ಭಾರತ ಜಾತಿಮತಗಳ ತವರು. ಇಲ್ಲಿರುವಷ್ಟು ಜಾತಿ ಉಪಜಾತಿಗಳು ಜಗತ್ತಿನ ಮತ್ತೆಲ್ಲಿಯೂ ಇದ್ದಿರಲಾರವು. ಯಾವುದೋ ಕಾಲದಲ್ಲಿ ಸಮಾಜ ವ್ಯವಸ್ಥೆಗೆ ಹೊಂದಿಕೊಳ್ಳುತ್ತಿರುವ ಸಂದರ್ಭದಲ್ಲಿ ವೃತ್ತಿಯನ್ನನುಸರಿಸಿ ಮಾಡಿದ ವರ್ಣಗಳು ವಟವೃಕ್ಷದಂತೆ ಬೆಳೆದು ಬಿಳಿಲಿಗೆ ಮರಿ ಬಿಳಿಲನ್ನು ಇಳಿಸುವಂತೆ, ಜಾತಿ ಪದ್ಧತಿಯೂ ನಮ್ಮಲ್ಲಿ ಕವಲು ಕವಲಾಗೊಡೆದು ಸೊಂಪಾಗಿ ಬೆಳೆದಿದೆ. ಇವುಗಳಲ್ಲಿ ಸಮಾಜಶಾಸ್ತ್ರಜ್ಞರು ವಿಂಗಡಿಸಿರುವ ಹಾಗೆ ಜಾತಿ, ಬುಡಕಟ್ಟುಗಳು ತೋರಿಬಂದವು. ಅವು ಒಂದಿರಿಂದ ಮತ್ತೊಂದು ತಮ್ಮವೇ ಆದ ವಿಶಿಷ್ಟ ಅಂಶಗಳಿಂದ ಪ್ರತ್ಯೇಕಗೊಂಡಿರುವುದು ಗೋಚರಿಸುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಬಹುದೂರದ ಎರಡು ಗುಂಪುಗಳ ಸಂಸ್ಕೃತಿಯಲ್ಲಿ ಹೊಂದಾಣಿಕೆ ಅಂಶಗಳೂ ಗೋಚರಿಸಬಹುದು ಎನ್ನುವುದು ಮನೋವೈಜ್ಞಾನಿಕ ಸತ್ಯವಾಗಿದೆ.

ಹೀಗೆ ಗುರುತಿಸಬಹುದಾದ ಕೊರಮ ಬುಡಕಟ್ಟು ಕೂಡ ತನ್ನೊಳಗೇ ಪಂಗಡ ಉಪಪಂಗಡಗಳಾಗಿ ಒಡೆದು ಚದುರಿಹೋಗಿದೆ. ಹೀಗೆ ಚದುರಿ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಬದುಕುವಾಗ ತಾವು ವಲಸೆ ಹೋದ ಪ್ರದೇಶದ ಸಂಸ್ಕೃತಿಗೆ, ಭಾಷೆಗೆ ಒಳಗಾಗುವುದು ಸಹಜವಾಯಿತು. ಮೂಲದಲ್ಲಿ ಕುರುವರಾಗಿ ಕಂಡುಬರುವ ಈ ಜನರನ್ನು ಬೇರೆ ಬೇರೆ ರಾಜ್ಯಗಳಲ್ಲಿ ವಿವಿಧ ಹೆಸರುಗಳಿಂದ ಗುರುತಿಸಲಾಗಿದೆ.

ಕೊರಮರನ್ನು ಕುರಿತು ಅಧ್ಯಯನ ಮಾಡಿರುವ ಹಲವು ಜನ ಮಹನೀಯರು. ಇವರನ್ನು ದ್ರಾವಿಡ ಮೂಲಕ್ಕೆ ಸೇರಿದ ಒಂದೇ ನೆಲೆಯಿಂದ ಹೊರಟವರು ಎಂಬ ಬಗ್ಗೆ ಹಲವು ಅಂಶಗಳನ್ನು ಗುರುತಿಸಿ ದಾಖಲಿಸಿದ್ದಾರೆ. ಈ ನಿಟ್ಟಿನಲ್ಲಿ ಕೆಲಸ ಮಾಡಿರುವ ಶ್ರೀ ಅನಂತಕೃಷ್ಣ ಅಯ್ಯರ್ ಮತ್ತು ರಾವ್‌ಬಹದ್ದೂರ್

[1] ಅವರು ಕರ್ನಾಟಕದ ಈ ಜನರ ಹೆಸರುಗಳನ್ನು ಈ ಕೆಳಗಿನಂತೆ ದಾಖಲಿಸಿದ್ದಾರೆ.

1) ಎತ್ತಿನ ಕೊರಮರು, 2) ಬ್ಯಾರಗಾಯಿ ಕೊರಮರು, 3) ಹಗ್ಗದ ಕೊರಮರು, 4) ವಾಲಗದ ಕೊರಮ, 5) ಕಳ್ಳ ಕೊರಮರು ಎಂದು ಗುರುತಿಸಿದ್ದಾರೆ. ಮೈಕೆಲೆ ಕೆನಡಿ[2] ಅವರು ಮಹಾರಾಷ್ಟ್ರದ ಭಾಗದ ಕೊರವ ಜನರನ್ನು

1) Chor Kaikadis, 2) Goan Kaikadis, 3) Kuchadi Kaikadis, 4) Makadvale Kaikadis, 5) Kamati Kaikadis, 6) Kooth Kaikadis, 7) Telingana Kaikadis, 8) Call Karavas, 9) Kaddi or Agadi Koravas, 10) Kunchi Koravas, 11) Korachas, 12) Pamulars, 13) Bajantri Korvas, 14) Sanadi of Oor Koravas. ಎಂದು ಸುಮಾರು 14 ಪಂಗಡಗಳನ್ನು ಗುರುತಿಸಿದ್ದಾರೆ. ಇವರೆಲ್ಲರೂ ಒಂದೇ ಬುಡಕಟ್ಟಿಗೆ ಸೇರಿದವರಾದರೂ ಮಾಡುವ ಉದ್ಯೋಗದಿಂದ ಬೇರೆ ಹೆಸರುಗಳನ್ನು ಪಡೆದುಕೊಂಡಿದ್ದಾರೆ. ಆರ್.ಇ. ಎಂಥೋವನ್[3] ಅವರು ಕೂಡ ತಮ್ಮ ಅಧ್ಯಯನದಲ್ಲಿ ಈ ಜನರ ಹೆಸರುಗಳನ್ನು ದಾಖಲಿಸಿದ್ದಾರೆ. ಅವುಗಳೆಂದರೆ : “Koravas, Korar, Koragar ಎನ್ನುವ ಹೆಸರುಗಳ ಜೊತೆಗೆ ಈ ಜನರ ಗೋತ್ರಗಳನ್ನೇಳುವಾಗ Kuruvan, Kalla Bantru, Adavi or Kalkaikadi, Bid of Vir, Dabbe or Uru, Ghante Chor, Kunchi, Modi, Partad, Sanadi, Suil, Kunchi, Koravas.

ಅಂತೆಯೇ Abbe J.A. Dubois[4] ಅವರು Kurumaru, Karuvas Kalla bantrus ಎನ್ನುವ ಹೆಸರುಗಳನ್ನು ಈ ಜನರನ್ನು ಕುರಿತಂತೆ ದಾಖಲಿಸಿದ್ದಾರೆ.

ಶ್ರೀ ಎಂ. ಶ್ಯಾಮಪ್ರಸಾದ ಅವರು[5] ಮೈಸೂರು ದೇಶದಲ್ಲಿ ನೆಲೆಸಿದ ಕೊರಮ, ಕೊರಮಶೆಟ್ಟಿ, ಹೊಸ ಕರ್ನಾಟಕದಲ್ಲಿ ಕುಂಚಿಕೊರವರು, ಭಜಂತ್ರಿ, ಬಳ್ಳಾರಿ ಜಿಲ್ಲೆಯಲ್ಲಿ ಕೊರಚರು, ಎರಕುಲ; ಮಹಾರಾಷ್ಟ್ರದಲ್ಲಿ ಕೈಕಾಡಿ; ತಮಿಳುನಾಡಿನಲ್ಲಿ, ಕೊರವ, ಕುರುವನ್, ಉಪ್ಪುಶೆಟ್ಟಿ, ಕೇರಳದಲ್ಲಿ ಸಿಧುನಾರ್; ಪಾಂಡಿಚೇರಿಯಲ್ಲಿ ಕಟ್ಟುನಾಯಕ; ಆಂಧ್ರಪ್ರದೇಶದಲ್ಲಿ ಎರಕುಲ, ಎರಕವಾಡ್ಲು, ಗುಜರಾತ ಮತ್ತು ರಾಜಸ್ಥಾನದಲ್ಲಿ ಬೀಲ, ಬಲ್ಲಾರ ಮುಂತಾಗಿ ಗುರುತಿಸಿರುವುದನ್ನು ತಿಳಿಸಿದ್ದಾರೆ. E. Thurston[6] ಅವರು ಉದಾಹರಿಸಿರುವುದರಲ್ಲಿ M. Puparao (Madras Censes Report) – Belfore, ಮುಂತಾದ ಮಹನೀಯರು ದಾಖಲಿಸಿರುವುದರ ಜೊತೆಗೆ ವಿಲ್ಸನ್ ಮತ್ತು ಇತರರು Dr. Oppert, Mr. Francies ಅವರು ಮತ್ತು ತಿರುಚನಾಪಳ್ಳಿ ಗೆಝಟಿಯರ್‌ನಲ್ಲಿ ಕೊರವ, ಕೊರಚ, ಕೊರ‍್ಚ, ಕೊರ‍್ವ, ಎರುಕಲ, ಎರಕಲ, agambadiar – vellalas, pillai, palli, Kavarai, Indiyan Reddi, Kepmarikoravas, Seruai Kors, Korava Pujaris, Yarukalavandalu, Koracha Vandalu, Kuru Vandalu, Kulu Vandalu, Kuluvaru, Erakavaru, Erakalavaru, Kunchi, Korava, Yerkal Vadu, Kurshivanloo, Kuruvans, Kaval Karan Kuruvas, Namakkal Kuruvans, Karuru Kuruvan, Pamula Gharmers, Pusala vadu, utlavadu, vanniyans, walaja koravas, wooyaloo Koravas, Bajantri, or Sonai kolavaru, Kolla, Soli Koravas, Erka bogavaru, Thevidia, ಮುಂತಾದ ಹಲವು ರಾಜ್ಯಗಳಲ್ಲಿನ ಕೊರಮರ ವಿವಿಧ ಹೆಸರುಗಳನ್ನು ಸೂಚಿಸಿದ್ದಾರೆ.

Mr. F. Fawcett[7] ಅವರು ಕೊರಮರ ಗೋತ್ರದ ಬಗ್ಗೆ ಬರೆಯುತ್ತಾ ಊರು ಅಥವಾ ದಬ್ಬೆ ಕೊರಚರು, ಉಪ್ಪು ಅಥವಾ ಘಟ್ಟದ ಕೊರಚರು, ಎತ್ತಿನ ಕೊರಚರು, ಕುಂಚಿಗೆ ಕೊರಚರು, ವಾಲಗದ ಕೊರಚರು, ಪಾತ್ರದ ಕೊರಚರು ಮತ್ತು ಸೂಳೆ ಕೊರಚರು ಎನ್ನುವ ಹೆಸರುಗಳ ಜೊತೆಗೆ,

1) Bajantri Koravar (Musicians) 2) Thappai Koravar (Bamboo splitters) 3) Kaval Koravar (Watchman), 4) Koonchi Koravar (Brush makers), 5) Koodiketti Koravar (Those who make slings and nuts) 6) Nari Koravar (Jackal hunters), 7) pachakutti Koravar (Those who tatto) 8) Uppu Koravar (Salt carriers), 9) Kool Kaekairs (Dancers), 10) Paun Kaekairs (Snake charmers), 11) Ram Kaekairs (Stone Workers), 12) Sade Pati Kaekaris (Jungle People) 13) Karuve Pillai Kaekairs (Those who deel in leaves) ಈ ಹೆಸರುಗಳನ್ನೂ ಹೇಳುತ್ತಾರೆ. ವೃತ್ತಿಯನ್ನನುಸರಿಸಿ ಈ ಹೆಸರುಗಳೆಲ್ಲವೂ ರೂಢಿಯಲ್ಲಿವೆಯಾದರೂ ಇವರೆಲ್ಲರೂ ಒಂದೇ ಬುಡಕಟ್ಟಿಗೆ ಸೇರಿದವರು. ಕನ್ನಡ ಜಾನಪದ ವಿಶ್ವಕೋಶದ (ಪುಟ 524 ರಿಂದ 528 ರಲ್ಲಿ) ಈ ಮೇಲೆ ಸೂಚಿಸಿದ ಹೆಸರುಗಳನ್ನು ಪಟ್ಟಿ ಮಾಡಿರುವುದು ಕಂಡು ಬರುತ್ತದೆ. ದಕ್ಷಿಣ ಕರ್ನಾಟಕದಲ್ಲಿ ಜನಾನುರಾಗಿಯಾಗಿ ತೋರುವ ಕೊರಮ, ಕೊರಮಶೆಟ್ಟಿ ಎಂಬ ಹೆಸರನ್ನು ಮಾತ್ರ ದಾಖಲಿಸಿಲ್ಲ. ಮೊದಮೊದಲಿಗೆ ತೋರಿ ಬರುವ ಕೊರವ ಎಂಬ ಶಬ್ದ ಜನರ ಬಾಯಲ್ಲಿ ರೂಪಾಂತರ ಹೊಂದಿ ಕರ್ನಾಟಕ ಅನೇಕ ಜಿಲ್ಲೆಗಳಲ್ಲಿ ಕೊರಮ ಎಂದೂ ಬಳಕೆಯಾಗುತ್ತಿದೆ.

ಇದು ಕರ್ನಾಟಕದಲ್ಲಿ ವಾಸಿಸುತ್ತಿರುವ ಕೊರಮರ ಹೆಸರುಗಳನ್ನಷ್ಟೇ ಅಲ್ಲದೆ ತಮ್ಮ ಜನಾಂಗದ ಮೂಲ ವೃತ್ತಿಯನ್ನು ಕೈಬಿಡದೆ ಜೀವಿಸುವ, ವಿವಿಧ ರಾಜ್ಯಗಳ ಜನರೊಡನೆ, ಭಾಷೆಯೊಡನೆ ಸಂಮಿಳಿತವಾಗಿ ಬದುಕುತ್ತಿರುವ ಇತರ ಅಂಶಗಳನ್ನು ಸೂಚಿಸುತ್ತದೆ.

 [1]       Rao Bahadur L.K. Anantha Krishna lyer, The Mysore Tribes and Castes, Vol-III  P-494.

[2]        Michael Kennedy, Criminal Classes in the Bombay Presidency. P-63.

[3]      R.E. Enthovan castes of Tribes of Bombay  P-267.

[4]      Abbe J.A. Dubois Hindu Manners, Customs and Ceremonies  P-65, 66, 67.

[5]      M. Sham Prasad – Souvenir July 1983, Akila Karnataka Koramara Sanghg, Banglore.

[6]        E. Thurston Castes and Tribes of Southern India Vol, III – K  P-459 – 60.

[7]      Mr. F. faw Cett Quoted : H.V. Nanjundaiah, and L.K. Anantha Krishna lyer, The Mysore Tribes and Castes, P-584.