ನಿನ್ನ ಕಣ್ಣೊಳಗೊಂದು
ಆನಂದದಾ ಸಿಂಧು
ನಾ ಚಿನ್ಮಯ!
ನಿನ್ನ
ಹಣೆಯ ಕುಂಕುಮ ಬಿಂದು
ಇಂಗಡಲ ಹೇಮೇಂದು:
ನನಗೂ
ಪ್ರಾಣಮಧು ಚೈತನ್ಯದಾ
ಚಂದ್ರೋದಯ!