ಓ ನನ್ನ ಮಹಾಮಾತಾ
ಶ್ರೀ ಪಾದಪದ್ಮವೆ,
ಸತೀ ಶರೀರ ರೂಪಿ ಓ
ಪ್ರೇಮ ಹೇಮ ಸದ್ಮವೆ,
ನಿನ್ನನೊಲಿದು ನಾ ವಿರಾಗಿ;
ಅಪ್ಪಿದರೂ ಮಹಾತ್ಯಾಗಿ;
ಪರಮಯೋಗಿ ಚುಂಬಿಸಿ!
ಆಲಿಂಗಿಸಿ ನಾ ಮಹರ್ಷಿ;
ಭೋಗಿಸಿಯೂ ನಾ ತಪಸ್ವಿ;
ರಸಋಷಿ ಪರಿರಂಭಿಸಿ!