ಬಣ್ಣದ ರೂಪದಿ ಭಗವತ್ ಪ್ರೇಮ
ಕಣ್ಣು ಚುಂಬಿಸಿದೆ!
ಬಿಂಬಾಧರದಾ ಸೃಷ್ಟಿಯ ಹೃದ್ರತಿ
ಜ್ವಾಲಾ ವರ್ಣದ ಲೀಲಾ ಪರ್ಣದಿ
ಓಷ್ಠಾಗ್ನಿಯ ಪ್ರತಿಬಿಂಬಿಸಿದೆ!
ಕಬ್ಬಿಗೆನೆದೆಯಲಿ ಶ್ರದ್ಧಾನಂದಂ
ಅಗ್ನಿಯ ಬುಗ್ಗೆಯೊಲುಕ್ಕುತೆ ಧಗ್ಗನೆ
ಪ್ರಾಣ ಸಮುದ್ರಂ ಜೃಂಭಿಸಿದೆ!
ದೇವಾಲಯವೀ ಹೂವಿನ ತೋಟಂ!
ರಸ ಸಾಧನೀಯ ಯೋಗದ ನೋಟಂ!
ಜೀವನ ದೇವನ ಈ ಹೂಬೇಟಂ!
ಮೂಲೋಕವನಾಲಿಂಗಿಸಿದೆ!
ಭಗವದ್ ಭೋಗದ ಈ ಜೀನೂಟಂ
ತೃಷ್ಣೆಯ ಬೇರನೆ ಭಂಗಿಸಿದೆ!
ಇಂದ್ರಿಯಗಳನುಲ್ಲಂಘಿಸಿದೆ!
ನಾನೆಂಬಬುಧಿಯನಿಂಗಿಸಿದೆ!
೨೭-೧೦-೧೯೪೯
Leave A Comment