ಶ್ರೀ ಪೂಪಾರಾವ್‌ ನಾಯ್ಡು ಅವರು “…….. (They ) are four in number and according to their gradation they are Sathe pati, Kavadi, manpati, Mendra Gutti. They are all corrupted Tamil words.”

[1] ಎಂದು ಹೇಳಿರುವಲ್ಲಿ ಕೊರವರ ಗೋತ್ರಗಳನ್ನು ತಿಳಿಸುವ ಆ ಶಬ್ದಗಳು ಕಚ್ಚಾ ತಮಿಳು ಭಾಷೆಯವು ಎಂಬ ಅಭಿಪ್ರಾಯ ಸತ್ಯವಾದುದು. ಈ ಅಂಶಗಳು ಈ ಬುಡಕಟ್ಟಿನ ಮೂಲವನ್ನು ಶೋಧಿಸುವಲ್ಲಿ ಸಹಕಾರಿಯಾಗುತ್ತವೆ.

ಶ್ರೀ ಇ. ಥರ್ಸ್‌‌ಟನ್‌ ಅವರು ಶ್ರೀ ಬೆಲ್‌ಪೋರ್ ಅವರನ್ನು ಉಲ್ಲೇಖಿಸುತ್ತಾ -“These names, like Thogamalli for Koravs who came from the village of that name in the Trichinopoly district, are probably purely local”[2] ಇವರು ತಮಿಳುನಾಡಗೆ ಸೇರಿದವರು ಎಂಬ ವಿಚಾರವನ್ನು ಊಹಿಸಿದರೂ ಇತರೆ ದಾಖಲೆಗಳ ಹಿನ್ನಲೆಯಲ್ಲಿ ಕೊರಮರ ಮೂಲ ತಮಿಳುನಾಡು ಎಂಬುದನ್ನು ನಿರ್ಧರಿಸಲು ಸಾಧ್ಯವಿದೆ. ಅಂತೆಯೇ ಶ್ರೀ ಆರ್.ಇ. ಎಂಥೋವನ್‌ ಅವರು  “The tribe contains four family stocks: Santi Padia, Kavadia, Manpadia, and Mendragutti”[3] ಎಂದು ಗುರುತಿಸುವ ಈ ಹೆಸರುಗಳು, ಬೊಂಬಾಯಿ ಪ್ರಾಂತ್ಯದ ಕೊರಮರ ಬಗೆಗೆ ಬರೆದಿರುವ ಮೇಕೇಲ್‌ಕೆನಡಿ ಅವರು ಹೇಳಿರುವ ಹೆಸರುಗಳಗಿಂತ ಸ್ವಲ್ಪ ಭಿನ್ನವಾಗಿವೆ. ಸಾಂತಿಪಾಡಿಯಾ, ಕಾವಾಡಿಯಾ, ಮ್ಯಾನ್‌ಪಾಡಿಯಾ ಎನ್ನುವ ಈ ಹೆಸರುಗಳು ಸಾತಪಾಡಿ, ಕಾವಾಡಿ, ಮಾನಪಾಡಿ ರೂಪಕ್ಕಿಂತ ಪೂರ್ವದವಾಗಿದ್ದರೂ ನಂತರ ರೂಪಾಂತರಗೊಂಡಿರುವುದು ಸಾಧ್ಯವಿದೆ.

ಶ್ರೀ ಜ್ಞಾನಮಾಣಿಕಮ್ಮಾಳ್‌ ಅವರು ಈ ಜನರನ್ನು ಕುರಿತು -“Though they are called after in many names, scattered throught southern states and engaged in various occupations. They are one and the same caste. The Kula and Kothra are also the same with a people of this community through they differ in their mother tongue”[4] ಎಂದಿದ್ದಾರೆ. ದಕ್ಷಿಣ ರಾಜ್ಯಗಳಲ್ಲಿ ವಿವಿಧ ವೃತ್ತಿಗಳನ್ನನುಸರಿಸಿ ವಿವಿಧ ಭಾಷೆಗಳನ್ನು ಮಾತನಾಡುತ್ತಾ ಬದುಕುತ್ತಿರುವ ಈ ಬುಡಕಟ್ಟು ತನ್ನ ಕುಲ-ಗೋತ್ರಗಳಿಂದ ಒಂದೇ ಎಂಬುದು ತಿಳಿದುಬರುತ್ತದೆ. ತಮಿಳು ನಾಡಿನಲ್ಲಿ ಸು. ೪೭ ಹೆಸರುಗಳಿಂದ ಗುರುತಿಸಲ್ಪಡುವುದರ ಬಗೆಗೆ ಮತ್ತು ಅವರ ಮೂಲದ ಬಗೆಗೆ “These people are the aborigines of hills and valleys of south India” ಎಂದು ಹೇಳಿದ್ದಾರೆ.

ಶ್ರೀ ಬಿ.ವಿ. ಮಲ್ಲಾಪುರ ಅವರು ತಮ್ಮ ಲೇಖನದಲ್ಲಿ “ಕೊರವ ಅಥವಾ ಕೊರಚರಲ್ಲಿ ಪಟ್ಟಾಡಿ, ಕಾವಡಿ, ಮೇನಪಾಡಿ, ಮೆಂಡ್ರಗುಟ್ಟಿ”[5] ಎಂಬ ನಾಲ್ಕು ಗೋತ್ರಗಳಿವೆ ಎಂದು ಹೇಳುತ್ತಾರೆ. ಶ್ರೀ ಫ್ರಾನ್‌ಸಿಸ್‌ಅವರು ಕೊರವರು ಮತ್ತು ಯರಕಲರ ಬಗೆಗೆ “Both castes are wandering Gipses both live by basket making, and fortune telling, both speak corrupt Tamil, and both may have sprung from the original stock”[6] ಎಂದು ಹೇಳಿರುವ ಮಾತುಗಳಲ್ಲಿ ಸತ್ಯಕ್ಕೆ ಹತ್ತಿರವಾದ ಕೆಲವು ಅಂಶಗಳು ಗೋಚರಿಸುತ್ತವೆ. ಒಂದೇ ರೀತಿಯ ಉದ್ಯೋಗ ಮತ್ತು ಭಾಷೆಯನ್ನು ರೂಢಿಸಿಕೊಂಡಿರುವ ಇವರು ಒಂದೆ ಮೂಲದವರು ಎಂಬುದು ಸತ್ಯವಾಗಿದೆ.

ಈ ಮೇಲೆ ಗುರುತಿಸಿದ ಅಂಶಗಳಷ್ಟೇ ಅಲ್ಲದೆ ಕೊರಮ ಬುಡಕಟ್ಟು ಸಾರ್ವತ್ರಿಕವಾಗಿ ಆಚರಿಸುತ್ತಿದ್ದ ಆಚರಣೆಗಳು ಇವರ ಮೂಲದ ಬಗೆಗೆ ಬೆಳಕು ಚೆಲ್ಲುತ್ತವೆ. ಇವು ವೈಯಕ್ತಿಕ ಆಚರಣೆಗಳಾಗಿರದೆ ದೇಶದ ಹಲವು ಭಾಗಗಳಲ್ಲಿ ಬದುಕುತ್ತಿರುವ ಬುಡಕಟ್ಟಿನ ಒಂದೇ ರೀತಿಯ ಆಚರಣೆಗಳಾಗಿವೆ. ಕಾಲಾಂತರದಲ್ಲಿ ಇವುಗಳನ್ನು ಬದಲಾಯಿಸದೆ ಉಳಿಸಿಕೊಂಡು ಬಂದಿದ್ದಾರೆ. ಆ ಜನರಲ್ಲಿ ಮೂಲದ ಅಂಥ ಒಂದು ಆಚರಣೆ ರೂಢಿಯಲ್ಲಿದ್ದರೆ ಅವರು ಒಂದು ಪ್ರದೇಶಕ್ಕೆ ಸೇರಿದ್ದವರು ಎಂದು ಹೇಳಬಹುದು. ಒಂದು ಬುಡಕಟ್ಟಿನಲ್ಲಿರುವ ಆಚರಣೆ ಬೇರೆ ಪ್ರದೇಶದ ಬೇರೆ ಜನರಲ್ಲಿ ಅಥವಾ ಬೇರೆ ಬೇರೆ ದೇಶಗಳಲ್ಲಿ ಕಂಡು ಬರಬಾರದೆಂದೇನೂ ಇಲ್ಲ. “ದೇಶ, ಕಾಲ, ಪ್ರದೇಶ ಹಾಗೂ ಸಾಂಸ್ಕೃತಿಕ ಸಂದರ್ಭಗಳೇನೇ ಇದ್ದರೂ ಜಗತ್ತಿನ ಮಾನವರೆಲ್ಲರೂ ಒಂದೇ; ಅವರ ಆಲೋಚನೆ, ಭಾವನೆ, ರೀತಿ-ನೀತಿಗಳು ಒಂದೇ ಬಗೆಯವು. ಆದ್ದರಿಂದ ಒಂದು  ಪ್ರದೇಶದ ಜನಕ್ಕೂ ಇನ್ನೊಂದು ಪ್ರದೇಶದ ಜನಕ್ಕೂ ಅವರು ಸಾಂಸ್ಕೃತಿಕ ಉತ್ಕ್ರಾಂತಿಯ ಸಮಾನ ಹಂತದಲ್ಲಿದ್ದಾಗ, ಅವರ ಆಲೋಚನೆಯ ಮಟ್ಟ, ರೀತಿ-ನೀತಿ, ಜೀವನ ಧೋರಣೆಗಳು ಒಂದೇ ಬಗೆಯಾಗಿರುತ್ತವೆ ಎನ್ನವದು ಮನೋವೈಜ್ಞಾನಿಕ ಸತ್ಯವಾಗಿದೆ”[7] ಎನ್ನುತ್ತಾರೆ ಶ್ರೀ ಇ.ಬಿ. ಟೇಲರ್. ಇಂಥ ಆಚರಣೆಯು ಈ ಹಿಂದೆ ಕೊರಮರಲ್ಲಿ ರೂಢಿಯಲ್ಲಿತ್ತೆಂದು ಹೇಳಲಾಗಿದೆ. ಅದೇ “ಕೋವಾಡ್‌” (COUVADE) ಇಂಥ ಆಚರಣೆಗಳೇ ಇತರ ದೇಶದ ಆದಿವಾಸಿಗಳಲ್ಲಿ ಆಚರಣೆಯಲ್ಲಿರುವುದನ್ನು Sir John Lubbock (now lord Aveburg) ಗಮನಿಸಿರುವರು. ಬ್ರೆಜಿಲ್‌, ಬೋರ್ರಿ‍ನಿಯೋ, ಗ್ರೀನ್‌ಲ್ಯಾಂಡ್‌, ಸ್ಪೈನ್‌, ಫ್ರಾನ್ಸ್‌ಮತ್ತು ಇತರ ದೇಶಗಳಲ್ಲಿ ಇಂಥ ಆಚರಣೆ ಇದ್ದ ಬಗೆಗೆ ಉಲ್ಲೇಖಿಸಿರುವರು.[8]

ಶ್ರೀ ಅಲ್ಬರೂನಿ ಕ್ರಿ.ಶ. 1030 ರಷ್ಟು ಹಿಂದೆಯೇ “ಕೋವಾಡ” ಬಗೆಗೆ ತಿಳಿಸಿರುವ ವಿಚಾರ ಇಲ್ಲಿ ಪ್ರಸ್ತುತ. “……….When a child is born people show particulr attention to the man, not to the women. There is a Tamil proverb that, if a Korati is brought to bed, her husband takes the prescribed stimulant; and examples of couvade in South India have been already recorded.”[9] ದಕ್ಷಿಣ ಭಾರತದಲ್ಲಿನ ಕೆಲವು ಪಂಗಡದವರಲ್ಲಿ “ಕೋವಾಡ” ಆಚರಣೆಯಲ್ಲಿದ್ದ ಬಗೆಗೆ ದಾಖಲೆಗಳು ಇವೆ. ಯರುಕಲರ ಬಗೆಗೆ ರೆವಿ ಜೆ. ಕೇನ್ ಹೇಳುವ ” directly the woman feels the birth pains, she informs her husband, who immediately takes some of her clothes, puts them on, places on his forehead the mark which the women usually place on theirs, retires into a dark room where there is onlyu a very dim lamp, and lies down on the bed, covering himself up with a long cloth. When the child is born it is washed and placed on the cot beside the father. Assafoetia, jaggery and other articles are given not to the mother, but to the father. He is not allowed to leave his bed, but has everything beedful brought to him.”[10] ಈ ಹೇಳಿಕೆಯಿಂದ ಯರುಕುರಲರು ಹೆಂಡತಿಯಿಂದ ಹೆರಿಗೆಯ ವಿಷಯವನ್ನು ಕೇಳಿ ಆಕೆಯ ಬಟ್ಟೆಯೊಂದಿಗೆ ಗಂಡನಾದವನು ಮಿಣುಕು ದೀಪದ ಕತ್ತಲೆಯ ಕೋಣೆಯಲ್ಲಿ ಮಲಗುವುದು, ಹುಟ್ಟಿದ ಮಗುವನ್ನು ತಂದೆಯ ಪಕ್ಕದಲ್ಲಿ ಮಲಗಿಸಿ, ಆತನಿಗೆ ಇಂಗು, ಬೆಲ್ಲ ಮುಂತಾದ ಪದಾರ್ಥಗಳನ್ನು ಕೊಡುವುದು ಸೋಜಿಗವೆನಿಸಿದರೂ, ಗಾಳಿ-ಬೆಳಕಿಲ್ಲದ ಕೋಣೆಯಲ್ಲಿ ತಂದೆಗೆ ಕೊಟ್ಟ ಇಂಗು ಮತ್ತು ಬೆಲ್ಲದ ವಾಸನೆ ಆ ಮಗುವಿನ ಉಸಿರಾಟದ ಮೇಲೆ ಅಥವಾ ಅವರಿಬ್ಬರ ಆರೋಗ್ಯದ ಮೇಲೆ ಏನೋ ಪರಿಣಾಮ ಉಂಟಾಗುತ್ತದೆ ಎಂಬ ನಂಬಿಕೆಯಿಂದ ಹೀಗೆ ಮಾಡುತ್ತಿದ್ದಿರಬಹುದು. ಅಥವಾ ಆ ವ್ಯಕ್ತಿ ಮಲಗಿದ್ದಲಿಯೇ ಇರುತ್ತಿದ್ದುದರಿಂದ ಆತನ ಪಚನಕ್ರಿಯೆಗೆ ಅನುಕೂವಾಗಲೆಂದು ಕೊಡುತ್ತಿದ್ದಿರಬಹುದು. ಇತರ ಗುಡ್ಡಗಾಡು ಜನಾಂಗದಲ್ಲಿ ಕಾಣುವ, ಬಾಣಂತಿಯ ಮೈಲಿಗೆಯಿಂದ ಮಗುವನ್ನು ಶುದ್ಧವಾಗಿಡಲು ಈ ಆಚರಣೆ ರೂಢಿಗೆ ಬಂದಿರಬಹುದು. ಬಾಣಂತಿಯ ಹಸಿ ಮೈಯ ವಾಸನೆಯಿಂದ ಮಗುವನ್ನು ಕೆಲಕಾಲವಾದರೂ ದೂರ ಇಡಬೇಕೆಂದು ಈ ರೀತಿಯ ಆಚರಣೆ ರೂಢಿಗೆ ಬಂದಿರಬಹುದು. ಈ ಬಗೆಗೆ ಶ್ರೀ ತೀ. ನಂ. ಶಂಕರನಾರಾಯಣ ಅವರು ಗೊಲ್ಲರ ಬಾಣಂತಿಯರ ಇತರ ಕ್ರಮಗಳನ್ನು ದಾಖಲಿಸಿದ್ದಾರೆ.[11]  ಅಲ್ಲದೆ ಇಂಥ ಆಚರಣೆ ಭಾರತದ ಬೇರೆ ಬೇರೆ ಜನರಲ್ಲಿ ರೂಢಿಯಲ್ಲಿದ್ದ ಬಗೆಗೆ ವಿದ್ವಾಂಸರು ಗಮನ ಸೆಳೆದಿದ್ದಾರೆ.

ರೆವಿ ಜೆ. ಕೇನ್ ಮಲಬಾರಿನ ಬುಟ್ಟಿ ಮಾಡುವ ಕುರುವರಲ್ಲಿಯೂ ಈ ಪದ್ಧತಿ ಇದ್ದ ಬಗೆಗೆ ಹೇಳುತ್ತಾ ” as soon as the pains of delivery come upon a pregnant women, she is taken to an outlying shed, and left alone to live die as the event may turn out. no help is given to her for twenty-eight days. Even medicines are thrown to her from a distance; and the only assistance rendered is to place a jar of warm water close by her just before the child is born. Pollution from birth is held as worse than that from death. At the end of the twenty-eight days the hut in which she was confined is burnt down. The father, too, is polluted for fourteen days, and, at the end of that time, he is purefied, not like other castes by the barber, but by holy water obtained from Brahmans at temples are elsewhere.”[12] ಇಲ್ಲಿ ಬಾಣಂತಿತನದ ಮೈಲಿಗೆ ಅತಿ ತೀವ್ರವಾದದ್ದು ಎಂದು ನಂಬುತ್ತಿದ್ದುದರಿಂದ ಹೆರಿಗೆಯಾಗುವ ಮಹಿಳೆ ಪ್ರತ್ಯೇಕವಾದ ಗುಡಿಸಲೊಂದರಲ್ಲಿ ಹೆರಿಗೆಯಾಗಿ ೨೮ ದಿನಗಳವರೆಗೆ ಅಲ್ಲಿ ಅವಳೊಬ್ಬಳೆ ಉಳಿದು ಬದುಕು ಮತ್ತು ಸಾವಿನ ಕ್ಷಣಗಳನ್ನು ಕಳೆಯುತ್ತಿದ್ದಳು. ದೇವಸ್ಥಾನದಲ್ಲಿ ಬ್ರಾಹ್ಮಣರಿಂದ ತೀರ್ಥವನ್ನು ತಂದು ಮೈಲಿಗೆ ತೆಗೆಯುವವರೆಗೆ ಅಲ್ಲೆ ಉಳಿಯುತ್ತಿದ್ದಳು. ಹೆರಿಗೆ ಸಮಯದಲ್ಲಿ ಯಾರೊಬ್ಬರೂ ಬಾಣಂತಿಗೆ ಸಹಾಯ ಮಾಡದೆ ಔಷಧಿಗಳನ್ನು ದೂರದಿಂದ ಎಸೆಯುತ್ತಿದ್ದ ಬಗೆಗೆ, ಮಗು ಹುಟ್ಟಿದಾಗ ಬೇಕಾಗುವ ಬಿಸಿನೀರನ್ನು ಸ್ವಲ್ಪ ದೂರದಲ್ಲಿ ಇಡುತ್ತಿದ್ದುದೊಂದನ್ನು ಬಿಟ್ಟರೆ ಮತ್ತಾವುದೇ ಉಪಚಾರ ಕೊಡುತ್ತಿರಲಿಲ್ಲೆಂಬ ಬಗ್ಗೆ ಮತ್ತು ಹೆರಿಗೆಯಾದ ಗುಡಸಲಿನಿಂದ ಹೊರಬಂದ ಮೇಲೆ ಅದಕ್ಕೆ ಬೆಂಕಿ ಇಡುತ್ತಿದ್ದರು. ಹದಿನಾಲ್ಕನೇ ದಿನದಲ್ಲಿ ಗಂಡನಾದವನು ಕ್ಷೌರಿಕರಿಂದ ಕ್ಷೌರ ಮಾಡಿಸಿಕೊಂಡು ಮೈಲಿಗೆ ಕಳೆದುಕೊಳ್ಳುತ್ತಿದ್ದುದನ್ನು ವಿಚಾರ ಮಾಡಿದರೆ, ಅವರಲ್ಲಿ ಮೈಲಿಗೆಯ ಬಗೆಗಿದ್ದ ನಂಬಿಕೆಯ ಅರಿವಾಗುತ್ತದೆ. ಈಗಿನ ದೃಷ್ಟಿಯಿಂದ ಆ ಪದ್ಧತಿ ಅಸಮಂಜಸ ಮತ್ತು ಅಮಾನುಷವಾಗಿ ಕಂಡರೂ ಜೀವನ ಕ್ರಮದ ಒಂದು ಸಾಂಸ್ಕೃತಿಕ ಪ್ರಜ್ಞೆಯೆಂಬುದನ್ನು ಇದು ಸೂಚಿಸುತ್ತದೆ.

ಶ್ರೀ ಜಿ. ಕೃಷ್ಣರಾವ್‌ (ಜಿಲ್ಲಾ ಪೋಲೀಸ್‌ ಅಧಿಕಾರಿ) ಮೈಸೂರು ಪ್ರಾಂತ್ಯದ ಶಿವಮೊಗ್ಗ ಜಿಲ್ಲೆಯ ಕೊರಮರಲ್ಲಿ ಕೋವಾಡ್‌ಆಚರಣೆಯಲ್ಲಿದ್ದ ಬಗೆಗೆ ತಿಳಿಸುತ್ತಾ: ಶ್ರೀ ರೈಸ್‌ಅವರ ಮಾತುಗಳನ್ನು ಉದಾಹರಿಸಿದ್ದಾರೆ -“”Mr. Rice, in the Mysore Gazetteer, says that among the Koravars it is said that, when a woman is confined, her husband takes medicine for her, At the instance of the British Resident I made enquiries, and learned that the Kukke (basket-making) kormas, living at Gopala villiage near Shimoga, had this custom among them. The husband learns from his wife the probable time of her confinement, and keeps at home awaiting the delivery. As soon as she is confined, he goes to bed for three days, and takes medicine consisting of chicken and mutton broth spiced with ginger, pepper, onions, garlic etc. He drinks arrack, and eats as good food as he can afford, while his wife is given boilded rice with a very small quantity of salt, for fear that a larger quantity may induce thirst. There is generally a Koramar midwife to help the wife, and the husband does nothing but eat, drink, and sleep. The clothes of the husband, the wife, and the midwife are given to a washerman to be washed on the foruth day, and the persons themselves have a wash. After this purification the family gives a dinner to the caste-people, which finishes the ceremonial connected with child-birth. One of the men examined by me, who was more intelligent than the rest, explained that the man’s life was more valuable than that of the woman, and that the husband, being a more important factor in the birth of the child than the wife, deserves to be better looked after.[13] ವಂಶಾಭಿವೃದ್ಧಿಗೆ ಗಂಡನೇ ಕಾರಣ ಎಂಬ ನಂಬಿಕೆ ಮತ್ತು ಆ ಕಾರಣದ ನಿಮಿತ್ತ ಉಂಟಾದ ಸಂತೋಷಕ್ಕಾಗಿ ಇಂಥ ಉಪಚಾರವನ್ನು ಗಂಡನಿಗೆ ಕೊಡುತ್ತಿದ್ದರು. ಗಂಡನಾದರೂ ಹೆಂಡತಿಯಿಂದ ಹೆರಿಗೆಯ ಸಮಾಚಾರವನ್ನು ತಿಳಿದು ಮನೆಯಲ್ಲಿಯೇ ಉಳಿದು ಮುಂದಿನ ಮೂರು ದಿನಗಳ ಅತಿಥ್ಯಕ್ಕಾಗಿ ಕಾಯುತ್ತಿದ್ದ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಮಲಬಾರಿನ ಕೊರವರ ಗರ್ಭಿಣಿಯರ ಹಾಗೆ ಕೊರಮ ಬುಡಕಟ್ಟಿನ ಗರ್ಭಿಣಿ ಹೆರಿಗೆ ಸಮಯದಲ್ಲಿ ಯಾರ ಸಹಾಯವೂ ಇಲ್ಲದೆ ನರಳುವಂತಿರಲಿಲ್ಲ. ಆಕೆಯ ಸಹಾಯಕ್ಕೆ ಸೂಲಗಿತ್ತಿ ಇರುತ್ತಿದ್ದಳು. ಇದರಿಂದ ಶಿವಮೊಗ್ಗ ಜಿಲ್ಲೆಯ ಕೊರಮರಲ್ಲಿ ಉಂಟಾಗಿದ್ದ ಸಾಮಾಜಿಕ ಅರಿವು ಮತ್ತು ಮಾನವೀಯ ಮೌಲ್ಯದ ಹೆಚ್ಚಳದ ಪರಿಚಯವಾಗುತ್ತದೆ.

ಕೊವಾಡ ಕೊರಮರಲ್ಲಿ ಸಾರ್ವತ್ರಿಕವಾಗಿತ್ತು ಎಂಬ ಬಗೆಗೆ ೧೯೦೧ ರ ಜನಗಣತಿಯಲ್ಲಿ ದಾಖಲಾಗಿರುವ ಕಥೆಯೊಂದನ್ನು ಕೊಟ್ಟಿದ್ದಾರೆ. –

“One day a donkey, belonging to a Korama camp pitched out side a village, wandered into a Brahman’s field, and did considerable damage to the crop. The Brahman was naturally angry, and ordered his collies to pull down the hut of the owner of the donkey. The Korama, casting himself at the feet of the Brahman, for want of a better excuse, said that he was not aware of what his animal was doing, as at the time he was taking medicine for his wife, and could not look after it.”[14] ಇದರಿಂದ ಕೋವಾಡ್‌ಈ ಜನರಲ್ಲಿ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿತ್ತೆಂಬುದು ಮನವರಿಕೆಯಾಗುತ್ತದೆ. ಇಲ್ಲಿದಿದ್ದರೆ ಆತ ಕತ್ತೆಯನ್ನು ಬಿಟ್ಟು ತನ್ನ ಹೆಂಡತಿಯ ಸಲುವಾಗಿ ತಾನು ಮೂರು ದಿನಗಳ ಬಾಣಂತಿತನ ಅನುಭವಿಸುತ್ತಿದ್ದೆ ಎನ್ನುತಿರಲಿಲ್ಲ.  ಬ್ರಾಹ್ಮಣನ ಕಾಲಮೇಲೆ ಬಿದ್ದು ಕ್ಷಮೆ ಕೇಳಿರುವುದನ್ನು ನೋಡಿದರೆ ಆ ಪದ್ಧತಿಯ ಕಟ್ಟುನಿಟ್ಟಾದ ಆಚರಣೆಯಾಗಿತ್ತು ಎಂಬ ಬಗೆಗೆ ತಿಳಿಯುತ್ತದೆ.

ಈ ಕೋವಾಡ್‌ ಪದ್ಧತಿ ತಿರುವಾಂಕೂರಿನ “ಪರಿಯನ್‌” ಜನರಲ್ಲಿ ರೂಢಿಯಲ್ಲಿದ್ದ ಬಗ್ಗೆ ರೆವಿ.ಎಸ್‌. ಮಾಲೀರ್ ದಾಖಲಿಸಿದ್ದಾರೆ. ಪರಿಯನ್‌ಹೆಂಗಸು ಹೆರಿಗೆಯಾದ ಮೇಲೆ ಆಕೆಯ ಗಂಡ ಬೇಯಿಸಿದ ಅನ್ನ ಅಥವಾ ಇತರೆ ಆಹಾರವನ್ನು ತ್ಯಜಿಸಿ ಗಡ್ಡೆ -ಗೆಣಸು, ಹಣ್ಣುಗಳನ್ನು ತಿನ್ನುತ್ತಾ ಹೆಂಡ ಮತ್ತು ಸರಾಯಿಯನ್ನು ಕುಡಿಯುತ್ತಿದ್ದ.

“After the confinement of a Paraiyan woman in Travancore, the husband is starved for seven days, eating no cooked rice or other food only roots and fruits and drinking only arrac k or toddy.” ಇದು ಕೋವಾಡದ ಮತ್ತೊಂದು ರೂಪವಾಗಿದೆ.[15] ತೋಡರು ಕೋವಾಡ್‌ ಪದ್ಧತಿಯನ್ನು ಅನುಸರಿಸುತ್ತಿದ್ದ ಬಗ್ಗೆಯೂ ತಿಳಿಯುತ್ತದೆ.

“After the child is born, the mother is removed to as shed, which has been erected in some sequestered spot, in anticipation of the approaching event. There she remains till the next new moon, and for a month after her return home, she appears to have the house to herself, her husband remaining to friends for shelter meanwhile.” ಎಂಬುದರಿಂದ ಇದು ನಮಗೆ ಕೋವಾಡ್‌ನ ಮತ್ತೊಂದು ರೂಪದಂತೆ ಕಾಣುತ್ತದೆ.[16]  ತೋಡ ಬಾಣಂತಿ ಜನಸಂಪರ್ಕವಿಲ್ಲದೆ ಗುಡಿಸಲಿನಲ್ಲಿ ಒಂದು ತಿಂಗಳು ಕಳೆದು ಮನೆಗೆ ಬಂದಮೇಲೂ ಒಂದು ತಿಂಗಳು ಆ ಮನೆ ಆಕೆಗೆ ಮೀಸಲಿಟ್ಟಂತೆ ಇರುತ್ತಿದ್ದುದು ಮತ್ತು ಅಲ್ಲಿಯವರೆಗೆ ಆಕೆಯ ಗಂಡ ತನ್ನ ಸ್ನೇಹಿತರ ಮನೆಯಲ್ಲಿಯೇ ಇರುತ್ತಿದ್ದುದು, ಹೆಂಡತಿಯಿಂದ ಆತ ಒಂದೆರಡು ತಿಂಗಳಾದರೂ ಆ ಸಮಯದಲ್ಲಿ ದೂರ ಇರಲಿ ಎಂಬ ಆಶಯವಿರಬೇಕು. ಇಲ್ಲಿ ಹೆಂಡತಿಯ ಸಲುವಾಗಿ ತಾನು ಔಷಧಿಯನ್ನಾಗಲಿ, ಇತರೆ ಏನನ್ನಾಗಲಿ ತೆಗೆದುಕೊಳ್ಳುತ್ತಿದ್ದ ಬಗ್ಗೆ ತಿಳಿದುಬರುವುದಿಲ್ಲ.

ಕೊಚ್ಚಿನ್‌ ಪ್ರಾಂತ್ಯದ ನಾಯಾಡಿಸ್‌ಜನರಲ್ಲಿಯೂ ಇಂಥ ಪದ್ಧತಿ ವಿವಿಧ ರೂಪದಲ್ಲಿದ್ದುದನ್ನು ವಿದ್ವಾಂಸರು ಗುರುತಿಸಿದ್ದಾರೆ. ವಿಶೇಷವಾಗಿ ನಿರ್ಮಿಸಿದ ಗುಡಿಸಲಿನಲ್ಲಿ ಹೆರಿಗೆ ಬೇನೆ ಅನುಭವಿಸುತ್ತಿರುವ ನಾಯಾಡಿಸ್‌ ಹೆಂಗಸನ್ನು ಇರಿಸಿ, ಹೆರಿಗೆಯ ಸಮಯದಲ್ಲಿ ಬಂಧುಗಳಾದ ಹೆಣ್ಣು ಮಕ್ಕಳು ಸಹಾಯ ಮಾಡುವುದನ್ನು ನೋಡಿದರೆ, ಇತರೆ ಜನರಿಗಿಂತ ನಾಯಾಡಿಸ್‌ರ ಸುಧಾರಿತ ಜೀವನ ಕ್ರಮದ ಪರಿಚಯವಾಗುತ್ತದೆ.[17]

ಶ್ರೀ ಇ. ಥರ್ಸ್‌‌ಟನ್‌ ಅವರು ಇಷ್ಟೆಲ್ಲ ವಿವರಣೆಯನ್ನು ನೀಡಿಯೂ ಪ್ರೊ|| ಟೇಲರ್ ದಾಖಲಿಸಿರುವ ಕೋವಾರ್ಡ ಆಚರಣೆಯ ಬಗೆಗೆ ಯಾವುದೇ ದಾಖಲೆ ಸಿಕ್ಕಿಲ್ಲ ಎನ್ನುತ್ತಾರೆ. ಆದರೆ ಪ್ರೊ|| ಟೇಲರ್ ಹೇಳಿರುವ ಶ್ರೀ ಎಫ್‌.ಎಂ. ಜಿನ್ಸಿಂಗ್ಸ್‌ರ ಪ್ರಕಾರ ಇಂಥ ಸಂಪ್ರದಾಯ ಮದ್ರಾಸ್‌, ಶ್ರೀರಂಗಪಟ್ಟಣ ಮತ್ತು ಮಲಬಾರ ಕರಾವಳಿಯಲ್ಲಿ ವಾಸಿಸುವ ಉಚ್ಚ ಜಾತಿಯವರಲ್ಲಿ ಸಾಮಾನ್ಯವಾಗಿ ಇದೆ. ತನ್ನ ಪ್ರಮುಖ ಹೆಂಡತಿಯ ಚೊಚ್ಚಿಲ ಹೆರಿಗೆ ಮತ್ತು ನಂತರದ ಹೆರಿಗೆಗಳಲ್ಲಿ ಗಂಡುಮಗು ಹೆರಿಗೆಯಾದಾಗ ಗಂಡನು ಒಂದು ತಿಂಗಳವರೆಗೆ ಹಾಸಿಗೆಯಲ್ಲೇ ಇರುತ್ತಿದ್ದನು. ಆ ಸಮಯದಲ್ಲಿ ಮಾದಕ ಆಹಾರ ಮತ್ತು ಧೂಮ್ರಪಾನವನ್ನಾಗಲಿ ಮಾಡದೆ ಕೇವಲ ಅನ್ನದ ಮೇಲೆಯೇ ಇರುತ್ತಿದ್ದನು. ಒಂದು ತಿಂಗಳ ನಂತರ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ತನ್ನ ಸ್ನೇಹಿತರಿಗೆ ಭರ್ಜರಿಯಾದ ಭೋಜನ ಕೂಟವೊಂದನ್ನು ಏರ್ಪಡಿಸುತ್ತಿದ್ದನು. ಈ ಹೇಳಿಕೆಗೆ ಪುರಾವೆಯನ್ನು ಭಾರತದಲ್ಲಿದ್ದ ಇಂಗ್ಲೀಷ್‌ ದಂಪತಿಗಳಿಗೆ ಜನಿಸಿದ ದಾದಿಯೊಬ್ಬಳಿಂದ ಪಡೆಯಲಾಗಿದೆಯೆಂದು ಹೇಳಿದ್ದಾರೆ.[18] ಈ ಪದ್ಧತಿಯನ್ನು ಉಚ್ಚ ವರ್ಗದವರಿಂದ ಬುಡಕಟ್ಟಿನ ಜನ ಪಡೆದುಕೊಂಡರೋ ಅಥವಾ ಉಚ್ಚ ಜನರೇ ಬುಡಕಟ್ಟ ಜನರಿಂದ ಪಡೆದುಕೊಂಡರೋ ಎಂಬುದನ್ನು ನಿರ್ಧರಿಸುವುದು ಕಷ್ಟ. ಆದರೆ ಇದು ದಕ್ಷಿಣ ಭಾರತದಲ್ಲಿದ್ದ ಜನರಲ್ಲಿ ರೂಢಿಯಲ್ಲಿದ್ದ ಬಗೆಗೆ ನಿರ್ಧರಿತವಾಗುತ್ತದೆ.

ದಕ್ಷಿಣ ಭಾರತದಲ್ಲಿ ಆಚರಣೆಯಲ್ಲಿದ್ದ ಈ ಕೋವಾಡ್‌ ಪದ್ಧತಿ ಕೇರಳ, ಮತ್ತು ಕರ್ನಾಟಕದಲ್ಲಿ ನೆಲೆಸಿರುವ ಕೊರಮರಲ್ಲಿ ಮಾತ್ರ ಕಂಡು ಬಂದಿರುವುದನ್ನು ನೋಡಿದರೆ ಇವರು ಒಂದೇ ಮೂಲದಿಂದ ಚದುರಿದವರು ಎಂಬುದು ತಿಳಿಯುತ್ತದೆ. ಆದರೆ ಬೊಂಬಾಯಿ ಪ್ರಾಂತ್ಯದಲ್ಲಿನ ಕೊರಮರನ್ನು ಕುರಿತು ಬರೆದ ಶ್ರೀ ಆರ್.ಇ. ಎಂಥೋವನ್‌ಅವರು “No evidence is forth coming of this practice prevailing in the Bombay presidency.”[19] ಎಂದಿದ್ದಾರೆ ಮತ್ತು ದ. ಭಾರತದಲ್ಲಿನ ಕೋವಾಡ್‌ಬಗೆಗೆ ಇ. ಥರ್ಸ್‌‌ಟನ್‌ರ ಮಾತುಗಳನ್ನು ಉಲ್ಲೇಖಿಸಿದ್ದಾರೆ. ಬೊಂಬಾಯಿ ಪ್ರಾಂತ್ಯದ ಕೊರಮರು ತಾವು ಬಂದು ನೆಲೆಸಿದ ಪ್ರದೇಶದ ಸಾಮಾಜಿಕ ಬಂಧನಗಳಿಗೊಳಗಾದಾಗ ಕಾರಣಾಂತರದಿಂದ ಈ ಪದ್ಧತಿಯನ್ನು ಕೈಬಿಟ್ಟಿರುವ ಸಾಧ್ಯತೆಗಳೇ ಹೆಚ್ಚು. ಅದರಂತೆಯೇ ದಕ್ಷಿಣ ಕರ್ನಾಟಕ ಕೊರಮರಲ್ಲಿಯೂ ಈ ಪದ್ಧತಿ ಎಂದೂ ಬಳಕೆಯಲ್ಲಿ ಇರಲಿಲ್ಲವೆಂಬುದು ನಮ್ಮ ಕ್ಷೇತ್ರ ಕಾರ್ಯದಿಂದ ತಿಳಿದು ಬಂದಿದೆ.

ಈ ಮೇಲೆ ವಿವೇಚಿಸಿದ ಹಲವು ಆದಾರಗಳಿಂದ ಕೊರಮ ಬುಡಕಟ್ಟು ಯಾವುದೋ ಒಂದು ಕಾಲದಲ್ಲಿ ತಮಿಳು ನಾಡಿನ ಬೆಟ್ಟಗುಡ್ಡಗಳ ಒಂದು ನೆಲೆಯಿಂದ ಹೊರಟು ದೇಶದಾದ್ಯಂತ ಚದುರಿಹೋಗಿದೆ ಎಂಬುದು ಖಚಿತವಾಗುತ್ತದೆ. ಕೊರಮ ಬುಡಕಟ್ಟು ತಮಿಳು ನಾಡಿನದ್ದಾದರೂ ಅದರ ನಿರ್ಧಿಷ್ಟ ನೆಲೆಯನ್ನು ಆ ರಾಜ್ಯದಲ್ಲಿ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ. ಆದರೂ ಉಳಿದಿರುವ ಕೆಲವೇ ಆಧಾರಗಳಿಂದ ಒಂದು ನಿರ್ಣಯಕ್ಕೆ ಬರಲು ಸಾಧ್ಯವಾಗುತ್ತದೆ. ಡಾ|| ಒಪರ್ಟ್‌ಅವರು ಬರೆಯುತ್ತಾ:  Kurru with the root ku, a mountain, and in a Tamil work of the ninth centruy.”[20] Kuru or kura (Kuamagal) is given as the name of a hill tribe”[21]  ಎಂದು ಬರೆದಿದ್ದಾರೆ. “ಕುಱ” ಶಬ್ದದ ಮೂಲ “ಕು” ಅಂದರೆ ಒಂದು ಪರ್ವತ. ೯ ನೇ ಶತಮಾನದ ತಮಿಳು ಕೃತಿಯೊಂದರಲ್ಲಿ “ಕುಱು” ಅಥವಾ ಕುರ (ಕುರಮಗಳ್‌) ಒಂದು ಪರ್ವತದ ಬುಡಕಟ್ಟು ಜನರ ಹೆಸರನ್ನು ಹೇಳುತ್ತದೆ. ಕುಱು ಅಥವಾ ಕುಱ ಒಂದು ಪರ್ವತವಾದರೆ ಆ ಪರ್ವತದ ಮಗಳೇ ಕಱಗಳು. ಅಂದರೆ ಆ ಕುರ ಪರ್ವತದಲ್ಲಿ ಬದುಕುತ್ತಿದ್ದ ಬುಡಕಟ್ಟಿನ ಹೆಣ್ಣುಮಗಳೊಬ್ಬಳನ್ನು ಈ ಶಬ್ದ ಹೇಳುತ್ತದೆ. ಇದು ೯ ನೇ ಶತಮಾನದಲ್ಲಿ ಉಲ್ಲೇಖವಾಗಿರುವುದರಿಂದ ಅಷ್ಟು ಪ್ರಾಚೀನವಾಗಿ ಈ ಬುಡಕಟ್ಟು ಆ ಪರ್ವತಗಳಲ್ಲಿ ವಾಸವಾಗಿತ್ತು ಎಂಬುದೇ ಅರ್ಥ. ಹಲವು ವಿದ್ವಾಂಸರ ದಾಖಲೆಗಳಲ್ಲಿ ಕಂಡು ಬರುವ ಹಾಗೆ ಕೊರಮ ಬುಡಕಟ್ಟಿನವರನ್ನು ಕರುವರು, ಕೊರವರು ಎಂದು ಕರೆಯುತ್ತಿದ್ದರು. ಈ ಶಬ್ದಗಳೂ ಕೂಡ ಆ ಜನರನ್ನು ಕುಱು ಎಂದರೆ ಪರ್ವತದಲ್ಲಿ ನೆಲೆಸಿದವರು ಎಂಬುದನ್ನು ಸೂಚಿಸುತ್ತದೆ.

ರೆವಿ. ಜೆ. ಕೇನ್‌ ಅವರು ಬರೆಯುತ್ತಾ: “Among themselves they call each other Kuluvaru, but the Telugu people call them Erakavaru or Erakalavaru………. “[22]  ಎಂದಿದ್ದಾರೆ. ಇದು ಒಂದು ಪ್ರಮುಖ ದಾಖಲೆಯಾಗಿ ನಿಂತುಕೊಳ್ಳುತ್ತದೆ. ಕಾರಣವೆಂದರೆ ಕೊರಮರು ದ. ಕರ್ನಾಟಕದಲ್ಲಿ ಇಂದಿಗೂ ತಮ್ಮ ಕುಲ ಭಾಷೆಯಲ್ಲಿ ತಮ್ಮನ್ನು “ಕುಳುವರು” ಎಂದೇ ಕರೆದುಕೊಳ್ಳುತ್ತಾರೆ. ಈ ಕುರುವರು ಗೋದಾವರಿ ಜಿಲ್ಲೆಯಲ್ಲಿ ತಮ್ಮನ್ನು ತಾವು ಕುಳುವರು ಎಂದು ಕರೆದುಕೊಳ್ಳುವ ಬಗೆಗೆ ತಿಳಿಯುತ್ತದೆ. ಆದರೆ ತೆಲುಗು ಜನ ಇವರನ್ನು ಇವರ ವೃತ್ತಿಯ ಮೇಲಿಂದ ಯರಕವಾರು ಎಂದು ಕರೆಯುತ್ತಿರಬಹುದು. ಇಲ್ಲವೆ ಕರುವರು ಕಣಿ ಹೇಳುತ್ತಿದ್ದುದರಿಂದ ತೆಲುಗರ ಬಾಯಲ್ಲಿ ಯರಕುರುವರು, ಯರಕಲವರು, ಯರಕವಾರು ಆಗಿರಬಹುದು. ಮೂಲತಃ ಇವರು ಕುರುವರೇ, ಮುಂದೆ ರೂಪ ಬದಲಾವಣೆ ಹೊಂದಿ ಕೆಲವು ಕಡೆ ಕುರವರು, ಕೆಲವು ಕಡೆ ಕೊರವರು ತಮ್ಮ ತಮ್ಮಲ್ಲಿ ತಮ್ಮ ಭಾಷೆಯಲ್ಲಿ ಕುಳುವರು ಆಗಿದ್ದಾರೆ. ಆದ್ದರಿಂದ ಈ ಜನರೆಲ್ಲ ಮೂಲದಲ್ಲಿ (ಕುರು ಅಥವಾ ಕುರ) ಒಂದೇ ಪ್ರದೇಶಕ್ಕೆ ಸೇರಿದ ಬುಡಕಟ್ಟಿನವರು ಎಂಬುದನ್ನು ತಳ್ಳಿಹಾಕುವಂತಿಲ್ಲ.

ಶ್ರೀ ಫ್ರಾನ್‌ಸಿಸ್‌ ಅವರು ಈ ಬುಡಕಟ್ಟನ್ನು ಕುರಿತು ಬರೆಯುತ್ತಾ: It is noteworthy in this connection that the yerukalas are said to call one another Kurru or Kura”[23] ಎಂದಿದ್ದಾರೆ. ಇಲ್ಲಿಯೂ ಕೂಡ ಕುರುವರು ಮತ್ತು ಯರುಕುಲರು ತಮ್ಮ ತಮ್ಮಲ್ಲಿ “ಕುರು” ಅಥವಾ “ಕುರ” ಎಂದು ಹೇಳಿಕೊಳ್ಳುತ್ತಿದ್ದ ಬಗೆಗೆ ದಾಖಲಿಸಿರುವರು. ಅಲ್ಲದೆ ಶ್ರೀ ಎಚ್‌.ಎ. ಸ್ಟೂಅರ್ಟ್‌ ಅವರು “but they always speak of themselves as Kurru………”[24]  ಎಂದು ಗುರುತಿಸಿದ್ದಾರೆ. ಆದ್ದರಿಂದ ಇವರ ಭಾಷೆ “ಕುರು” ಆಗಿದ್ದು ಆ ಭಾಷೆಯನ್ನು ಮಾತನಾಡುವ ಇವರು ಕುರುವರು, ಕೊರವರು, ಕುಳುವರು, ಯರಕಲವರು, ಕೊರಮರು, ಕೊರಚರಾಗಿ ಆಯಾ ಪ್ರದೇಶದಿಂದ ಹೊರಟವರು ಎಂಬುದು ನಿಶ್ಚಿತವಾಗಿ ತೋರುತ್ತದೆ.

ಶ್ರೀ ಇ. ಥರ್ಸ್‌‌ಟನ್‌ ಅವರ ಮಾತನ್ನು ಶ್ರೀ ಎಚ್‌.ವಿ.ನಂಜುಂಡಯ್ಯ ಮತ್ತು ಶ್ರೀ ಎಲ್‌.ಕೆ. ಅನಂತಕೃಷ್ಣ ಐಯ್ಯರ್ ಅವರು ಉಲ್ಲೇಖಿಸುತ್ತಾ  ” Hindustani Kuri (sly) korinigga (sly look) becoming corrupted in to Koracha, But the two words Koracha and Korama are other wise derived from the verb Kuru, meaning to divine or prognasticate, and the applied to the tribe owing to their profession of fortune telling which their women practice. There is still another derivation of these terms from a word which means hill man- (ef. Tamil Kurani-a hill country) showing that these tribes men are wild hill men living in jungles”[25]  ಎಂದು ಇವರ ಮೂಲದ ಇತರೆ ರೂಪಗಳನ್ನು ಹೇಳಿದ್ದಾರೆ. ಹಿಂದೂಸ್ಥಾನಿ “ಕುರಿ” ಯಿಂದ ಕೊರಚ ಎಂದಾಗಲು ಯಾವುದೇ ಆಧಾರವಿಲ್ಲ. “Kuri”  ಎಂದರೆ “Sly” ಎಂಬ ಅರ್ಥವಿರುವುದನ್ನು ಸೂಚಿಸಿದ್ದಾರೆ. ಮೈಸೂರು ವಿಶ್ವವಿದ್ಯನಿಲಯದ ಇಂಗ್ಲಿಷ್‌ಕನ್ನಡ ನಿಘಂಟಿನಲ್ಲಿ Sly ಎಂಬುದಕ್ಕೆ ಮೋಸ, ಕಪಟ, ಅಡಗಿಕೊಂಡು  ಕೆಟ್ಟ ಕೆಲಸ ಮಾಡುವವನು, ಕಳ್ಳ- ಕೊರಮ ಎಂದೆಲ್ಲ ಅರ್ಥವಿದೆ. ಕೊರಮರ ಮೇಲೆ ಆರೋಪಿಸಲಾಗಿರುವ ಕಳ್ಳತನ- ದರೋಡೆಗಳ ಆಧಾರದ ಮೇಲೆ ಜಾತಿಯ ಹೆಸರನ್ನು ನಿರ್ಧರಿಸುವುದು ಒಂದು ಕುಚೋದ್ಯವಷ್ಟೇ ಹೊರತು ನಿಜ ಸಂಗತಿಯಲ್ಲ. ದಕ್ಷಿಣ ಭಾರತದ ಬುಡಕಟ್ಟು ಜನರಾದ ಮೊರಮರು ತಮಿಳು ಮೂಲದವರೇ ವಿನಃ ಹಿಂದೂಸ್ಥಾನಿ ಭಾಷೆಯ ಮೂಲದವರಲ್ಲ ಎಂದು ಹೇಳುವದೇ ಸರಿ.

ಕುರು ಶಬ್ದಕ್ಕೆ ಕಣಿ ಹೇಳು ಎಂಬ ಅರ್ಥವಿರುವದರಿಂದ ಅಲ್ಲದೆ ೯ ನೇ ಶತಮಾನದ ತಮಿಳು ಕೃತಿ ಇದಕ್ಕೆ ಆಧಾರವಾಗಿರುವದರಿಂದ[26]  ಕೊರಮರು ಬಹಳ ಹಿಂದಿನಿಂದಲೂ ಕಣಿ ಹೇಳುತ್ತಾ ಬಂದಿರುವುದು ನಿರ್ವಿವಾದ ವಿಷಯ. ಕಣಿ ಹೇಳುತ್ತಿದ್ದುದೊಂದರಿಂದಲೇ ಕೊರಮರಿಗೆ ಕುರು ಅಥವಾ ಇದರ ಮುಂದಿನ ರೂಪಗಳಾದ ಕುರುವ, ಕೊರವ, ಕೊರಮ, ಕೊರಚ ಮುಂತಾದ ಹೆಸರುಗಳ ಬಂದಿವೆ ಎಂದು ಹೇಳುವುದಕ್ಕಿಂತ ಅವರಾಡುವ ಭಾಷೆ, ತಮಿಳಿಗೆ ಸಮೀಪವಾದ್ದರಿಂದ, ಇವರು ಬುಡಕಟ್ಟಿನ ಲಕ್ಷಣಗಳನ್ನು ಹೊಂದಿರುವದರಿಂದ ಕುರು ಅಥವಾ ಕುರಿ ಎನ್ನುವ ತಮಿಳು ನಾಡಿನ ಬೆಟ್ಟ ಪ್ರದೇಶದವರಾಗದ್ದರಿಂದ ಇವರಿಗೆ ಕುರುವ, ಕೊರವ, ಕೊರಮ ಮುಂತಾದ ಹೆಸರುಗಳು ರೂಢಿಯಾಗಿವೆ. ಇಲ್ಲದಿದ್ದರೆ ನಾಡಿನ ಹಲವು ಭಾಗಗಳಲ್ಲಿ ಚದುರಿಹೋಗಿರುವ ಈ ಜನ ತಮ್ಮ ಹೆಸರನ್ನು ಮತ್ತು ಭಾಷೆಯನ್ನು ಉಳಿಸಿಕೊಳ್ಳುತ್ತಿರಲಿಲ್ಲ. ಈ ಮೇಲೆ ವಿವೇಚಿಸಿದ ಎಲ್ಲ ಅಂಶಗಳು ಕೊರಮ ಬುಡಕಟ್ಟಿನ ಮೂಲವನ್ನು ತಮಿಳುನಾಡಿನ ಪರ್ವತ ಪ್ರದೇಶವಾದ “ಕುರು”ವಿಗೇ ಕೊಂಡೊಯ್ಯುತ್ತವೆ.

“ದ್ರಾವಿಡ (ತಮಿಳು) ದೇಶವೂ, ಭಾರತದ ದಕ್ಷಿಣದ ತುದಿಗೆ”[27] ಇಲ್ಲಿಂದ ಹೊರಟ ದ್ರಾವಿಡ ತಮಿಳು ಮೂಲದ ಕೊರಮರು ಇತರೆ ರಾಜ್ಯಗಳಲ್ಲಿ ಬಂದು ಉಳಿದು ಕಾಲಾಂತರದಲ್ಲಿ ಏನೇ ಬದಲಾವಣೆ ಹೊಂದಿದ್ದರೂ, ಈಗಲೂ ಅವರಲ್ಲಿ ಕಂಡು ಬರುವ ಕೆಲವೊಂದು ಕುರುಹುಗಳು ಅವರ ತಮಿಳು ಮೂಲವನ್ನು ಪುಷ್ಟೀಕರಿಸುತ್ತವೆ.

ಜಾನಪದ ಗೀತೆಯೊಂದರಲ್ಲಿ – ಕೃಷ್ಣ ಕೊರವಂಜಿ ವೇಷದಿಂದ ರುಕ್ಮಿಣಿಯಲ್ಲಿಗೆ ಕಣಿ ಹೇಳಲು ಬಂದಾಗ ಆಕೆ “ಯಾವೂರು, ಯಾವ ಸೀಮೆ, ಎಲ್ಲಿಂದ ಬಂದೆ ” ಎಂದು ಕೇಳುತ್ತಾಳೆ. ಆಗ ಕೊರವಂಜಿ ಕೊಡುವ ಉತ್ತರದಲ್ಲಿ “ಅಕ ಟಿಂಕಣಿ ನಮಗೆ ಗೌರಮ್ಮಳಿಯಾಳು” ಎಂಬ ಮಾತು ಬರುತ್ತದೆ. ಇಲ್ಲಿ ಕೊರವಂಜಿ ತಾನು ದಕ್ಷಿಣದ ಕಡೆಯವಳು ಎಂದು ಹೇಳಿದುದು ಗಮನಾರ್ಹವಾಗಿದೆ. ಅಷ್ಟೇ ಅಲ್ಲದೆ ಮೇಲಿನ ಎಲ್ಲ ಅಂಶಗಳನ್ನು ಗಟ್ಟಿಗೊಳಿಸುತ್ತದೆ. ಡಾ. ಜಿ. ವರದರಾಜರಾವ್ ಅವರು ಹೇಳುವಂತೆ “ಈಶ್ವರನ ಬಳಗಕ್ಕೆ ಸೇರಿದವಳೆನ್ನುವುದೂ ಈ ಜನಾಂಗದ ಹುಟ್ಟಿನ ಕಥೆಯ ಮೆಲೆ ತಕ್ಕಮಟ್ಟಿಗೆ ಬೆಳಕನ್ನು ಬೀರುತ್ತದೆ.”[28]

ಒಟ್ಟಿನಲ್ಲಿ ಕೊರಮರೆಂಬ ಬುಡಕಟ್ಟಿನ ಜನರ ಮೂಲ ನಿವಾಸ ಸ್ಥಳ ತಮಿಳುನಾಡಿನ ಒಂದು ಪರ್ವತಪ್ರಾಂತ. ಅದು ಬಹುಶಃ ತಂಜಾವೂರು, ಕೊಯಂಬತ್ತೂರ, ದಕ್ಷಿಣ ಅರ್ಕಾಟ್‌ಜಿಲ್ಲೆಗಳ ಗುಡ್ಡಗಾಡಿನ ಒಂದು ಭಾಗ ಎನ್ನಬಹುದು. ಕೊರಮರ ಮೂಲಭಾಷೆ ತಮಿಳಿನ ಉಪಭಾಷೆಯಾದ “ಕುರ್ರ”  (ಕುಳವ) ಆಗಿರುವಂತೆ ತೋರುತ್ತದೆ. ಆದೇ ಅವರ ಗೋತ್ರ – ಸೂತ್ರ ಮತ್ತು ಆಚರಣೆಗಳನ್ನು ಬಿಂಬಿಸುವ ಶಬ್ದಗಳನ್ನೊಳಗೊಂಡ ಭಾಷೆ, ವೃತ್ತಿಗನುಸರಿಸಿ, ಇತರ ಭಾಷೆಗಳನ್ನೂ ಕಲಿತು ಪ್ರಯೋಗಿಸಿದರೂ ತಮ್ಮ ಮೂಲಭಾಷೆಯನ್ನು ಇಂದಿಗೂ ಕೊರಮ ಬುಡಕಟ್ಟು ಕಳೆದುಕೊಂಡಿಲ್ಲ ಎಂಬುದು ಸತ್ಯಸಂಗತಿ. ಜನಪದ ಸಾಹಿತ್ಯದ ಕೊರವಂಜಿ ಪಾತ್ರದ ವಿಚಿತ್ರ ಭಾಷೆಯಲ್ಲಿಯೂ ಈ ಸಂಮಿಶ್ರಭಾಷಾ ಸ್ವರೂಪ ಕಂಡುಬರುತ್ತದೆ. ಅಲ್ಲಲ್ಲಿ ತಮ್ಮ ಮೂಲ ಭಾಷೆಯ ಪ್ರಯೋಗ ಮಾಡಿರುವುದು ಸ್ವಾಭಾವಿಕ.[1]       Paupa Rao Naidu, Writes. Quoted E.Thurston, Castes and Tribes of southern India, p-451

[2]      Ibid., p – 459

[3]        R.E. Enthovan The castes and  Tribes of Bombay Vol-II, p-267

[4]        Smt. R. Gnanamaxikammal, Souvenir July 1983 Akil Karnataka Koramara Sangha, Banglore.

[5]        ಜಾನಪದ ಸಾಹಿತ್ಯ ದರ್ಶನ – 6, ಪು – 200.

[6]        Madras Census Report – 1901, Quoted, E.Thurston, Castes and Tribes of southern India, Vol, III-k, p-441

[7]      ಜಾನಪದ ಸಾಹಿತ್ಯ ದರ್ಶನ ಜಾನಪದ ಸಮ್ಮೇಳನ ಸ್ಮರಣೆ – 2 ಪು:

[8]        Origin of civilisation and primitive condition of man Quoted, E.Thurston, Ethnographic on southern India, p-I, p-547

[9]        India, Trubner, Oriental Series, Quoted E.Thurston, Quoted : Ethnographic Notes on southern India, Part-I,  p-457

[10]      India Ant, III 1874 E.Thurston Notes on southern India, p-I, p-458

[11]      ಡಾ|| ತಿ.ನಂ. ಶಂಕರನಾರಾಯಣ ಕಾಡುಗೊಲ್ಲರ ನಂಬಿಕೆಗಳು ಮತ್ತು ಸಂಪ್ರದಾಯಗಳು ಪು-149.

[12]       E.Thurston, Quoted : Ethnographic Notes on southern India, Part-I, p-548

[13]      Ibid., p – 549

[14]       Ibid., p – 550

[15]      Ibid., p – 550

[16]      Ibid., p – 550-551

[17]       K. Anantha Krishna lyer, Quoted, E.Thurston, Ethnographic Notes.

[18]      Introduction to the study of man and civilization Quoted, E.Thurston, Ethnographic  Notes on southern India, Vol-l. p-551

[19]      R.E. Enthovan The castes and  Tribes of Bombay Vol-II, p-269

[20]      Tirumurukairuppadai Quoted, E.Thurston, Castes and Tribes of southern India, Vol, III-k, p-441

[21]       Madras Journalism and Science Quoted, E.Thurston, Castes and Tribes of southern India, Vol, III-k, p-441

[22]     Indian antiquaty. IX, 1880.  Quoted, E.Thurston, Castes and Tribes of southern India, Vol, III-k, p-443

[23]      Madras Census Report – 1901, Quoted, E.Thurston, Castes and Tribes of southern India, Vol, III-k, p-441

[24]      Madras Census Report – 1901, Quoted, E.Thurston, Castes and Tribes of southern India, Vol, III-k, p-440

[25]     H.V. Nanjundaiah and L.K. Anantha Krishna lyer, The Mysore Tribes and Castes, Vol-III, p-583

[26]     Madras Jorn. lit. and Science India, Vol, III-k, p-441

[27]     ಶಂಬಾ ಜೋಷಿ – ಹಾಲುಮತ ದರ್ಶನ ಪು- 28

[28]      ಜಾನಪದ – 2 ಕರ್ನಾಟಕ ಜಾನಪದ ಪರಿಷತ್ತು ಮಾನಸ ಗಂಗೋತ್ರಿ ಮೈಸೂರು ಪು-11