ಪ್ರಕೃತಿ ತಾಯ ಮಡಿಲಿನಲ್ಲಿ
ಮಲೆಯನಾಡಿನಡವಿಯಲ್ಲಿ
ಕವಿಯೊರ್ವನೆ ನಡಸೆಯುವಲ್ಲಿ-
ನುಡಿಯೆ ಸೆರೆಮನೆ.
ಮಲೆಯ ಬೀಡಿನೆದೆಯ ಮೇಲೆ
ದಟ್ಟಗಾಡು ಹಬ್ಬಿರೆ,
ಹಸುಳೆ ಬಿಸಿಲ ಹೊನ್ನ ಲೀಲೆ
ಹಸುರ ಕಡಲ ತಬ್ಬಿರೆ,
ಪಕ್ಷಿಗಾನ ಕೋಟಿವೀಚಿ
ನಾದ ಶರಧಿಯಾಗಿರೆ,
ಇಂದ್ರಿಯಂಗಳಿಂದ್ರಜಗಕೆ
ದಿವಾದ್ವಾರವಾಗಿರೆ,-
ರಸಾನುಭೂತಿ ಮೌನವದುವೆ
ಕಾವ್ಯದರಮನೆ!

೧೮-೪-೧೯೩೭