ಯಾರು ಪುರಸ್ಕರಿಸಲೇನು?
ಯಾರು ತಿರಸ್ಕರಿಸಲೇನು?
ಹೊಗಳಲೇನು? ತೆಗಳಲೇನು?
ಲೋಕ ತೊರೆದು ಬಿಟ್ಟರೇನು?
ಕೊಟ್ಟಕೊನೆಗೆ
ಬರಲು ಮನೆಗೆ
ನಿನಗೆ ನಾನು, ನನಗೆ ನೀನು!
ಎರಡು ಸೊನ್ನೆ
ಸೇರಿ, ಚೆನ್ನ,
ಪೂರ್ಣವಲ್ತೆ ‘ಒಂದು’ ತಾನು!