(೧) ಧಾತುವೆಂದರೇನು?

(೨) ಧಾತುಗಳಲ್ಲಿ ಎಷ್ಟು ವಿಧ? ಉದಾಹರಣೆಗಳೊಡನೆ ವಿವರಿಸಿರಿ.

(೩) ಸಂಸ್ಕೃತ ನಾಮ ಪ್ರಕೃತಿಗಳು ಕನ್ನಡದ ಧಾತುಗಳಾಗುವುದು ಹೇಗೆ?

(೪) ಮಾಡುತ್ತಾಳೆ, ಮಾಡಿತು, ನೋಡುವನು, ತಿನ್ನಲಿ, ಹೋಗಾನು, ಕರೆದಾನು – ಈ  ಕ್ರಿಯಾಪದಗಳನ್ನು ಬಿಡಿಸಿ ಬರೆದು ಇವು ಯಾವ ಕಾಲ ಅಥವಾ ಅರ್ಥದ ಕ್ರಿಯಾಪದಗಳೆಂಬುದನ್ನು ತಿಳಿಸಿರಿ.

(೫) ಅವರು ಮನೆಯಲ್ಲಿ ಇಲ್ಲ.  ಇಲ್ಲಿ ಇಲ್ಲ ಎಂಬುದು ಎಂಥ ಪದ?

(೬) ಕ್ರಿಯಾರ್ಥಕಾವ್ಯಯಗಳೆಂದರೇನು? ವಿವರಿಸಿ.

(೭) ಕ್ರಿಯಾಪದ ಎಂದರೇನು?

(೮) ಕಾಲಸೂಚಕ ಪ್ರತ್ಯಯಗಳೆಂದರೇನು? ವಿವರಿಸಿ.

(೯) ಕೆಳಗಿನ ವಾಕ್ಯಗಳಲ್ಲಿ ಬಿಟ್ಟಿರುವ ಸ್ಥಳಗಳಲ್ಲಿ ಸರಿಯಾದ ಪದವನ್ನು ಸೇರಿಸಿರಿ:-

(i) ವರ್ತಮಾನ ಕಾಲದಲ್ಲಿ ಧಾತುವಿಗೂ ಆಖ್ಯಾತ ಪ್ರತ್ಯಯಕ್ಕೂ ಮಧ್ಯದಲ್ಲಿ ಕಾಲ ಸೂಚಕ ಪ್ರತ್ಯಯ ಬರುವುದು.

(ii) ದ ಎಂಬ ಕಾಲಸೂಚಕ ಪ್ರತ್ಯಯವು  ಕಾಲದಲ್ಲಿ  ಗೂ ಕ್ಕೂ ಮಧ್ಯದಲ್ಲಿ ಬರುವುದು.

(iii) ಭವಿಷ್ಯತ್ ಕಾಲದಲ್ಲಿ ಧಾತುವಿಗೂ  ಕ್ಕೂ ಮಧ್ಯದಲ್ಲಿ  ಎಂಬ ಸೂಚಕ ಪ್ರತ್ಯಯ ಬರುವುದು.

(iv) ಮಾಡನು ಎಂಬುದು  ಧಾತುವಿನ  ಅರ್ಥದಲ್ಲಿ ಬರುವ ಪ್ರಥಮ  ಏಕವಚನ ಕ್ರಿಯಾಪದ.

(v) ಮಾಡು ಧಾತುವಿನ ವಿಧ್ಯರ್ಥಕ ಪ್ರಥಮಪುರುಷ ಏಕವಚನದ ರೂಪವು ವಚನದ ರೂಪವಾಗಿದೆ.

(vi) ತಿಳಿದಾನು ಎಂಬುದು  ದಲ್ಲಿ ಬರುವ  ಪುರುಷ ವಚನದ ರೂಪವಾಗಿದೆ.

(vii) ಅಕರ್ಮಕ ಧಾತುಗಳೆಂದರೆ  ನ್ನು ಅಪೇಕ್ಷಿಸದಿರುವಂಥವುಗಳು.

(viii) ಕರ್ಮಪದವನ್ನು ಅಪೇಕ್ಷಿಸುವ ಧಾತುಗಳಿಗೆ  ಧಾತುಗಳೆಂದು ಹೆಸರು.

(೧೦) ಕೆಳಗಿನ ವಾಕ್ಯಗಳಲ್ಲಿ ಬಿಟ್ಟಿರುವ ಸ್ಥಳದಲ್ಲಿ ಮುಂದೆ ಆವರಣದೊಳಗೆ ಕೊಟ್ಟಿರುವ ಒಂದು ಸರಿ ಉತ್ತರವನ್ನು ಹುಡುಕಿ ಬರೆಯಿರಿ.

(i) ಧಾತುಗಳ ಮೇಲೆ  ಪ್ರತ್ಯಯಗಳು ಸೇರಿ ಕ್ರಿಯಾಪದಗಳಾಗುವುವು. (ಆಖ್ಯಾತಪ್ರತ್ಯಯ, ನಾಮವಿಭಕ್ತಿಪ್ರತ್ಯಯ, ತದ್ಧಿತಪ್ರತ್ಯಯ)

(ii) ಕರ್ಮಣಿ ಪ್ರಯೋಗದಲ್ಲಿ ಧಾತುವಿನ ಮುಂದೆ  ಪ್ರತ್ಯಯ ಬರುವುದು. (ಆನೆ-ದ-ವ, ಅಲ್ಪಡು)

(iii) ಸಂಸ್ಕೃತದ ಕೆಲವು ನಾಮಪ್ರಕೃತಿಗಳ ಮೇಲೆ  ಪ್ರತ್ಯಯ ಬಂದು ಕನ್ನಡದ ಧಾತುಗಳಾಗುವುವು.   (ಉತ್ತ, ಅಲ್ಪಡು, ಇಸು)

(iv) ಭೂತಕಾಲದಲ್ಲಿ ಧಾತುವಿಗೂ ಆಖ್ಯಾತ ಪ್ರತ್ಯಯಕ್ಕೂ ಮಧ್ಯದಲ್ಲಿ ಬರುವ ದ ಪ್ರತ್ಯಯವನ್ನು  ಎನ್ನುವರು.  (ಆಖ್ಯಾತಪ್ರತ್ಯಯ, ಭಾವಾರ್ಥಕ ಪ್ರತ್ಯಯ, ಕಾಲಸೂಚಕ ಪ್ರತ್ಯಯ)

(v) ಉತ್ತ ಎಂಬ ಕಾಲಸೂಚಕ ಪ್ರತ್ಯಯವು  ಕಾಲದಲ್ಲಿ ಧಾತುವಿಗೂ ಆಖ್ಯಾತ ಪ್ರತ್ಯಯಕ್ಕೂ ಮಧ್ಯದಲ್ಲಿ ಬರುವುದು. (ಭೂತ, ಭವಿಷ್ಯತ್, ವರ್ತಮಾನ)

(vi) ಹಿಂದೆ ನಡೆದ ಕ್ರಿಯೆಯನ್ನು ಸೂಚಿಸುವ ಕಾಲವನ್ನು  ಎನ್ನುವರು. (ಭೂತಕಾಲ, ವರ್ತಮಾನಕಾಲ, ಭವಿಷ್ಯತ್‌ಕಾಲ)

(vii) ಮಾಡನು ಎಂಬ ಕ್ರಿಯಾಪದವು  ಅರ್ಥವನ್ನು ಸೂಚಿಸುವುದು. (ಸಂಭಾವನಾರ್ಥ, ವಿಧ್ಯರ್ಥ, ನಿಷೇಧಾರ್ಥ)

(viii) ಕರ್ಮಣಿ ಪ್ರಯೋಗದಲ್ಲಿ ಕರ್ತೃಪದವು  ವಿಭಕ್ತ್ಯಂತವಾಗಿರುತ್ತದೆ. (ಪ್ರಥಮಾ, ದ್ವಿತೀಯಾ, ತೃತೀಯಾ)

(ix) ಪ್ರೇರಣಾರ್ಥದಲ್ಲಿ ಧಾತುಗಳ ಮುಂದೆ  ಪ್ರತ್ಯಯ ಬರುವುದು. (ಉತ್ತ, ದ, ವ, ಇಸು)

(೧೧) ಕೆಳಗಿನ ವಾಕ್ಯಗಳಲ್ಲಿ ತಪ್ಪುಗಳಿವೆ.  ಅವುಗಳನ್ನು ಸರಿಪಡಿಸಿರಿ:

(i) ಬರುತ್ತಾನೆ ಎಂಬ ಕ್ರಿಯಾಪದವು ಭವಿಷ್ಯತ್ಕಾಲ ಮಧ್ಯಮಪುರುಷ ಏಕವಚನ.

(ii) ಬಂದನು ಎಂಬ ಕ್ರಿಯಾಪದವು ಭೂತಕಾಲದ ಉತ್ತಮಪುರುಷ ಏಕವಚನ.

(iii) ಧಾತುಗಳಿಗೆ ನಾಮವಿಭಕ್ತಿಪ್ರತ್ಯಯ ಸೇರಿ ಕ್ರಿಯಾಪದಗಳೆನಿಸುವುವು.

(iv) ಇರು-ಮಲಗು ಧಾತುಗಳು ಸಕರ್ಮಕಗಳು.

(v) ಸಕರ್ಮಕ ಧಾತುಗಳೆಂದರೆ ಕರ್ಮಪದವನ್ನು ಅಪೇಕ್ಷಿಸದಿರುವಂಥ ಧಾತುಗಳು.

(vi) ರಾಮನು ಮನೆಯನ್ನು ಕಟ್ಟಿದನು ಎಂಬ ವಾಕ್ಯದಲ್ಲಿ ಮನೆಯನ್ನು ಎಂಬುದು ಕರ್ತೃಪದವಾಗಿದೆ.

(vii) ಕರ್ತರಿ ಪ್ರಯೋಗದಲ್ಲಿ ಕರ್ಮಪದವು ಪ್ರಥಮಾವಿಭಕ್ತ್ಯಂತವಾಗಿರುತ್ತದೆ.

(viii) ಭೂತಕಾಲದಲ್ಲಿ ಧಾತುವಿಗೂ ಆಖ್ಯಾತ ಪ್ರತ್ಯಯಕ್ಕೂ ಮಧ್ಯದಲ್ಲಿ ಉತ್ತ ಎಂಬ ಕಾಲಸೂಚಕ ಪ್ರತ್ಯಯ ಬರುವುದು.

(ix) ಮಾಡಲ್ಪಡುತ್ತದೆ ಎಂಬ ಕ್ರಿಯಾಪದವು ಕರ್ತರಿಪ್ರಯೋಗದ ಕ್ರಿಯಾಪದವಾಗಿದೆ.

(x) ಕ್ರಿಯೆಯು ನಡೆಯದಿರುವಿಕೆಯನ್ನು ಸೂಚಿಸುವ ಕ್ರಿಯಾಪದವು ಸಂಭಾವನಾರ್ಥಕ ಕ್ರಿಯಾಪದವೆನಿಸಿದೆ.

(೧೨) ಮಾಡು ಧಾತುವಿನ ವರ್ತಮಾನಕಾಲ-ಪ್ರಥಮಪುರುಷ-ಪುಲ್ಲಿಂಗ, ಬಹುವಚನ ರೂಪ ಹೇಳಿರಿ.

(೧೩) ತಿನ್ನುವನು ಈ ಕ್ರಿಯಾಪದದ-ಧಾತು, ಕಾಲ, ಪುರುಷ, ಲಿಂಗವಚನಗಳಾವುವು?