ಪಲ್ಲವಿ : ಅನಂತ ಶಯನ ಆಪದ್ಬಾಂಧವ ಆಶ್ರಿತ ಜನ ಪಾಲಾ
ನಂದ ನಂದನ ನವನೀತ ಚೋರ ಇರಲಾರೆ ನಿನ್ನಗಲಿ

ಚರಣ :  ತನು ಮನ ನಿನ್ನದು ನನ್ನದು ಎಂಬುದು ನೀನೇ ತೊಗೋ
ಶಕಟ ಶಿಕ್ಷಕ ಸೂತ್ರ ನಾಟಕ ಬೃಂದಾವನ ಗೋಪಾ

ಯಯಾತಿ ರಕ್ಷಕ ಯಮ ನಿರ್ದೇಶಕ ಶ್ರೀಗೋಪಾಲ
ನಾರಾಯಣ ಹರಿ ನಂಬಿದೆ ನಿನ್ನನು ಮನಸಲಿ ನೀ ಬಾ

ಆಪದ್ರಕ್ಷಕ ಆನಂದ ದಾಯಕ ಗೋಪೀ ಜನ ಲೋಲಾ
ಜಯವು ನಿನ್ನದೇ ಲಕ್ಷ್ಮೀರಮಣನೇ ಜಯವೇ ಜಯ ಜಯವು