ನಾಮಪ್ರಕೃತಿಗಳು
ಸಹಜನಾಮ ಪ್ರಕೃತಿ ಸಾಧಿತನಾಮ ಪ್ರಕೃತಿ
(i) ವಸ್ತುಗಳ ಹೆಸರು ಹೇಳುವ ವಸ್ತುವಾಚಕಗಳು (i) ಕೃದಂತ
(ii) ವಸ್ತುಗಳ ಗುಣವನ್ನು ಹೇಳುವ ಗುಣವಾಚಕಗಳು (ii) ತದ್ಧಿತಾಂತ
(iii) ಸಂಖ್ಯಾವಾಚಕಗಳು (iii) ಸಮಾಸಗಳು
(iv) ಸಂಖ್ಯೇಯವಾಚಕಗಳು
(v) ಪರಿಮಾಣವಾಚಕಗಳು
(vi) ಪ್ರಕಾರವಾಚಕಗಳು
(vii) ದಿಗ್ವಾಚಕಗಳು
(viii) ಭಾವನಾಮಗಳು
(ix) ಸರ್ವನಾಮಗಳು

ಮೇಲಿನ ಈ ೯ ತರದ ಸಹಜನಾಮ ಪ್ರಕೃತಿಗಳಿಗೂ, ಸಾಧಿತಗಳಾದ ಕೃದಂತ, ತದ್ಧಿತಾಂತ, ಸಮಾಸ ನಾಮಪ್ರಕೃತಿಗಳ ಮೇಲೂ ನಾಮವಿಭಕ್ತಿ ಪ್ರತ್ಯಯಗಳು ಸೇರಿ ನಾಮಪದಗಳೆನಿಸುತ್ತವೆ.  ಇವುಗಳಿಗೆ ಲಿಂಗ ವಚನಗಳೂ ಉಂಟು.

 

ನಾಮಪದಗಳು

ಲಿಂಗ ವಚನ ವಿಭಕ್ತಿಗಳು
(i) ಪುಲ್ಲಿಂಗ (i) ಏಕವಚನ (ಒಂದು ವಸ್ತು) (i) ಪ್ರಥಮಾ (ಉ)
(ii) ಸ್ತ್ರೀಲಿಂಗ (ii) ಬಹುವಚನ (ಒಂದಕ್ಕಿಂತ ಹೆಚ್ಚು ವಸ್ತು) (ii) ದ್ವಿತೀಯಾ (ಅನ್ನು)
(iii) ನಪುಂಸಕಲಿಂಗ (iii) ತೃತೀಯಾ (ಇಂದ)
(iv) ಪುನ್ನಪುಂಸಕಲಿಂಗ (iv) ಚತುರ್ಥೀ (ಗೆ, ಇಗೆ, ಕ್ಕೆ, ಅಕ್ಕೆ)
(v) ಸ್ತ್ರೀನಪುಂಸಕಲಿಂಗ (v) ಪಂಚಮೀ (ದೆಸೆಯಿಂದ)
(vi) ವಾಚ್ಯಲಿಂಗ (ವಿಶೇಷ್ಯಾಧೀನಲಿಂಗ) (vi)     ಷಷ್ಠೀ (ಅ)
(vii) ಸಪ್ತಮೀ (ಅಲ್ಲಿ, ಅಲಿ, ಒಳು, ಎ)
(viii)  ಸಂಬೋಧನಾ (ಆ, ಏ, ಇರಾ, ಈ)

(ಅ) ಮೇಲೆ ಹೇಳಿದ ಎಲ್ಲ ವಿಭಕ್ತಿಪ್ರತ್ಯಯಗಳು ಪ್ರಕೃತಿಗಳ ಮೇಲೆ ಸೇರುವಾಗ ಆಗುವ ರೂಪಾಂತರಗಳು:- ಮುಖ್ಯವಾಗಿ ದ, ವ, ನ, ಇನ, ಅರ ಆಗಮಗಳು ಏಕವಚನದಲ್ಲೂ,

(ಆ) ಬಹುವಚನದಲ್ಲಿ-ಗಳು, ಅರು, ಅರುಗಳು, ಅಂದಿರು, ಅಂದಿರುಗಳು, ಇರು, ವಿರು, ವು, ಅವು, ಕಳು, ವರು-ಇತ್ಯಾದಿಗಳೂ ಬರುತ್ತವೆ.

(ಇ) ಮುಖ್ಯವಾದ ಕೆಲವು ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ ಪ್ರಕೃತಿಗಳು ವಿಭಕ್ತಿಪ್ರತ್ಯಯ ಸೇರಿ ಯಾವ ರೂಪ ಪಡೆಯುತ್ತವೆಂಬ ಬಗೆಗೆ ತಿಳಿದಿದ್ದೀರಿ.

(ಈ) ಪ್ರಯೋಗ ವಿಧಾನದಲ್ಲಿ ಯಾವ ಯಾವ ಅರ್ಥದಲ್ಲಿ ವಿಭಕ್ತಿಪ್ರತ್ಯಯಗಳು ಪ್ರಕೃತಿಯ ಮೇಲೆ ಸೇರುತ್ತವೆಂಬ ಬಗೆಗೆ ತಿಳಿದಿದ್ದೀರಿ.

(ಉ) ವಿಭಕ್ತಿ ಪ್ರತ್ಯಯಗಳು ಪಲ್ಲಟವಾಗಿ ಬೇರೆಬೇರೆ ಅರ್ಥಗಳಲ್ಲಿ ಹೇಗೆ ಸೇರುತ್ತವೆಂಬುದನ್ನು ತಿಳಿದಿದ್ದೀರಿ.