೆನಿಸುವುದು.  (ಸಂ=ಚೆನ್ನಾಗಿ), (ಯುಕ್ತ=ಸೇರಿದ)

[2] ದ್ವಿತ್ವ ಎಂದು ಒಂದೇ ಜಾತಿಯ ಎರಡು ವ್ಯಂಜನಗಳು ಸೇರುವುದಕ್ಕೆ ಮಾತ್ರ ಕರೆಯಲಾಗುವುದು.  ಬೇರೆಬೇರೆ ಜಾತಿಯ ವ್ಯಂಜನ ಸೇರಿದರೆ ದ್ವಿತ್ವ ಎನಿಸಿಕೊಳ್ಳುವುದಿಲ್ಲ.