ಆಟಗಾರರು ಕೈಗಿಂಚು ಹಾಕಿಕೊಂಡು ವರ್ತುಳಾಕಾರವಾಗಿ ನಿಂತುಕೊಳ್ಳುತ್ತಾರೆ. ಅವರ ನಡುವೆ ಒಬ್ಬಳು ನಿಂತು ತನ್ನ ಮೊಣಕಾಲು, ಮಂಡಿ, ಸೊಂಟ, ಎದೆ, ತಲೆವರೆಗೂ ಕ್ರಮವಾಗಿ ತೋರಿಸುತ್ತ ಪ್ರತಿಸಾರೆಯೂ, ಇಟ್ಟು ಇಟ್ಟು ಗುಂಜಿ” ಎನ್ನುತ್ತಾಳೆ. ಅವಳ ಸುತ್ತಲೂ ನಿಂತವರು ಪ್ರತಿಬಾರಿಗೂ ಅವಲಕ್ಕಿ ಗುಂಜಿ” ಎನ್ನುತ್ತಾರೆ. ಹೀಗೆ ಸಂವಾದ ನಡೆಯುತ್ತಿದ್ದಾಗ ತಲೆಯುವರೆಗೂ ಕೈಯಿಟ್ಟು ತೋರಿಸಿ ಮೊದಲಿನಂತೆಯೇ ಕೇಳಿದಾಗ, ಸುತ್ತಲೂ ನಿಂತವರು “ಅವಲಕ್ಕಿ ಗಂಜಿ” ಎಂದು ಹೇಳಿ ಓಡಿ, ಬಿಡುವರು. ನಡುವೆ ನಿಂತಿದ್ದವಳು ಓಡುತ್ತ ಹೋಗಿ ಯಾರೊಬ್ಬರನ್ನು ಮುಟ್ಟುವಳು. ಮುಟ್ಟಿಸಿಕೊಂಡವಳು ಮುಂದಿನ ಆಟಕ್ಕೆ ನಡುವೆ ನಿಲ್ಲುವವಳಾಗುತ್ತಾಳೆ.