ಆಟಗಾರರೆಲ್ಲ ಅಂಗಳದಲ್ಲಿ ಒಬ್ಬರಿಗೊಬ್ಬರ ಕೈಗಿಂಚಿಕೊಂಡು ವರ್ತುಳಾಕಾರದಲ್ಲಿ ನಿಲ್ಲುವರು. ಇಬ್ಬರು ಆಟಗಾರರು ವರ್ತುಳದ ಹೊರಗೊಬ್ಬರು ಒಳಗೊಬ್ಬರು ನಿಂತುಕೊಳ್ಳುವರು. ಅವರಿಬ್ಬರು ಒಬ್ಬರ ಎಡಗೈಗೆ ಇನ್ನೊಬ್ಬರ ಬಲಗೈ ಜೋಡಿಸಿ ತಮ್ಮ ಕೈಗಿಂಚಿಕೊಳ್ಳುವರು.  ಹಾಗೂ ವರ್ತುಳದಲ್ಲಿ ನಿಂತವರ ತಲೆಯ ಮೇಲೆ ತಟ್ಟುತ್ತ_____

ಆನ್ ಗಲ್ ಮುತ್ನಗಲ್ |
ಅಜ್ಜೀ ರಾಮಾ ನೀರಿ ಗ್ಹೋದಾ|
ಹಿಂದೂ ಕಾಣಾ ಮುಂದೂ ಕಾಣಾ|
ಪಾವ್ಡಕ್ಕಿ ಪಡ್ಜ್|

ಎನ್ನುವರು “ಪಡ್ಜ್” ಎಂದು ಹೇಳುವಾಗ ಯಾರ ತಲೆಯ ಮೇಲೆ ಕೈಬೀಳುತ್ತದೆಯೋ ಅವರು ಕೈಗಿಂಚು ಬಿಡದೇ ಕುಳಿತುಕೊಳ್ಳಬೇಕು. ಹೀಗೆ ಎಲ್ಲರೂ ಕುಳಿತು ಕೊಳ್ಳುವವರೆಗೆ ಆಟ ಮುಂದುವರಿಯುವದು.