ಯೇ ಬಾಪು ತಮಾರ ಪರ ಕವತ ಭಾಂದು
ಉಂಚೋ ಪುರೋ ಪಾತಳೋ ಶರೀರ
ಸರಳ ನಾಕ, ಭೀನೋ ರಂಗ, ನಾಕೇಪರ ರಿಸ
ಜಮಣ ಗಾಲೇಪರ ಮಸೋ, ಕಾನೇಮ ಮರಕಿ
ಜಮಣೆ ಹಾತೇಮ ಬಾಲಾಜಿ ನಾಮೇರೋ ಕೊಳ್ಡಾ
ಪಾತಳ ಧೋತಿ ನೆಹರು, ಝಗಲಾ
ಧೋಳೋ ರೂಮಲೇನ ಗುಲಾಬಿರಂಗ
ಚಕಲಿ ಪಾಗಡಿ ಭಾಂದನ ಅರಸಿಮ ದೇಕಸ
ತಾಂಡೇಮ ಹಿಂಡತೋ ರಮ್ ಜಮ್ ಲಾಗ
ನಸಾಬೇನ ಬೇಟೋತೊ ಪಾಳನ ಗಡೆರೋ ರಾಜ
ಪಾಳ ಪೋಸನ ಕೂಣ ಸಕ ಬೇಸರೇ ಬಾಪು
ಮಾಛಳಿ ಕೂಂ ಜಾಳೇಮ ಭಂದಗಿ ಜೂ
ತಾರ ಬೇಟಿ ಬೇಟಾ ಸಂಸಾರೇಮ ಭಂದಾಗೆ
ಉಮಕಿ ಜಮಕಿ ಕಾಳ ಕಣದೋರಿರೋ ಬಾಪು
ತಾರೀಕ ಸತ್ರ ಮೀನಾ ಜನೇವರಿ, ಬಾರಾ ಗಂಟಾನ
ಸಾಲ ಏಕ ಹಜಾರ ನೌಸೇ ನೌವ್ಯಾನೌವೇನ
ಸೇನ ಛೋಡನ ಸೇವಾಭಾಯಾಕನ ಚಲೋಗೋ ಕಾಂಯಿ ಬಾಪು.

ಅರ್ಥ: ಓ ತಂದೆ ಈ ಪದ್ಯದಲ್ಲಿ ನಿಮ್ಮ ನೆನಪು ತುಂಬಿದೆ. ತೆಳ್ಳಗಿನ ನಿಮ್ಮ ಎತ್ತರದ ಮೈಕಟ್ಟು, ಮುಖದ ಮೇಲೆ ಚೂಪಾದ ಮೂಗು, ಮೂಗಿನ ಮೇಲೆ ಕೋಪ, ಗಲ್ಲದ ಬಲಬದಿ ನರಲಿ, ಸಾದಗಪ್ಪು ಮೈಬಣ್ಣ, ಕಿವಿಯಲ್ಲಿ ಮುರುವು ಅದೆಷ್ಟು ಚೆಂದ, ನಿಮ್ಮ ಬಲಗೈಯಲ್ಲಿ ಬಾಲಾಜಿ ಹೆಸರಿನ ಕಡಗವಿತ್ತು. ನೀವು ನಿತ್ಯ ತೊಡುವ ನೆಹರೂ ಶರ್ಟ, ಗುಲಾಬಿ ಬಣ್ಣದ ಬಿಳಿ ರೂಮಾಲು, ಬಿಳಿ ಧೋತರ, ಸೊಂಟದಲ್ಲಿಯ ಕಾಶಿದಾರದ ಗೊಂಡೆಯ ಉಡದಾರ. ನಿಮ್ಮ ಮೈಗೆ ಬಲು ಭೂಷಣ, ನೀವು ಬಟ್ಟೆ ತೊಟ್ಟು, ನಿಮ್ಮ ಅಂದವನ್ನು ಕನ್ನಡಿಯಲ್ಲಿ ನೋಡಿಕೊಳ್ಳುತ್ತಿರುವ ದೃಶ್ಯವನ್ನು ಕಣ್ಣೆದುರು ನಿಂತಿದೆ.

ನೀವು ರಾಜನಾಳ ತಾಂಡಾದಲ್ಲಿ ಹೊರಟಾಗ, ಜನ ನಿಮ್ಮನ್ನು ನೋಡಿ ಹೆದರುತ್ತಿದ್ದರು. ಪಂಚಾಯಿತಿಯಲ್ಲಿ ನ್ಯಾಯದಾನ ಮಾಡಲು ಕೂತಾಗ ಜನ ನಡುಗುತ್ತಿದ್ದರು.

ಮೀನು ಬಲೆಯಲ್ಲಿ ಸಿಕ್ಕಿಕೊಂಡ ಹಾಗೆ ಸಂಸಾರದ ಈ ಸುಂದರ ಚಾಳಿಗೆಯಲ್ಲಿ ನಿಮ್ಮ ಕುಟುಂಬ ವರ್ಗ ಒಂದಾಗಿದೆ. ಜನೇವರಿ ಹದಿನೇಳು ಸಾವಿರದ ಒಂಬೈನೂರ ತೊಂಬತ್ತರೊಂಭತ್ತರ ಹನ್ನೆರಡು ಗಂಟೆಗೆ ತಾವು ನಮ್ಮನ್ನು ಅಗಲಿದಿರಿ, ಸೇವಾಲಾಲನ ಪಾದ ಸೇರಿದಿರಿ.

[1]


[1]     ದಿನಾಂಕ ೧೭-ಜನೇವರಿ ೧೯೯೯ರಂದು ನನ್ನ ತಂದೆಯವರು ತೀರಿಕೊಂಡ ಸಂದರ್ಭದಲ್ಲಿ ದುಃಖದಿಂದ ಬರೆದ ಶೋಕಗೀತೆ.