ಈ ಜಗದ ಜಂಜಡಕೆ, ಈ ಜನದ ಕೋಟಲೆಗೆ,
ನಿನ್ನ ಅವಲೋಕನವೆ ಸಿದ್ಧೌಷಧ;
ವಂದಿಸುವ ಈರ್ಷ್ಯೆಗೂ ಮತ್ಸರಿಪ ನಿಂದೆಗೂ
ನಿನ್ನ ಆಲಿಂಗನವೆ ಪರಮೌಷಧ;
ಇಂದ್ರಿಯದ, ಮನದ, ಬುದ್ಧಿಯ ತೊಂದರೆಯ ತೊಲಗೆ
ನಿನ್ನೊಳೊಂದಾಗುವುದೆ ದಿವ್ಯೌಷಧ!