ಕನ್ನಡ ಬರವಣಿಗೆಯಲ್ಲಿ ಬರುವ ಮುಖ್ಯವಾದ ಕೆಲವು ಧಾತುಗಳ ಪಟ್ಟಿಯನ್ನು ಈ ಕೆಳಗೆ ಕೊಡಲಾಗಿದ್ದು ಧಾತುವಿನ ಅರ್ಥ ಮತ್ತು ಕ್ರಿಯಾಪದದ ಒಂದು ರೂಪವನ್ನು ಮಾತ್ರ ಕೊಡಲಾಗಿದೆ.

ಧಾತು ಅರ್ಥ ಕ್ರಿಯಾಪದ
ಅಲರು ಹೂವಾಗು ಅಲರಿತು
ಅರಳು ಹೂವಾಗು ಅರಳಿತು
ಅಡರು ಏರು ಅಡರಿದನು
ಅಪ್ಪು ತಬ್ಬಿಕೊಳ್ಳು ಅಪ್ಪಿದನು
ಅಡು ಅಡಿಗೆ ಮಾಡು ಅಟ್ಟನು
ಅಗಿ ಹಲ್ಲಿನಿಂದ ಅಗಿಯುವಿಕೆ ಅಗಿದನು
ಅರೆ ಅರೆಯುವಿಕೆ ಅರೆದನು
ಅಗೆ ನೆಲತೋಡು ಅಗೆದನು
ಅರಸು೫೫ ಹುಡುಕು ಅರಸುವನು
ಅಂಟು ಮೆತ್ತು ಅಂಟಿತು
ಅಡಗು ಮುಚ್ಚಿಕೊ ಅಡಗಿತು
ಅರಿ ಕತ್ತರಿಸು ಅರಿದನು
ಅರಿ
[1]
ತಿಳಿ ಅರಿದನು
ಅದಿರು ಅಲ್ಲಾಡು ಅದಿರಿತು
ಅಲೆ ತಿರುಗು ಅಲೆದನು
ಅಳಲು[2] ಸಂಕಟಪಡು ಅಳಲಿದನು
ಅಳೆ ಅಳತೆಮಾಡು ಅಳೆದನು
ಅಂಜು ಹೆದರು ಅಂಜಿದನು
ಅಳಿ ಸಾಯ್ ಅಳಿದನು
ಅಳು ರೋದನಮಾಡು ಅಳುತ್ತಾನೆ
ಅಳಿಸು ಇಲ್ಲದಂತೆಮಾಡು ಅಳಿಸಿದನು
ಅವಚು ಅಪ್ಪಿಕೊ ಅವಚಿದನು
ಆಳು ರಾಜ್ಯಭಾರ ಮಾಡು ಆಳಿದನು
ಆನ್ ಧರಿಸು ಆಂತನು
ಆರು ಒಣಗು ಆರಿತು
ಆಲಿಸು ಕೇಳು ಆಲಿಸಿದನು
ಆಗು ಮುಗಿ ಆಯಿತು
ಆರ್ ಆರ್ಭಟಿಸು ಆರ್ದನು (ಆರ್ದಂ)
ಆರ್ ಸಾಮರ್ಥ್ಯ ಆರನು
ಇಡು ಇಡುವಿಕೆ ಇಟ್ಟನು
ಇಕ್ಕು ನೀಡು ಇಕ್ಕಿದನು
ಇಕ್ಕು ಮುಚ್ಚು ಕದವನ್ನು ಇಕ್ಕಿದನು
ಇಕ್ಕು ಹೊಡೆ-ಕೊಲ್ಲು ಇಕ್ಕಿದನು
ಇರು ಇರುವಿಕೆ ಇದ್ದಾನೆ
ಇಸು ಬಾಣಪ್ರಯೋಗ ಮಾಡು ಎಚ್ಚನು
ಇರಿ ಕತ್ತರಿಸು ಇರಿದನು
ಇಳಿ ಕೆಳಗೆ ಹೋಗು ಇಳಿದನು
ಇಂಗು ಇಲ್ಲದಾಗು ಇಂಗಿತು
ಈಡಾಡು ಚೆಲ್ಲಾಡು ಈಡಾಡಿದನು
ಈಯ್ ಕರುಹಾಕು ಈಯಿತು-(ಈದಿತು)
ಈಂಟು ಕುಡಿ ಈಂಟಿದನು
ಈಸು ನೀರಿನಲ್ಲಿ ಈಸುವಿಕೆ ಈಸಿದನು
ಈಜು ಈಜಿದನು
ಉಡು ಉಡುವಿಕೆ ಉಟ್ಟನು
ಉಗಿ ಎಳೆಯುವುದು ಉಗಿವೆನು
ಉಗಳು ಉಗುಳುವಿಕೆ ಉಗುಳಿದನು
ಉಮ್ಮಳಿಸು ದುಃಖಿಸು ಉಮ್ಮಳಿಸಿದನು
ಉಸುರು ಹೇಳು ಉಸುರಿದನು
ಉಳಿ ಮಿಕ್ಕು ಉಳಿದಿದೆ
ಉಕ್ಕು ಹೊರಸೂಸು ಉಕ್ಕಿಸು
ಉದಿರು ಕೆಳಗೆ ಬೀಳು ಉದಿರಿತು
ಉದುರು ಉದುರಿತು
ಉರುಳು ಉರುಳುವಿಕೆ ಉರುಳಿತು
ಉಬ್ಬು ಉತ್ಸಾಹಗೊಳ್ಳು-ದಪ್ಪವಾಗು ಉಬ್ಬಿದನು
ಉರಿ ಬೆಂಕಿ ಹತ್ತು ಉರಿಯುತ್ತದೆ
ಉಗ್ಗು ತಡೆದುಮಾತಾಡು ಉಗ್ಗುತ್ತಾನೆ
ಉಜ್ಜು ತಿಕ್ಕು ಉಜ್ಜಿದನು
ಉಳುಕು ನರಗಳತೊಡಕು ಉಳುಕಿದೆ
ಉದ್ದು ತಿಕ್ಕು ಉದ್ದುತ್ತದೆ
ಉಳಿಸು ಮಿಕ್ಕಿಸು ಉಳಿಸಿದನು
ಉಳು ಭೂವ್ಯವಸಾಯ ಮಾಡು ಉತ್ತನು
ಊರು ನೆಡು ಸಸಿಊರಿದನು
ಊಡು ಊಟಮಾಡಿದನು ಊಡಿಸಿದನು
ಊದು ಗಾಳಿಯನ್ನುಬಿಡು ಊದಿದನು
ಎಣಿಸು ಲೆಕ್ಕಮಾಡು ಎಣಿಸಿದನು
ಎಸೆ ಚೆಲ್ಲು ಎಸೆದನು
ಎಸಗು ಮಾಡು ಎಸಗಿದನು
ಎನ್ನು (ಎ) ಹೇಳು ಎಂದನು
ಎರೆ ನೀಡು ಎರೆದನು
ಎರೆ ಬೇಡು ಎರೆದನು
ಎಳೆ ಜಗ್ಗು ಎಳೆದನು
ಎರಗು ಮೇಲೆ ಬೀಳು ಎರಗಿತು
ಏಳು ಎದ್ದುನಿಲ್ಲು ಎದ್ದನು
ಎರಗು ನಮಸ್ಕರಿಸು ಎರಗಿದನು
ಎಳಸು ಅಪೇಕ್ಷಿಸು ಎಳಸಿದನು
ಏದು ತೇಗು ಏದುತ್ತಾನೆ
ಒಗೆ ಹುಟ್ಟು ಒಗೆಯಿತು
ಒಯ್ ಸಾಗಿಸು-ಬೇರೆಡೆಗೆಒಯ್ಯಿ ಒಯ್ದನು
ಒಳಸಾರು ಒಳಗೆಹೋಗು ಒಳಸಾರಿತು
ಒಸರು ಜಿನುಗು ಒಸರಿತು
ಒರಗು ಮಲಗು-ಆಶ್ರಯಿಸಿನಿಲ್ಲು ಒರಗಿದನು-ಬೀಳು
ಒರೆ ಹೇಳು ಒರೆದನು
ಒಡಂಬಡು ಒಪ್ಪು ಒಡಂಬಟ್ಟನು
ಒಡೆ ಸೀಳು-ಅರಳು ಒಡೆಯಿತು
-ಭಾಗಮಾಡು-ಬಿರಿ
ಒಸೆ ಪ್ರೀತಿ ಒಸೆದನು
ಒಲೆ ಪ್ರೀತಿಹೊಂದು ಒಲೆಯಿತು, ಅನುಗ್ರಹಿಸು
ಒಕ್ಕಲಿಕ್ಕು ಕೊಲ್ಲು-ಮುಗಿಸು ಒಕ್ಕಲಿಕ್ಕಿದನು
ಒಡ್ಡು ಎದುರಾಗು-ಬೇಡು ಒಡ್ಡಿದರು- ಕೈಒಡ್ಡಿದರು
ಒಣಗು ಶುಷ್ಕವಾಗು ಒಣಗಿತು
ಒತ್ತು ಹಿಸುಕು-ಪಕ್ಕಕ್ಕೆತಳ್ಳು ಒತ್ತಿದನು
ಓದು ಓದುವಿಕೆ ಓದಿದನು
ಓಲೈಸು ಆಶ್ರಯಿಸು ಓಲೈಸಿದನು
ಓವು ಸಂರಕ್ಷಿಸು ಓವಿದನು
ಓಕರಿಸು ವಾಂತಿಮಾಡು ಓಕರಿಸಿದನು
ಓಡು ಓಡುವಿಕೆ ಓಡಿದನು
ಔಂಕು ಹಿಸುಕು ಔಂಕಿದನು
ಅವುಂಕು ಹಿಚುಕು ಅವುಂಕಿದನು
ಔತುಕೊಳ್ಳು ಅಡಗು ಔತುಕೊಂಡನು
ಕದಿ ಕಳವುಮಾಡು ಕದ್ದನು
ಕರಿ ಕರಿಯುವಿಕೆ ಎಣ್ಣೆಯಲ್ಲಿ ಕರಿದನು
ಕರೆ ಸುರಿಸು ಹಾಲುಕರೆದನು
ಮಳೆಕರೆಯಿತು
ಕರೆ ಕರೆಯುವಿಕೆ ಕರೆದನು
ಕನಲು ಕೋಪಗೊಳ್ಳು ಕನಲಿದನು
ಕವಿ ಮುಸುಕು ಕವಿಯಿತು
ಕಲಿ ತಿಳಿ ಕಲಿತನು
ಕಲಸು ಬೆರಸು ಕಲಸಿದನು
ಕಳು ಕದಿಯುವಿಕೆ ಕದ್ದನು
ಕಡಿ ಛೇದಿಸು ಕಡಿದನು
ಕಲಕು ಕಲಕುವಿಕೆ ನೀರುಕಲಕಿತು
ಕಚ್ಚು ಹಲ್ಲಿನಿಂದಕಡಿ ಕಚ್ಚಿದನು
ಕಟ್ಟು ಬಂಧಿಸು ಕಟ್ಟಿದನು
ಕಸಿ ಅಪಹರಿಸು ಕಸಿದನು
ಕಡೆಗಣಿಸು ತಿರಸ್ಕರಿಸು ಕಡೆಗಣಿಸಿದನು
ಕಂಗೊಳಿಸು ಪ್ರಕಾಶಿಸು ಕಂಗೊಳಿಸುತ್ತದೆ
ಕದಕು ಕದಕುವಿಕೆ ಕದಕಿದನು
ಕದಡು ಕದಡುವಿಕೆ ಕದಡಿದನು
ಕರ್ದುಕು ಕೊಕ್ಕಿನಿಂದ ಕುಕ್ಕು ಕರ್ದುಕಿತು
ಕನಲು ಕೋಪಗೊಳ್ಳು ಕನಲಿದನು
ಕನವರಿಸು ಬಡಬಡಿಸು ಕನವರಿಸಿದನು
ಕರಗು ವಿಲೀನವಾಗು ಕರಗಿತು
ಕಳುಹು ಕಳುಹುವಿಕೆ ಕಳುಹಿದನು
ಕಳಿಸು ಕಳುಹುವಿಕೆ ಕಳಿಸಿದನು
ಕಾ(ಕಾಯ್) (ಕಾಯಿ) ರಕ್ಷಿಸು ಕಾಯುತ್ತಾನೆ-ಕಾಯ್ದನು
ಕಾಣು ನೋಡು ಕಂಡನು
ಕಾದು ಜಗಳವಾಡು ಕಾದಿದನು
ಕಾಪಾಡು ರಕ್ಷಿಸು ಕಾಪಾಡಿದನು
ಕಾಯು(ಕಾಯಿ) ಬಿಸಿಯೇರು ಕಾಯಿಸಿದನು-ಕಾಯ್ದಿದೆ
ಕಾಡು ಕಾಟಕೊಡು ಕಾಡುತ್ತಾನೆ
ಕಿಡು (ಕೆಡು) ಕೆಡುವಿಕೆ ಕೆಟ್ಟನು
ಕೀಳ್ ಕೀಳುವಿಕೆ ಕಿತ್ತನು
ಕೀ ಕೀವಾಗುವಿಕೆ ಕೀತಿದೆ
ಕುಂದು ಒತ್ತು ಕುಂದಿದೆ (ಕಡಿಮೆಯಾಗು)
ಕುಕ್ಕು ಕುಕ್ಕುವಿಕೆ ಕುಕ್ಕುತ್ತದೆ
(ಚುಂಚಿನಿಂದ ಕುಕ್ಕುವುದು) ಕುಕ್ಕಿತು
ಕುಡಿ ಕುಡಿಯುವಿಕೆ ಕುಡಿದನು
ಕುಡು (ಕೊಡು) ಕೊಡುವಿಕೆ ಕೊಟ್ಟನು
ಕುದಿ ಕುದಿಯುವಿಕೆ (ಕರುಬುವಿಕೆ) ಕುದ್ದಿತು
(ಮನದಲ್ಲಿ ಕುದ್ದನು)
ಕುಪ್ಪಳಿಸು ಹಾರು ಕುಪ್ಪಳಿಸುತ್ತಾನೆ
ಕುಗ್ಗು (ಕುರ್ಗು) ಸಣ್ಣದಾಗು (ಉಡುಗು) ಕುಗ್ಗಿದನು
ಕುಲುಕು ಅಲ್ಲಾಡಿಸು ಕುಲುಕಿದನು
ಕೂಡು ಬೆರೆ ಕೂಡಿದನು
ಕೂಗು ಕೂಗುವಿಕೆ ಕೂಗಿದನು
ಕೆಚ್ಚು ನೂಲು ಕೆಚ್ಚುವಿಕೆ ಕೆಚ್ಚಿದನು
ಕೆಡಹು(ಕೆಡವು) ನೆಲಕ್ಕೆ ಬೀಳುವಂತೆ ಮಾಡು ಕೆಡಹಿದನು(ಕೆಡವಿದನು)
ಕೆಡೆ ಬೀಳು ಕೆಡೆದನು
ಕೆರೆ ತುರಿಸು ಕೆರೆದನು
ಕೆಣಕು ರೇಗಿಸು ಕೆಣಕಿದನು
ಕೆತ್ತು ಸವರು ಕೆತ್ತಿದರು
ಕೆಡಿಸು ಹಾಳುಮಾಡು ಕೆಡಿಸಿದನು
ಕೆರಳು ಸಿಟ್ಟಿಗೇಳು ಕೆರಳಿದನು
ಕೆಲಸಾರು ಹತ್ತಿರಕ್ಕೆ ಬಾ ಕೆಲಸಾರಿದನು
ಕೇಳು ಕೇಳುವಿಕೆ ಕೇಳಿದನು
ಕೇರು ಹಸನುಮಾಡು (ಧಾನ್ಯಶುದ್ಧಿ ಮಾಡುವಿಕೆ) ಕೇರಿದನು
ಕೈಗೂಡು ಕೈಗೆಸಿಗು ಕೈಗೂಡಿತು
ಕೈಬಿಡು ತ್ಯಜಿಸು ಕೈಬಿಟ್ಟನು
ಕೈಸಾರು ವಶವಾಗು ಕೈಸಾರಿತು
ಕೊಡು(ಕುಡು) ಕೊಡುವಿಕೆ ಕೊಟ್ಟನು
ಕೊಂಡಾಡು ಹೊಗಳು ಕೊಂಡಾಡಿದನು
ಕೊನರು ಚಿಗುರು ಕೊನರಿತು
ಕೊಲ್ಲು(ಕೊಲ್) ಸಾಯಿಸು ಕೊಂದನು
ಕೊಚ್ಚು ಚೂರುಮಾಡು ಕೊಚ್ಚಿದನು
ಕೊಡವು ಕೊಡವುವಿಕೆ ಕೊಡವಿದನು
ಕೊರಗು ವ್ಯಸನಪಡು ಕೊರಗಿದನು
ಕೊರೆ ಕತ್ತರಿಸು ಕೊರೆದನು
ಕೊಯ್ ಕೊಯ್ಯುವಿಕೆ ಕೊಯ್ದನು
ಕೊಳೆ ಕೊಳೆಯುವಿಕೆ ಕೊಳೆತಿದೆ
ಕೋರಯಿಸು ಕಣ್‌ಕುಕ್ಕು ಕೋರೈಸುತ್ತದೆ
ಕೋರು ಬಯಸು ಕೋರಿದನು
ಗದರು ಸಿಟ್ಟುಮಾಡು ಗದ್ದರಿಸು ಗದರಿದನು
ಗಳಪು ಹರಟು ಗಳಪಿದನು
ಗಳಿಸು ಕೂಡುಹಾಕು ಗಳಿಸಿದನು
ಗುದ್ದು ಮುಷ್ಟಿಯಿಂದ ಹೊಡೆ ಗುದ್ದಿದನು
ಗುಡಿಸು ಸ್ವಚ್ಛಮಾಡು ಗುಡಿಸಿದನು
ಗುಡುಗು ಗದರಿಸು ಗುಡುಗಿದನು
ಗೆಲ್ (ಗೆಲ್ಲು) ಗೆದ್ದೆ ಗೆದ್ದೆನು
ಗೆಯ್ (ಗೆಯ್ಯಿ) ಮಾಡುವಿಕೆ ಗೆಯ್ದನು
ಗೋರು ತಳಕ್ಕೆ ಹಚ್ಚಿಮೊಗೆಯುವಿಕೆ ಗೋರಿದನು
ಗೋಳಿಡು ಹೆಚ್ಚಾಗಿ ದುಃಖಪಡು ಗೋಳಿಟ್ಟನು
ಚೆಲ್ಲು ಬಿಸಾಡು ಚೆಲ್ಲಿದನು
ಚೆಚ್ಚು (ಜಜ್ಜು) ಜಜ್ಜಿಹಾಕು ಚೆಚ್ಚಿದನು
ಚಿಗಿ ಕೊನರುವಿಕೆ ಚಿಗಿತಿತು
ಚೀರು ಗಟ್ಟಿಯಾಗಿ ಕೂಗು ಚೀರಿದನು
ಚಾಚು ಮುಂದುಮಾಡು ಚಾಚಿದನು
ಚಿಮ್ಮು ಬೆರಳಿನಿಂದ ನೂಕು ಚಿಮ್ಮಿದನು
ಚುಚ್ಚು ಚುಚ್ಚುವಿಕೆ ಚುಚ್ಚಿತು
ಚಿತ್ತೈಸು ಕೇಳು ಚಿತ್ತೈಸಿದನು
ಚಿವುಟು ಉಗುರಿನಿಂದ ಚುಚ್ಚು ಚಿವುಟಿದನು
ಚಿಮುಕಿಸು ಚಿಮುಕಿಸುವಿಕೆ ನೀರು ಚಿಮುಕಿಸಿದನು
ಚೀಪು ಚೀಪುವಿಕೆ ಚೀಪುತ್ತಾನೆ
ಜಜ್ಜು ಜಜ್ಜಿಹಾಕು ಜಜ್ಜಿದನು
ಜಾರು ಜಾರುವಿಕೆ ಜಾರಿದನು
ಜಗುಳು ಜಾರುವಿಕೆ ಜಗುಳುತ್ತದೆ
ಜಡಿ ಹೊಡೆ ಜಡಿದನು
ಜಿನುಗು (ಜಿನುಂಗು) ಸಣ್ಣಗೆ ಒಸರುವಿಕೆ ಜಿನುಗುತ್ತದೆ
ತಗಲು ಸೊಂಕು ತಗಲಿತು
ತಣಿ ತೃಪ್ತಿಗೊಳ್ಳು ತಣಿದನು
ತಗ್ಗು ಬಾಗು ತಗ್ಗಿದನು
ತಳ್ಳು ನೂಕು ತಳ್ಳಿದನು
ತಡವು ಕೈಯಿಂದ ಮುಟ್ಟಿನೋಡುವಿಕೆ ತಡವಿದನು
ತಟ್ಟು ಬಡಿ ತಟ್ಟಿದನು
ತಡೆ ನಿಲ್ಲಿಸು, ಎದುರಿಸು, ಪ್ರತಿಬಂಧಿಸು ತಡೆದನು
ತಣಿ ತೃಪ್ತಿಪಡು ತಣಿದನು
ತಳೆ ಹೊಂದು, ಧರಿಸು ತಳೆದನು
ತಳಿ ಚಿಮುಕಿಸು ನೀರುತಳಿದಳು
ತದೆ ಹೊಡೆ ತದ್ದನು
ತರುಬು ನಿಲ್ಲಿಸು ತರುಬಿದನು
ತಪ್ಪು ಚ್ಯುತಿಹೊಂದು ತಪ್ಪಿದನು
ತಬ್ಬು ಆಲಂಗಿಸು ತಬ್ಬಿದನು
ತರಿ ಕತ್ತರಿಸು ತರಿದನು
ತಲುಪು ಸೇರು ತಲುಪಿದನು
ತಲ್ಲಣಿಸು ಸಂಕಟಪಡು ತಲ್ಲಣಿಸಿದನು
ತಳುವು ತಡಮಾಡು ತಳುವಿದನು
ತಳೆ ಹೊಂದು (ಧರಿಸು) ತಳೆದನು
ತಾಕು (ತಾಗು) ಮುಟ್ಟು, ಎದುರಾಗು ತಾಕಿದನು
ತಾಳು ಸೈರಿಸು ತಾಳಿದನು
ತಾಗು ಸೊಂಕು ಮೈತಾಗಿತು
ತಿಳಿ ತಿಳಿಯುವಿಕೆ ತಿಳಿದನು
ತಿರುಗು ಅಲೆ, ಮರಳು ತಿರುಗಿದನು
ತಿನ್ನು ಭಕ್ಷಿಸು ತಿಂದನು
ತಿರಿ ತಿರಿಯುವಿಕೆ ತಿರಿದನು
ತಿವಿ ಚುಚ್ಚು ತಿವಿದನು
ತಿದ್ದು ಸರಿಪಡಿಸು ತಿದ್ದಿದನು
ತಿಕ್ಕು ಉಜ್ಜು ತಿಕ್ಕಿದನು
ತೀಡು ಬೀಸು ತೀಡಿತು
ತೀರು ಮುಗಿ ತೀರಿತು
ತೀವು ತುಂಬು ತೀವಿದೆ
ತುಂಬು ತುಂಬುವಿಕೆ ತುಂಬಿದೆ
ತುರುಕು ಬಿರುಸಿನಿಂದ ಇಡು ತುರುಕಿದನು
ತುಡು (ತೊಡು) ಧರಿಸು ತೊಟ್ಟನು
ತುಳುಕು ಹೊರಚೆಲ್ಲು ತುಳುಕಿತು
ತುಳಿ ಮೆಟ್ಟು ತುಳಿದನು
ತುರಿಸು ಕೆರೆ ತುರಿಸಿದನು
ತುಡುಕು ಆತುರದಿಂದ ಹಿಡಿ ತುಡುಕಿದನು
ತೂಗು ಅಲ್ಲಾಡಿಸು, ಅಳತೆಮಾಡು ತೂಗಿದನು
ತೆಗೆ ತೆಗೆಯುವಿಕೆ ತೆಗೆದನು
ತೆರೆ ಕಾಣುವಹಾಗೆ ಮಾಡು ತೆರೆದನು
ತೆಗಳು ತಿರಸ್ಕರಿಸು ತೆಗಳಿದನು
ತೆರು ಕೊಡು ತೆತ್ತನು
ತೇಗು ತೇಗುವಿಕೆ (ತೇಂಕು) ತೇಗಿದನು
ತೇಲು ತೇಲುವಿಕೆ ತೇಲುತ್ತದೆ
ತೊಡು ತೊಡುವಿಕೆ, ಧರಿಸುವಿಕೆ ತೊಟ್ಟನು
ತೊಡಗು ಕಾರ‍್ಯದಲ್ಲಿ ಪ್ರವೃತ್ತನಾಗು ತೊಡಗಿದನು
ತೊಳಗು ಪ್ರಕಾಶಿಸು ತೊಳಗಿತು
ತೊಲಗು ದೂರಸರಿ ತೊಲಗಿತು
ತೊಡೆ ಧರಿಸು, ಹಚ್ಚು ತೊಡೆದನು
ತೊಡೆ ಸುಗಂಧವನ್ನು ತೊಡೆದನು ತೊಡೆದನು
ತೊಯ್ ಒದ್ದೆಯಾಗು ತೊಯ್ದನು
ತೋರು ಕಾಣುವಂತೆ ಮಾಡು ತೋರಿದನು
ದಣಿ ಆಯಾಸ ಹೊಂದು ದಣಿದನು
ದಾಟು ಆಚೆ ದಡ ಸೇರು ದಾಟಿದನು
ಧುಮುಕು ಹಾರಿಕೊಳ್ಳುವಿಕೆ ಧುಮುಕಿದನು
ದೊರೆ ಸಿಗು ದೊರೆಯಿತು
ದೊರಕು ಸಿಗು ದೊರಕಿತು
ದೋಚು ಲೂಟಿಮಾಡು ದೋಚಿದನು
ನಡೆ ಚಲಿಸುವಿಕೆ ನಡೆದನು
ನಡುಗು ಕಂಪಿಸು ನಡುಗಿತು
ನಂಬು ವಿಶ್ವಾಸವಿಡು ನಂಬಿದನು
ನಂದು ಆರುವಿಕೆ ನಂದಿತು
ನಗು ನಗುವಿಕೆ ನಕ್ಕನು
ನರಳು ನರಳುವಿಕೆ ನರಳಿದನು
ನಲುಗು ಬೇನೆಯಿಂದ ಬತ್ತುವಿಕೆ ನಲುಗಿದನು
ನಲಿ ಸಂತೋಷಪಡು ನಲಿದನು
ನಾಟು ಚುಚ್ಚುವುದು ನಾಟಿತು
ನಾಚು ಲಜ್ಜೆಪಡು ನಾಚಿದನು
ನಾರು ವಾಸನೆ ಬರುವಿಕೆ ನಾರುವುದು
ನಿಲ್ಲು ನಿಲ್ಲುವಿಕೆ ನಿಂತನು
ನಿಮಿರು ಎದ್ದುನಿಲ್ಲುವಿಕೆ ಕೂದಲು ನಿಮಿರಿದವು (ಕಿವಿ ನಿಮಿರಿದವು)
ನೀಡು ಹಾಕು, ಕೊಡು ನೀಡಿದನು
ನೀಗು ದೂರವಾಗು ನೀಗಿತು
ನುಡಿ ಮಾತಾಡು ನುಡಿದನು
ನುಂಗು ನುಂಗುವಿಕೆ ನುಂಗಿದನು
ನುಸುಳು ಜಾರಿಹೋಗುವಿಕೆ ನುಸುಳಿದನು
ನುರಿ ಸಣ್ಣಗೆ ಮಾಡು ನುರಿಯಿತು
ನೂಂಕು (ನೂಕು) ನೂಕುವಿಕೆ ನೂಂಕಿದನು (ನೂಕಿದನು)
ನೂಲು ನೂಲುವಿಕೆ ನೂತನು
ನೆಗಪು (ನೆಗಹು) ಎತ್ತುವಿಕೆ ನೆಗಪಿದನು (ನೆಗಹಿದನು)
ನೆಗೆ ಹಾರು ನೆಗೆದನು
ನೆನೆ ಸ್ತೋತ್ರ ಮಾಡು ನೆನೆದನು
ನೆಯ್ ಬಟ್ಟೆನೇಯುವಿಕೆ ನೇಯ್ದನು
ನೆಲಸು ಸ್ಥಿರವಾಗಿ ನಿಲ್ಲು ನೆಲಸಿದೆ
ನೆರೆ ಸೇರು ನೆರೆದರು
ನೆಗಳ್ ಮಾಡುವಿಕೆ ನೆಗಳ್ದನು (ಪ್ರಯತ್ನ ಮಾಡುವಿಕೆ)
ನೋ (ನೋಯ್) ನೊಯ್ಯುವಿಕೆ ನೊಂದನು
ನೋನ್ (ನೋನು) ವ್ರತಮಾಡು ನೋಂತನು
ಪಡೆ ಹೊಂದು ಪಡೆದನು
ಪರಿ ಹರಿಯುವಿಕೆ ಪರಿದನು
ಹರಿ ತುಂಡುಮಾಡುವಿಕೆ ಹರಿದನು
ಪರ್ಬು ಎಲ್ಲಕಡೆಗೂ ವಿಸ್ತಾರವಾಗು ಪರ್ಬು
ಹಬ್ಬು ಎಲ್ಲಕಡೆಗೂ ವಿಸ್ತಾರವಾಗು ಪಬ್ಬು
ಪಡು ಮಲಗುವಿಕೆ ಪಟ್ಟನು
ಪತ್ತು (ಹತ್ತು) ಏರುವಿಕೆ ಪತ್ತಿದನು (ಹತ್ತಿದನು)
ಪರಸು (ಹರಸು) ಆಶೀರ್ವಾದ ಮಾಡು, ಪರಸಿದನು
ಕೋರು (ಹರಸಿದನು)
ಪರಪು (ಹರಹು) ಹರಡುವಿಕೆ ಪರಪಿದನು
(ಹರಹಿದನು)
ಪವಡಿಸು ಮಲಗು ಪವಡಿಸಿದನು
ಪಾಸು (ಹಾಸು) ಹಾಸುವಿಕೆ ಪಾಸಿದನು (ಹಾಸಿದನು)
ಪಾಡು (ಹಾಡು) ಹಾಡುವಿಕೆ ಪಾಡಿದನು (ಹಾಡಿದನು)
ಪುಗು (ಹೊಗು) (ಹುಗು) ಪ್ರವೇಶಿಸುವಿಕೆ ಪೊಕ್ಕನು (ಹೊಕ್ಕನು)
ಪುದುಗಿಸು ಹುದುಗಿಸುವಿಕೆ ಪುದುಗಿಸಿದನು
ಹುದುಗಿಸು ಅಡಗಿಸುವಿಕೆ ಹುದುಗಿಸಿದನು
ಪೂಣ್ (ಹೂಣ್) ಪ್ರತಿಜ್ಞೆಮಾಡು ಪೂಣ್ದನು (ಹೂಣ್ದನು)
ಪೂಸು (ಹೂಸು) ಲೇಪಿಸು ಪೂಸಿದನು (ಹೂಸಿದನು)
ಪೆರ್ಚು ಹೆಚ್ಚಾಗುವಿಕೆ ಪೆರ್ಚಿತು
ಪೇಳ್ (ಹೇಳು) ಹೇಳುವಿಕೆ ಪೇಳಿದನು (ಹೇಳಿದನು) (ಪೇಳ್ದನು)
ಪೊರಮಡು ಹೊರಬೀಳು ಪೊರಮಟ್ಟನು
ಪೊರೆ (ಹೊರೆ) ಸಂರಕ್ಷಿಸು ಪೊರೆದನು (ಹೊರೆದನು)
ಪೊಳೆ (ಹೊಳೆ) ಪ್ರಕಾಶಿಸು ಪೊಳೆಯಿತು (ಹೊಳೆಯಿತು)
ಪೊರ್ದು ಹೊಂದು ಪೊರ್ದಿದನು
ಪೊಸೆ (ಹೊಸೆ) ಪೊಸೆಯುವಿಕೆ ಪೊಸೆದನು (ಹೊಸೆದನು)
ಪೋರ್ (ಹೋರು) ಹೋರಾಡುವಿಕೆ ಪೋರ್ದನು (ಹೋರಿದನು)
ಪೋಗು (ಹೋಗು) ಹೋಗುವಿಕೆ ಪೋದನು (ಹೋದನು)
ಪೇಳ್ (ಪೇಳು) (ಹೇಳು) ಹೇಳುವಿಕೆ ಪೇಳಿದನು (ಹೇಳಿದನು)
ಪಿಂಗು (ಹಿಂಗು) ದೂರವಾಗು ಪಿಂಗಿತು (ಹಿಂಗಿತು)
ಪೀರ್ (ಹೀರು) ಹೀರುವಿಕೆ ಪೀರಿದಂ (ಹೀರಿದನು)
ಬರೆ ಬರೆಯುವಿಕೆ ಬರೆದನು
ಬಗೆ ಚಿಂತಿಸು, ಯೋಚಿಸು ಬಗೆದನು
ಬಸಿ ತೊಟ್ಟಿಕ್ಕು, ಜಿನುಗು ಬಸಿಯಿತು
ಬರು ಬರುವಿಕೆ ಬಂದನು
ಬದುಕು ಜೀವಿಸು ಬದುಕಿದನು
ಬಗಿ ತೋಡು ಬಗಿದನು
ಬಚ್ಚಿಡು ಮುಚ್ಚಿಡು ಬಚ್ಚಿಟ್ಟನು
ಬತ್ತು ಇಂಗು ಬತ್ತಿತು
ಬಳಲು ಆಯಾಸಗೊಳ್ಳು ಬಳಲಿದನು
ಬಳಸು ಸುತ್ತಿಬರುವುದು (ವೆಚ್ಚಮಾಡು) ಬಳಸಿದನು
ಬಳೆ (ಬೆಳೆ) ವೃದ್ಧಿಯಾಗು ಬೆಳೆಯುವಿಕೆ ಬಳೆದನು (ಬೆಳೆದನು)
ಬಳುಕು ಬಳುಕುವಿಕೆ ಬಳುಕಿದಳು
ಬಾಗು ಬಾಗುವಿಕೆ ಬಾಗಿದನು
ಬಾಡು ಬತ್ತುವುದು ಬಾಡಿತು
ಬಾಚು ಒಟ್ಟುಗೂಡು ಬಾಚಿದನು
ಬಾಯ್ವಿಡು (ಬಾಯಿಬಿಡು) ಅಳುವಿಕೆ (ಕೂಗುವಿಕೆ) ಬಾಯ್ವಿಟ್ಟಳು (ಬಾಯಿಬಿಟ್ಟಳು)
ಬಾಳು ಬದುಕುವಿಕೆ ಬಾಳಿದನು
ಬಾಸಣಿಸು ಮುಚ್ಚು ಬಾಸಣಿಸಿದನು
ಬಿಡು ತ್ಯಜಿಸು ಬಿಟ್ಟನು
ಬಿರಿ ಅರಳು, ಸೀಳು ಬಿರಿಯಿತು
ಬಿಕ್ಕು ಬಿಕ್ಕುವಿಕೆ ಬಿಕ್ಕಿದನು
ಬಿಗಿ ಬಂಧಿಸು ಬಿಗಿದನು
ಬಿತ್ತು ಬೀಜಹಾಕು ಬಿತ್ತಿದನು
ಬಿಚ್ಚು ಕಟ್ಟು ಉಟ್ಟು ಬಿಚ್ಚಿದನು
ಬಿಸುಡು ಎಸೆಯುವಿಕೆ ಬಿಸುಟನು
ಬೀಗು ಗರ್ವಪಡು ಬೀಗಿದನು
ಬೀಸು ಬೀಸುವಿಕೆ (ಎಸೆಯುವಿಕೆ) ಒಲೆ ಬೀಸಿದನು
ಬೀಳು ನೆಲಕ್ಕೆ ಬೀಳು ಬಿದ್ದನು
ಬೆಳಗು ಪ್ರಕಾಶಿಸು ಬೆಳಗಿತು
ಬೆದರು ಅಂಜು ಬೆದರಿದನು
ಬೆರಸು ಮಿಶ್ರಮಾಡು ಬೆರಸಿದನು
ಬೆಸಸು ಅಪ್ಪಣೆ ಮಾಡು ಬೆಸಸಿದನು
ಬೆಸೆ ಜೋಡಿಸು (ಅಂಟಿಸು) ಬೆಸೆದನು
ಬೆಂಗೊಳ್ಳು ಬೆನ್ನುಹತ್ತು ಬೆಂಗೊಂಡನು
ಬೆರ್ಚು (ಬೆಚ್ಚು) ಬೆಚ್ಚುಬೀಳುವಿಕೆ ಬೆರ್ಚಿದನು (ಬೆಚ್ಚಿದನು)
ಬೇಡು ಯಾಚಿಸು ಬೇಡಿದನು
ಬೇ ಸುಡುವಿಕೆ ಬೆಂದಿತು (ಬೆಯ್)
ಬೊಬ್ಬಿರಿ ಗಟ್ಟಿಯಾಗಿ ಕೂಗು ಬೊಬ್ಬಿರಿದನು
ಮಸಗು ವಿಜೃಂಭಿಸು ಕೈಕೈಮಸಗಿತು
ಮಡಗು ಇಡು ಮಡಗಿದನು (ಮಡುಗು)
ಮರುಗು ವ್ಯಸನಪಡು ಮರುಗಿದನು
ಮಡಿ ಸಾಯ್ ಮಡಿದನು
ಮರಳು ಕುದಿಯುವಿಕೆ ಮರಳುತ್ತದೆ
ಮರಳು ಹಿಂದಿರುಗು ಮರಳಿದನು
ಮರೆ ಮರೆಯುವಿಕೆ ಮರೆತನು
ಮರಸು ಮರೆಯುವಂತೆ ಮಾಡು (ಕಾಣದಂತೆಮಾಡು) ಮರೆಸಿದನು
ಮಲೆ ಗರ್ವದಿಂದ ಎದುರಿಸಿ ನಿಲ್ಲು ಮಲೆತನು
ಮಸೆ ತಿಕ್ಕು, ಚೂಪುಗೊಳಿಸು ಮಸೆದನು
ಮಾಡು ಮಾಡುವಿಕೆ ಮಾಡುತ್ತಾನೆ
ಮಾರು ಮಾರಾಟಮಾಡುವಿಕೆ ಮಾರಿದನು
ಮಾಗು ಹಣ್ಣಾಗುವಿಕೆ ಮಾಗಿತು
ಮಾಸು ಕೊಳೆಯಾಗು ಮಾಸಿದೆ
ಮಾಣ್ (ಮಾಣು) ಬಿಡುವಿಕೆ ನಿಷೇಧಿಸು, ನಿಲ್ಲಿಸು ಮಾಣಲಿ
ಮಾರ್ನುಡಿ ಎದುರುಮಾತಾಡು ಮಾರ್ನುಡಿದನು
ಮಿಸುಕು ಮಿಸುಕುವಿಕೆ ನಿದ್ದೆಯಲ್ಲಿ ಮಿಸುಕಿದನು
ಮಿನುಗು ಪ್ರಕಾಶಿಸು ಮಿನುಗುತ್ತದೆ
ಮಿಕ್ಕು ಉಲ್ಲಂಘಿಸು ಮಿಕ್ಕಿದನು
ಮಿಂಚು ಹೊಳೆಯುವಿಕೆ ಮಿಂಚಿತು
ಮಿಡಿ ಬೆರಳಿನಿಂದ ಬಾರಿಸು ಮಿಡಿದನು
ಮಿದಿ ನಾದುವುದು ಮಿದಿಯುತ್ತಾನೆ
ಮೀ (ಮೀಯ್) ಸ್ನಾನಮಾಡು ಮಿಂದನು
ಮೀಂಟು ಮುಂದೆತಳ್ಳು ಮೀಂಟಿದನು
ಮೀರು ಮಿಕ್ಕು ಮೀರಿದನು
ಮುಟ್ಟು ಮುಟ್ಟುವಿಕೆ, ತಲಪುವಿಕೆ ಮುಟ್ಟಿದನು
ಮುಳಿ ಸಿಟ್ಟಾಗು ಮುಳಿದನು
ಮುಡಿ ಧರಿಸು ಹೂ ಮುಡಿದಳು
ಮುದುಡು ಮುದುಡಿಕೊಳ್ಳುವಿಕೆ ಮುದುಡಿಕೊಂಡನು
ಮುಗಿ ಮೊಗ್ಗಾಗು, ಕೈಜೋಡಿಸು ತೀರಿಹೋಗು ಮುಗಿದನು
ಮುಸುಕು ಕವಿಯುವಿಕೆ ಹೊಗೆ ಮುಸುಕಿತು
ಮುಕ್ಕುಳಿಸು ನೀರು ಮುಕ್ಕುಳಿಸುವಿಕೆ ನೀರು ಮುಕ್ಕುಳಿಸಿದನು
ಮುಕ್ಕು ತಿನ್ನು, ನುಂಗು ಮುಕ್ಕಿದನು
ಮುಗ್ಗು ಜೋಲಿಹೋಗು ರಾಗಿ ಮುಗ್ಗಿದೆ
ಧಾನ್ಯಗಳು ವಾಸನೆ ಬರುವಿಕೆ
ಮುಗ್ಗರಿಸು ಜೋಲಿಹೋಗುವಿಕೆ ಮುಗ್ಗರಿಸಿದನು
ಮುರಿ ಚೂರು ಮಾಡು ಮುರಿದನು
ಮುಳುಗು ಕಾಣದಂತಾಗು ಮುಳುಗಿತು
ಮೂಡು ಹುಟ್ಟು ಮೂಡಿತು
ಮೂಸು ವಾಸನೆ ತೆಗೆದುಕೊಳ್ಳುವುದು ಮೂಸಿದನು
ಮೆರೆ ಡಂಭಾಚಾರದಿಂದ ತಿರುಗು ಮೆರೆಯುತ್ತಾನೆ
ಮೆಚ್ಚು ಒಪ್ಪು, ಪ್ರಸನ್ನನಾಗು ಮೆಚ್ಚಿದನು
ಮೆಲ್ಲು ತಿನ್ನು ಮೆದ್ದನು
ಮೆಟ್ಟು ತುಳಿ ಮೆಟ್ಟಿದನು
ಮೇ (ಮೇಯ್) ಪಶುಗಳು ಆಹಾರ ತಿನ್ನುವಿಕೆ ಮೇಯುತ್ತದೆ
ಮೊಳೆ ಮೊಳಕೆಯೊಡಯುವಿಕೆ ಮೊಳೆಯಿತು
ಮೊಳಗು ವಾದ್ಯಗಳು ಧ್ವನಿಮಾಡುವಿಕೆ  ಮೇಘಧ್ವನಿ ಮೊಳಗಿದವು
ಮೋದು ಹೊಡೆಯುವಿಕೆ, ಪ್ರಯೋಗಿಸುವಿಕೆ ಗದೆಯಿಂದ ಮೋದಿದನು
ರೇಗು ಸಿಟ್ಟಾಗು ರೇಗಿದನು
ಸಲಹು ಸಂರಕ್ಷಿಸು ಸಲಹಿದನು
ಸರಿ ಪಕ್ಕಕ್ಕೆ ಹೋಗುವಿಕೆ ಸರಿದನು
ಸಂತವಿಡು ಸಂತೋಷಪಡಿಸು ಸಂತೈಸುವಿಕೆ ಸಂತವಿಟ್ಟನು
ಸವಿ ರುಚಿನೋಡು, ತಿನ್ನು ಸವಿದನು
ಸಡಿಲು ಕಟ್ಟುಸಡಿಲಾಗುವಿಕೆ ಸಡಿಲಿದೆ
ಸದೆ ಹೊಡೆ, ಬಡಿ ಸದೆದನು
ಸಾ (ಸಾಯ್) ಮರಣಹೊಂದು ಸತ್ತನು
ಸಾಕು ರಕ್ಷಿಸು ಸಾಕಿದನು
ಸಾರಿಸು ಸಾರಣೆ ಮಾಡುವಿಕೆ ಸಾರಿಸಿದಳು
ಸಾರು ಪ್ರಕಟಪಡಿಸು ಹತ್ತಿರಕ್ಕೆ ಹೋಗು ಸಾರಿದರು
ಸಾಗು ಹೋಗು, ನಡೆ ಸಾಗಿದನು
ಸಿಗು ಕೈಸೇರು ಸಿಕ್ಕಿತು
ಸೀನ್ (ಸೀನು) ಸೀನುವಿಕೆ ಸೀತನು
ಸೀಯ್ ಸುಡುವಿಕೆ ಕಮರುವಿಕೆ, ಹೊತ್ತುವಿಕೆ ಅನ್ನ ಸೀತಿದೆ (ಸೀದಿದೆ)
ಸಿಲುಕು ಬಂಧನಕ್ಕೊಳಗಾಗು ಸಿಲುಕಿದನು
ಸಿಗು ಹಸ್ತಗತವಾಗು ಸಿಕ್ಕಿತು
ಸುಗಿ ಸುಗಿಯುವಿಕೆ ಸುಗಿದನು
ಸುಯ್ ಉಸಿರುಬಿಡು ಸುಯ್ದನು
ಸುಲಿ ಸಿಪ್ಪೆಸುಲಿಯುವಿಕೆ ಸುಲಿದನು
ಸುಳಿ ತಿರುಗುವಿಕೆ ಸುಳಿದನು
ಸೂಸು ತುಂಬು ಸೂಸಿದೆ
ಸೆಣಸು ಯುದ್ಧಮಾಡು ಸೆಣಸಿದನು
ಸೆಳೆ ಜಗ್ಗು ಸೆಳೆದನು
ಸೊಲ್ಲಿಸು ಮಾತಾಡುವಿಕೆ ಸೊಲ್ಲಿಸಿದನು
ಸೋಲ್ (ಸೋಲು) ಅಪಜಯ ಸೋತನು
ಹರಡು ಹರಡುವಿಕೆ ಹರಡಿದನು
ಹವಣಿಸು ಅಪೇಕ್ಷಿಸು, ಇಚ್ಚಿಸು ಸಿದ್ಧಪಡಿಸು ಹವಣಿಸಿದನು
ಹಂಚು ಹಂಚುವಿಕೆ ಹಂಚಿದನು
ಹತ್ತು ಏರು ಹತ್ತಿದನು
ಹನಿ ತೊಟ್ಟಿಕ್ಕು ಹನಿಯುತ್ತದೆ
ಹನಿಸು ಎರೆಯುವಿಕೆ ಹನಿಸಿದನು
ಹರಸು ಆಶೀರ್ವಾದಮಾಡು ಹರಸಿದನು
ಹಿಂಡು ಹಿಂಡುವಿಕೆ ರಸಹಿಂಡಿದನು ತೊಂದರೆಕೊಡುವಿಕೆ
ಹುರಿ ಹುರಿಯುವಿಕೆ ಹುರಿದನು
ಹರಿ ಹರಿಯುವಿಕೆ ಹರಿಯಿತು
ಹಿರಿ ಹೊರಗೆಳೆ ಹಿರಿದನು
ಹಬ್ಬು ವಿಸ್ತಾರವಾಗು ಹಬ್ಬಿತು
ಹಳಿ ನಿಂದಿಸು ಹಳಿದನು
ಹಾರು ಜಿಗಿಯುವಿಕೆ, ನೆಗೆಯುವಿಕೆ ಹಾರಿದನು
ಹಾರು ಎದುರುನೋಡು ಹಾರಿದನು
ಹಾಡು ಸಂಗೀತ ಹೇಳುವಿಕೆ ಹಾಡಿದನು
ಹಿಂಗು ನೀಗು, ಬಿಟ್ಟುಬಿಡು ಹಿಂಗಿತು
ಹಿಂಜು ಹಿಂಜುವಿಕೆ ಹತ್ತಿಯನ್ನು ಹಿಂಜಿದನು
ಹಿಸುಕು (ಹಿಚುಕು) ಒತ್ತೊವಿಕೆ ಹಿಸುಕಿದನು ಹಿಚುಕಿದನು
ಹೀರು ಹೀರುವಿಕೆ ರಸ ಹೀರಿದನು
ಹುಗಿ ನೆಲದಲ್ಲಿ ಮುಚ್ಚು ಹುಗಿದನು
ಹೆರು ಪ್ರಸವಕ್ರಿಯೆಯಲ್ಲಿ ಹೆತ್ತಳು
ಹೆಣಗು ಯತ್ನಿಸು ಹೆಣಗಿದನು
ಹೇರು ಭಾರಹೇರುವಿಕೆ ಭಾರಹೇರಿದನು
ಹೇವರಿಸು ನಾಚು ಹೇವರಿಸಿದನು
ಹೊರೆ ರಕ್ಷಣೆಮಾಡು ಹೊರೆದನು
ಹೊಂದು ಸೇರು, ಪಡೆ ಹೊಂದಿದನು
ಹೊಳೆ ಪ್ರಕಾಶಿಸು ಹೊಳೆಯುತ್ತದೆ
ಹೋರು ಯುದ್ಧಮಾಡು ಹೋರಿದನು
ಜಗಳವಾಡು
ಹೋಲು ಸಮನಾಗು ಹೋಲಿಕೆಯಲ್ಲಿ ಹೋಲುತ್ತಾನೆ

[1] ಅರಸು ಎಂಬಲ್ಲಿ ರಕಾರವೂ, ಅರಿ ಎಂಬಲ್ಲಿ ರಿ ಕಾರವೂ ಶಕಟ ರೇಫಗಳಾದರೂ ಬಳಕೆಯಲ್ಲಿ ಈ ವರ್ಣವನ್ನು ಈಗ ಕೈಬಿಟ್ಟಿರುವುದರಿಂದ ರೇಫ ರಕಾರವನ್ನೇ ಬರೆಯಲಾಗಿದೆ.  ಎಲ್ಲ ಕಡೆಗೂ ಆ ನಿಯಮವನ್ನು ಪಾಲಿಸಿಲ್ಲ.

[2] ಅಳಲು-ಎಂಬಲ್ಲಿ ಳಕಾರವು ರಳ ಳಕಾರ.  ಆ ನಿಯಮವನ್ನು ಪಾಲಿಸದೆ ಎಲ್ಲ ಕಡೆಗೂ ಳ ಕಾರವನ್ನೇ ಬರೆಯಲಾಗಿದೆ.