ನಿನಗೆ,
ಅದೊಂದು ಬರಿಯ ಅಂಗದ ಉಪಾಂಗ:
ನನಗೊ?
ಸುಖಸಾಗರ ಭೋರ್ಗರೆಯುವ ತರಂಗ!
ನಿನಗೆ,
ತೊಗಲೆಲ್ವು ಗೂಡಿನೊಡಲೊಂದು ಜಘನ್ಯಸ್ಥಾನ:
ನನಗೊ?
ಆನಂದದಾಗರ ಹೂ ಹೂ ಹೂಕುಣಿಯುವ ಉದ್ಯಾನ!
ನಿನಗೆ,
ಸಂಸಾರ ಕಂದರಕ್ಕೆಸೆವೊಂದು ಮಾಯಾಭಂಧನ:
ನನಗೊ?
ಸ್ವರ್ಗ ಶಿಖರದೊಳೆಸೆವ ರಸತಪೋನಂದನ!
ನಿನಗೆ,
ಅದೊಂದು ಬರಿಯ ಅಂಗದ ಉಪಾಂಗ:
ನನಗೊ?
ಸುಖಸಾಗರ ಭೋರ್ಗರೆಯುವ ತರಂಗ!
ನಿನಗೆ,
ತೊಗಲೆಲ್ವು ಗೂಡಿನೊಡಲೊಂದು ಜಘನ್ಯಸ್ಥಾನ:
ನನಗೊ?
ಆನಂದದಾಗರ ಹೂ ಹೂ ಹೂಕುಣಿಯುವ ಉದ್ಯಾನ!
ನಿನಗೆ,
ಸಂಸಾರ ಕಂದರಕ್ಕೆಸೆವೊಂದು ಮಾಯಾಭಂಧನ:
ನನಗೊ?
ಸ್ವರ್ಗ ಶಿಖರದೊಳೆಸೆವ ರಸತಪೋನಂದನ!
Leave A Comment