ಅಂದು
ತಾನ ತಾನ ಗಾನದಿಂದೆ
ಕಾನನಗಳನೊದಿದೆ:
ಇಂದು
ಕಾನನಗಳೆ ಗಾನವಾಗಿ
ತಾನ ತಾನ ಮೂಡಿವೆ!
ತೆರೆ ತೆರೆ ತೆರೆ ಮಲೆ ಹೊಳೆ ತೊರೆ
ಮೂಡುತಿಹವು ರಾಗದಿ;
ಪರ್ವತಗಳೆ ಪದಗಳಂತೆ
ಗಾನಗೊಂಡು ಗೇಯಮಾಗೆ
ನುಗ್ಗುತಿಹವು ವೇಗದಿ!
ನಾಳ ನಾಳ ನಾಳದಲ್ಲಿ,
ಬಿಂದು ಬಿಂದು ನೆತ್ತರಲ್ಲಿ,
ಕಂದರಾದ್ರಿ ವಿಪಿನ ಪಂಕ್ತಿ
ಸ್ಪಂದಿಸುತಿವೆ ಯೋಗದಿ!
೧-೪-೧೯೪೫
Leave A Comment