ನನ್ನ ಪಾರ್ಥನೆ ಸದಾ
ನಿನ್ನ ರಕ್ಷೆಯಾಗಿರಲಿ;
ನಿನ್ನನಗಲುವುದೆನ್ನ ಪಾಪಕ್ಕೆ
ಶಿಕ್ಷೆಯಾಗಿರಲಿ.
ನಿನ್ನ ಕ್ಷೇಮದ ಚಿಂತೆ
ನಾ ಪ್ರಾರ್ಥಿಸುತ್ತಿರುವಂತೆ
ಸದಾ ಚುಚ್ಚುಮುಳ್ಳಾಗಿರಲಿ.

ಶಂಕೆ ಭಯ ಉದ್ವೇಗ
ಭಾವಮಯ ಕಲ್ಪನೆಯ
ರೆಂಕೆಯೇರಿ
ನನ್ನ ಪ್ರಾರ್ಥನೆಯ ಭೃಂಗಮುಖ
ಚಂಚೂ ಕಠಾರಿ
ಹೊಕ್ಕು ಭಗವತ್‌ ಪಾದಪದ್ಮದ
ಮಧುವ ಹೀರಿ
ಸ್ತನ್ಯವಾಗಲಿ ನಿನ್ನ ಜೊನ್ನೆದೆಯ
ಜೇನ್ಗೂಡ ಸೇರಿ!