ಕ್ರಿಯಾಪ್ರಕೃತಿ (ಧಾತು)
ಸಹಜಧಾತು ಇಸು ಪ್ರತ್ಯಯಾಂತ ಧಾತು (ಸಾಧಿತ ಧಾತು
ಸಕರ್ಮಕ ಅಕರ್ಮಕ (i) ಕನ್ನಡ ನಾಮ ಪ್ರಕೃತಿಗಳಿಗೆ ಇಸು ಹತ್ತಿದವು.

(ii) ಅನುಕರಣ ಶಬ್ದಕ್ಕೆ ಇಸು ಹತ್ತಿದವು.

(ಅ) ಭಾವಿಸು

(ಅ) ಕನ್ನಡಿಸು

(ಆ) ಧಗಧಗಿಸು

ಸಂಸ್ಕೃತ ನಾಮಪ್ರಕೃತಿಗಳಿಗೆ ಇಸು ಪ್ರತ್ಯಯ ಬಂದು ಆದ ಧಾತುಗಳು.
ಮಾಡು, ತಿನ್ನು, ಬರೆ, ಓದು
(ಕರ್ಮಪದವನ್ನು ಅಪೇಕ್ಷಿಸುವ ಧಾತು)
ಮಲಗು, ಏಳು, ಓಡು (ಕರ್ಮಪದವನ್ನು ಅಪೇಕ್ಷಿಸದ ಧಾತು)

ಈ ಮೇಲೆ ಹೇಳಿದ ಸಹಜ ಧಾತು, ಇಸು ಪ್ರತ್ಯಯಾಂತ ಧಾತುಗಳ ಮೇಲೆ ವರ್ತಮಾನ, ಭೂತ, ಭವಿಷ್ಯತ್ ಕಾಲಗಳಲ್ಲೂ, ವಿಧ್ಯರ್ಥ, ನಿಷೇಧಾರ್ಥ, ಸಂಭಾವನಾರ್ಥಗಳಲ್ಲೂ ಆಖ್ಯಾತ ಪ್ರತ್ಯಯಗಳು ಸೇರಿ ಕ್ರಿಯಾಪದಗಳಾಗುತ್ತವೆ.  ಸಕರ್ಮಕ ಧಾತುಗಳ ಮುಂದೆ ಅಲ್ಪಡು ಪ್ರತ್ಯಯ ಸೇರಿ ಕರ್ಮಣಿ ಪ್ರಯೋಗವೆನಿಸುತ್ತದೆ.