ಹತ್ತು ಸಮಸ್ತರ ಜತೆ ಕೃತಿ ರೂಪುಗೊಳ್ಳುವಲ್ಲಿ ಹಲವು ಮಂದಿ ನೆರವಾಗಿದ್ದಾರೆ. ಅವರೆಲ್ಲರಿಗೂ ಈ ಹೊತ್ತಲ್ಲಿ ಕೃತಜ್ಞತೆ ಹೇಳಲೇಬೇಕು.

ಇಂಥದೊಂದು ಅಪೂರ್ವ ಸಂವಾದವನ್ನು ಕನ್ನಡ ಜಗತ್ತಿನೊಂದಿಗೆ ನಡೆಸುತ್ತಲೇ ಬಂದಿರುವ ಸಂಸ್ಕೃತಿ ನೇತಾರ ಯು.ಆರ್. ಅನಂತಮೂರ್ತಿಯವರು, ಹೋದವರ್ಷ ತಮ್ಮ ಬ್ರೆಕ್ಟ್ ಕವಿತೆಗಳ ಅನುವಾದ ಮತ್ತೆ ಮತ್ತೆ ಬ್ರೆಕ್ಟ್ ಕೃತಿಯನ್ನು ಪ್ರಕಟಣೆಗೆ ನೀಡುವ ಮೂಲಕ ಪ್ರಕಾಶನ ಲೋಕದಲ್ಲಿ ಅಹರ್ನಿಶಿಯ ಚಹರೆ ರೂಪುಗೊಳ್ಳಲು ಕಾರಣರಾಗಿದ್ದರು. ಇದೀಗ ಹದಿಮೂರು ಜನ ಮಹತ್ವದ ಸಾಂಸ್ಕೃತಿಕ ವ್ಯಕ್ತಿತ್ವಗಳೊಂದಿಗೆ ತಾವು ನಡೆಸಿರುವ ಮಾತುಕತೆಯನ್ನು ಕೃತಿ ರೂಪದಲ್ಲಿ ತರಲು ನಮಗೆ ಮತ್ತೊಂದು ಸದವಕಾಶ ನೀಡಿ ನಮ್ಮ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ.

ಇದಕ್ಕೆ ಕಾರಣಕರ್ತರಾದ ಮೇಷ್ಟ್ರಿಗೆ ಮತ್ತು ಎಸ್ತರ್ ಮೇಡಂಗೆ,

ದೂರದರ್ಶನ, ರೇಡಿಯೋ, ಸಾಕ್ಷ್ಯಚಿತ್ರಗಳಿಗಾಗಿ ಅನಂತಮೂರ್ತಿಯವರು ನಡೆಸಿಕೊಟ್ಟ ವಿವಿಧ ಸಂವಾದಗಳ ರೆಕಾರ್ಡಿಂಗ್ ಟೇಪುಗಳನ್ನು ಜತನದಿಂದಿಟ್ಟು ನಮಗೆ ಒದಗಿಸಿದ ಸಿ ಎನ್ ರಾಮಚಂದ್ರ, ಹೆಚ್ ಎನ್ ಆರತಿ, ಮಹದೇವ ಪ್ರಕಾಶ್, ಚಿಕ್ಕಣ್ಣ, ಕೃಷ್ಣ ಮಾಸಡಿ ಮತ್ತು ಮೈಸೂರು ಆಕಾಶವಾಣಿಯ ಮಿತ್ರರಿಗೆ,

ಈ ಕೃತಿಗೆ ಬೆನ್ನುಡಿ ಬರೆದುಕೊಟ್ಟ ಜಿ. ರಾಜಶೇಖರ್ ಅವರಿಗೆ, ತಮ್ಮ ಸಮಯ ಹಾಗೂ ಚಿಂತನೆಯನ್ನು ವಿನಿಯೋಗಿಸಿದ ಆಶಾದೇವಿ ಮೇಡಂಗೆ, ಇಲ್ಲಿನ ಮಾತುಕಥೆಗಳನ್ನು ಅಕ್ಷರ ರೂಪಕ್ಕೆ ತಂದ, ಭಾಷಾಂತರ ಮಾಡಿಕೊಟ್ಟ ಡಾ. ಎನ್.ಕೆ. ರಾಜಲಕ್ಷ್ಮಿ, ನಿತ್ಯಾನಂದ ಬಿ. ಶೆಟ್ಟಿ, ಅವಿನಾಶ್ ಟಿ, ಮಂಜುಳಾ ಸುಬ್ರಹ್ಮಣ್ಯ, ಹೆಚ್.ಬಿ. ರಾಘವೇಂದ್ರ, ಡಾ.ವಿಜಯಾ, ಚ. ಸರ್ವಮಂಗಳ, ಮೀನಾ ಮೈಸೂರು, ವಿದ್ಯಾ ಕೃಷ್ಣಂರಾಜು, ಎನ್.ಎಸ್. ಶಂಕರ್, ಪ್ರಸನ್ನ ಅವರಿಗೆ, ಅನಂತಮೂರ್ತಿಯವರು ಭಾವಚಿತ್ರ ತೆಗೆದ ಕೆ.ಎಸ್. ರಾಜಾರಾಮ್, ಪುಸ್ತಕಕ್ಕೆ ಚೆಂದದ ರೂಪ ಕೊಟ್ಟ ಅಪಾರ, ಸಹಾಯಕ್ಕೆ ಒದಗಿ ಬಂದ ಭಾಗ್ಯ ಮತ್ತು ಭಾನುಮತಿಗೆ.

ಇಳಾ ಮುದ್ರಣದ ಗುರು ಮತ್ತು ಗೌಡರಿಗೆ, ವಿವಿಧ ಹಂತದಲ್ಲಿ ನೆರವಾದ ಆದರ್ಶ್‌ಕೆ. ಮುರಳೀಧರ ಉಪಾಧ್ಯ ಹಿರಿಯಡಕ, ಹೊತ್ತಾರೆ ಶಿವು, ಅವಿನಾಶ್ ಹೆಗ್ಗೋಡು, ಜಿ. ಎನ್. ಮೋಹನ್, ಸಂವರ್ತ, ಸುಧೀಂದ್ರ ಕುಮಾರ್, ಪ್ರಕಾಶ್ ಕಂಬತ್ತಳ್ಳಿ, ಸಮಂಗಲಾ, ಸಬಿತಾ, ಸತ್ಯನಾರಾಯಣರಾವ್ ಅಣತಿ ಮತ್ತು ಅಭಿನವದ ಗೆಳೆಯರು,

– ಇವರೆಲ್ಲರಿಗೂ ಕೃತಜ್ಞತೆಗಳು.

ಮತ್ತು ಬಹುಮುಖ್ಯವಾಗಿ, ಈ ಪುಸ್ತಕವನ್ನು ಸಂಪಾದಿಸುವ ಶ್ರಮ ವಹಿಸಿದ ಪಟ್ಟಾಭಿರಾಮ ಸೋಮಯಾಜಿಯವರಿಗೆ ನಾವು ಆಭಾರಿಗಳು. ಅವರ ಮದುವೆಯ ಸಂದರ್ಭದಲ್ಲೇ ಈ ಕೃತಿ ಬಿಡುಗಡೆಯಾಗುತ್ತಿರುವುದು ನಮ್ಮ ಸಂಭ್ರಮವನ್ನು ಹೆಚ್ಚಿಸಿದೆ. ಅವರ ಸಂಗಾತಿ ಮಂಜುಳಾ ಸುಬ್ರಹ್ಮಣ್ಯ ಕೂಡಾ ಈ ಕೃತಿಯನ್ನು ರೂಪಿಸುವಲ್ಲಿ ಶ್ರಮಿಸಿದ್ದಾರೆ. ಅವರಿಬ್ಬರಿಗೂ ಶುಭಾಶಯಗಳು.

ಅಹರ್ನಿಶಿ ಬಳಗ