ಉದಾಹರಣ ನಾ;
ಉದಾರ ಕೃಪೆ ತಾ ಅಕೃಪಣ ಕಣಾ!

ನೆತ್ತಿ ಮೋಡವನೆತ್ತಿ ನಿಮಿರಿದಡವಿಯ ಮಲೆಯ
ತಾಯನಿತ್ತು
ಬೆಟ್ಟಬೆಟ್ಟಕೆ ಕಟ್ಟಿ ಜೋಗುಳದ ತೊಟ್ಟಿಲನು
ತೂಗಿದತ್ತು!
ದೇಶ ಆಕಾಶಗಳ ಶ್ವಾಸಕೋಶಗಳೆಸಗಿ
ಉಸಿರನಿತ್ತು
ನಾಡಿನಾಡಿಗಳಲ್ಲಿ ಕಾಡುಗಳನ್ನೆ
ಕೋಡಿ ಹರಿಸಿತ್ತು!
ಭೋಗ ಸಾಗರದಾಚೆ ಯೋಗವೇಲೆಯಮೇಲೆ
ಸಿಂಹಪೀಠವಿತ್ತು!
ಕಾವ್ಯಲೋಕದ ಭವ್ಯ ಕವಿದೇವ ಪದವಿಯಲಿ
ಪಟ್ಟಗಟ್ಟಿದತ್ತು!

೧೬-೩-೧೯೪೯