ನನ್ನ ಸಾಧನ ರಂಗ
ನಿನ್ನ ಅಂಗಾಂಗ:
ನನ್ನ ಕಾಪಿಡಲೆಂದೆ
ನೀನು ಬಂದೆ!
ನನ್ನ ಸೌಭಾಗ್ಯವತಿ
ಗುರುಕೃಪಾ ರೂಪಸತಿ
ನೀಂ ಪ್ರೇಮಸದ್ಮೆ;
ಶ್ರೀ ಮಹಾಮಾತೆಯಾ
ಶ್ರೀಪಾದಪದ್ಮೆ!