ನಿನ್ನ
ಹಣೆಯ ಕುಂಕುಮ ರಕ್ಷೆ
ನನಗಿರಲು, ನಲ್ಲೆ,
ಏನಪಾಯದ ಭೀತಿ
ನಮಗಿಲ್ಲ ಬಲ್ಲೆ!

ಬಂಧಿಸಿರೆ ನನ್ನನೀ
ನಿನ್ನ ಚಿನ್ನದ ಕೊರಳ
ಮಾಂಗಲ್ಯ ದೀಕ್ಷೆ
ನಮಗಿರದೆ ಸರ್ವದಾ
ಶಿವೆಯ ಶಿವರಕ್ಷೆ?