ಇದುವರೆಗೆ ಸಂಸ್ಕೃತ ಸ್ವರಸಂಧಿ ವ್ಯಂಜನಸಂಧಿಗಳ ಬಗೆಗೆ ಹಲವಾರು ವಿಷಯಗಳನ್ನು ತಿಳಿದಿರುವಿರಿ.  ಅದರ ಸಾರಾಂಶವನ್ನು ಈ ಕೆಳಗಿನ ಗೆರೆಗಳಿಂದ ಸೂಚಿಸಿರುವ ರೀತಿಯನ್ನು ನೋಡಿ ನೆನಪಿನಲ್ಲಿಡಿರಿ.

ಸಂಸ್ಕೃತ ಸಂಧಿಗಳು

ಸ್ವರಸಂಧಿಗಳು ವ್ಯಂಜನಸಂಧಿಗಳು
(i) ಸವರ್ಣದೀರ್ಘಸಂಧ
(ದೀರ್ಘಸ್ವರಾದೇಶ)
(i) ಜಶ್ತ್ವಸಂಧಿ
(ಜಬಗಡದ ಆದೇಶ)
(ii) ಗುಣಸಂಧಿ
(ಏ, ಓ, ಅರ್ ಆದೇಶ)
(ii) ಶ್ಚುತ್ವಸಂಧಿ
(ಶಕಾರ ಚವರ್ಗಾದೇಶ)
(iii) ವೃದ್ಧಿಸಂಧಿ
(ಐ, ಔ ಆದೇಶ)
(iii) ಅನುನಾಸಿಕಸಂಧಿ
(ಙ,ಞ,ಣ,ನ,ಮ ಗಳ ಆದೇಶ)
(iv) ಯಣ್‌ಸಂಧಿ
(ಯ, ವ, ರ ಆದೇಶ)