ಅಭ್ಯಾಸ ಪ್ರಶ್ನೆಗಳು

(೧)    (ಅ) ತದ್ಧಿತಾಂತ ನಾಮಗಳೆಂದರೇನು? ವಿವರಿಸಿರಿ.

(ಆ) ತದ್ಧಿತಾಂತ ಭಾವನಾಮಗಳೆಂದರೇನು? ವಿವರಿಸಿರಿ.

(ಇ) ತದ್ಧಿತಾಂತಾವ್ಯಯಗಳೆಂದರೇನು? ವಿವರಿಸಿರಿ.

(ಈ) ತದ್ಧಿತಾಂತಭಾವನಾಮ, ಕೃದಂತಭಾವನಾಮಗಳಿಗೆ ವ್ಯತ್ಯಾಸಗಳೇನು? ವಿವರಿಸಿರಿ.

(೨)       ಕೆಳಗೆ ಬಿಟ್ಟಿರುವ ಸ್ಥಳಗಳಲ್ಲಿ ಸರಿಯಾದ ಪದವನ್ನು ಸೇರಿಸಿ ಅರ್ಥವು ಸರಿಹೋಗುವಂತೆ ಮಾಡಿರಿ.

(ಅ)  ____ ಪದಗಳ ಮುಂದೆ ಹಲವಾರು ಅರ್ಥಗಳಲ್ಲಿ ಗಾರ, ಕಾರ, ಇಗ ಇತ್ಯಾದಿ _________ ಸೇರಿ ತದ್ಧಿತಾಂತಗಳಾಗುವುವು.

(ಆ) ನಾಮಪದಗಳ ಮುಂದೆ ತನ, ಇಕೆ, ಉ-ಇತ್ಯಾದಿ ಪ್ರತ್ಯಯಗಳು ಸೇರಿ ____ ಎನಿಸುವುವು.

(ಇ) ನಾಮಪದಗಳ ಮುಂದೆ ______ ಪ್ರತ್ಯಯಗಳು ಸೇರಿ ತದ್ಧಿತಾಂತಾವ್ಯಯಗಳೆನಿಸುವುವು.

(ಈ) ಇತಿ, ಗಿತ್ತಿ, ಎಂಬಿವು _______ ಲಿಂಗದಲ್ಲಿ ಬರುವ ಪ್ರತ್ಯಯಗಳು.

(೩)        ಈ ಕೆಳಗಿನ ವಾಕ್ಯಗಳಲ್ಲಿ ಬಿಟ್ಟಿರುವ ಸ್ಥಳಗಳಲ್ಲಿ ಆವರಣದಲ್ಲಿ ಕೊಟ್ಟಿರುವ ಒಂದು ಸರಿಯುತ್ತರವನ್ನು ಆರಿಸಿ ಹಾಕಿರಿ.

(ಅ)  ___ ಪದಗಳ ಮುಂದೆ ಹಲವಾರು ಅರ್ಥಗಳಲ್ಲಿ ತದ್ಧಿತ ಪ್ರತ್ಯಯಗಳು ಬಂದು ತದ್ಧಿತಾಂತಗಳಾಗುವುವು.     (ಕ್ರಿಯಾ, ನಾಮ, ಧಾತು)

(ಆ) ತದ್ಧಿತಪ್ರತ್ಯಯವು ಸೇರಿದಾಗ ಮೊದಲ ಪದದ ನಾಮವಿಭಕ್ತಿಪ್ರತ್ಯಯವು ____ ಆಗುವುದು.     (ಲೋಪ, ಆಗಮ, ಆದೇಶ)

(ಇ) ಬ್ರಾಹ್ಮಣತಿ ಎಂಬುದು _______ ರೂಪ.  (ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ)

(ಈ) ನಾಮಪದಗಳ ಮುಂದೆ _______ ದಲ್ಲಿ ತನ, ಇಕೆ, ಉ ಇತ್ಯಾದಿ ಪ್ರತ್ಯಯಗಳು ಬಂದು ತದ್ಧಿತಾಂತ ಭಾವನಾಮಗಳೆನಿಸುವುವು.  (ನಿಶ್ಚಯಾರ್ಥ, ಸಂಶಯಾರ್ಥ, ಭಾವಾರ್ಥ)

(ಉ) ನಾಮಪದಗಳ ಮುಂದೆ ತನಕ, ವರೆಗೆ ಇತ್ಯಾದಿ ಪ್ರತ್ಯಯಗಳು ಬಂದು ಆದ ರೂಪಕ್ಕೆ ____ ಎನ್ನುವರು.  (ಕೃದಾಂತಾವ್ಯಯ, ತದ್ಧಿತಾಂತಭಾವನಾಮ, ತದ್ಧಿತಾಂತಾವ್ಯಯ)

(ಊ) ರಾಮನ ವೊಲ್ ಎಂಬುದು ______ ಎನಿಸುವುದು. (ಕೃದಂತಭಾವನಾಮ, ತದ್ಧಿತಾಂತಭಾವನಾಮ, ತದ್ಧಿತಾಂತಾವ್ಯಯ)

(ಋ) ಹಿರಿತನ ಎಂಬುದೂ ______ ಎನಿಸುವುದು. (ತದ್ಧಿತಾಂತಭಾವನಾಮ, ಕೃದಂತಭಾವನಾಮ, ತದ್ಧಿತಾಂತಾವ್ಯಯ)

(ೠ) ಧಾತುಗಳಿಗೆ ಭಾವಾರ್ಥದಲ್ಲಿ ಕೃತ್ಪ್ರತ್ಯಯ ಸೇರಿ ಕೃದಂತಭಾವನಾಮವಾದರೆ _____ ಗಳಿಗೆ ಭಾವಾರ್ಥದಲ್ಲಿ ತದ್ಧಿತ ಪ್ರತ್ಯಯ ಸೇರಿ ತದ್ಧಿತಾಂತ ಭಾವನಾಮಗಳಾಗುವುವು.     (ಕ್ರಿಯಾಪದ, ನಾಮಪದ, ಧಾತು)

(೪)       ಕೆಳಗಿನ ವಾಕ್ಯಗಳಲ್ಲಿ ತಪ್ಪುಗಳಿವೆ.  ಅವುಗಳನ್ನು ಸರಿಪಡಿಸಿರಿ.

(ಅ) ಧಾತುಗಳಿಗೆ ತದ್ಧಿತಪ್ರತ್ಯಯಗಳು ಸೇರಿ ತದ್ಧಿತಾಂತಗಳೆನಿಸುವುವು.

(ಆ) ನಾಮಪದಗಳಿಗೆ ಕೃತ್‌ಪ್ರತ್ಯಯಗಳು ಸೇರಿ ಕೃದಂತಗಳೆನಿಸುವುವು.

(ಇ) ಕ್ರಿಯಾಪದಗಳಿಗೆ ಭಾವಾರ್ಥದಲ್ಲಿ ತದ್ಧಿತ ಪ್ರತ್ಯಯಗಳು ಸೇರಿ ತದ್ಧಿತಾಂತ ಭಾವನಾಮಗಳೆನಿಸುವುವು.

(ಈ) ನಾಮಪದಗಳ ಮೂಲರೂಪವೇ ಧಾತುವೆನಿಸುವುದು.

(ಉ) ಕ್ರಿಯಾಪದಗಳ ಮೂಲರೂಪವೇ ನಾಮಪ್ರಕೃತಿಯೆನಿಸುವುದು.

(ಊ) ಧಾತುಗಳಿಗೆ ಆಖ್ಯಾತ ಪ್ರತ್ಯಯ ಸೇರಿ ನಾಮಪದಗಳೆನಿಸುವುವು.

(ಋ) ನಾಮಪದಗಳ ಮುಂದೆ ಅಂತೆ, ವೊಲ್, ಓಸ್ಕರ ಇತ್ಯಾದಿ ಪ್ರತ್ಯಯಗಳು ಸೇರಿ ತದ್ಧಿತಾಂತಭಾವನಾಮಗಳೆನಿಸುವುವು.