“ನಾನು ಕಪ್ಪಗಿದ್ದೇನೆ. ನನ್ನ ತಂಗಿಯರೆಲ್ಲ ಬೆಳ್ಳಗಿದ್ದಾರೆ. ಬೇರೆಯವರು ಇರಲಿ ನನ್ನ ಅಪ್ಪ ಅಮ್ಮನೇ ನನ್ನನ್ನು ತಿರಸ್ಕಾರದಿಂದ ನೋಡುತ್ತಾರೆ. ನಾನು ಉಳಿದವರಿಗಿಂತ ಹೆಚ್ಚು ಕೆಲಸ ಮಾಡಿಕೊಡುತ್ತೇನೆ. ಆಟೋಟಗಳಲ್ಲಿ ಪ್ರೈಜ್ಗಳನ್ನು ತೆಗೆದುಕೊಂಡಿದ್ದೇನೆ. ಒಳ್ಳೆಯ ವಿದ್ಯಾರ್ಥಿನಿ ಎಂದು ಹೆಸರು ಪಡೆದಿದ್ದೇನೆ. ಎಲ್ಲ ಗುಣಗಳನ್ನು ಒಂದು ಮಸಿ ನುಂಗಿತು ಎನ್ನುವ ಹಾಗೆ, ನನ್ನ ಮೈ ಬಣ್ಣ ನನ್ನ ಆತ್ಮವಿಶ್ವಾಸವನ್ನು ತಿಂದುಹಾಕಿ ಬಿಟ್ಟಿದೆ ಸರ್. ನನ್ನ ಮದುವೆ ಮಾಡುವುದು ಕಷ್ಟವಂತೆ. ಕಪ್ಪಗಿರುವ ಹುಡುಗಿಯನ್ನು ಮೆಚ್ಚಿ ಮದುವೆಯಾಗಲು ಕಪ್ಪನೆಯ ಹುಡುಗರೂ ತಯಾರಿರುವುದಿಲ್ಲವಂತೆ. ನಾನು ನಮ್ಮ ಮನೆಗೆ ಹೊರೆಯಾಗುತ್ತೇನಂತೆ. ಈ ಮಾತನ್ನು ದಿನಕ್ಕೆ ಒಂದು ಸಲವಾದರೂ ನನ್ನ ತಾಯಿ ಮತ್ತು ಅಜ್ಜಿ ಹೇಳುತ್ತಲೇ ಇರುತ್ತಾರೆ. ಜಿಗುಪ್ಸೆ ಬಂದು ಆತ್ಮಹತ್ಯೆ ಮಾಡಿಕೊಳ್ಳಲೇ ಎನಿಸಿಬಿಡುತ್ತದೆ” ಎಂದು ಕಣ್ಣೀರು ಹಾಕಿದಳು ವಿಜಯ.
“ನಾನು ಐದಡಿ ಎತ್ತರ ಇದ್ದೇನೆ. ನನಗಿಂತ ಎರಡು ವರ್ಷ ಚಿಕ್ಕವನಾದ ನನ್ನ ತಮ್ಮ ನನಗಿಂತ ಆರು ಅಂಗುಲ ಹೆಚ್ಚು ಎತ್ತರವಾಗಿದ್ದಾನೆ. ಗುಂಗುರ ಕೂದಲು, ಲಕ್ಷಣವಾಗಿದ್ದಾನೆ. ನಾವು ಜೊತೆಯಾಗಿ ಹೋದರೆ ಎಲ್ಲರೂ ಅವನನ್ನು ಗಮನಿಸಿ, ಮಾತನಾಡಿಸುತ್ತಾರೆಯೇ ಹೊರತು ನನ್ನನ್ನು ಮಾತನಾಡಿಸುವುದಿಲ್ಲ. ನಾನು ದಿನವೂ ಜಿಮ್ಗೆ ಹೋಗುತ್ತೇನೆ. ಜಾಗಿಂಗ್ ಮಾಡುತ್ತೇನೆ. ಈಜುತ್ತೇನೆ. ನನ್ನ ಶರೀರ ಕಂಡು ನನಗೇ ಬೇಜಾರಾಗುತ್ತದೆ. ಮುಖ ಮರೆಸಿಕೊಂಡು ಎಲ್ಲಿಯಾದರೂ ಓಡಿಹೋಗೋಣ ಎನಿಸುತ್ತದೆ” ಎಂದು ಬಾಬು ರಾವ್.
“ಕೆಳಜಾತಿಯಲ್ಲಿ ಹುಟ್ಟಿ, ಸಣ್ಣ ಹಳ್ಳಿಯೊಂದರಲ್ಲಿ ಬದುಕುವುದು ಬಹಳ ಕಷ್ಟ. ಅಸ್ಪೃಶ್ಯತೆ ನಿವಾರಣೆ ಮಾಡಲು ಸರ್ಕಾರ ಕಾನೂನು ಮಾಡಿದೆ. ಏನು ಪ್ರಯೋಜನ ? ಹೊಟೆಲ್ಗೆ ಹೋಗಿ. ಮೇಲ್ಜಾತಿಯವರಿಗೆ ಸ್ಟೀಲ್ ಲೋಟದಲ್ಲಿ ಕಾಫಿ ಟೀ ಕೊಟ್ಟರೆ, ನಮಗೆ ಪ್ಲಾಸ್ಟಿಕ್ ಲೋಟದಲ್ಲಿ ಕೊಡುತ್ತಾರೆ. ಅಂಗಡಿಯಲ್ಲಿ ಸಾಮಾನು ತೆಗೆದುಕೊಳ್ಳುವಾಗ ನಾವು ಬಂದು ಪಕ್ಕಕ್ಕೆ ನಿಲ್ಲಬೇಕು. ನಮ್ಮ ತರಗತಿಯಲ್ಲಿ ಯಾವಾಗಲೂ ನಾನೇ ಫಸ್ಟ್ ಅಥವಾ ಸೆಕೆಂಡ್ ಬರುತ್ತೇನೆ. ಹೆಚ್ಚಿನ ಟೀಚರ್, ಮನಃಪೂರ್ವಕವಾಗಿ ಅಭಿನಂದನೆ ಹೇಳುವುದಿಲ್ಲ. ಯಾಕೋ ಇಷ್ಟು ಕಷ್ಟಪಡುತ್ತೀಯಾ. ೫೦ ಅಥವಾ ೬೦ ಪರ್ಸೆಂಟ್ ಮಾರ್ಕ್ಸ್ ತೆಗೆದರೆ ಸಾಕು ನಿಮಗೆ ರಿಸರ್ವೇಶನ್ ಪಾಲಿಸಿಯಿಂದ ಕೇಳಿದ ಸೀಟು ಉದ್ಯೋಗ ದೊರೆಯುತ್ತದೆ ಎನ್ನುತ್ತಾರೆ. ನಮ್ಮ ಹತ್ತಿರ ಬರಲು, ಮಾತಾಡಲು ಯಾರಿಗೂ ಇಷ್ಟವಿಲ್ಲ. ಈ ಅನಿಷ್ಟ ಜಾತಿ ಪದ್ಧತಿ ಯಾವಾಗ ಹೋಗುತ್ತದೋ” ಎಂದ ಬಲರಾಮ.
“ನಾವು ಬಡವರಾಗಿರುವುದೇ ಒಂದು ಅಪರಾಧವಾಗಿಬಿಟ್ಟಿದೆ ಸಾರ್. ಎಲ್ಲಿಯೂ ನಮಗೆ ಗೌರವ ಸಿಗುವುದಿಲ್ಲ. ಅಂಗಡಿಯಲ್ಲಿ ಸಾಮಾನು ತರಲು ಹೋದರೆ, ದುಡ್ಡಿದೆಯಾ, ನಮ್ಮಲ್ಲಿ ಸಾಲ ದೊರೆಯುವುದಿಲ್ಲ ಎಂದು ಅಂಗಡಿಯವರು ಹೇಳುತ್ತಾರೆ. ಸಭೆ ಸಮಾರಂಭಗಳಿಗೆ ಹೋದರೆ ಕುರ್ಚಿಗಳು ಖಾಲಿ ಇದ್ದರೂ, ನಾವು ನಿಂತು ಕೊಂಡಿರಬೇಕು. ಅಕಸ್ಮಾತ್ ಕುಳಿತಿದ್ದರೆ, ಏಳು, ಏಳು. ದೊಡ್ಡ ಮನುಷ್ಯರು ಬರುತ್ತಾರೆ, ಅವರು ನಿನ್ನ ಪಕ್ಕದಲ್ಲಿ ಕುಳಿತುಕೊಳ್ಳುತ್ತಾರೆಯೇ ಎಂದು ಸಂಘಟಕರು ಎಬ್ಬಿಸುತ್ತಾರೆ. ದುಡ್ಡಿದ್ದರೆ ದೊಡ್ಡಪ್ಪ, ದುಡ್ಡಿಲ್ಲದಿದ್ದರೆ ಏನೂ ಇಲ್ಲ. ಇದು ನ್ಯಾಯವೇ. ದುಡ್ಡಿಲ್ಲದ ನಾವು ಕೀಳು ಎಂದು ಪ್ರತಿ ನಿಮಿಷ ಪ್ರತಿದಿನ ನಮಗೆ ಮನವರಿಕೆ ಮಾಡಿಕೊಡುತ್ತಲೇ ಇರುತ್ತಾರೆ” ಎಂದ ಸಿದ್ದೇಶ.
ಹೀಗೆ ಅಸಂಖ್ಯಾತ ಹರೆಯದವರು ನಾನು ಕಾರಣಗಳಿಂದ ಕೀಳರಿಮೆಯಿಂದ ಬಳಲುತ್ತಾರೆ. ಆಲ್ಫ್ರೆಡ್ ಆಡ್ಲರ್ ಎನ್ನುವ ಮನೋವಿಜ್ಞಾನಿಯ ಪ್ರಕಾರ ಪ್ರತಿಯೊಬ್ಬ ವ್ಯಕ್ತಿ ಹುಟ್ಟಿನಂದಿನಿಂದಲೇ ಕೀಳರಿಮೆಯನ್ನು ಅನುಭವಿಸುತ್ತಾನೆ. ಏಕೆಂದರೆ ಮಾನವ ಶಿಶು ಅತ್ಯಂತ ಅಸಹಾಯಕ ಪ್ರಾಣಿ. ತನ್ನ ಕಾಲಮೇಲೆ ನಿಲ್ಲಲ್ಲು ಅದಕ್ಕೆ ಎಂಟೊಂಭತ್ತು ತಿಂಗಳು ಬೇಕಾಗುತ್ತದೆ. ತನ್ನ ಅನ್ನ ಸಂಪಾದಿಸಲು ಇಪ್ಪತ್ತು ವರ್ಷ ಕಾಯಬೇಕಾಗುತ್ತದೆ. ಅಸಹಾಯಕ ಮತ್ತು ಪರಾವಲಂಬಿಯಾದ ಶಿಶು ತಾನು ಕೀಳು ಎಂದು ಕೊಳ್ಳುವುದರಲ್ಲಿ ಅಸಹಜತೆ ಏನು ಇಲ್ಲ. ಮೇಲರಿಮೆ (Superior) ಯನ್ನು ಸಾಧಿಸುವುದೇ ಪ್ರತಿಯೊಂದು ಜೀವಿಯ ಆಶಯ, ಗುರಿಯಾಗುತ್ತದೆ. ಇದಕ್ಕೆ ವ್ಯಕ್ತಿ ಹಲವು ವಿಧಿವಿಧಾನಗಳನ್ನು ಅನುಸರಿಸುತ್ತಾನೆ / ಳೆ.
- ಸುಂದರ, ಆಕರ್ಷಕ ಶರೀರವನ್ನು ಪಡೆಯುವುದು. ಸೌಂದರ್ಯ ಸಾಧನಗಳನ್ನು ಬಳಸುವುದು.
- ಶರೀರವನ್ನು ಅಲಂಕಾರಿಕ ವಸ್ತ್ರ ವಸ್ತುಗಳಿಂದ ಅಲಂಕರಿಸುವುದು.
- ಶಾಲಾ ಕಾಲೇಜಿನಲ್ಲಿ ಹೆಚ್ಚಿನ ಅಂಕಗಳನ್ನು ತೆಗೆಯುವುದು.
- ಹಾಡು, ನೃತ್ಯ, ಅಭಿನಯ, ಸಾಹಿತ್ಯ ಸೃಷ್ಠಿ, ಸೃಜನಶೀಲ ಚಟುವಟಿಕೆಗಳು, ಕ್ರೀಡೆಗಳಲ್ಲಿ ಪ್ರತಿಭೆಯನ್ನು ತೋರಿಸುವುದು.
- ಇತರರು ಮೆಚ್ಚುವ, ಹೊಗಳುವ ನಡೆ ನುಡಿಗಳನ್ನು ಪ್ರಕಟಿಸುವುದು.
- ದಾನ ಧರ್ಮ, ಪರೋಪಕಾರದಲ್ಲಿ ತೊಡಗುವುದು.
- ಪ್ರಶಸ್ತಿ, ಪುರಸ್ಕಾರ, ಬಹುಮಾನಗಳನ್ನು ಪಡೆಯುವುದು. ಪತ್ರಿಕೆಗಳು, ದೂರದರ್ಶನಗಳಲ್ಲಿ ಕಾಣಿಸಿಕೊಳ್ಳುವುದು.
- ಯಾವುದೇ ಕೆಲಸ ಕರ್ತವ್ಯವನ್ನು ಅಚ್ಚುಕಟ್ಟಾಗಿ, ಚೆನ್ನಾಗಿ ಮಾಡುವುದು.
- ಕೆಟ್ಟ ಹೆಸರು ಬರದಂತೆ ಎಚ್ಚರವಹಿಸುವುದು.
ಈ ವಿಧಿವಿಧಾನಗಳಲ್ಲಿ ಸಫಲರಾದರೆ, ಕೀಳರಿಮೆ ಹೋಗುತ್ತದೆ ಅಥವಾ ಕಡಿಮೆಯಾಗುತ್ತದೆ. ವಿಫಲರಾದರೆ ಕೀಳರಿಮೆ ಮತ್ತಷ್ಟು ಹೆಚ್ಚುತ್ತದೆ.
ಯಾವುದೇ ವ್ಯಕ್ತಿಯಲ್ಲಿ ಕೀಳರಿಮೆ ತೀವ್ರಮಟ್ಟದಲ್ಲಿರಲು ಅಥವಾ ಹೆಚ್ಚಾಗಲು ಸಾಮಾನ್ಯ ಕಾರಣಗಳು :
- ಸುಂದರವಲ್ಲದ ಕುರೂಪಿ ಶರೀರ ಅಥವಾ ಅಂಗವೈಕಲ್ಯಗಳು. ವಿಪರೀತ ದಪ್ಪ ಅಥವಾ ವಿಪರೀತ ಸಣ್ಣ. ಅತಿ ಎತ್ತರ ಅಥವಾ ಅತಿ ಕುಳ್ಳ, ಅತಿ ಕಪ್ಪು ಬಣ್ಣ ಇತ್ಯಾದಿ.
- ತಂದೆ ತಾಯಿ / ಪೋಷಕರ ಪ್ರೀತಿ, ವಾತ್ಸಲ್ಯ ಕಡಿಮೆ, ಅವರ ಟೀಕೆ ತಿರಸ್ಕಾರ, ಹೀನಾಯ. ಬೇಡದ ಮಗುವಾಗಿ ಬೆಳೆಯುವುದು.
- ಶಾಲೆ / ವಿದ್ಯಾಭ್ಯಾಸದಲ್ಲಿ / ಕಲಿಕೆಯಲ್ಲಿ ಹಿಂದುಳಿಯುವುದು.
- ಯಾವುದೇ ಪ್ರತಿಭೆ ಇಲ್ಲದಿರುವುದು ಅಥವಾ ಇದ್ದರೂ ಅದರ ಪ್ರಕಟಣೆಗೆ ಅವಕಾಶ, ಪ್ರೋತ್ಸಾಹ ಇಲ್ಲದಿರುವುದು.
- ಕೆಳವರ್ಗ, ಜಾತಿ ಅಥವಾ ಮೈನಾರಿಟಿ ಗುಂಪಿಗೆ ಸೇರಿರುವುದು.
- ತಂದೆ ತಾಯಿ ಶಾರೀರಿಕ ದುಡಿಮೆ ಮಾಡುವ ಶ್ರಮಿಕ ವರ್ಗಕ್ಕೆ ಸೇರಿರುವುದು.
- ಸಾಮಾಜಿಕ ಕಳಂಕವನ್ನುಂಟುಮಾಡುವ ಕಾಯಿಲೆಗಳು ತನಗೆ ಅಥವಾ ಮನೆಯವರಿಗೆ ಇರುವುದು. ಉದಾ. ಕುಷ್ಟರೋಗ, ತೊನ್ನು, ಬಿಳಿಮಚ್ಚೆಗಳು, ಸೋರಿಯಸಿಸ್ ಎಕ್ಸೀಮಾ ಇತ್ಯಾದಿ ಜನಪ್ರಿಯತೆಯನ್ನು ತಂದುಕೊಡುತ್ತದೆ. ನಿಮ್ಮ ಕೊರತೆ ನ್ಯೂನತೆಗಳನ್ನು ಅದು ಪರಿಣಾಮಕಾರಿಯಾಗಿ ಮುಚ್ಚಿಹಾಕುತ್ತದೆ.
೫) ಸಹಾಯ ಸೇವೆ ಸಹಾನುಭೂತಿ ದಯೆ ಅನುಕಂಪ. ಇವನ್ನು ಮಾನವೀಯ ಗುಣಗಳು ಎನ್ನುತ್ತಾರೆ. ಇವನ್ನು ಪ್ರದರ್ಶಿಸುವ ವ್ಯಕ್ತಿಯನ್ನು ಜನರು ದೇವರ ಸಮಾನ ಎಂದು ಗುರುತಿಸುತ್ತಾರೆ. ಮರ್ಯಾದೆ, ಗೌರವ, ಮಾನ್ಯತೆಯನ್ನು ನೀಡಲು ಮುಂದಾಗುತ್ತಾರೆ. ಅದಕ್ಕಿಂತ ಮುಖ್ಯವಾಗಿ, ನಾವು ಕಷ್ಟ ನೋವಿನಲ್ಲಿರುವ ವ್ಯಕ್ತಿ ವ್ಯಕ್ತಿಗಳಿಗೆ ನಮ್ಮ ಕೈಲಾದ ಕಿಂಚಿತ್ ಸಹಾಯವನ್ನು ಮಾಡಿದರೆ ದಯೆ ಸಹಾನುಭೂತಿಯನ್ನು ತೋರಿಸಿದರೆ ನಮ್ಮ ಸ್ವಾಭಿಮಾನ ಆತ್ಮವಿಶ್ವಾಸ ದ್ವಿಗುಣಗೊಳ್ಳುತ್ತದೆ.
೬) ಯಾವುದೇ ಕೆಲಸ / ಚಟುವಟಿಕೆಯನ್ನು ಅಚ್ಚುಕಟ್ಟಾಗಿ ಮಾಡಿ. ವಿಶಿಷ್ಟ ರೀತಿಯಲ್ಲಿ ಮಾಡಿ. ಆಗ ಅದನ್ನು ಯಾರಾದರೂ ಮೆಚ್ಚುತ್ತಾರೆ, ಶ್ಲಾಘಿಸುತ್ತಾರೆ. ಹಾಗೇ ನೀವು ನಿಮ್ಮನ್ನು ಶ್ಲಾಘಿಸಿಕೊಳ್ಳಿ. ಪ್ರತಿ ಶ್ಲಾಘನೆ / ಮೆಚ್ಚುಗೆಯಿಂದ ಕೀಳರಿಮೆ ಕರಗುತ್ತದೆ. ಸ್ವಾಭಿಮಾನ ಹೆಚ್ಚುತ್ತದೆ.
೭) ನಿಮ್ಮಿಂದ ಯಾವುದೇ ತಪ್ಪು ಅಚಾತುರ್ಯವಾಗದಂತೆ ಎಚ್ಚರವಹಿಸಿ. ಆಕಸ್ಮಿಕವಾಗಿ ತಪ್ಪು ಅಚಾತುರ್ಯವಾದಾಗ, ಸಂಬಂಧಪಟ್ಟವರ ಬೇಷರತ್ ಕ್ಷಮೆಯಾಚಿಸಿ. ಅದು ನಿಮಗಿರುವ ಗೌರವವನ್ನು ಹೆಚ್ಚಿಸುತ್ತದೆ. ತಪ್ಪಿತಸ್ಥ ಭಾವನೆಯನ್ನು ನಿಮ್ಮಿಂದ ದೂರಮಾಡುತ್ತದೆ.
Leave A Comment