ಪ್ರಸ್ತುತದಲ್ಲಿ ಬದುಕುತ್ತಿರುವ ಕೊರಮ ಬುಡಕಟ್ಟಿನ ಜೀವನ ವಿಧಾನದಿಂದ ಅದರ ಹಿಂದಿನ ಎಲ್ಲಾ ಅಂಶಗಳನ್ನು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಬುಡಕಟ್ಟಿನ ಬಗೆಗೆ ಸಾಹಿತ್ಯಿಕವಾಗಿ, ಐತಿಹಾಸಿಕವಾಗಿ ಮತ್ತು ಇತರೆ ಮೂಲಗಳಿಂದ ಲಭ್ಯವಾಗಿರುವ ಆಧಾರಗಳನ್ನು ಮುಖ್ಯವಾಗಿ ಗಮನಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ದೇಶ-ವಿದೇಶೀಯ ವಿದ್ವಾಂಸರು ಕೆಲವೊಂದು ಅಂಶಗಳನ್ನು ದಾಖಲಿಸಿದ್ದಾರೆ. ಈ ದಾಖಲೆಗಳಿಂದ ಆ ಜನರು ಸಾವಿರಾರು ವರ್ಷಗಳಿಂದ ಅನುಸರಿಸಿಕೊಂಡು ಬಂದಿರುವ, ಆಚಾರ-ವಿಚಾರ, ಉದ್ಯೋಗ-ವ್ಯವಹಾರ, ಕಲೆ ಸಾಹಿತ್ಯ ಹಾಗೂ ಜೀವನ ವಿಧಾನದ ಪರಿಚಯವಾಗುತ್ತದೆ. ಅಷ್ಟೇ ಅಲ್ಲ. ಅವರ ಮೂಲ ವಾಸಸ್ಥಳ, ಆಡುತ್ತಿದ್ದ ಭಾಷೆಗಳ ಮೇಲೂ ಬೆಳಕು ಬೀಳುತ್ತದೆ. ಇಂಥ ದಾಖಲೆಗಳೇ ಇಲ್ಲದಿದ್ದರೆ, ಅಲೆಮಾರಿಗಳಾಗಿದ್ದ ಈ ಜನಾಂಗ ನಾಗರೀಕತೆಯ ಪ್ರಭಾವದಿಂದ ಬದಲಾಗುತ್ತಾ ಬಂದಿರುವುದರಿಂದ ಇವರ ಪೂರ್ವದ ಬದುಕಿನ ಒಳ ವಿವರಗಳು ಲಭ್ಯವಾಗುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಕೊರಮ ಬುಡಕಟ್ಟನ್ನು ಅಭ್ಯಸಿಸಿ ವಿದ್ವಾಂಸರುಗಳು ಮಾಡಿರುವ ದಾಖಲೆಗಳು ಗಮನಾರ್ಹವಾಗಿವೆ. ತಮಿಳಿನ ಸು ೯ ನೇ ಶತಮಾನದ ಕಾವ್ಯವೊಂದರಲ್ಲಿ

[1] ಈ ಬುಡಕಟ್ಟಿನ ಬಗೆಗೆ ದೊರೆಯುವ ಮಾಹಿತಿ ಅದರ ಪ್ರಾಚೀನತೆಯನ್ನು ಸೂಚಿಸುತ್ತದೆ. ಇದು ಅವರ ಉದ್ಯೋಗದ ಜೊತೆಗೆ ಅವರ ಸಾಮಾಜಿಕ ಚಟುವಟಿಕೆಗಳನ್ನು ನಿರ್ದೇಶಿಸುತ್ತದೆ.

ಶ್ರೀ ಎಚ್‌.ವಿ. ನಂಜುಂಡಯ್ಯ ಮತ್ತು ಶ್ರೀ ಎಲ್‌.ಕೆ. ಅನಂತಕೃಷ್ಣ್‌ ಐಯ್ಯರ್‌ ಅವರುಗಳು ಕೊರಮರ ದೀರ್ಘ ಪರಿಚಯ ಮಾಡಿಕೊಟ್ಟಿದ್ದಾರೆ. “Korachas also known as Koravas and Koramas are a tribe of hunters, fortune-tellers. cattle breaders, carriers, basket makers and thieves”[2] ಎಂದಿದ್ದಾರೆ. ಕೊರಚರು, ಕೊರವರು, ಕೊರಮರು ಎಂದು ಬೇರೆ ಬೇರೆ ಹೆಸರುಗಳಿಂದ ಕರೆಸಿಕೊಳ್ಳುವ ಇವರು ಬೇಟೆಗಾರರು, ಕಣಿ ಹೇಳುವವರು, ಪಶುಪಾಲಕರು, ಸಾಗಣೆದಾರರು, ಬುಟ್ಟಿ ನೇಯುವವರು ಜೊತೆಗೆ ಕಳ್ಳತನ ಮಾಡುವವರಾಗಿದ್ದರು ಎಂಬ ಅವರ ವಿವಿಧ ವೃತ್ತಿ-ಪ್ರವೃತ್ತಿಗಳನ್ನು ದಾಖಲಿಸಿದ್ದಾರೆ. ಜೊತೆಗೆ ಕೊರಮರ ಭಾಷೆ, ಹವ್ಯಾಸ, ಮದುವೆ ಮುಂತಾದ ಕುಲಪದ್ಧತಿಗಳನ್ನೂ, ನಂಬಿಕೆ ನಡವಳಿಕೆಗಳನ್ನೂ ಪರಚಯಿಸುವ ಪ್ರಯತ್ನ ಮಾಡಿದ್ದಾರೆ.

R.E. Enthovan ಅವರು ” Koravas also known as Korar, Koragar, Koramar (Korama) and Korachar numbering 19364 (1901) including 9.672 males and 9.692 females are found principally in the Belgaum. Bijapur and Dharwar Districts and in the native states of the Southern Maratha agency. They are wandering tribe of hunters, fortue-tellers, cattel breeders, carriers, musicians, basket makers and thieves”[3] ಎಂದಿದ್ದಾರೆ. ಇಲ್ಲಿ ಕೊರಮರನ್ನು ಗುರುತಿಸುತ್ತಿದ್ದ ಇತರ ಹೆಸರುಗಳು, ೧೯೦೧ ರ ಜನಗಣತಿಯ ಪ್ರಕಾರ ಮುಂಬಯಿ ಪ್ರಾಂತ್ಯದ ಜನಸಂಖ್ಯೆ ಮತ್ತು ಅವರ ಉದ್ಯೋಗ ವ್ಯವಹಾರ ಜೊತೆಗೆ ಬುಡಕಟ್ಟಿನ ಮೂಲ, ಅವರಾಡುವ ಭಾಷೆ, ಕುಲ ಪದ್ಧತಿಗಳ ಪರಿಚಯ ಮಾಡಿಕೊಟ್ಟಿದ್ದಾರೆ. ಮತ್ತು ಈ ಜನ ವಾದ್ಯಕಾರರಾಗಿದ್ದ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಅಂಶವು ಅವರ ಸಾಂಸ್ಕೃತಿಕ ಬೆಳವಣಿಗೆಯ ಒಂದು ಪ್ರತೀಕವಾಗಿದೆ. ಅಷ್ಟೇ ಅಲ್ಲದೆ ಅವರ ಸೃಜನಾತ್ಮಕ ಶಕ್ತಿಯ ಕುರುಹಾಗಿಯೂ ಗೋಚರಿಸುತ್ತದೆ.

Bucheanunರು “Koramas of Mysore an impure caste who made baskets and carried salt ……..”[4] ಎಂದಿದ್ದಾರೆ. ಇದರಿಂದ ಮೈಸೂರು ಪ್ರಾಂತ್ಯದಲ್ಲಿದ್ದ ಕೊರಮರು ಅಶುದ್ಧ ಜಾತಿಗೆ ಸೇರಿದವರು. ಬುಟ್ಟಿ ನೇಯುವುದು, ಉಪ್ಪು ಸಾಗಿಸುವುದು ಇವರ ಕೆಲಸ ಎಂಬುದರಿಂದ ಕೊರಮರ ಸಾಮಾಜಿಕ ಸ್ಥಾನಮಾನ, ಅವರ ಉದ್ಯೋಗದ ಪರಿಚಯವಾಗುತ್ತದೆ. ಅಲ್ಲದೆ ಉಪ್ಪನ್ನು ಹಳ್ಳಿಗಳಿಗೆ ಹೋಗಿ, ಮಾರಿ ಜೀವನ ಸಾಗಿಸಲು ಅನುಸರಿಸಿದ ಕ್ರಮಗಳಿಂದ ಕೊರಮರಲ್ಲಿ ಸಾಮಾಜಿಕ ಬದಲಾವಣೆಗಳು ಮೈದೋರತೊಡಗಿದುದು ಗಮನಾರ್ಹ ವಿಷಯ.

Riceರು ಕೊರಗರು, ಕೊರಮರು ಮತ್ತು ಕೊರಚರನ್ನು ಕುರಿತು ಹೀಗೆ ಬರೆಯುತ್ತಾರೆ. “……….the Koragas, Koramas, Korachas moving with droues of cattle and assess, carrying salt and grain and making bomboo mats and baskets.” [5] ಈ ಬುಡಕಟ್ಟು ಜನರು ಬದುಕಲು ಅವಲಂಬಿಸಿದ್ದ ಬಗೆಬಗೆಯ7 ಉದ್ಯೋಗಗಳನ್ನು ಇಲ್ಲಿ ಗಮನಿಸಿದ್ದಾರೆ. ಈ ಮೊದಲಾದ ಹೇಳಿಕೆಗಳು ಸಮಸ್ತ ಬುಡಕಟ್ಟಿನ ಖಚಿತ ದಾಖಲೆಗಳಲ್ಲಿ ಒಂದೊಂದು ಅಂಶಗಳನ್ನು, ಪ್ರಾದೇಶಿಕವಾಗಿ ಕಾಣುವ ವಿಷಯಗಳಲ್ಲಿ ಗಮನಿಸಿ ಈ ಬಗೆಯ ವಿವಿಧ ಹೇಳಿಕೆಗಳನ್ನು ನೀಡಿರುವರು. ಇವುಗಳ ಆಧಾರವನ್ನು ಗಮನದಲ್ಲಿಟ್ಟುಕೊಂಡರೆ ಈ ಬುಡಕಟ್ಟಿನ ಎಲ್ಲ ಜನ ಒಂದೇ ರೀತಿಯ ಕಸುಬುಗಳನ್ನು ಮಾಡುತ್ತಿರಲಿಲ್ಲ. ಅವರಲ್ಲಿ ಕೆಲವರು ಕಳ್ಳರು, ದರೋಡೆಕೋರರು ಆಗಿದ್ದರೆ ಮತ್ತೆ ಕೆಲವರು ಉಪ್ಪು ಮತ್ತು ಆಹಾರ ಸಾಮಗ್ರಿಗಳನ್ನು ಹಳ್ಳಿಗಳಿಗೆ ತೆಗೆದುಕೊಂಡು ಹೋಗಿ ಮಾರಿ ಶ್ರಮ ಜೀವನ ಸಾಗಿಸುತ್ತಿದ್ದರು ಎಂಬುದು ತಿಳಿದು ಬರುತ್ತದೆ. ದನಗಳ ವ್ಯಾಪಾರ, ಬಿದಿರಿನ ಕೆಲಸ ಮುಂತಾ ಉಪವೃತ್ತಿಗಳನ್ನೂ ಕೆಲಸವರು ಅವಲಂಬಿಸುತ್ತಿದ್ದರೆಂಬುದು ತಿಳಿದು ಬರುತ್ತದೆ.

Abbe dubois ಅವರು (describes) “them as carriers and basket makers who were perpetually wondering about and showed much affinity with the Gypies of Europe, especially in telling fortunes. the women were skillful tattoers, about the tribe in his time has an evil reputation for theiving and house breaking”[6] ಎಂದಿದ್ದಾರೆ. ಯೂರೋಪಿನ ಜಿಪ್ಸಿ ಜನಾಂಗವನ್ನು ಹೋಲುವ ಈ ಬುಡಕಟ್ಟಿನ ಹೆಣ್ಣು ಮಕ್ಕಳು ಹಚ್ಚೆ ಹಾಕುವುದರಲ್ಲಿ ನೈಪುಣ್ಯತೆ ಪಡೆದಿದ್ದರು. ಕಣಿ ಹೇಳುತ್ತಿದ್ದರು, ಕಳ್ಳತನ ಮಾಡುತ್ತಿದ್ದರು, ಮನೆಗಳಿಗೆ ಕನ್ನ ಹಾಕಿ ದರೋಡೆ ಮಾಡುತ್ತಿದ್ದರು ಎಂಬುದು ತಿಳಿದು ಬರುತ್ತದೆ. ಈ ದಾಖಲೆಗಳಲ್ಲಿಯ ವಿಶೇಷ ಅಂಶವೆಂದರೆ, ಕೊರಮರ ಸ್ತ್ರೀಯರು ಅಂದಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂದರ್ಭಗಳಲ್ಲಿ ತಮ್ಮ ಉದ್ಯೋಗದ ಮುಖಾಂತರ ಪ್ರಮುಖ ವಾಹಿನಿಯಲ್ಲಿ ತಮ್ಮನ್ನು ತಾವು ಹೇಗೆ ತೊಡಗಿಸಿಕೊಳ್ಳುತ್ತಿದ್ದರು ಎಂಬುದು. ಅಂತೆಯೇ adbe dubois ಅವರು ಇನ್ನೂ ಹೆಚ್ಚಿನ ಮಾಹಿತಿಯನ್ನು ನೀಡಿ ಕೊರಮರ ಮೂಲ ಮತ್ತು ಭಾಷೆಯ ಬಗೆಗೆ, ಹಚ್ಚೆಯ ಬಗೆಗೆ ಗಮನ ಸೆಳೆದಿದ್ದಾರೆ.8a

Dr. Oppert ಅವರು “It is highly probable that the name and the occupation of the fortune-telling Kuruvendlu of kuluvendlu indeed the Telugu people to call this tribe yerukala vendlu”[7] ಎಂದು ದಾಖಲಿಸಿರುವಲ್ಲಿ ಕಣಿ ಹೇಳುವ ಕುರುವೆಂಡಲು ಅಥವಾ ಕುಳುವೆಂಡ್ಲು ಎನ್ನುವ ಕೊರಮ ಬುಡಕಟ್ಟಿನ ಜನರನ್ನು ತೆಲಗು ಜನ ಯರಕುಲವೆಂಡ್ಲು ಎಂದು ಕರೆಯುತ್ತಿದ್ದ ಬಗೆಗೆ ಮಾಹಿತಿ ಒದಗಿಸಿದ್ದಾರೆ. ಬೇರೆ ಬೇರೆ ಪ್ರಾಂತ್ಯಗಳಲ್ಲಿ ಬದುಕುವ ಇವರಿಗೆ ಆಯಾ ಪ್ರಾಂತ್ಯದಲ್ಲಿ ಬೇರೆ ಬೇರೆ ಹೆಸರುಗಳಿದ್ದರೂ ಸಾಮಾನ್ಯವಾಗಿ ಕುಲಪದ್ಧತಿ ಹಾಗೂ ವೃತ್ತಿಯಲ್ಲಿ ಸಾಮ್ಯವಿರುವುದು ಕಂಡುಬರುತ್ತದೆ.

“Kuruvas have usually been treated as being the same as the yerukalas. Both castes are wandering gypsies, both live by basket making and fortune-telling, both speak a corrupt Tamil, and both may have sprung from one origional stock.”[8] ಎನ್ನುವ Mr. Frances ಅವರ ಹೇಳಿಕೆಯಿಂದ ಕೊರಮ ಬುಡಕಟ್ಟಿನ ಸ್ವರೂಪದ ಪರಿಚಯವಾಗುತ್ತದೆ. ಬಹುಶಃ ಕುರುವರು ಮತ್ತು ಯರಕಲರು ಒಂದೇ ಮೂಲದಿಂದ ಹೊರಟು, ಒಂದೇ ರೀತಿಯ ವೃತ್ತಿಯನ್ನನುಸರಿಸಿ ಬೇರೆ ಬೇರೆ ಹೆಸರುಗಳಿಂದ ಇವರು ಬೇರೆ ಬೇರೆ ಪ್ರಾಂತ್ಯಗಳಲ್ಲಿ ಬದುಕುತ್ತಿರುವುದು ತೋರುತ್ತದೆ. “ಕುರವ” ತಮಿಳುನಾಡಿನಲ್ಲಿ ಪ್ರಚಾರವಿದ್ದರೆ, ಯರಕುವೆಂಬುದು ಆಂಧ್ರದಲ್ಲಿ ಪ್ರಚಾರವಿದ್ದಂತೆ ತೋರುತ್ತದೆ.

Rev. J. Cain  ಅವರೂ ಕೂಡ ಕೊರಮ ಬುಡಕಟ್ಟಿನ ಮಹತ್ವದ ಕೆಲವು ವಿಷಯವನ್ನು ಗಮನಿಸಿದ್ದಾರೆ. “among themselves call each other Kuluvaru; but the Telugu people call them Erakavaru or Erakalavaru, and this name has been derived from the Telugu word eruka, which means konwledge or acquaitance as they are great fortune tellers.”[9] ಕೊರಮರನ್ನು ತೆಲುಗು ಜನ ಎರಕವಾರು ಅಥವಾ ಎರಕಲವರು ಎಂದು ಕರೆಯುತ್ತಾರೆ. ತೆಲುಗಿನ ಈ ಹೆಸರು “ಎರಕ” ಶಬ್ದದಿಂದ ಬಂದಿದೆ. “ಎರಕ” ಎಂದರೆ ಜ್ಞಾನ ಅಥವಾ ಪರಿಚಯಸ್ಥ ಎನ್ನುವ ಅರ್ಥವಿದೆ. ಈ ಹೇಳಿಕೆಯಿಂದ ತೆಲುಗು ನಾಡಿನಲ್ಲಿ ಪಡೆದ ಪ್ರಚಾರ ಮತ್ತು ತೆಲುಗರ ಬಾಯಲ್ಲಿ ಈ ಕೊರಮರು ಕಣಿ ಹೇಳುವ ಜ್ಞಾನದಿಂದ ಎರಕಲವರಾಗಿ ಪ್ರಸಿದ್ಧರಾಗಿದ್ದುದು ತಿಳಿಯುತ್ತದೆ.

E. Thurston ಅವರು ತಿಳಿಸುವಂತೆ : “old Tamil books refer to the Koravas as fortune-tellers to kings and queens…….”[10] ಕೊರವರು ರಾಜ ರಾಣಿಯರಿಗೆ ಕಣಿಹೇಳುತ್ತಿದ್ದ ವಿಷಯವನ್ನು ಸಾಹಿತ್ಯಿಕ ದಾಖಲೆಯ ಆಧಾರದಿಂದ ತಿಳಿಸಿದ್ದಾರೆ. ಆದರೆ ಕಾಲಾಂತರದಲ್ಲಿ ಇವರು ಸಾಮಾನ್ಯರಿಗೂ ಕಣಿ ಹೇಳುತ್ತಿದ್ದ ಬಗ್ಗೆ ಹಲವಾರು ರುಜುವಾತುಗಳು ದೊರೆಯುತ್ತವೆ. ಇದರಿಂದ ಕೊರವರು ಹಿಂದಿನಿಂದಲೂ ರಾಜ-ಮಹಾರಾಜರ ಗಮನಕ್ಕೆ ಬಂದು ಗೌರವಿಸಲ್ಪಟ್ಟಿರುವುದು, ಸಮಾಜದಲ್ಲಿ ಜನಾನುರಾಗಿಯಾಗಿ ಹೆಸರು ಗಳಿಸಿದ್ದುದು ವ್ಯಕ್ತವಾಗುತ್ತದೆ. ಕೊರಮರು ಕಾಡು ಮತ್ತು ನಾಡಿನ ನಡುವೆ ನಿಕಟ ಸಂಬಂಧವನ್ನು ಕಲ್ಪಿಸುತ್ತಾ ವರ್ಣರಂಜಿತ ಬದುಕನ್ನು ಸಾಗಿಸುತ್ತಿದ್ದ ಬಗ್ಗೆಯೂ ತಿಳಿಯಬಹುದಾಗಿದೆ.

ಶ್ರೀಮತಿ ವಿಮಲ ದೊರೈಸ್ವಾಮಿ ಮತ್ತು ಎಂ. ದೊರೈಸ್ವಾಮಿ ಇವರು “Koravas also known as Koramas or Korachas, Yerukulas and Kaikadis are a tribe of hunters, cattle breeders, carriers, musicians, basket makers and agriculturists. In olden days some of them are thieves…….”[11]  ಎಂಬ ಅಂಶವನ್ನು ಹೇಳಿದ್ದಾರೆ. ಬೇಟೆಗಾರ ಬುಡಕಟ್ಟೊಂದಕ್ಕೆ ಸೇರಿದ ಕೊರಮರು ವಿವಿಧ  ಹೆಸರುಗಳಿಂದ ಕರೆಸಿಕೊಳ್ಳುತ್ತಾ ವಿವಿಧ ವೃತ್ತಿಯನ್ನನುಸರಿಸಿ ಬದುಕುತ್ತಿದ್ದ ಬಗ್ಗೆ ತಿಳಿಸಿದ್ದಾರೆ. ಈ ಕೆಲವು ಉದ್ಯೋಗಗಳು ಅವರ ಬದುಕಿನ ಹಲವು ಮುಖಗಳನ್ನು ಪರಿಚಯಿಸುತ್ತವೆ. ಮುಖ್ಯವಾಗಿ ಬೇಸಾಯ ವೃತ್ತಿಯನ್ನವಲಂಬಿಸಿದುದು ಗಮನಾರ್ಹ ಸಂಗತಿ. ನಿರಂತರ ಅಲೆಮಾರಿಗಳಾದ ಕೊರಮರು ನಿಶ್ಚಿತ ನೆಲೆಯನ್ನು ಕಂಡುಕೊಳ್ಳಲು ಬೇಸಾಯ ಸಹಾಯಕವಾಗುವದರ ಜೊತೆಗೆ ಅವರ ಬದುಕಿಗೆ ಒಂದು ಹೊಸ ಆಯಾಮವನ್ನೇ ಕಲ್ಪಿಸಿದೆ.

Hirendra K. Rakshit ಅವರು ಗುರುತಿಸುವ ಹಾಗೆ “though traditionally they are fortune tellers, a very substintial number of them are now lving on basketry.”[12] ‌ಈ ಜನ ಸಾಂಪ್ರದಾಯಿಕವಾಗಿ ಕಣಿ ಹೇಳುವುದರಲ್ಲಿ ತೊಡಗಿದ್ದರೂ, ಹೆಚ್ಚು ಜನ ಬುಟ್ಟಿ ಮಾಡುವುದರಿಂದಲೇ ಜೀವನ ಸಾಗಿಸುತ್ತಿದ್ದುದನ್ನು ಗುರುತಿಸಿದ್ದಾರೆ. ಮನುಷ್ಯ ಬದುಕಲು ಯಾವುದಾದರೊಂದು ಉದ್ಯೋಗವನ್ನು ಅವಲಂಬಿಸುವುದು ಅನಿವಾರ್ಯ. ಹಾಗೆ ರೂಪಿಸಿಕೊಂಡದ್ದನ್ನು ಅವನ ಮುಂದಿನ ಪೀಳಿಗೆ ತಲತಲಾಂತರಗಳಲ್ಲಿ ಉಳಿಸಿಕೊಂಡು ಬದುಕುವುದು ಆ ಸಮಾಜ ವ್ಯವಸ್ಥೆಯ ವೈಶಿಷ್ಟ್ಯ. ಕೊರಮರು ಮೊದಲು ಗೌರವದ ಬದುಕಿನ ಸಲುವಾಗಿ ಸ್ವತಂತ್ರವಾದ ಉದ್ಯೋಗಗಳನ್ನು ರೂಪಸಿಕೊಂಡಿದ್ದುದು ಇಂಥ ಅಧ್ಯಯನಗಳಿಂದ ವೇದ್ಯವಾಗುತ್ತದೆ. ಆದರೆ ಮುಂದೆ ಮೂಲ ಉದ್ಯೋಗದ ಜತೆಗೆ ಕಾಲಕ್ಕೆ ತಕ್ಕಂತೆ ಇತರೆ ವೃತ್ತಿಗಳನ್ನು ಅವಲಂಬಿಸಿರುವುದು ಅವರ ಸಾಂಸ್ಕೃತಿಕ ಬದುಕಿನ ಕ್ರಿಯಾತ್ಮಕತೆಯನ್ನು ಸೂಚಿಸುತ್ತದೆ. ಸಮಾಜ ವ್ಯವಸ್ಥೆಯಿಂದ ಅಥವಾ ಬದುಕಿನ ಒತ್ತಡದಿಂದ ಈ ಕೊರಮರು ಕಳ್ಳರು ಅಥವಾ ದರೋಡೆಕೋರರಾದರೆಂದು ಹೇಳಬೇಕಾಗುತ್ತದೆಯೇ ಹೊರತು ಪ್ರವೃತ್ತಿಯಿಂದಲ್ಲ ಎನ್ನುವ ಮಾತು ಖಚಿತ.

ಶ್ರೀಮತಿ ಜ್ಞಾನ ಮಾಣಿಕಮ್ಮಾಳ್‌ಅವರು ಹೇಳುವ ಹಾಗೆ “These people are the oborigans of hills and valies of south India. Most of them are now in plains and a few in hills. Through southern states and engage in various occupations. They are one and the same caste. The Kula and Kothra are also the same caste. The Kula and Kothra are also the same with a people of this community, though they differ in their mother tongue. “[13]  ದಕ್ಷಿಣ ಭಾರತದ ಬೆಟ್ಟಗುಡ್ಡ ಮತ್ತು ಕಣಿವೆಗಳ ಅರೆ -ಅಲೆಮಾರಿಗಳಾದ ಈ ಜನ ಈಗ ದಕ್ಷಿಣದ ರಾಜ್ಯಗಳ ಬಯಲು ಪ್ರದೇಶಗಳಲ್ಲಿ ಕೆಲವರು ಬೆಟ್ಟ ಗುಡ್ಡಗಳಲ್ಲಿಯೇ ನೆಲೆಸಿರುವರು. ಕುಲ-ಗೋತ್ರಗಳಿಂದ ಒಂದೇ ಆದ ಈ ಬುಡಕಟ್ಟು ವಿವಿಧ ಉದ್ಯೋಗಗಳನ್ನವಲಂಬಿಸಿ, ವಿವಿಧ ಪ್ರದೇಶದ ಭಾಷೆಗಳನ್ನಾಡುತ್ತಾ ವಿವಿಧ ಹೆಸರುಗಳಿಂದ ಗುರುತಿಸಿಕೊಳ್ಳುತ್ತಿದ್ದರೂ ಅವರ ಮೂಲ ಬುಡಕಟ್ಟಿನ “ಕುಲ-ಗೋತ್ರ” ವ್ಯವಸ್ಥೆ ಮಾತ್ರ ಅವ್ಯಾಹತೆ ಎಂಬುದು ಗಣನೀಯ ವಿಚಾರ.

ಚಿಕ್ಕಮಗಳೂರಿನ ಗೆಝೇಟಿಯರ್‌ನಲ್ಲಿ “The names of the Koramas and Korachas enumerated separately, are local variations for one and the same state……….. they are called Bhajantries. Some of their women folk or Koravanjis (Traditionally female fortune-tellers)”[14] ಕೊಟ್ಟಿರುವ ಮಾಹಿತಿಯನ್ನು ಗಮನಿಸಿ ಕೊರಮರು ಮತ್ತು ಕೊರಚರನ್ನು ಬೇರೆ ಬೇರೆಯಾಗಿ ಗಣಿಸಿದರೆ, ಕೆಲವು ವ್ಯತ್ಯಾಸಗಳನ್ನು ಬಿಟ್ಟು ಉಳಿದಂತೆ ಒಂದೇ ಆಗಿ ತೋರುವ ಇವರು ಭಜಂತ್ರಿ ಎನ್ನುವ ಹೆಸರಿನಿಂದಲೂ ಕರೆಸಿಕೊಳ್ಳುತ್ತಾರೆ. ಮಹಿಳೆಯರು ಸಾಂಪ್ರದಾಯಿಕವಾಗಿ ಕಣಿ ಹೇಳುವುದನ್ನು ಉಳಿಸಿಕೊಂಡು ಬಂದಿದ್ದಾರೆ ಎನ್ನುವ ಅಂಶವನ್ನು ಇಲ್ಲಿ ದಾಖಲಿಸಿದ್ದಾರೆ. ಬುಡಕಟ್ಟಿನ ಹೆಸರು ಬೇರೆಯಾದರೂ ಇವರೆಲ್ಲ ಮೂಲದಲ್ಲಿ ಒಂದೇ ಎಂಬ ಅಂಶ ಗಮನಾರ್ಹವಾಗಿ ನಿಂತುಕೊಳ್ಳುತ್ತದೆ. ಈ ಬುಡಕಟ್ಟಿನ ಜನಾಂಗ ಹೇಗೆ ನಿಧಾನವಾಗಿ ಸಂಸ್ಕೃತೀಕರಣ ಪ್ರಕ್ರಿಯೆಗೆ ಒಳಗಾಗಿದೆ ಎಂಬುದು ಇಲ್ಲಿ ಮುಖ್ಯವಾದ ವಿಷಯ.

ಶ್ರೀ. ಬಿ.ವಿ. ಮಲ್ಲಾಪುರ ಅವರು “ಕೊರವರು-ಕೊರವಂಜಿ” ಎಂಬ ತಮ್ಮ ಲೇಖನದಲ್ಲಿ ಕೊರಮ ಬುಡಕಟ್ಟಿಗೆ ಸಂಬಂಧಿಸಿದ ಹಲವಾರು ವಿಷಯಗಳನ್ನು ಪರಿಚಯಸಿದ್ದಾರೆ. ಪುರಾಣ ಪ್ರಸಿದ್ಧವಾದ ಕೊರವಂಜಿಯ ಜನಪ್ರಿಯತೆಯನ್ನು ವಿವರಸುವದರೊಂದಿಗೆ ಆ ಬುಡಕಟ್ಟಿನ ಇತಿಹಾಸ, ಆಚಾರ-ವಿಚಾರ, ಸಂಪ್ರದಾಯ, ಕಟ್ಟು-ಪಾಡು ಮತ್ತು ಜೀವನ ವಿಧಾನಗಳನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ. ಅವರ ನಂಬಿಕೆ ಆಚಾರ-ವಿಚಾರ, ಕಲೆ-ಸಾಹಿತ್ಯಕ್ಕೆ ಸಂಬಂಧಿಸಿದ ವಿಷಯಗಳು ಗೌಣವಾಗಿವೆ.[15]

“ಅಲೆಮಾರಿ ಜನಗಳಲ್ಲಿ ಒಂದು ಪಂಗಡದವರನ್ನು ಈ ಹೆಸರಿನಿಂದ ಕರೆಯುತ್ತಾರೆ. ಒಂದು ಕಾಲಕ್ಕೆ ಈ ಕೊರವಂಜಿ ಎಂಬ ಹೆಸರು ದಕ್ಷಿಣ ಭಾರತದಲ್ಲೆಲ್ಲ ಚಿರಪರಿಚಿತವಾಗಿತ್ತು. ಹೊಟ್ಟೆಯ ಪಾಡಿಗಾಗಿ ಮನೆಮನೆಯ ಬಾಗಿಲಿಗೆ ಬರುವ ಕೊರವಂಜಿ ತನ್ನ ವೇಷಭೂಷಣಗಳಿಂದಲೂ, ಭವಿಷ್ಯವನ್ನು ಹೇಳುವ ಕಾಯಕದಿಂದಲೂ ವಿಶಿಷ್ಟವಾದ ಹಾಡುಗಳ ವೈಖರಿಯಿಂದಲೂ ಎಲ್ಲರ ಮನಸ್ಸನ್ನು ಬಹು ಹಿಂದಿನಿಂದಲೂ ಆಕರ್ಷಿಸುತ್ತಾ ಬಂದಿದ್ದಾಳೆ.”[16] ಪ್ರಾಚೀನ ಭಾರತದ ದಕ್ಷಿಣ ಭಾಗ ಈ ಬುಡಕಟ್ಟಿನ ಮೂಲ. ಅವರು ಅನುಸರಿಸುತ್ತಿದ್ದ ಕಾಯಕ, ಸಾಮಾಜಿಕ ಜೀವನದಲ್ಲಿ ಕೊರವಂಜಿ ನಿರ್ವಹಿಸಿಕೊಂಡು ಬಂದಿರುವ ಕಾರ್ಯ ಮತ್ತು ಆ ಕಾರಣದಿಂದಾಗಿ ಸಮಾಜದಲ್ಲಿ ಆಕೆ ಪಡೆದ ಸ್ಥಾನವನ್ನು ವಿವರಿಸಿದ್ದಾರೆ. ಇದು ಈ ಬುಡಕಟ್ಟಿನ ಸ್ಥೂಲ ಪರಿಚಯ ಮಾಡಿಕೊಡುತ್ತದೆಯಲ್ಲದೆ ಸಮಗ್ರ ಬದುಕನ್ನು ನೋಡುವಲ್ಲಿ ಸಹಕಾರಿಯಾಗಿದೆ.

ಶ್ರೀ ಶ್ಯಾಮಪ್ರಸಾದ ಅವರು “ಕುಳವರ ಇತಿಹಾಸ” ಎಂಬ ಸಣ್ಣ ಲೇಖನದಲ್ಲಿ ” ಈ ಜನಾಂಗದವರು ಪೂರ್ವದಲ್ಲಿ ಹೆಚ್ಚಾಗಿ ಅರಣ್ಯ ಮತ್ತು ಬೆಟ್ಟಗುಡ್ಡಗಳಲ್ಲಿ ವಾಸಿಸುತ್ತಿದ್ದರು. ಕಾಡಿನಲ್ಲಿ ಹೆರಳವಾಗಿ ದೊರಕುತ್ತಿದ್ದ ಬಿದಿರು, ಈಚಲು ಗರಿಗಳಿಂದ ಮಕ್ಕರಿ, ಬುಟ್ಟಿ, ತೊಟ್ಟಿಲು, ಬಂಡಿಮಕ್ಕರಿ, ಮರ, ಚಾಪೆ ಇತ್ಯಾದಿ ಕಸುಬುಗಳಿಂದ ಜೀವನ ಸಾಗಿಸುತ್ತಿದ್ದರು. ಹೆಂಗಸರು ಕಣಿ (ಭವಿಷ್ಯ) ಹೇಳುವುದು, ಪಚ್ಚೆ (Tottoing) ಕುಟ್ಟುವುದು ಈ ಕೈ ಕಲೆಗಳಿಂದ ಸಂಪಾದಿಸುತ್ತಿದ್ದರು.”[17] ಎಂದು ಹೇಳಿರುವಲ್ಲಿ ಕೊರಮರ ಉದ್ಯೋಗಗಳ ಪರಿಚಯವಾಗುತ್ತದೆ. ಹಲವಾರು ವಿದ್ವಾಂಸರ ವಿವಿಧ ದಾಖಲೆಗಳಲ್ಲಿಯೂ ಈ ಅಂಶ ಪ್ರಧಾನವಾಗಿ ಕಾಣುವುದಲ್ಲದೆ ನಿರ್ಧಿಷ್ಟತೆ ದೊರೆತಂತಾಗುತ್ತದೆ.

H. A. Stuart  ಅವರು  “That the Koravas or yarukalas are a vagrant tribe found throughout the presiderncy and in many parts of India. In the Telugu country they are called Yarakala vandalu or Koracha vandalu, but they always speak of themselves as kuru and there is not he slightest room ofr the doubt that has been expressed regarding the identity of the Koravas and yarukalas.”[18]  ಈ ದಾಖಲೆಯಲ್ಲಿ ಮದ್ರಾಸ ರಾಜ್ಯದಲ್ಲಿ ಮತ್ತು ಭಾರತದ ಇತರ ಭಾಗಗಳಲ್ಲಿದ್ದ ಅಲೆಮಾರಿಗಳಾದ ಕೊರಮ ಅಥವಾ ಯರುಕಲರನ್ನು ತೆಲುಗು ಪ್ರಾಂತ್ಯದಲ್ಲಿ ಎರುಕಲವೆಂಡಲು ಅಥವಾ ಕೊರಚವೆಂಡಲು ಎಂದು ಕರೆಯುತ್ತಿದ್ದರು. ಇವರು ತಮ್ಮನ್ನು ತಾವು “ಕುರು” ಜನಾಂಗವೆಂದು ಕರೆದುಕೊಳ್ಳುತ್ತಿದ್ದರು. ಹಾಗೆ ಕರೆದುಕೊಳ್ಳುತ್ತಿದ್ದ ಕುರು ಜನಾಂಗ ಬೇರೆ ಯಾರೂ ಆಗಿರದೆ ಅವರು ಕೊರಮರು ಅಥವಾ ಯರುಕಲರೇ ಆಗಿದ್ದರು ಎಂಬ ಬಗೆಗೆ ಯಾವ ಸಂಶಯವೂ ಇಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. “ಕುರು” ಪ್ರದೇಶದವರದ ಕೊರಮರು ಬೇರೆಯವರಿಗೆ ತಮ್ಮನ್ನು ಕುರುವರು ಎಂದು ಪರಿಚಯಿಸಿಕೊಂಡರು. ಮುಂದೆ ಕುರುವರು ಕುಳುವರಾಗಿ ದೇಶದ ಇತರ ಭಾಗಗಳಲ್ಲಿ ತಾವು ಅನುಸರಿಸುತ್ತಿದ್ದ ಕಸುಬು ಮತ್ತು ವ್ಯವಹಾರದಿಂದ ಬೇರೆ ಬೇರೆಯಾಗಿ ಗುರುತಿಸಲ್ಪಟ್ಟಿರುವರು.

ಕೊರಮ ಬುಡಕಟ್ಟಿನ ಮೂಲ ಸ್ವರೂಪವನ್ನು ಕಂಡುಕೊಳ್ಳಲು ಈ ಮೇಲೆ ನೋಡಿದ ಮಹನೀಯರ ದಾಖಲೆಗಳು ಮೈಲಿಗಲ್ಲುಗಳಾಗಿವೆ. ಈ ದಾಖಲೆಗಳ ಅನೇಕ ವಿಷಯಗಳಲ್ಲಿ ಏಕಮುಖತೆ ಗೋಚರಿಸುತ್ತದೆ. ಇವು ಆ ಬುಡಕಟ್ಟಿನ ನಿಖರವಾದ ಮೂಲ ಮತ್ತು ಅದರ ಲಕ್ಷಣಗಳನ್ನು ಖಚಿತಪಡಿಸುತ್ತವೆ. ಹೆಚ್ಚಿನ ವಿವರಗಳನ್ನು ಹೊಸ ಕ್ಷೇತ್ರಕಾರ್ಯದಿಂದ ಪಡೆದು ಮುಂದೆ ಆಲೋಚಿಸಲಾಗಿದೆ.

ಒಂದು ವಿಚಾರ: ಮೇಲಿನ ಕೆಲವರು “ಕೊರಮ ಮತ್ತು ಕೊರಗ” ಜನಾಂಗವನ್ನು ಸ್ಪಷ್ಟವಾಗಿ ಗುರುತಿಸಿಲ್ಲ. ಅವೆರಡು ಒಂದೇ ಜನಾಂಗವೆಂಬ ತಪ್ಪು ಅಭಿಪ್ರಾಯ ನೀಡಿರುವಂತೆ ತೋರುತ್ತದೆ.

“ತಮಿಳುನಾಡಿನ ಎಲ್ಲ ಕಡೆಯೂ ಕುರುವರು ಗುಡ್ಡಗಾಡು ಜನಾಂಗದವರಗಿ ಕಂಡುಬರುತ್ತಾರೆ.”[19] ಇವರು ತಮಿಳು ಮೂಲದ ಬುಡಕಟ್ಟು ಜನಾಂಗದವರಾಗಿ ಬೆಟ್ಟಗುಡ್ಡಗಳಲ್ಲಿ ಉಳಿದು ಪಶುಪಾಲನೆ, ಅರಣ್ಯೋತ್ಪನ್ನಗಳನ್ನಾಧರಿಸಿದ ಬುಟ್ಟಿ ಹೆಣೆಯುವುದು, ಬೇಟೆಯಾಡುವುದು ಮಾಡುತ್ತಾರೆ. ಮತ್ತು ಇವು ಇವರ ಪ್ರವೃತ್ತಿಯಾಗಿದ್ದಂತೆ ಕಂಡುಬರುವುದೇ ಇಂದಿಗೂ ಗುಡ್ಡಗಾಡು ಜನಾಂಗದವರಾಗಿ ಕಂಡು ಬರಲು ಕಾರಣ. “ಅಶುದ್ಧರೂಪದ ತಮಿಳು ಭಾಷೆಯನ್ನಾಡುವರು ಮತ್ತು ಒಂದೇ ಮೂಲ ಗುಂಪಿನಿಂದ ಹೊರ ಬಂದವರಾಗಿರುವರು.”[20] ನಾಡಿನಾದ್ಯಂತ ಅನೇಕ ಹೆಸರುಗಳಿಂದ ಕರೆಸಿಕೊಳ್ಳಲ್ಪಡುವ ಕೊರಮರು (ಕೊರವರು) ಆಡುವ ಸ್ವಲ್ಪ ಹೆಚ್ಚು ಕಡಿಮೆ ಏಕಪ್ರಕಾರದ ಭಾಷೆಯೇ ಅವರ ಮೂಲ ನೆಲೆ ಒಂದು ಎಂಬುದನ್ನು ಹೇಳುತ್ತದೆ. ಇವರ ಪ್ರಾಬಲ್ಯ ಆಂಧ್ರ ರಾಜ್ಯದಲ್ಲಿಯೂ ವಿಶೇಷವಾಗಿ ಕಂಡುಬರುತ್ತದೆ. ಅಲ್ಲಿಯವರ ಆಚಾರ-ವಿಚಾರ, ನಂಬಿಕೆ-ನಡಾವಳಿಕೆಗಳಲ್ಲಿ ಕೆಲವು, ಕರ್ನಾಟಕದ ಕೊರಮರ ನಡಾವಳಿಗಳಿಗಿಂತ ಭಿನ್ನವಾಗಿ ತೋರುತ್ತವೆ. ಇವು ಕಾಲಂತರದಲ್ಲಿ ತಾವು ನೆಲೆಸಿದ ಪ್ರಾದೇಶಿಕ ಭಿನ್ನತೆಯಿಂದುಂಟಾದವು.

ಕನ್ನಡ ಜಾನಪದ ವಿಶ್ವಕೋಶದಲ್ಲಿ ಕರ್ನಾಟಕದ ಕೊರಮರ ಬಗ್ಗೆ ಹೇಳುವುದಕ್ಕಿಂತ ಹೆಚ್ಚಾಗಿ, ತಮಿಳುನಾಡಿನ ಮತ್ತು ಆಂಧ್ರದಲ್ಲಿರುವ ಕೊರಮರ ಬದುಕಿನ ಹಲವಾರು ವಿವರಗಳನ್ನು ಅಂತೆಯೇ ಅವರನ್ನು ಗುರುತಿಸುವ ಹಲವಾರು ಹೆಸರುಗಳನ್ನೂ ಹೇಳಿದೆ. ಕರ್ನಾಟಕಕ್ಕೆ ಕೊರಮರು ವಲಸೆ ಬರುವಾಗ ಅವರು ನೇರವಾಗಿ ತಮಿಳುನಾಡಿನಿಂದಲೂ ಬಂದಿರಬಹುದು. ಹಾಗೆಯೇ ಆಂಧ್ರದ ಮೂಲಕವೂ ಇತರೆಡೆಗೆ ಚದುರಿರಬಹುದು. ಇವರು ವಲಸೆ ಬಂದು ಸಾವಿರಾರು ವರ್ಷಗಳೇ ಕಳೆದಿರುವುದರಿಂದ ಇಲ್ಲಿಯ ನೆಲದ ಸಂಸ್ಕೃತಿಗೆ ಪಕ್ಕಾಗಿ ತಮ್ಮ ಮೂಲದ ಎಷ್ಟೋ ಆಚರಣೆಗಳನ್ನು ಕಳೆದುಕೊಂಡಿದ್ದಾರೆ. ಆದರೂ ತಮ್ಮ ಬುಡಕಟ್ಟಿನ ಮೂಲದ ಪ್ರಮುಖ ಅಂಶಗಳನ್ನು ಅವರಿನ್ನು ಬಿಟ್ಟುಕೊಟ್ಟಿಲ್ಲ. ವ್ಯಾಪಕವಾದ ಕ್ಷೇತ್ರಕಾರ್ಯ ಈ ಸತ್ಯವನ್ನು ಸ್ಥಾಪಿಸುತ್ತದೆ.

ದಕ್ಷಿಣ ಕರ್ನಾಟಕದ ಭಾಗದಲ್ಲಿ ಇವರನ್ನು ಕೊರಮ, ಕೊರಮಶೆಟ್ಟಿ ಎಂದು ಗುರುತಿಸುವುದು ಸಾಮಾನ್ಯವೇ ಆಗಿದೆ. ಆದರೆ ಒಂದೊಂದು ನಿರ್ಧಿಷ್ಟವಾದ ವೃತ್ತಿಯನ್ನು ಅನುಸರಿಸಿಕೊಂಡು ಬಂದಿರುವ ಒಂದೊಂದು ಗುಂಪನ್ನು ಆಯಾ ವೃತ್ತಿಯ ಜೊತೆಗೆ ಗುರುತಿಸುತ್ತಾರೆ. ಬುಟ್ಟಿ ಮಾಡುವವರು ದಬ್ಬೆ ಅಥವಾ ಕುಕ್ಕೆ ಕೊರಮರಾದೆ, ವಾಲಗ ಊದುವವರು ವಾಲಗದ ಅಥವಾ ಭಜಂತ್ರಿ ಕೊರಮರಾಗುತ್ತಾರೆ. ಊರುಗಳಲ್ಲಿ ನೆಲೆನಿಂತು ವಾಲಗ ಊದುವ, ವ್ಯವಸಾಯ ಮಾಡುವವರನ್ನು ಊರು ಕೊರಮರೆಂದು ಗುರುತಿಸಲಾಗುತ್ತದೆ.

ಕನ್ನಡ ಜಾನಪದ ವಿಶ್ವಕೋಶದಲ್ಲಿ “ಕೊರವರು” ಎಂಬ ಭಾಗದಲ್ಲಿ ಈ ಕೆಳಗಿನ ಅಂಶಗಳಿವೆ. ತಮಿಳುನಾಡಿನ ಮತ್ತು ಆಂಧ್ರಕಡೆಯ ಕೊರಮರು ಆಡುವ ಭಾಷೆ ಒಂದೇ; ಅದೇ ಭಾಷೆಯನ್ನು ಕರ್ನಾಟಕದ ಕೊರಮರೂ ಆಡುತ್ತಾರೆ. ಆಂಧ್ರದಲ್ಲಿ ಇದು “ಯರ್ಕುಳ” ವಾದರೆ ಕರ್ನಾಟಕದಲ್ಲಿ “ಕುಳುವ” ಭಾಷೆಯಾಗಿದೆ. ಕೊರಮರು ಆಯಾ ಪ್ರಾದೇಶಿಕ ಭಾಷೆಯೊಂದಿಗೆ ವ್ಯವಹರಿಸುವದರಿಂದ ಅವುಗಳ ಪ್ರಭಾವ ತಮ್ಮ ಭಾಷೆಯ ಮೆಲೂ ಆಗಿ ಅದು ರಾಜ್ಯದಿಂದ ರಾಜ್ಯಕ್ಕೆ ಕೆಲ ವ್ಯತ್ಯಾಸ ಪಡೆದುಕೊಳ್ಳಬಹುದು. “ಅಲೆಮಾರಿ ಜನಾಂಗಗಳಲ್ಲಿ ಒಂದು ಪಂಗಡದವರಾದ ‘ಕೊರವಂಜಿಗಳು’ ಜನಪದ ಗಾಯಕರೂ ಹೌದು. ಒಂದು ಕಾಲದಲ್ಲಿ ದಕ್ಷಿಣ ಭಾರತದಲ್ಲೆಲ್ಲ ಇವರ ಹೆಸರು ಪ್ರಸಿದ್ಧವಾಗಿತ್ತು.” ಕೊರವ, ಕೊರಮ ಇವು ಪುಲ್ಲಿಂಗವಾದರೆ ಕೊರವಿ, ಕೊರಮಿ, ಕೊರಮ್ತ, ಕೊರವಂಜಿ ಮುಂತಾದವು ಸ್ತ್ರೀರೂಪಗಳು. ಅಂತೆಯೇ “ಕೊರೆಮಶೆಟ್ಟಿ” ಎಂಬುದು ದಕ್ಷಿಣ ಕರ್ನಾಟಕದಲ್ಲಿ ಕೊರಮರನ್ನು ಗುರುತಿಸುವ ಪುಲ್ಲಿಂಗರೂಪ. ಶೆಟ್ಟರಂತೆ ಇವರೂ ಜೀವನ ಸಾಗಿಸಲು ವ್ಯಾಪಾರಿ ವೃತ್ತಿಯನ್ನು ಅಂತೆಯೇ ಬಿದರಿನಿಂದ ಮಾಡಿದ ಕುಕ್ಕೆಗಳನ್ನು ಹಳ್ಳಿಗಳ ಮೇಲೆ ಮಾರುತ್ತಿದ್ದುದರಿಂದ ಆ ಭಾಗದ ಜನರ ಬಾಯಲ್ಲಿ: “ಕೊರಮ” ಕೊರಮಶೆಟ್ಟಿಯಾಗಿದ್ದಾನೆ. ಕೊರಮರು ಬುಡಕಟ್ಟಿಗೆ ಸೇರಿದವರು ಎಂಬುದಕ್ಕೆ ಅನೇಕ ದಾಖಲೆಗಳು ದೊರೆಯುತ್ತವೆ. ನಾಗರೀಕತೆಯ ಪ್ರಭಾವದಿಂದಾಗಿ ಜಾತಿ ಮತ್ತು ಬುಡಕಟ್ಟುಗಳ ನಡುವೆ ಅಂತರ ಕಡಿಮೆಯಾಗುತ್ತಿದೆ. ಆದ್ದರಿಂದ ಬುಡಕಟ್ಟು ಜಾತಿಯಾಗಿ ಮಾರ್ಪಡಬಹುದು. ಆ ಕಾರಣಕ್ಕೆ ಅದು ಮೂಲದಲ್ಲಿ ಬುಡಕಟ್ಟಲ್ಲ ಎಂದು ಹೇಳಲಾಗುವುದಿಲ್ಲ.

ಇಷ್ಟೆಲ್ಲ ದಾಖಲೆಗಳನ್ನೊಳಗೊಂಡಿರುವ ಕೊರಮರ ಜೊತೆಯಲ್ಲಿ ಕೆಲವರು ಕೊರಗರನ್ನು ಸೇರಿಸಿ ಇವೆರಡು ಒಂದೇ ಬುಡಕಟ್ಟು ಎಂಬಂತೆ ಹೇಳಿರುವುದು ಆಶ್ಚರ್ಯವೆನಿಸುತ್ತದೆ. ಕೊರಮರು ಆರ್ಥಿಕವಾಗಿ ತೀರ ಹಿಂದುಳಿದ ಅಸಂಸ್ಕೃತವಾದ ಬುಡಕಟ್ಟು. ಆದರೆ ದಕ್ಷಿಣ ಕನ್ನಡದಲ್ಲಿ ತೋರುವ ಕೊರಗರ ಹಾಗೆ ಸಾಮಾಜಿಕವಾಗಿ ಅತೀ ಹಿಂದುಳಿದ ಅಸ್ಪೃಶ್ಯರಲ್ಲ. ಅಲ್ಲದೆ ಬೇರೆಯವರು ಊಟಮಾಡಿ ಎಸೆದ ಎಲೆಗಳನ್ನು ಎತ್ತಿ ಅದರಲ್ಲಿನ ಅನ್ನದ ಅಗುಳನ್ನು ಆರಿಸಿ ತಿನ್ನುತ್ತಿದ್ದ ಕೊರಗರಿಗೂ, ಕೊರಮರಿಗೂ ಸಾಮ್ಯತೆ ಕಂಡು ಬರುವದಿಲ್ಲ. ಕೊರಮರಲ್ಲಿ ಬೇಡುತ್ತಿದ್ದ ಬಗ್ಗೆ ತಿಳಿದರೂ ಕೂಡ ಇವರು ಅಸ್ಪೃಶ್ಯರಲ್ಲ. ಆದರೂ ಮಾನ್ಯ ಆರ್. ಇ. ಏಂಥೋವನ್‌ಅವರು ಕೊರಮರ ಬಗ್ಗೆ ಹೇಳುವಾಗ: “Koravas also known as Korar, Koragar, Koramar (1901) including 9.672 males and 9.672 males and 9.692 females, are found principally in the Belgaum, Bijapur and Dharwar districts, and in the native states of the southern Maratha Agency. “[21] ಎನ್ನುವಲ್ಲಿ ಕೊರಮರ ಜೊತೆಗೆ ಕೊರಗರನ್ನು ಸೇರಿಸಿರುವುದು ಸಮಂಜಸವೆನಿಸುವದಿಲ್ಲ.

“ಬೆಂಗಳೂರು ಕಡೆ ಭಜಂತ್ರಿ, ಕೊರಚ, ಕೊರಗ ಎಂದು ಕರೆಯುತ್ತಾರೆ.”[22]  ಎನ್ನುವಲ್ಲಿ ಕೊರಗರ ಬಗೆಗೆ ಹೇಳಿರುವುದು ಸತ್ಯಕ್ಕೆ ದೂರವಾದ ಮಾತು. ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಕೊರಮರನ್ನು ಕೊರವ, ಕೂರ್ಚ, ಕೊರಚ, ಕೊರಮಶೆಟ್ಟಿ ಎಂದೇ ಗುರುತಿಸುತ್ತಾರೆ. ಬೆಂಗಳೂರಿನ ಕಡೆ ಇವರನ್ನು ಕೊರಗರೆಂದು ಕರೆಯುವುದಿಲ್ಲ. ಚಿಕ್ಕಮಗಳೂರು ಜಿಲ್ಲೆಯ ಗೆಝೇಟಿಯರ್‌ನಲ್ಲಿ ಈ ಜಿಲ್ಲೆಯಲ್ಲಿ ಇಬ್ಬರು ಕೊರಗ ಭಾಷೆಯನ್ನಾಡುವವರಿದ್ದಾರೆ ಎಂದು ಗುರುತಿಸಲಾಗಿದೆ. ಮತ್ತಾವ ವಿವರವೂ ಇಲ್ಲ.[23]

ಬುಚನನ್‌ರ ಪ್ರಕಾರ: “the Koravas once ruled south kanara under a center named Hubasnika”[24] ಎಂದು ಹೇಳಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರಮರು ಕಂಡು ಬರುವುದಿಲ್ಲ. ಒಂದು ಪ್ರದೇಶವನ್ನಾಳವಷ್ಟು ಪ್ರಬಲರಾಗಿದ್ದರೆಂದು ಹೇಳುವ ಈ ಜನರ ಅಸ್ತಿತ್ವವೇ ಅಲ್ಲಿ ಉಳಿದಿಲ್ಲ.

“Mr. Rice names the Koragas, Koramas and Korachas. He describes them as thieves and robbers, mouing with droves of cattle and asses, carrying salt and grain, and making bamboo mats and baskets.”[25]  ಎನ್ನುವ ಶ್ರೀ ರೈಸರು ಕೊರಗರು ಬಿದಿರಿನಿಂದ ಬುಟ್ಟಿಗಳನ್ನು ಅಂತೆಯೇ ಕೊರಮರ ಇತರ ಉದ್ಯೋಗಗಳನ್ನು ಮಾಡುವುದರ ಬಗೆಗೆ ಹೇಳಿದರೂ ಇವರು ಕೊರಮ ಬುಡಕಟ್ಟಿನಲ್ಲಿ ಸೇರುವುದಿಲ್ಲ. ಎಷ್ಟೋ ಬುಡಕಟ್ಟುಗಳು ಮೂಲದಲ್ಲಿ ಒಂದೇ ರೀತಿಯ ಜೀವನ ವ್ಯವಸ್ಥೆಯನ್ನು ರೂಢಿಸಿಕೊಂಡಿವೆ. ಆ ಕಾರಣಕ್ಕಾಗಿ ಅವೆಲ್ಲವೂ ಒಂದೇ ಮೂಲದವು ಎಂದು ಹೇಳಲಾಗುವುದಿಲ್ಲ. ಆದ್ದರಿಂದ ಇದು ಶೋಧನೆಗೊಳಪಡಬೇಕಾದ ವಿಷಯ. ಬಹುಶಃ ಕೊರಮ ಮತ್ತು ಕೊರಗ ಒಂದೇ ಬುಡಕಟ್ಟಿಗೆ ಸೇರಿದ ಜನರಲ್ಲ ಎಂಬುದು ಸದ್ಯಕ್ಕೆ ಹೇಳಬೇಕಾದ ಮಾತು. ಕೊರಗರು ಅಸ್ಪೃಶ್ಯರಲ್ಲಿ ಒಂದು ಗುಂಪು ಎಂಬಂತೆ ತೋರುತ್ತದೆ. ಕೊರಮರು ಐತಿಹಾಸಿಕವಾಗಿ ಎಂದಿಗೂ ಅಸ್ಪೃಶ್ಯ ಜನಾಂಗವಲ್ಲ.

ಇನ್ನೊಂದು ವಿಚಾರ: “ಸರೋಬ ಚಾಂಡಾಳಿಯರು” ಈಗ ಇವರಿಗೆ ಕೊರವರೆಂದು ಕರೆಯುತ್ತಾರೆ. ಇವರ ಜಾತಿ ಮಾನವರ ಜಾತಿಯಲ್ಲೇ ಕೊನೆಯದಂತೆ. ಆದ್ದರಿಂದಲೇ “ಹಕ್ಕಿ ಪಕ್ಯಾಗಕಾಗಿ ಚಂಡಾಳಿಗರ ಮಂದ್ಯಾಗ ಕೊರವ ಚಾಂಡಾಳಿ” ಎಂದು ಹೇಳಿರಬಹುದು. ವಾದ್ಯ ನುಡಿಸುವುದನ್ನು ಕಲಿತ ನಂತರ ಸಮಾಜದ ಪ್ರತಿಯೊಂದು ಜಾತಿಯವರ ಜೊತೆ ಸಂಪರ್ಕ ಇವರದಾಗಿ ಹೆಚ್ಚಿನ ಸ್ಥಾನಮಾನಗಳು ದೊರೆತವು ಎಂದು ಹೇಳುವರು.[26] ಎನ್ನುವ ಡಾ. ಅರವಿಂದ ಮಾಲಗತ್ತಿ ಅವರ ಮಾತಿನಲ್ಲಿ ಸತ್ಯಾಂಶವಿಲ್ಲ. ಎಲ್ಲ ಕಾಲಕ್ಕೂ ಈ ಕೊರಮ ಜನರಿಗೆ ಸಾಮಾಜಿಕವಾಗಿ ಇದ್ದ ಸ್ಥಾನಮಾನವನ್ನು ಜಾನಪದ, ಶಿಷ್ಯ ಸಾಹಿತ್ಯದಲ್ಲದೆ ಸಮಾಜದಲ್ಲಿನ ಅವರ ಹೊಕ್ಕು – ಬಳಕೆಯಿಂದಲೂ ಅರಿಯಬಹುದು. ಇದು ಆರ್ಥಿಕವಾಗಿ ಹಿಂದುಳಿದ ಅಲೆಮಾರಿ ಬುಡಕಟ್ಟೇ ಹೊರತು ಮಂದ್ಯಾಗ ಚಾಂಡಾಳರಾಗಿ ಬದುಕಿದ ಬಗ್ಗೆ ದಾಖಲೆಗಳಿಲ್ಲ. ಕೊರಮ ಅತ್ಯಂತ ಕೆಳಸ್ತರದವನಾಗಿದ್ದರೆ ಅವನ ಇತಿಹಾಸವೇ ಬೇರೆಯಾಗುತ್ತಿತ್ತು. ಆದರೆ ಮೇಲೆ ಹೇಳಿದ ಗಾದೆ ಕೊರಮರ ಅಸಂಸ್ಕೃತಿಯ ಬಗೆಗೆ ಹುಟ್ಟಿಕೊಂಡಿರಬೇಕು.

ವಾದ್ಯ ನುಡಿಸುವವರು ಸಮಾಜದಲ್ಲಿ ಬೇರೆ ಬೇರೆ ವರ್ಗದವರಿದ್ದಾರೆ. ಸಮಾಜದ ಸಂಪರ್ಕಕ್ಕೆ ಇದೊಂದೆ ಕಾರಣವಲ್ಲ. ಕೊರಮರು ಬುಟ್ಟಿ ಮಾಡುವ, ಉಪ್ಪು ಮಾರುವ, ಹಗ್ಗ ಮಾಡುವ, ಎತ್ತುಗಳ ವ್ಯಾಪಾರ ಮಾಡುವ, ಕಣಿ ಹೇಳುವ ಇನ್ನೂ ಅನೇಕ ವೃತ್ತಿಗಳಿಂದ ಜನಪದದ ಬದುಕಿನಲ್ಲಿ ಒಂದಾದರು. ಇವರ ಮೂಲ ನೆಲೆ, ಭಾಷೆ, ಜೀವನ ವಿಧಾನ ಮುಂತಾದ ಮತ್ತು ಈಗಾಗಲೇ ನೋಡಿರುವ ದಾಖಲೆಗಳಿಂದ ಇದೊಂದು ಪ್ರತ್ಯೇಕ ಜೆಪ್ಸಿ ರೀತಿಯ ಬುಡಕಟ್ಟು ಎಂಬುದು ಅರಿವಿಗೆ ಬರುತ್ತದೆ. ಇಂಥ ಬುಡಕಟ್ಟಿನ ಜೊತೆಗೆ ಸರೋಬ ಚಾಂಡಾಳಿಯರನ್ನು ಸೇರಿಸುವುದು, ಬರಿ ಗೊಂದಲದ ಸಲುವಾಗಿಯೇ ಎಂಬಂತೆ ತೋರುತ್ತದೆ. ಅಲ್ಲದೆ ಡಾ|| ಮಾಲಗತ್ತಿಯರೇ ಹೇಳುವ ಹಾಗೆ “ವಾಸ್ತವದಲ್ಲಿ ಇವರು ಹೊಲಮಾದಿಗರ ಯಾವುದೇ ಸಂದರ್ಭದಲ್ಲಿಯಾಗಲಿ ವಾದ್ಯ ನುಡಿಸಲು ಹೋಗುವದಿಲ್ಲ. ಆದ್ದರಿಂದ ಇದು ಅದಕ್ಕಿಂತ ಮೇಲು ಜಾತಿಯಾಗಿರಬಹುದೇನೋ ಎಂದೆನಿಸುತ್ತದೆ.”[27] ಎಂದಿರುವುದು ಸತ್ಯವೇ ಆಗಿದೆ. ಒಂದು ಕಾಲಕ್ಕೆ ಯಾವುದೋ ಒಂದು ವ್ಯವಸ್ಥೆಗೆ ಹೊಂದಿಕೊಂಡ ಜನ ಅದರಿಂದ ಸಂಪೂರ್ಣವಾಗಿ ಹೊರಬರಲು ಸಾಧ್ಯವಾಗುವುದಿಲ್ಲ. ಆರ್ಥಿಕ ಸುಧಾರಣೆ ಮತ್ತು ನಾಗರೀಕತೆಯಿಂದಾಗಿ ಕೆಲವರು ಆ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಬಹುದು. ಆ ಕಾರಣದಿಂದ ಕೊರಮರು ಮೂಲತಃ ಕೀಳು, ನಂತರ ಅದರಿಂದ ಹೊರ ಬಂದಿದ್ದಾರೆ ಎಂದು ಹೇಳುವುದು ಸಮಂಜಸವಾಗುವುದಿಲ್ಲ.

ದಕ್ಷಿಣ ಕನ್ನಡದ ಗೆಝೆಟಿಯರ್‌ನಲ್ಲಿ ಕೊರಮರ ಪ್ರಸ್ತಾಪವೇ ಇಲ್ಲ. ಆದರೆ ಕೊರಗರನ್ನು ಕುರಿತು ” Koragas are perhaps the poorest among the scheduled tribes. They were  leading a nomadic life of hunting. Now they follow agriculture and do basket weaving, etc. They are middle sized very dark in comlexion, with high check bones and sloping foreheads. They have been worshippers of spirtits. They live in hamlets similar to those of the Todas in the Nilgiri hills. The thatched huts have one small entrance. They have their own dialect. There is a sub-section of the Koragas called Soppu-Koragas who were not formerly wearing clothes, but wer typing some leaves round their waiste. The late M. Govinda Pai the noted autor has stated that he had seen Koragas eating Tigerflesh.”[28]  ಎಂದು ದಾಖಲಿಸಲಾಗಿದೆ.

“ಸಿಲಪ್ಪದಿಗಾರಮ್‌” ನಷ್ಟು ಪ್ರಾಚೀನ ಕಾವ್ಯದಲ್ಲಿಯೇ ಕೊರವಂಜಿಯ ಅಲಂಕಾರದ ಬಗೆಗೆ ವಿವರವಿದೆ. ೧೧ನೇ ಶತಮಾನದ “ನೇಮಿನಾಥಪುರಾಣಂ” (ಕರ್ಣಪಾರ್ಯ) ನಲ್ಲಿಯೂ ಕೊರವಂಜಿ ವೇಷದ ಬಗ್ಗೆ ದಾಖಲೆ ಇದೆ. ಜಾನಪದದಲ್ಲಿ ಕೊರವಂಜಿಯ ಉಡುಗೆಯ ವರ್ಣನೆ ಇದೆ. ಇಷ್ಟೆಲ್ಲ ಇರುವಾಗ ಕೊರಗರ ಹಾಗೆ ಕೊರಮರು ಮೈಗೆ ಎಲೆಗಳನ್ನು ಸುತ್ತಿಕೊಳ್ಳುವ, ಹುಲಿಯ ಮಾಂಸ ತಿನ್ನುವ ಸಾಧ್ಯತೆ ಇಲ್ಲ. ಮತ್ತು ಅಂಥ ದಾಖಲೆಗಳೂ ಕಂಡು ಬರುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರಗರನ್ನು ಇಂದಿಗೂ ಅತ್ಯಂತ ಕೆಳಸ್ತರದಲ್ಲಿ ಗುರುತಿಸಲಾಗುತ್ತಿದೆ. ಇವರು ಮೈಗೆ ಸೊಪ್ಪು ಮತ್ತು ಎಲೆಗಳನ್ನು ಸುತ್ತಿಕೊಳ್ಳುತ್ತಿದ್ದುದನ್ನು ನೋಡಿದವರು ಮೊನ್ನೆ ಮೊನ್ನೆಯವರೆಗಿದ್ದರು. ಇವರನ್ನು ಕೆಲವು ಜಾತಿಯ ಜನ ವಾದ್ಯ ಬಾರಿಸಲು ಸಾವಿನ ಸಂದರ್ಭದಲ್ಲಿ ಕರೆಯುತ್ತಾರೆ. ಪ್ರತಿ ಅಮಾವಾಸ್ಯೆಯಲ್ಲಿ ಕೊರಗಿತಿಯನ್ನು ಕರೆದು ತಮ್ಮ ಕಷ್ಟ ಅಥವಾ ತೊಡಕಿನ ನಿವಾರಣೆಗೆ ತಲೆಗೆ ಎಣ್ಣೆ ಸುರಿಯುವ ಪದ್ಧತಿ ಇದೆ.[29]

“ದಕ್ಷಿಣ ಕನ್ನಡ ಜಿಲ್ಲೆಯ ಆದಿವಾಸಿ ಜನಾಂಗ ಒಂದು ಕಾಲದಲ್ಲಿ ಅಲೆಮಾರಿ ಜೀವನ ನಡೆಸುತ್ತಾ ಕಾಡಿನಲ್ಲಿ ವಾಸವಾಗಿದ್ದ ಕೊರಗರು ಬೇಟೆಯಾಡಿ ಹಸಿಮಾಂಸ ತಿಂದು ಬದುಕುತ್ತಿದ್ದರಂತೆ. ಕಾಲ ಕಳೆದಂತೆ ಊರು ಸೇರಿದರೂ ಕಾಡಿನ ನಂಟನ್ನು ಮಾತ್ರ ಬಿಡಲಿಲ್ಲ. ಕಾಡಿನಲ್ಲಿ ದೊರೆಯುವ ಬಿದಿರಿನಿಂದ ತರತರದ ಬುಟ್ಟಿಗಳನ್ನು ಹೆಣೆಯುವ ಇವರು ಅದರಿಂದಲೇ ಬದುಕು ಸಾಗಿಸುತ್ತಾರೆ.[30]

“ಕೊರಗರು ಅಂತಸ್ತಿನಲ್ಲಿ ಹೊಲೆಯರಿಗಿಂತ ಕೆಳಗಿನವರು. ಕೆಲವು ಪಟ್ಟಣಗಳಲ್ಲಿ ಇವರನ್ನು ಜಾಡಮಾಲಿಗಳಾಗಿ ಆರೋಗ್ಯ ಇಲಾಖೆಯಲ್ಲಿ ಜಾಡಮಾಲಿಗಳಾಗಿ ನೇಮಿಸಿಕೊಳ್ಳುವರು. ಅವರು ಹಳ್ಳಿಗಳಲ್ಲಿ ಸತ್ತ ಹಸು ಮತ್ತು ಎಮ್ಮೆಯ ಚರ್ಮ, ಕೊಂಬು ಮತ್ತು ಮೂಳೆಗಳನ್ನು ಸುಲಿದು ಮಾಪಿಳ್ಳೆ ವ್ಯಾಪಾರಿಗಳಿಗೆ ಮಾರುವರು. ವಿವಿಧ  ಜಾತಿಗಳವರು ಹಬ್ಬ ದೂಟಗಳಲ್ಲಿ ಬಿಟ್ಟ ಎಂಜಲಾಹಾರವನ್ನು ತಿನ್ನವರು.[31]

ಆದರೆ ಕೊರಮರು ಎಲ್ಲಾ ಕಾಲಕ್ಕೂ ಸಾಮಾಜಿಕವಾಗಿ ಕೊರಗರಿಗಿಂತ ಮೇಲಿನ ಸ್ಥಾನದವರಾಗಿಯೇ ಇದ್ದಾರೆಂಬುದು ಕಂಡು ಬರುತ್ತದೆ. ಜಾಡಮಾಲಿ ಕೆಲಸವನ್ನಾಗಲಿ, ಹಸು ಎಮ್ಮೆಗಳ ಚರ್ಮ ಸುಲಿಯುವ ಕೆಲಸವನ್ನಾಗಲಿ ಎಂದೂ ಮಾಡಿದ ಬಗ್ಗೆ ತಿಳಿದುಬರುವುದಿಲ್ಲ. ಇವರು ದಕ್ಷಿಣದ ತಮಿಳು ಮೂಲದ ಬುಡಕಟ್ಟು. ಇವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಆದಿವಾಸಿ ಜನಾಂಗದೊಡನೆ ಹೋಲಿಸುವುದು ಸಮಂಜಸವೆನಿಸುವುದಿಲ್ಲ. ಕೊರಮರು ಹರಿ-ಹರರಲ್ಲಿ ಭೇದವಿಲ್ಲದೆ ಆರಾಧಿಸುವರು. ಶಕ್ತಿ ದೇವತೆಯನ್ನು ಹಲವು ರೂಪದಲ್ಲಿ ಪೂಜಿಸುತ್ತಾರೆ. ಕೊರಗರ ಹಾಗೆ ಇವರು ಸೂರ್ಯೋಪಾಸಕರಲ್ಲ. ಕೊರಮರು ತಮಿಳು ಮೂಲದ ತಮ್ಮದೇ ಆದ “ಕುಳುವ” ಭಾಷೆಯನ್ನು ಮಾತನಾಡುತ್ತಾರೆ. “ಕೊರಗರಿಗೂ ತಮ್ಮದೇ ಆದ ಭಾಷೆ ಇದೆ. ತುಳು ಮಿಶ್ರಿತ ಕನ್ನಡದಂತಿರುವ ಅವರ ಭಾಷೆಯಲ್ಲಿ ಮೂರು ಪ್ರಭೇದಗಳಿವೆ.”[32]

ಈ ಮೇಲೆ ನೋಡಿದ ಆಧಾರಗಳಿಂದ ಕೊರಮರಿಗೂ, ಕೊರಗರಿಗೂ ಯಾವುದೇ ಸಂಬಂಧವಿಲ್ಲವೆನ್ನುವುದು ತಿಳಿದುಬರುತ್ತದೆ. ಆದರೂ ಕೆಲವು ಜನ ಕೊರವ, ಕೊರಮ, ಕೊರಗ ಹೆಸರುಗಳಲ್ಲಿನ ಧ್ವನಿಸಾಮ್ಯತೆಯನ್ನು ಕೊರವ, ಕೊರಮ ಆದಂತೆ ಕೊರಗವೂ ಆಗಿರಬಹುದು ಎಂದು ತಪ್ಪಾಗಿ ಗ್ರಹಿಸಿ ಒಂದುಗೂಡಿಸಿ ಹೇಳಿದ್ದಾರೆ. ಆದರೆ ಇದು ಸರಿಯಲ್ಲ. ಕೊರಮ ಬುಡಕಟ್ಟು ಎಲ್ಲಾ ಕಾಲದಲ್ಲೂ ಬೇರೆಯದು ಎಂಬುದು ಖಚಿತವಾದ ಮಾತು. ಕೆಲವರು ಶಬ್ದ ಸಾಮ್ಯದಿಂದಲೂ ತಪ್ಪು ಭಾವಿಸಿರುವರು.[1]       Tiru Murukairuppadai, Quoted, E.Thurston, Castes and Tribes of southern India, Vol, III-k, p-441

[2]      H.V. Nanjundaiah and L.K. Anantha Krishna lyer, The Mysore Tribes and Castes, Vol-III, p-583

[3]      R.E. Enthovan The o f Tribes and  castes  of Bombay Vol-II, p-266

[4]      Buchanun’s Mysore, Vol. I p-249. Quoted, R.E. Enthovan The of Tribes and  castes  of Bombay Vol-II, p-267

[5]        Rice’s Mysore, Vol.I. p-312, 350, and Vol, III p-214.

[6]      Abbedubois, Hindu Manners and Customs part-I, Chapter 5. Quoted R.E. Enthovan The of Tribes and  castes  of Bombay Vol-II p-267.

8a     Abbe J.A. Dubois and Henry K. Beau Champ. Hindu manners, customs and ceremonies, pp-65-67.

[7]      Madras Jurn. lit; and Science, 1988-89. Quoted, E.Thurston, Castes and Tribes of southern India, Vol, III-k, p-441

[8]        Madras census Report 1901. Quoted, E.Thurston, Castes and Tribes of southern India, Vol, III-k, p-441

[9]        Indian antiquaty. IX, 1880.  Quoted, E.Thurston, Castes and Tribes of southern India, Vol, III-k, p-443

[10]      E.Thurston, Castes and Tribes of southern India, Vol, III-k, p-443

[11]      Editorial, Souvenir, July 1983, Akila Karnataka Koramara Sangha, Bangalore (by Smt. Vimala Doryswamy and Dory Swamy).

[12]      Hirendra K. Rakshit. Language culture and Race in South india, p-223

[13]      Smt. R. Gnanamani kammal, Kurunjivelalar, Editor, Tamil Nadu.

[14]      Gazetter of India, Mysore State Chikkamagalur Dist., p-81

[15]       ಕೊರಮರು – ಕೊರವಂಜಿ ಜಾನಪದ ಸಾಹಿತ್ಯ ಭಾಗ -6, ಪು-199.

[16]      ಜಾನಪದ-2 ಕರ್ನಾಟಕ ಜಾನಪದ ಪರಿಷತ್ತು ಪು-7.

[17]      Souvenir, July 1983, Akila Karnataka Koramara Sangha, Banglore.

[18]      Madras Census Report – 1891, Quoted, E.Thurston, Castes and Tribes of southern India, Vol, III-k, p-440

[19]      ಕನ್ನಡ ಜಾನಪದ ವಿಶ್ವಕೋಶ ಸಂಪುಟ-1, ಪು-524.

[20]     Ibid., p-524.

[21]       R.E. Enthovan. The Tribes and  castes  of Bombay Vol-II               , p-266

[22]      ಈರಣ್ಣ ಕೋಸಗಿ, ಕೊರವರು ಪು-13.

[23]      Gazetter Chikkamagalur Dist., p-69

[24]      Buchanan’s Mysore, Vol.III p-100. Quoted, R.E. Enthovan The Tribes and  castes  of Bombay Vol-II, p-266

[25]       Rice’s Mysore, Vol.I. pp-312, 350, Vol, III p-214. R.E. Enthovan The Tribes and  castes  of Bombay Vol-II, p-267

[26]     ಜಾನಪದ ಜಗತ್ತು ಸಂಪುಟ-2, ಸಂಚಿಕೆ-4., ಜುಲೈ 1981, ಪು-17.

[27]       – ಅದೇ – ಪುಟ – 18.

[28]     Gazetter of India, Karnataka State, South kanara Dist., p-111

[29]     ಮಾಹಿತಿ ಒದಗಿಸಿದವರು ಪ್ರೊ. ಕೆ.ಎಚ್. ಪ್ರಭು ಡಾ|| ಎ.ವಿ.ಬಿ. ಕಾಲೇಜು, ಕುಮಟಾ.

[30]     ಕನ್ನಡ ಜಾನಪದ ವಿಶ್ವಕೋಶ.

[31]       Ibid., p-522.

[32]      Ibid., p-522.