ಹಣೆಯಲಿ ಕುಂಕುಮ, ಮೂಗಲಿ ಮೂಗುತಿ,
ಕೊರಳಲಿ ಮಾಂಗಲ್ಯ:
ಪಕ್ಕದೆ ಮಲಗಿದೆ ತ್ರಿಜಗನ್ಮಾತೆಯ
ವಕ್ಷದ ವಾತ್ಯಲ್ಯ!
ಪ್ರೇಯಸಿ? ಸಹಧರ್ಮಿಣಿ? ಹೆಂಡತಿ? ತಾಯಿ?
ಲೌಕಿಕ ಸಂಬಂಧಕೆ ತೊದಲಿತೊ ಬಾಯಿ!