ನರ್ತಿಸು, ತಾಯೆ,

ಅಜ ಜಾಯೆ,
ಮಮ ಮಸ್ತಕ ನೀರೇಜದಲಿ!

ಮಾನಸ ಅಧಿಮಾನಸಕೇರೆ
ಅತಿಮಾನಸ ಮೈದೋರೆ
ಆನಂದಾಮೃತ ರಸ ಸೋರೆ
ನರ್ತಿಸು, ತಾಯೆ,
ಅಜ ಜಾಯೆ,
ಮಮ ಮಸ್ತಕ ನೀರೇಜದಲಿ!

ಅಡಿ ಸೋಂಕಿಗೆ ಮುಡಿ ಅರಳೆ
ಅಜ್ಞಾನದ ಗಡಿ ಉರುಳೆ
ವಿಜ್ಞಾನದ ಕಾಂತಿ
ಅವತರಿಸುತ ಬರೆ ಶಾಂತಿ
ನರ್ತಿಸು, ತಾಯೆ,
ಅಜ ಜಾಯೆ,
ಮಮ ಮಸ್ತಕ ನೀರೇಜದಲಿ!

೧-೮-೧೯೬೦


*       ನಾಗಾಮಂಗಲದ ಮಹಾಜನರು ಅರ್ಪಿಸಿರುವ ನಾಟ್ಯ ಸರಸ್ವತಿಯ ದಿವ್ಯಸುಂದರವಾದ ಪಂಚಲೋಹ ವಿಗ್ರಹವನ್ನು ನಿರ್ದೇಶಿಸಿ, ದೇವೀ ಮೂರ್ತಿಯನ್ನು ನಿರ್ಮಿಸಿದ ಅಜ್ಞಾತಶಿಲ್ಪಿಗೆ ಕವಿಯ ಅನಂತ ಕೃತಜ್ಞತೆಯ ಫಲರೂಪವಾಗಿ.