(೧) ರಾಮಾಯಣ, ದೇವಾಸುರ, ಅಮರಾರಿ, ಪರಬಲಾಂತಕ, ಭಕ್ಷ್ಯಾದಿ, ವಧೂಪೇತ, ಹರೀಶ್ವರ, ಯತೀಶ್ವರ, ಮುನೀಶ್ವರ-ಈ ಸವರ್ಣದೀರ್ಘಸಂಧಿಗಳನ್ನು ಬಿಡಿಸಿ ಬರೆಯಿರಿ.
(೨) ದೇವೇಂದ್ರ, ಸುರೇಶ, ಮಹೇಶ, ಲೋಕೇಶ, ದೇವೇಶ, ಸೂರ್ಯೋದಯ, ಚಂದ್ರೋದಯ, ಭಾಗ್ಯೋದಯ, ದೇವೋನ್ಮಾದ, ಭೋಗೋನ್ಮಾದ, ದೇವರ್ಷಿ, ಮಹರ್ಷಿ, ವಸಂತರ್ತು, ರಾಜರ್ಷಿ-ಈ ಗುಣಸಂಧಿಗಳನ್ನು ಬಿಡಿಸಿ ಬರೆಯಿರಿ.
(೩) ಲೋಕೈಕವೀರ, ಅತ್ಯಂತ, ಗತ್ಯಂತರ, ಮನ್ವಂತರ, ಏಕೈಕ, ದಿಗಂತ, ಸದಾನಂದ, ಸನ್ಮಾನ-ಈ ಶಬ್ದಗಳಲ್ಲಿ ವೃದ್ಧಿ, ಯಣ್, ಜಶ್ತ್ವ, ಅನುನಾಸಿಕ ಸಂಧಿಗಳಾದ ಉದಾಹರಣೆಗಳಿವೆ. ಅವುಗಳನ್ನು ಗುರುತಿಸಿ.
(೪) ಬಿಟ್ಟಿರುವ ಸ್ಥಳಗಳನ್ನು ಪೂರ್ಣಗೊಳಿಸಿರಿ:-
(i) ಸವರ್ಣಸ್ವರಗಳು ಒಂದರ ಮುಂದೆ ಒಂದು ಬಂದಾಗ ಅವೆರಡರ ಸ್ಥಾನದಲ್ಲಿ ___________ ಸ್ವರವು ಆದೇಶವಾಗಿ ಬರುವುದು.
(ii) ಗುಣಸಂಧಿಯಲ್ಲಿ ಅ ಆ ಕಾರಗಳಿಗೆ ಇ ಈ ಕಾರಗಳು ಪರವಾದರೆ _________ ಕಾರವೂ, ______ ಕಾರಗಳು ಪರವಾದರೆ ಓ ಕಾರವೂ, ಋ ಕಾರವು ಪರವಾದರೆ ______ ಕಾರವೂ ಆದೇಶವಾಗಿ ಬರುವುವು.
(iii) ಅ ಆ ಕಾರಗಳಿಗೆ ಏ ಐ ಕಾರಗಳು ಪರವಾದರೆ _____ ಕಾರವು ಆದೇಶವಾಗಿ ಬರುವುದು. ಇದಕ್ಕೆ ________ ಸಂಧಿಯೆನ್ನುವರು.
(iv) ಅ ಆ ಕಾರಗಳಿಗೆ ಓ ಔ ಕಾರಗಳು ಪರವಾಗಿ ಕಾರವು ಆದೇಶವಾಗಿ ಬರುವುದಕ್ಕೆ ಸಂಧಿಯೆನ್ನುವರು.
(೫) ಕೆಳಗೆ ಕೆಲವು ಸಂಧಿಗಳನ್ನು ಬಿಡಿಸಿ ಬರೆದಿದೆ. ಅದನ್ನು ಕೂಡಿಸಿ ಬರೆದು ಮುಂದೆ ಆವರಣದಲ್ಲಿ ಕೊಟ್ಟಿರುವ ಒಂದು ಸರಿಯುತ್ತರವನ್ನು ಹೇಳಿರಿ:-
ಅತಿ + ಆಸೆ ______________ (ಸವರ್ಣದೀರ್ಘ, ಜಶ್ತ್ವ, ಯಣ್)
ಸತ್ಯ + ಅರ್ಥ _____________ (ಯಣ್, ಸವರ್ಣದೀರ್ಘ, ಗುಣ)
ಚಿತ್ + ಆನಂದ ____________ (ಜಶ್ತ್ವ, ಅನುನಾಸಿಕ, ಸವರ್ಣದೀರ್ಘ)
(೬) ಈ ಕೆಳಗಿನ ವಾಕ್ಯಗಳಲ್ಲಿ ತಪ್ಪುಗಳಿವೆ. ಆ ತಪ್ಪುಗಳನ್ನು ಸರಿಪಡಿಸಿರಿ:-
(i) ಶಬ್ದಾಂತದಲ್ಲಿರುವ ಇಕಾರಕ್ಕೆ ಸವರ್ಣವಲ್ಲದ ಸ್ವರ ಪರವಾದರೆ ವಕಾರವು ಆದೇಶವಾಗಿ ಬರುವುದು.
(ii) ವರ್ಗಪ್ರಥಮ ವರ್ಣಗಳಿಗೆ ಯಾವ ಅನುನಾಸಿಕಾಕ್ಷರವು ಪರವಾದರೂ ಅದೇ ವರ್ಗದ ಮೂರನೆಯ ವರ್ಣವು ಆದೇಶವಾಗಿ ಬರುವುದು.
(iii) ಅ ಆ ಕಾರಗಳಿಗೆ ಏ ಐ ಕಾರಗಳು ಪರವಾಗಿ ಐ ಕಾರವು ಆದೇಶವಾಗಿ ಬರುವುದಕ್ಕೆ ಗುಣಸಂಧಿಯೆನ್ನುವರು.
(iv) ಶಬ್ದಾಂತದಲ್ಲಿರುವ ವರ್ಗ ಪ್ರಥಮ ವರ್ಣಗಳಿಗೆ ಅದೇ ವರ್ಗದ ಮೂರನೆಯ ವರ್ಣ ಆದೇಶವಾಗಿ ಬರುವ ಸಂಧಿಗೆ ಶ್ಚುತ್ವಸಂಧಿಯೆನ್ನುವರು.
(v) ಶಬ್ದಾಂತ್ಯದಲ್ಲಿರುವ ಇ ಉ ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಕ್ರಮವಾಗಿ ಯ, ವ, ರ ವ್ಯಂಜನಗಳು ಆದೇಶವಾಗಿ ಬರುವ ಸಂಧಿಗೆ ಸವರ್ಣದೀರ್ಘಸಂಧಿಯೆನ್ನುವರು.
Leave A Comment