ನನ್ನ ಈ ಕೋರಿಕೆಯನಧಿಕಾರದೆದುರಿನಲಿ
ನಿಂತು ಯಾಚಿಸಬೇಕೆ ಹೇಳು, ಗುರುವೆ?
ನಿನಗೆ ಸಲ್ಲಿಸೆ ಚರಾಚರಕೆಲ್ಲ ಸಲುವುದೆನೆ
ನಿನಗೊರೆವುದೂ ಬೇಕೆ, ಕಲ್ಪತರುವೆ?

ನೀನೆಳಸಿದರೆ ಪೃಥಿವಿ ಕಂಪಿಸುವುದಾಗಸದಿ
ಪಲ್ಲಟಿಸುವುದು ಸೂರ್ಯಚಂದ್ರರ ಪಥಂ!
ನಿನ್ನ ಕೃಪೆ ತಾನತ್ತಲಿನಿತೆ ತಲೆದೂಗಿದರೆ
ಮನೆದಪ್ಪುವುದೆ ನನ್ನ ಸುಮಮನೋರಥಂ?

೨೧-೧-೧೯೪೫