ಚಿಕ್ಕಮಕ್ಕಳು ಬಂಡಿ ಹಬ್ಬ, ಹೊಸ್ತು ಮುಂತಾದ ಹಬ್ಬಗಳ ಸಮಯದಲ್ಲಿ ಏಳುವ ದೇವರ ಕಳಸವನ್ನು ನೋಡಿ, ಅದರಂತೆಯೇ ಕಳಸ ತಯಾರಿಸಿ ಹಬ್ಬ ಆಚರಿಸುವರು.

ಕಳಸ ತಯಾರಿಸಲು ಕಳಸತ ತಳದ ಗಿಂಡಿಗಾಗಿ ತೆಂಗಿನ ಚಿಕ್ಕಪುಳಿ, ೩-೪ ಹಸಿ ಮಡಲಿನ ಕಡ್ಡಿಗಳನ್ನು, ದಾಸವಾಳ ಮುಂತಾದ ಹೂವುಗಳನ್ನು ಕೂಡಿಸಿಕೊಂಡು ಕಳಸ ತಯಾರಿಸುವರು. ತೆಂಗಿನ ಪುಳಿಗೆ ಹಸಿಮಡಲಿನ ಒಂದು ಕಡ್ಡಿಯ ಎರಡೂ ತುದಿಗಳನ್ನೂ ಕಮಾನಿನಂತೆ ಬಗ್ಗಿಸಿ ಚುಚ್ಚುವರು. ನಡುವೆ ಲಂಬವಾಗಿ ಕಮಾನಿನ ಉದ್ದಕ್ಕಿಂತ ತುಸು ಉದ್ದವಾದ ಕಡ್ಡಿ ಚುಚ್ಚುವರು, ೭-೮ ಚಿಕ್ಕ ಕಡ್ಡಿಗಳನ್ನು ಮುರಿದುಕೊಂಡು ಕಮಾನಿನ ಕಡ್ಡಿ ಹಾಗೂ ನಡುವಿನ ಕಡ್ಡಿಗೆ ಅಡ್ಡವಾಗಿ ಹೆಣೆವರು. ನಡುವೆ ಉಂಟಾಗುವ ಚಿಕ್ಕ ಚಿಕ್ಕ ತೂತುಗಳಲ್ಲಿ ಹೂವು ಸಿಕ್ಕಿಸುವರು; ಕಡ್ಡಿಗಳ ತುದಿಗಳಿಗೂ ಸಿಕ್ಕಿಸುವರು, ಹೀಗೆ ಸಿದ್ಧವಾದ ಕಳಸವನ್ನು ಹೊತ್ತು ಗಂಟೆ ತೂಗಿದಂತೆ ನಟಿಸುತ್ತಾ ಹಬ್ಬವನ್ನು ನಟಿಸುವರು.