ಎಲ್ಲ ಧಾತುಗಳಿಗೂ ಆಖ್ಯಾತ ಪ್ರತ್ಯಯಗಳು (೧) ವರ್ತಮಾನ, (೨) ಭೂತ, (೩) ಭವಿಷ್ಯತ್‌ಕಾಲಗಳಲ್ಲೂ, (೧) ವಿಧ್ಯರ್ಥ, (೨) ನಿಷೇಧಾರ್ಥ, (೩) ಸಂಭಾವನಾರ್ಥ ಗಳೆಂಬ ಮೂರು ಅರ್ಥಗಳಲ್ಲೂ ಸೇರಿ ಆರು ಪ್ರಕಾರದ ಕ್ರಿಯಾಪದರೂಪಗಳು ಉಂಟಾಗು ತ್ತವೆ.  ಈಗ ಒಂದೊಂದರ ವಿಚಾರವನ್ನೂ ಕ್ರಮವಾಗಿ ತಿಳಿಯೋಣ.

() ವರ್ತಮಾನ ಕಾಲದ ಕ್ರಿಯಾಪದಗಳು

(೬೧) ಧಾತುಗಳಿಗೆ ವರ್ತಮಾನ ಕಾಲದಲ್ಲಿ ಆಖ್ಯಾತ ಪ್ರತ್ಯಯಗಳು ಸೇರಿ ವರ್ತಮಾನಕಾಲ ಕ್ರಿಯಾಪದಗಳೆನಿಸುವುವು.

ವರ್ತಮಾನ ಕಾಲದಲ್ಲಿ ಧಾತುಗಳಿಗೂ ಆಖ್ಯಾತಪ್ರತ್ಯಯಕ್ಕೂ ಮಧ್ಯದಲ್ಲಿ ಉತ್ತ ಎಂಬ ಕಾಲಸೂಚಕ ಪ್ರತ್ಯಯವು ಬರುವುದು.

ಉದಾಹರಣೆಗೆ:- ಧಾತು: ಹೋಗು

ಧಾತು ಕಾಲಸೂಚಕ + ಪ್ರತ್ಯಯ ಆಖ್ಯಾತ ಪ್ರತ್ಯಯ ಏಕವಚನ ಬಹುವಚನ
(ಪ್ರಥಮ ಪುರುಷ, ಪುಲ್ಲಿಂಗ) ಅವನು ಹೋಗು + ಉತ್ತ   + ಆನೆ = ಹೋಗುತ್ತಾನೆ ಹೋಗುತ್ತಾರೆ
(ಪ್ರಥಮಪುರುಷ, ಸ್ತ್ರೀ ಲಿಂಗ) ಅವಳು ಹೋಗು + ಉತ್ತ   + ಆಳೆ = ಹೋಗುತ್ತಾಳೆ ಹೋಗುತ್ತಾರೆ
(ಪ್ರ. ಪು., ನಪುಂಸಕ ಲಿಂಗ) ಅದು ಹೋಗು + ಉತ್ತ   + ಅದೆ = ಹೋಗುತ್ತದೆ ಹೋಗುತ್ತವೆ
(ಮಧ್ಯಮ ಪುರುಷ) ನೀನು* ಹೋಗು + ಉತ್ತ   + ಈಯೆ = ಹೋಗುತ್ತೀಯೆ ಹೋಗುತ್ತೀರಿ
(ಉತ್ತಮ ಪುರುಷ) ನಾನು* ಹೋಗು + ಉತ್ತ   + ಏನೆ = ಹೋಗುತ್ತೇನೆ ಹೋಗುತ್ತೇವೆ

ಇದರ ಹಾಗೆಯೇ ವರ್ತಮಾನಕಾಲದಲ್ಲಿ ಉಳಿದ ಧಾತುಗಳಿಗೂ ಏಕವಚನದಲ್ಲಿ ಆನೆ, ಆಳೆ, ಅದೆ, ಈಯೆ, ಏನೆ-ಎಂಬ ಆಖ್ಯಾತ ಪ್ರತ್ಯಯಗಳನ್ನೂ, ಬಹುವಚನದಲ್ಲಿ ಆರೆ, ಆರೆ, ಅವೆ, ಈರಿ, ಏವೆ-ಎಂಬ ಆಖ್ಯಾತ ಪ್ರತ್ಯಯಗಳನ್ನೂ ಹಚ್ಚಿ ಹೇಳಬೇಕು.

 

() ಭೂತಕಾಲದ ಕ್ರಿಯಾಪದಗಳು

(೬೨) ಧಾತುಗಳಿಗೆ ಭೂತ ಕಾಲದಲ್ಲಿ ಆಖ್ಯಾತ ಪ್ರತ್ಯಯಗಳು ಸೇರಿ ಭೂತಕಾಲದ ಕ್ರಿಯಾಪದಗಳೆನಿಸುವುವು.

ಭೂತಕಾಲದಲ್ಲಿ ದ ಕಾಲಸೂಚಕ ಪ್ರತ್ಯಯವು ಸಾಮಾನ್ಯವಾಗಿ ಎಲ್ಲ ಕಡೆಗೂ ಬರುವುದುಂಟು*.

ಉದಾಹರಣೆಗೆ:- ಧಾತು: ತಿಳಿ

 

 

 

ಧಾತು ಕಾಲಸೂಚಕ ಪ್ರತ್ಯಯ ಆಖ್ಯಾತ   ಪ್ರತ್ಯಯ ಏಕವಚನ ಬಹುವಚನ
(ಪ್ರಥಮ ಪುರುಷ, ಪುಲ್ಲಿಂಗ) ಅವನು – ತಿಳಿ + ಅನು = ತಿಳಿದನು ತಿಳಿದರು
(ಪ್ರಥಮಪುರುಷ, ಸ್ತ್ರೀಲಿಂಗ) ಅವಳು – ತಿಳಿ + ಅಳು = ತಿಳಿದಳು ತಿಳಿದರು
(ಪ್ರ. ಪು. , ನಪುಂಸಕ ಲಿಂಗ) ಅದು – ತಿಳಿ + ಇತು = ತಿಳಿಯಿತು ತಿಳಿದವು
(ಮಧ್ಯಮ ಪುರುಷ) ನೀನು  – ತಿಳಿ + = ತಿಳಿದೆ ತಿಳಿದಿರಿ
(ಉತ್ತಮ ಪುರುಷ) ನಾನು – ತಿಳಿ + ಎನು = ತಿಳಿದೆನು ತಿಳಿದೆವು

ಇದರ ಹಾಗೆಯೇ ಎಲ್ಲ ಧಾತುಗಳ ಮೇಲೂ ಅನು-ಅರು, ಅಳು-ಅರು, ಇತು-ಅವು, ಎ-ಇರಿ, ಎನು-ಎವು ಎಂಬ ಆಖ್ಯಾತ ಪ್ರತ್ಯಯಗಳನ್ನು ಸೇರಿಸಿ ಹೇಳಬೇಕು.

 

() ಭವಿಷ್ಯತ್‌ಕಾಲದ ಕ್ರಿಯಾಪದಗಳು

(೬೩) ಧಾತುಗಳಿಗೆ ಭವಿಷ್ಯತ್‌ಕಾಲದಲ್ಲಿ ಆಖ್ಯಾತ ಪ್ರತ್ಯಯಗಳು ಸೇರಿ ಭವಿಷ್ಯತ್ ಕಾಲದ ಕ್ರಿಯಾಪದಗಳೆನಿಸುವುವು.

ಭವಿಷ್ಯತ್‌ಕಾಲದಲ್ಲಿ ಧಾತುವಿಗೂ, ಆಖ್ಯಾತ ಪ್ರತ್ಯಯಕ್ಕೂ ಮಧ್ಯದಲ್ಲಿ ವ ಎಂಬ ಕಾಲಸೂಚಕ ಪ್ರತ್ಯಯವು ಆಗಮವಾಗಿ ಬರುವುದು.  ಕೆಲವು ಕಡೆ ಉವ ಎಂಬುದೂ ಬರುವುದುಂಟು.  ಉವ ಪ್ರತ್ಯಯವು ನಡೆ, ತಿಳಿ ಇತ್ಯಾದಿ ಎಕಾರಾಂತ ಆಕಾರಾಂತ ಧಾತುಗಳ ಮೇಲೆ ಬರುವುದೆಂದು ತಿಳಿಯಬೇಕು.

ಉದಾಹರಣೆಗೆ:- ಧಾತು: ಕೊಡು

ಧಾತು ಕಾಲ ಸೂಚಕ
ಪ್ರತ್ಯಯ
ಆಖ್ಯಾತ  ಪ್ರತ್ಯಯ ಏಕವಚನ ಬಹುವಚನ
(ಪ್ರಥಮ ಪುರುಷ, ಪುಲ್ಲಿಂಗ) ಅವನು ಕೊಡು + + ಅನು = ಕೊಡುವನು ಕೊಡುವರು
(ಪ್ರಥಮಪುರುಷ, ಸ್ತ್ರೀ ಲಿಂಗ) ಅವಳು ಕೊಡು + + ಅಳು = ಕೊಡುವಳು ಕೊಡುವರು
(ಪ್ರ. ಪು. , ನಪುಂಸಕ ಲಿಂಗ) ಅದು ಕೊಡು + + ಅದು = ಕೊಡುವದು ಕೊಡುವುವು
*(ಕೊಡು + + ಉದು = ಕೊಡುವುದು ಕೊಡುವುವು)
(ಮಧ್ಯಮ ಪುರುಷ) ನೀನು ಕೊಡು + + = ಕೊಡುವೆ ಕೊಡುವಿರಿ
(ಉತ್ತಮ ಪುರುಷ) ನಾನು ಕೊಡು + + ಎನು = ಕೊಡುವೆನು ಕೊಡುವೆವು

ಇದರ ಹಾಗೆಯೇ ಎಲ್ಲ ಧಾತುಗಳಿಗೂ ಅನು-ಅರು, ಅಳು-ಅರು, ಅದು-ಅವು, (ಉದು-ಉವು), ಎ-ಇರಿ, ಎನು-ಎವು ಎಂಬ ಆಖ್ಯಾತ ಪ್ರತ್ಯಯ ಹಚ್ಚಿ ಹೇಳಬೇಕು.

ಈಗ ಒಂದೇ ಧಾತುವಿನ ವರ್ತಮಾನ, ಭೂತ, ಭವಿಷ್ಯತ್ ಕಾಲಗಳ ಮೂರು ಸಿದ್ಧ ರೂಪಗಳನ್ನೂ ಕೆಳಗೆ ನೋಡಿರಿ:-

ಧಾತು ಬರು

ವರ್ತಮಾನಕಾಲ ಭೂತಕಾಲ ಭವಿಷ್ಯತ್ ಕಾಲ
ಏಕವಚನ ಬಹುವಚನ ಏಕವಚನ ಬಹುವಚನ ಏಕವಚನ ಬಹುವಚನ
ಬರುತ್ತಾನೆ ಬರುತ್ತಾರೆ *ಬಂದನು ಬಂದರು ಬರುವನು ಬರುವರು
ಬರುತ್ತಾಳೆ ಬರುತ್ತಾರೆ ಬಂದಳು ಬಂದರು ಬರುವಳು ಬರುವರು
ಬರುತ್ತದೆ ಬರುತ್ತವೆ ಬಂದಿತು ಬಂದವು (ಬಂದುವು) ಬರುವದು (ಬರುವುದು ಬರುವವು ಬರುವುವು)
ಬರುತ್ತೀಯೆ ಬರುತ್ತೀರಿ ಬಂದೆ ಬಂದಿರಿ ಬರುವೆ ಬರುವಿರಿ
ಬರುತ್ತೇನೆ ಬರುತ್ತೇವೆ ಬಂದೆನು ಬಂದೆವು ಬರುವೆನು ಬರುವೆವು

 

ಧಾತು ತಿನ್ನು

ವರ್ತಮಾನಕಾಲ ಭೂತಕಾಲ ಭವಿಷ್ಯತ್ ಕಾಲ
ಏಕವಚನ ಬಹುವಚನ ಏಕವಚನ ಬಹುವಚನ ಏಕವಚನ ಬಹುವಚನ
ತಿನ್ನುತ್ತಾನೆ ತಿನ್ನುತ್ತಾರೆ +ತಿಂದನು ತಿಂದರು ತಿನ್ನುವನು ತಿನ್ನುವರು
ತಿನ್ನುತ್ತಾಳೆ ತಿನ್ನುತ್ತಾರೆ +ತಿಂದಳು ತಿಂದರು ತಿನ್ನುವಳು ತಿನ್ನುವರು
ತಿನ್ನುತ್ತದೆ ತಿನ್ನುತ್ತವೆ +ತಿಂದಿತು ತಿಂದವು ತಿನ್ನುವದು ತಿನ್ನುವವು
(ತಿಂದುವು)ಷಿ (ತಿನ್ನುವುದು ತಿನ್ನುವುವು)
ತಿನ್ನುತ್ತೀಯೆ ತಿನ್ನುತ್ತೀರಿ +ತಿಂದೆ ತಿಂದಿರಿ ತಿನ್ನುವೆ ತಿನ್ನುವಿರಿ
ತಿನ್ನುತ್ತೇನೆ ತಿನ್ನುತ್ತೇವೆ +ತಿಂದೆನು ತಿಂದೆವು ತಿನ್ನುವೆನು ತಿನ್ನುವೆವು

 

ಇದುವರೆಗೆ ವರ್ತಮಾನ, ಭೂತ, ಭವಿಷ್ಯತ್ ಕಾಲದ ಕ್ರಿಯಾಪದಗಳ ರೂಪಗಳು ಹೇಗಾಗುತ್ತವೆಂಬ ವಿಷಯವನ್ನು ಕ್ರಮವಾಗಿ ತಿಳಿದಿದ್ದೀರಿ.  ಈಗ ವಿಧ್ಯರ್ಥ, ನಿಷೇಧಾರ್ಥ, ಸಂಭಾವನಾರ್ಥದ ಕ್ರಿಯಾಪದ ರೂಪಗಳು ಹೇಗಾಗುತ್ತವೆ? ಎಂಬ ಬಗೆಗೆ ತಿಳಿಯೋಣ.

 

() ವಿಧ್ಯರ್ಥ (ವಿಧಿ+ಅರ್ಥ) ರೂಪಗಳು

(i) ದೇವರು ನಿನಗೆ ಒಳ್ಳೆಯದು ಮಾಡಲಿ.

(ii) ಅವರು ಪಾಠವನ್ನು ಓದಲಿ.

(iii) ನೀನು ಆ ಕೆಲಸವನ್ನು ಮಾಡು.

(iv) ಅವನಿಗೆ ಜಯವಾಗಲಿ.

(v) ಅವನು ಹಾಳಾಗಿ ಹೋಗಲಿ.

ಇಲ್ಲಿ ಮೇಲೆ ಬಂದಿರುವ ಮಾಡಲಿ, ಓದಲಿ, ಮಾಡು, ಆಗಲಿ, ಹೋಗಲಿ ಇತ್ಯಾದಿ ಕ್ರಿಯಾಪದಗಳಲ್ಲಿ- ದೇವರು ನಿನಗೆ ಒಳ್ಳೆಯದು ಮಾಡಲಿ ಎನ್ನುವಾಗ ಒಳ್ಳೆಯ ಹಾರೈಕೆಯೂ, ಅವರು ಪಾಠವನ್ನು ಓದಲಿ ಎನ್ನುವಾಗ ಸಮ್ಮತಿಯೂ, ನೀನು ಆ ಕೆಲಸವನ್ನು ಮಾಡು ಎನ್ನುವಲ್ಲಿ ಆಜ್ಞೆಯೂ, ಅವನಿಗೆ ಜಯವಾಗಲಿ ಎನ್ನುವಾಗ ಆಶೀರ್ವಾದವೂ, ಅವನು ಹಾಳಾಗಿ ಹೋಗಲಿ ಎನ್ನುವಾಗ ಕೆಟ್ಟ ಹಾರೈಕೆಯೂ ತೋರಿಬರುತ್ತದೆ.

ಹೀಗೆ ಒಂದು ಕ್ರಿಯೆಯ ವಿಷಯದಲ್ಲಿ ವಿಧಿ ತೋರುವುದೇ ವಿಧ್ಯರ್ಥ ಎನಿಸುವುದು.  ಇದಕ್ಕೆ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.

(೬೪) ವಿಧ್ಯರ್ಥಕ ಕ್ರಿಯಾಪದಗಳು:- ಆಶೀರ್ವಾದ, ಅಪ್ಪಣೆ, ಆಜ್ಞೆ, ಹಾರೈಕೆ ಇವುಗಳು ತೋರುವಾಗ ಧಾತುಗಳಿಗೆ ಆಖ್ಯಾತಪ್ರತ್ಯಯಗಳು ಸೇರಿ ವಿಧ್ಯರ್ಥಕ ಕ್ರಿಯಾಪದಗಳೆನಿಸುವುವು.

ಉದಾಹರಣೆಗೆ:- ಮಾಡು’ ಧಾತು (ಇಲ್ಲಿ ಯಾವ ಕಾಲಸೂಚಕ ಪ್ರತ್ಯಯಗಳೂ ಬರುವುದಿಲ್ಲ)

ಧಾತು + ಆಖ್ಯಾತ ಪ್ರತ್ಯಯ ಏಕವಚನ ಬಹುವಚನ
(ಪ್ರಥಮ ಪುರುಷ, ಪುಲ್ಲಿಂಗ) ಅವನು ಮಾಡು+          ಅಲಿ ಮಾಡಲಿ ಮಾಡಲಿ
(ಪ್ರಥಮಪುರುಷ, ಸ್ತ್ರೀ ಲಿಂಗ) ಅವಳು ಮಾಡು +ಅಲಿ ಮಾಡಲಿ ಮಾಡಲಿ
(ಪ್ರ. ಪು. , ನಪುಂಸಕ ಲಿಂಗ) ಅದು ಮಾಡು+ಅಲಿ ಮಾಡಲಿ ಮಾಡಲಿ
(ಮಧ್ಯಮ ಪುರುಷ) ನೀನು ಮಾಡು+          ಅಲಿ* ಮಾಡು ಮಾಡಿರಿ
(ಉತ್ತಮ ಪುರುಷ) ನಾನು ಮಾಡು+          ಎ ಮಾಡುವೆ ಮಾಡು+ವಾ=ಮಾಡುವಾ+
(ಮಾಡೋಣ, ಮಾಡುವ)

ಇಲ್ಲಿ ಪ್ರಥಮಪುರುಷದ ಏಕವಚನ, ಬಹುವಚನಗಳಲ್ಲಿ ಆರು ರೂಪಗಳೂ ಒಂದೇ ರೀತಿ ಇರುತ್ತವೆ.  ಮಧ್ಯಮಪುರುಷ ಏಕವಚನದಲ್ಲಿ ಆಖ್ಯಾತಪ್ರತ್ಯಯ ಲೋಪವಾಗುವುದು.  ಬಹು ವಚನದಲ್ಲಿ ಇರಿ ಪ್ರತ್ಯಯವೂ, ಉತ್ತಮಪುರುಷ ಏಕವಚನದಲ್ಲಿ ಎ ಎಂಬುದೂ, ಬಹುವಚನ ದಲ್ಲಿ ವಾ, ಉವಾ, ವ, ಉವ, ಓಣ-ಇತ್ಯಾದಿ ಆಖ್ಯಾತ ಪ್ರತ್ಯಯಗಳು ಬರುವುದುಂಟು.

 

() ನಿಷೇಧಾರ್ಥಕ ರೂಪಗಳು

(i) ಅವನು ಅನ್ನವನ್ನು ತಿನ್ನನು,

(ii) ಅವನು ಬಾರನು ಇತ್ಯಾದಿ ವಾಕ್ಯಗಳಲ್ಲಿ ಬಂದಿರುವ ತಿನ್ನನು, ಬಾರನು ಎಂಬ ಕ್ರಿಯಾಪದಗಳು ತಿನ್ನುವುದಿಲ್ಲ, ಬರುವುದಿಲ್ಲ-ಎಂಬ ಅರ್ಥದವು.  ಎಂದರೆ ಕ್ರಿಯೆಯು ನಡೆಯಲಿಲ್ಲ ಎಂಬರ್ಥವನ್ನು ಸೂಚಿಸುತ್ತವೆ.

(೬೫) ಕ್ರಿಯೆಯು ನಡೆಯಲಿಲ್ಲ ಎಂಬರ್ಥ ತೋರುವಾಗ ಧಾತುಗಳ ಮೇಲೆ ಆಖ್ಯಾತ ಪ್ರತ್ಯಯಗಳು ಸೇರಿ, ನಿಷೇಧಾರ್ಥಕ ಕ್ರಿಯಾಪದಗಳೆನಿಸುವುವು.

ಉದಾಹರಣೆಗೆ:- ತಿನ್ನು ಧಾತು

ಧಾತು+ಆಖ್ಯಾತ ಪ್ರತ್ಯಯ ಏಕವಚನ ಬಹುವಚನ
(ಪ್ರಥಮ ಪುರುಷ, ಪುಲ್ಲಿಂಗ) ಅವನು ತಿನ್ನು +ಅನು = ತಿನ್ನನು –  ತಿನ್ನರು
(ಪ್ರಥಮಪುರುಷ, ಸ್ತ್ರೀಲಿಂಗ) ಅವಳು ತಿನ್ನು +ಅಳು = ತಿನ್ನಳು –  ತಿನ್ನರು
(ಪ್ರ. ಪು., ನಪುಂಸಕಲಿಂಗ) ಅದು ತಿನ್ನು +ಅದು = ತಿನ್ನದು –  ತಿನ್ನವು
(ಮಧ್ಯಮ ಪುರುಷ) ನೀನು- ತಿನ್ನು+ಎ = ತಿನ್ನೆ –  ತಿನ್ನರಿ
(ಉತ್ತಮ ಪುರುಷ) ನಾನು ತಿನ್ನು +ಎನು = ತಿನ್ನೆನು –  ತಿನ್ನೆವು

ಹೀಗೆ ಏಕವಚನದಲ್ಲಿ ಅನು, ಅಳು, ಅದು, ಎ, ಎನು ಎಂಬ ಆಖ್ಯಾತಪ್ರತ್ಯಯಗಳೂ, ಬಹುವಚನದಲ್ಲಿ ಅರು, ಅರು, ಅವು, ಅರಿ, ಎವು-ಎಂಬ ಆಖ್ಯಾತಪ್ರತ್ಯಯಗಳೂ ಎಲ್ಲ ಧಾತುಗಳ ಮೇಲೆ ಸೇರುತ್ತವೆ.

ಇನ್ನೊಂದು ವಿಶೇಷ ರೂಪದ ಉದಾಹರಣೆ ನೋಡಿರಿ

ಉದಾಹರಣೆಗೆ:- *ಬರು ಧಾತು

ಧಾತು+ಆಖ್ಯಾತ ಪ್ರತ್ಯಯ = ಏಕವಚನ ಬಹುವಚನ
(ಪ್ರಥಮ ಪುರುಷ, ಪುಲ್ಲಿಂಗ) ಅವನು ಬರು +ಅನು = ಬಾರನು ಬಾರರು
(ಪ್ರ.ಪು., ಸ್ತ್ರೀಲಿಂಗ) ಅವಳು ಬರು +ಅಳು = ಬಾರಳು ಬಾರರು
(ಪ್ರ.ಪು.ನಪುಂಸಕಲಿಂಗ) ಅದುಬರು +ಅದು = ಬಾರದು ಬಾರವು
(ಮಧ್ಯಮ ಪುರುಷ) ನೀನು ಬರು+ಎ = ಬಾರೆ ಬಾರರಿ
(ಉತ್ತಮ ಪುರುಷ) ನಾನು ಬರು +ಎನು = ಬಾರೆನು ಬಾರೆವು

 

() ಸಂಭಾವನಾರ್ಥಕ ರೂಪಗಳು

(i) ಅವನು ನಾಳೆ ಬಂದಾನು.

(ii) ಅನ್ನವನ್ನು ಆತ ತಿಂದಾನು.

(iii) ಅದು ಮೇಲಕ್ಕೆ ಏರೀತು.

ಇತ್ಯಾದಿ ವಾಕ್ಯಗಳಲ್ಲಿ ಬಂದಿರುವ ಬಂದಾನು, ತಿಂದಾನು, ಏರೀತು-ಎಂಬ ಕ್ರಿಯಾಪದಗಳು ಕಾರ‍್ಯ ನಡೆಯುವಲ್ಲಿ ಸಂಶಯ ಅಥವಾ ಊಹೆಯನ್ನು ತಿಳಿಸುತ್ತವೆ.  ಬಂದಾನು ಎಂಬಲ್ಲಿ ಬರುವ ವಿಷಯಲ್ಲಿ ಸಂಶಯವಾಗುತ್ತದಲ್ಲದೆ ನಿಶ್ಚಯವಿಲ್ಲ.  ಬಂದರೆ ಬರಬಹುದು ಅಥವಾ ಬಾರದೆಯೂ ಇರಬಹುದು.  ಇದರ ಹಾಗೆಯೇ ತಿಂದಾನು, ಏರೀತು-ಎಂಬಲ್ಲಿಯೂ ಕೂಡ ಸಂಶಯ, ಊಹೆಗಳು ತೋರುತ್ತವೆ.  ಇಂಥ ಕ್ರಿಯಾಪದಗಳೇ ಸಂಭಾವನಾರ್ಥಕ ಕ್ರಿಯಾಪದ ಗಳು.  ಇದಕ್ಕೆ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.

(೬೬) ಸಂಭಾವನಾರ್ಥಕ ಕ್ರಿಯಾಪದ:- ಕ್ರಿಯೆಯು ನಡೆಯುವಿಕೆಯಲ್ಲಿ ಸಂಶಯ ಅಥವಾ ಊಹೆ ತೋರುವಲ್ಲಿ ಧಾತುಗಳ ಮೇಲೆ ಆಖ್ಯಾತ ಪ್ರತ್ಯಯಗಳು ಸೇರಿ ಸಂಭಾವನಾರ್ಥಕ ಕ್ರಿಯಾಪದಗಳೆನಿಸುವುವು.

ಉದಾಹರಣೆಗೆ:- ಹೋಗು ಧಾತು

ಧಾತು +ಆಖ್ಯಾತ ಪ್ರತ್ಯಯ ಕ್ರಿಯಾಪದ
ಏಕವಚನ ಬಹುವಚನ
(ಪ್ರಥಮ ಪುರುಷ, ಪುಲ್ಲಿಂಗ) ಅವನು ಹೋಗು +ಆನು = ಹೋದಾನು ಹೋದಾರು
(ಪ್ರಥಮಪುರುಷ, ಸ್ತ್ರೀ ಲಿಂಗ) ಅವಳು ಹೋಗು +ಆಳು = ಹೋದಾಳು ಹೋದಾರು
(ಪ್ರ. ಪು. , ನಪುಂಸಕ ಲಿಂಗ) ಅದು ಹೋಗು+ಈತು = ಹೋದೀತು ಹೋದಾವು
(ಮಧ್ಯಮ ಪುರುಷ) ನೀನು ಹೋಗು+ಈಯೆ = ಹೋದೀಯೆ ಹೋದೀರಿ
(ಉತ್ತಮ ಪುರುಷ) ನಾನು ಹೋಗು+ಏನು = ಹೋದೇನು ಹೋದೇವು

ಹೋಗು ಎಂಬ ಧಾತುವಿನ ಮೇಲೆ ಸಂಭಾವನಾರ್ಥಕ ಆಖ್ಯಾತ ಪ್ರತ್ಯಯಗಳು ಸೇರಿದಾಗ ಧಾತುವಿನ ಕೊನೆಯ ಗು ಕಾರಕ್ಕೆ ದ ಕಾರ ಆದೇಶವಾಗಿ ಬರುವುದನ್ನು ಗಮನಿಸಿರಿ.  ಇದರ ಹಾಗೆ ಎಲ್ಲಾ ಧಾತುಗಳಿಗೂ ಏಕವಚನದಲ್ಲಿ ಆನು, ಆಳು, ಈತು, ಈಯೆ, ಏನು-ಎಂಬ ಆಖ್ಯಾತ ಪ್ರತ್ಯಯಗಳನ್ನೂ ಬಹುವಚನದಲ್ಲಿ ಆರು, ಆರು, ಆವು, ಈರಿ, ಏವು ಎಂಬ ಆಖ್ಯಾತ ಪ್ರತ್ಯಯಗಳನ್ನೂ ಸೇರಿಸಿ ಹೇಳಬೇಕು.

ಈಗ ವಿಧ್ಯರ್ಥ, ನಿಷೇಧಾರ್ಥ, ಸಂಭಾವನಾರ್ಥ-ಈ ಮೂರು ರೂಪಗಳು ಒಂದೇ ಧಾತುವಿಗೆ ಹೇಗಾಗುತ್ತವೆಂಬುದನ್ನು ಈ ಕೆಳಗಿನ ಉದಾಹರಣೆಯಿಂದ ತುಲನೆ ಮಾಡಿ ನೋಡಿರಿ.

ಉದಾಹರಣೆಗೆ:- ಬರೆ ಧಾತು

ವಿಧ್ಯರ್ಥ ನಿಷೇಧಾರ್ಥ ಸಂಭಾವನಾರ್ಥ
ಏಕವಚನ ಬಹುವಚನ ಏಕವಚನ ಬಹುವಚನ ಏಕವಚನ ಬಹುವಚನ
ಬರೆಯಲಿ ಬರೆಯಲಿ ಬರೆಯನು ಬರೆಯರು ಬರೆದಾನು ಬರೆದಾರು
ಬರೆಯಲಿ ಬರೆಯಲಿ ಬರೆಯಳು ಬರೆಯರು ಬರೆದಾಳು ಬರೆದಾರು
ಬರೆಯಲಿ ಬರೆಯಲಿ ಬರೆಯದು ಬರೆಯವು ಬರೆದೀತು ಬರೆದಾವು
ಬರೆ ಬರೆಯಿರಿ ಬರೆಯೆ ಬರೆಯಿರಿ ಬರೆದೀಯೆ ಬರೆದೀರಿ
ಬರೆವೆ ಬರೆಯುವ ಬರೆಯೆನು ಬರೆಯೆವು ಬರೆದೇನು ಬರೆದೇವು

-ಇತ್ಯಾದಿ

ಬರೆಯುವಾ
ಬರೆಯೋಣ

ಹೊಸಗನ್ನಡದಲ್ಲಿ ಈಗ ಸಾಮಾನ್ಯವಾಗಿ ಬರೆಯೆ ತಿನ್ನೆ ಎಂಬ ಮಧ್ಯಮಪುರುಷ ಏಕವಚನರೂಪಗಳನ್ನೂ, ಬರೆಯಿರಿ ತಿನ್ನಿರಿ ಎಂಬ ಬಹುವಚನ ರೂಪಗಳನ್ನೂ ಯಾರೂ ಹೆಚ್ಚಾಗಿ ಬಳಸುವುದೇ ಇಲ್ಲ.  ಅದಕ್ಕೆ ಪ್ರತಿಯಾಗಿ ಬರೆಯಲಾರಿರಿ (ಬರೆಯಲ್ + ಆರಿರಿ), ತಿನ್ನಲಾರಿರಿ (ತಿನ್ನಲ್ + ಆರಿರಿ), ಬರೆಯುವುದಿಲ್ಲ (ಬರೆಯವುದು+ಇಲ್ಲ), ತಿನ್ನುವುದಿಲ್ಲ (ತಿನ್ನುವುದು + ಇಲ್ಲ) ಇತ್ಯಾದಿಯಾಗಿ ಎರಡು ಕ್ರಿಯೆಗಳಿಂದ ನಿಷೇಧರೂಪಗಳನ್ನು ಹೇಳುವುದು ಪರಿಪಾಠವಾಗಿದೆ.  ಸಂಭಾವನಾರ್ಥಕ ರೂಪಗಳನ್ನು ಕೂಡ ಹಾಗೆಯೇ ಬರೆದಾನು ಎಂಬುದನ್ನು ಬರೆಯಬಹುದು ಎಂದು ಏಕವಚನ, ಬಹುವಚನಗಳೆರಡರಲ್ಲೂ ಪುಂಸ್ತ್ರೀನಪುಂಸಕಲಿಂಗ ಮೂರರಲ್ಲೂ ಸಹ ಒಂದೇ ರೀತಿಯ ರೂಪದಿಂದ ಹೇಳುವುದು ವಾಡಿಕೆಯಾಗಿದೆ.

ಉದಾಹರಣೆಗೆ:-

ಅವನು ಬರೆಯಬಹುದು ಅವರು ಬರೆಯಬಹುದು
ಅವಳು ಬರೆಯಬಹುದು ಅವರು ಬರೆಯಬಹುದು
ಅದು ಬರೆಯಬಹುದು ಅವು ಬರೆಯಬಹುದು
ನೀನು ಬರೆಯಬಹುದು ನೀವು ಬರೆಯಬಹುದು
ನಾನು ಬರೆಯಬಹುದು ನಾವು ಬರೆಯಬಹುದು

* ನೀನು, ನಾನು ಎಂಬ ಸರ್ವನಾಮಗಳು ವಾಚ್ಯಲಿಂಗ ಅಥವಾ ವಿಶೇಷ್ಯಾಧೀನ ಲಿಂಗಗಳಾದ್ದರಿಂದ-ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗಗಳಲ್ಲಿ ಒಂದೇ ರೂಪಗಳಾಗುತ್ತವೆಂಬುದನ್ನು ಜ್ಞಾಪಕದಲ್ಲಿಡಬೇಕು.

* ”

* ಉ, ಎ, ಇಕಾರಾಂತ ಧಾತುಗಳ ಮೇಲೆ ನಪುಂಸಕಲಿಂಗ ಏಕವಚನದಲ್ಲಿ ಭೂತಕಾಲದ ಆಖ್ಯಾತ ಪ್ರತ್ಯಯ ಸೇರಿದಾಗ ದ ಎಂಬ ಕಾಲಸೂಚಕ ಪ್ರತ್ಯಯ ಬಂದು ಲೋಪವಾಗುತ್ತದೆಂದು ತಿಳಿಯಬೇಕು.  ನಡೆಯಿತು, ಮಾಡಿತು, ಹೋಯಿತು-ಇತ್ಯಾದಿ.  ಇತು ಆಖ್ಯಾತಪ್ರತ್ಯಯ ಬಂದೆಡೆಯಲ್ಲೆಲ್ಲ ದ ಕಾಲಸೂಚಕ ಪ್ರತ್ಯಯ ಬಂದು ಲೋಪವಾಗಿದೆಯೆಂದು ತಿಳಿಯಬೇಕು.

* ನಪುಂಸಕಲಿಂಗ ಏಕವಚನದಲ್ಲಿ ಉದು, ಬಹುವಚನದಲ್ಲಿ ಉವು ಎಂಬ ಆಖ್ಯಾತ ಪ್ರತ್ಯಯ ಬರುವುದುಂಟು.  ಉದಾಹರಣೆಗೆ:- ತಿಳಿದವು, ತಿಳಿದುವು.  ಈ ಎರಡೂ ರೂಪಗಳು ಸಾಧುಗಳೆಂದು ಭಾವಿಸಬೇಕು.  ಇದರಂತೆ – ಮಾಡುವುವು, ಮಾಡಿದುವು; ತಿಂದವು, ತಿಂದುವು ಇತ್ಯಾದಿ.

* ಬರು, ತಿನ್ನು ಮೊದಲಾದ ಧಾತುಗಳಿಗೆ ಭೂತಕಾಲದಲ್ಲಿ ಆಖ್ಯಾತ ಪ್ರತ್ಯಯಗಳು ಸೇರುವಾಗ ಧಾತುವಿನ ಕೊನೆಯ ಅಕ್ಷರಗಳಿಗೆ (ರು-ನ್ನು ಎಂಬವುಗಳಿಗೆ) ಅನುಸ್ವಾರವು ಆದೇಶವಾಗಿ ಬರುವುದು.

+ ಇಲ್ಲಿ ಕ್ರಮವಾಗಿ ಉದು, ಉವು ಎಂಬ ಆಖ್ಯಾತ ಪ್ರತ್ಯಯಗಳು ಬಂದಿವೆ ಎಂದು ತಿಳಿಯಬೇಕು.

+ ”

+ ”

+ ”

+ ”

* ವಿಧ್ಯರ್ಥದ ಮಧ್ಯಮಪುರುಷ ಏಕವಚನದಲ್ಲಿ ಅಲಿ ಎಂಬ ಆಖ್ಯಾತ ಪ್ರತ್ಯಯ ಬಂದು ಲೋಪವಾಗಿದೆ ಎಂದು ತಿಳಿಯಬೇಕು.  ಆಗ ಧಾತುವೇ ಕ್ರಿಯಾಪದದ ರೂಪದಲ್ಲಿ ಉಳಿಯುವುದು.  ಕೆಲವರು ಇಲ್ಲಿ ಯಾವ ಆಖ್ಯಾತಪ್ರತ್ಯಯವೂ ಬರುವುದಿಲ್ಲವೆಂದು ಹೇಳುವರು.

+ ಉತ್ತಮಪುರುಷ ಬಹುವಚನದಲ್ಲಿ ಮಾಡುವಾ, ಮಾಡೋಣ, ಮಾಡುವ-ಇತ್ಯಾದಿ ರೂಪಗಳು ಪ್ರಯೋಗದಲ್ಲಿ ಸಿಗುತ್ತವೆ.  ಉದಾಹರಣೆಗೆ:- ನಾವು ಮಾಡೋಣ, ನಾವು ಮಾಡುವಾ, ನಾವು ಮಾಡುವ.  ಕೆಲವು ಕಡೆ ಉವ ಪ್ರತ್ಯಯ ಸೇರಿ ತಿಳಿಯುವ ಎಂದೂ, ಉವಾ ಸೇರಿ ತಿಳಿಯುವಾ ಎಂದೂ ರೂಪಗಳಾಗುವುವು.

* ತರು-ಬರು ಧಾತುಗಳು ನಿಷೇಧಾರ್ಥದಲ್ಲಿ ತಾರ್, ಬಾರ್ ರೂಪಗಳನ್ನು ಪಡೆಯುತ್ತವೆ ಎಂದು ತಿಳಿಯಬೇಕು.  ತರು ಧಾತುವಿನ ರೂಪಗಳು- ತಾರನು, ತಾರರು, ತಾರಳು, ತಾರರು, ತಾರದು, ತಾರವು, ತಾರೆ, ತಾರಿರಿ, ತಾರೆನು, ತಾರೆವು –ಎಂದಾಗುತ್ತವೆಂದು ತಿಳಿಯಬೇಕು.