ಇದಕ್ಕೆ ಒಟ್ಟಿಗೆ ಮೂವರು ಬೇಕು. ಇವರಲ್ಲಿ ಇಬ್ಬರು ಎದುರುಬದುರಾಗಿ ನಿಂತುಕೊಳ್ಳುವರು. ಇಬ್ಬರೂ ತಮ್ಮ ತಮ್ಮ ಎಡತೋಳುಗಳನ್ನು ಮುಂದೆ ಮಾಡಿ ಬಲ ಅಂಗೈಯನ್ನು ಅವ್ ಎನ್ನುತ್ತಾ ತಮ್ಮ ತೆರೆದ ಬಾಯಿಯ ಮೇಲೆ ಇಟ್ಟ “ಅಪ್” ಎನ್ನುತ್ತಾ ಆ ಕೈಯಿಂದ ತಮ್ಮ ತಮ್ಮ ಎಡತೋಳುಗಳನ್ನು ಹಿಡಿದುಕೊಳ್ಳುವರು. ಅನಂತರ ಎಡಗೈಯಿಂದ ಪರಸ್ಪರರ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳುವರು. ಈಗ ನಡುವೆ ಒಂದು ಚೌಕ ಸ್ಥಳ ಉಂಟಾಗುವದು. ಇನ್ನೊಬ್ಬ ಆಟಗಾರ ಚಿಕ್ಕವನಿದ್ದರ ಒಳಿತು; ಚೌಕದ ಆಚೆ ಈಚೆ ಇರುವ ಸ್ಥಳದಲ್ಲಿ ತನ್ನೆರಡೂ ಕಾಲುಗಳನ್ನು ಇಳಿಬಿಟ್ಟು ಆಚೆ ಈಚೆ ನಿಂತವರ ತಲೆ ಹಿಡಿದುಕೊಂಡು ಅವನು ಕುಳಿತುಕೊಳ್ಳುವನು. ಆಗ ಅವನನ್ನು ಗಣಪತಿ ಬಪ್ಪಾ, ಮೋರೆಯಾ” ಎನ್ನುತ್ತ ಆಚೆ ಈಚೆ ಓಡಾಡುವರು.